Sacred Games-2: ಪೀರಿಯಡ್ಸ್​ ಡೇಟ್​ ಕೇಳಿ ಸೆಕ್ಸ್​ ಸೀನ್​ ಮಾಡಿಸಿದ ನಿರ್ದೇಶಕ, ನಟಿ ಅಮೃತಾ ಸುಭಾಷ್ ಖುಷ್​

By Suvarna News  |  First Published Jul 6, 2023, 12:47 PM IST

ನಟಿ ಅಮೃತಾ ಸುಭಾಷ್, ಸೆಕ್ರೇಡ್​ ಗೇಮ್ಸ್​-2 ಶೂಟಿಂಗ್​ ವೇಳೆ ಸೆಕ್ಸ್​ ದೃಶ್ಯಗಳನ್ನು ಹೇಗೆ ಚಿತ್ರೀಕರಿಸಲಾಗುತ್ತದೆ ಎನ್ನುವ ಕುರಿತು ಮನಬಿಚ್ಚಿ ಮಾತನಾಡಿದ್ದಾರೆ. 
 


 ಕೊಂಕಣಾ ಸೇನ್ ಶರ್ಮಾ ಅವರ ದಿ ಮಿರರ್, ಲಸ್ಟ್ ಸ್ಟೋರೀಸ್ 2 (Lust Stories-2) ನಲ್ಲಿ ಕಾಣಿಸಿಕೊಂಡ ನಟಿ ಅಮೃತಾ ಸುಭಾಷ್, ಕ್ಯಾಮೆರಾದಲ್ಲಿ ಸೆಕ್ಸ್​ ದೃಶ್ಯಗಳನ್ನು ಹೇಗೆ ಚಿತ್ರೀಕರಿಸಲಾಗುತ್ತದೆ ಎನ್ನುವ ಕುರಿತು ಮನಬಿಚ್ಚಿ ಮಾತನಾಡಿದ್ದಾರೆ. ಪುರುಷ ಮತ್ತು ಮಹಿಳಾ ನಿರ್ದೇಶಕರು ಸೆಕ್ಸ್​ ದೃಶ್ಯಗಳನ್ನು  ಹೇಗೆ ನಿರ್ವಹಿಸುತ್ತಾರೆ ಎಂಬುದರ ಕುರಿತೂ ಅಮೃತಾ ಹೇಳಿದ್ದಾರೆ. ಇದೇ ವೇಳೆ ನಟಿ,  ಲಸ್ಟ್​ ಸ್ಟೋರೀಸ್​ ನಿರ್ದೇಶಕ ಅನುರಾಗ್ ಕಶ್ಯಪ್ ಅವರೊಂದಿಗೆ ತಮ್ಮ ಮೊದಲ ಸೆಕ್ಸ್​ ದೃಶ್ಯವನ್ನು ಚಿತ್ರೀಕರಿಸುವುದನ್ನು ನೆನಪಿಸಿಕೊಂಡಿದ್ದು, ಇಡೀ ಪ್ರಕ್ರಿಯೆಯಲ್ಲಿ ಅವರು ಹೇಗೆ ಅತ್ಯಂತ ಸೂಕ್ಷ್ಮವಾಗಿರುತ್ತಾರೆ ಎಂಬುದನ್ನು ಬಹಿರಂಗಗೊಳಿಸಿದ್ದಾರೆ. ಸೇಕ್ರೆಡ್ ಗೇಮ್ಸ್ 2 ನಲ್ಲಿ ನಟಿಸಿರುವ ನಟಿ ಅಮೃತಾ ಸುಭಾಷ್​ ಅವರು ಪ್ರಥಮ ಬಾರಿಗೆ ಸೆಕ್ಸ್​ ಸಂಬಂಧಿತ ದೃಶ್ಯಗಳನ್ನು ಮಾಡುವಾಗ ನಿರ್ದೇಶಕ ಅನುರಾಗ್​ ಕಶ್ಯಪ್​ ಹೇಗೆ ನಡೆಸಿಕೊಂಡರು ಎಂಬ ಬಗ್ಗೆ ವಿವರಿಸಿದ್ದಾರೆ. 
 
ಸೆಕ್ಸ್​ ದೃಶ್ಯಗಳನ್ನು ಚಿತ್ರೀಕರಣ ಮಾಡುವಾಗ ಹೆಣ್ಣುಮಕ್ಕಳ ಮನಸ್ಸನ್ನು ಅರ್ಥ ಮಾಡಿಕೊಳ್ಳುವಲ್ಲಿ ಅನುರಾಗ್​ ಕಶ್ಯಪ್​ (Anurag Kashyap) ಅವರದ್ದು ಎತ್ತಿದ ಕೈ ಎಂದು ಶ್ಲಾಘಿಸಿರುವ ನಟಿ, ಸೇಕ್ರೆಡ್ ಗೇಮ್ಸ್ 2 ರ ಸಮಯದಲ್ಲಿ ತಮ್ಮ ಖುತುಸ್ರಾವದ ದಿನಗಳ ಬಗ್ಗೆ ನಿರ್ದೇಶಕರು ಪ್ರಶ್ನಿಸಿದ್ದರು ಎಂಬುದಾಗಿ ಹೇಳಿದ್ದಾರೆ. ಆರಂಭದಲ್ಲಿ ಕಶ್ಯಪ್​ ಅವರು  ನಮ್ಮ ಇಡೀ ತಂಡವನ್ನು ಕರೆದರು. ನಂತರ ಆ ಸಮಯದಲ್ಲಿ ನನ್ನ ಖುತುಸ್ರಾವದ ದಿನದ ಕುರಿತು ಕೇಳಿ ವಿವರ ಪಡೆದುಕೊಂಡರು. ಆ ದಿನಗಳನ್ನು ಹೊರತು ಪಡಿಸಿ ಉಳಿದ ದಿನಗಳಲ್ಲಿ ಸೆಕ್ಸ್​ ಸಂಬಂಧಿತ ಶೂಟಿಂಗ್​ ಮಾಡುವುದಾಗಿ ನನಗೆ ತಿಳಿಸಿ ಅದರಂತೆಯೇ ನಡೆದುಕೊಂಡರು ಎಂದು ನಟಿ ಹೇಳಿದ್ದಾರೆ. 

Lust Stories-2: ಬೋಲ್ಡ್​ ಸೀನ್​ನಲ್ಲಿ ಕಾಣಿಸಿಕೊಂಡಿರೋ ನಟಿ ಕಾಜೋಲ್​ ಕಾಮದ ಬಗ್ಗೆ ಹೇಳಿದ್ದೇನು?

Tap to resize

Latest Videos

'ಸೇಕ್ರೆಡ್ ಗೇಮ್ಸ್ 2 (Sacred Games-2) ರಲ್ಲಿ ಅನುರಾಗ್ ಅವರೊಂದಿಗೆ ನನ್ನ ಮೊದಲ ಲೈಂಗಿಕ ದೃಶ್ಯವನ್ನು ಮಾಡಿದ್ದೇನೆ. ಪುರುಷ ಅಥವಾ ಮಹಿಳೆ ಎಂಬ ಪ್ರಶ್ನೆಯೇ ಇದರಲ್ಲಿ ಇಲ್ಲ. ಅವರು ಅತ್ಯಂತ ಸಂವೇದನಾಶೀಲರಾಗಿದ್ದರು. ಅವರು ನಿರ್ದೇಶನ ತಂಡವನ್ನು ಕರೆದರು.ಪಿರಿಯಡ್ಸ್​ ಆದ ದಿನಗಳು ಹಾಗೂ ಅದರ ಸುತ್ತಲಿನ ಕೆಲವು ದಿನಗಳಲ್ಲಿ  ಲೈಂಗಿಕ ದೃಶ್ಯಗಳನ್ನು ಶೂಟ್​ ಮಾಡುವುದಿಲ್ಲ ಎಂದು ಭರವಸೆ ಕೊಟ್ಟರು. ನಂತರ ಅದರಂತೆಯೇ ನಡೆದುಕೊಂಡರು' ಎಂದು ಶೂಟಿಂಗ್​ ದಿನಗಳನ್ನು ಅಮೃತಾ (Amruta Subhash) ನೆನಪಿಸಿಕೊಂಡಿದ್ದಾರೆ. ಸಂವೇದನಾಶೀಲತೆಯನ್ನು ಒಬ್ಬರ ಲಿಂಗದಿಂದ ವ್ಯಾಖ್ಯಾನಿಸಬಾರದು. ಇದು ನನಗೆ ಈ ಚಿತ್ರದ ಅವಧಿಯಲ್ಲಿ ಚೆನ್ನಾಗಿ ಅರ್ಥವಾಗಿದೆ. ಸಂವೇದನಾಶೀಲತೆ ಎನ್ನುವುದು ಗಂಡು ಅಥವಾ ಹೆಣ್ಣು ಎನ್ನುವ ಭಾವ ಮೀರಿದೆ. ಅವರು ತುಂಬಾ ಸಂವೇದನಾಶೀಲರಾಗಿದ್ದರು ಎಂದು  ಅಮೃತಾ ನೆನಪಿಸಿಕೊಂಡಿದ್ದಾರೆ. ಅಂದಹಾಗೆ ಸೇಕ್ರೆಡ್ ಗೇಮ್ಸ್‌ನ ಎರಡನೇ ಸೀಸನ್‌ನಲ್ಲಿ RAW ಏಜೆಂಟ್ ಆಗಿ ಅಮೃತಾ ನಟಿಸಿದ್ದಾರೆ. 

ಕೊಂಕಣಾ ಸೇನ್ ಶರ್ಮಾ ನಿರ್ದೇಶಿಸಿದ ದಿ ಮಿರರ್‌ನಲ್ಲಿ ಅಮೃತಾ ತಿಲ್ಲೋಟಮಾ ಶೋಮ್ ಜೊತೆಗೆ ನಟಿಸಿದ್ದಾರೆ. ಆದರೆ, ಈ ಚಿತ್ರದ ಸಂದರ್ಭದಲ್ಲಿ ನಿರ್ದೇಶಕರು ತಮಗೆ ಪಾತ್ರದ ಬಗ್ಗೆ ತಿಳಿಸಿದ್ದಾಗ ಅದರ  ಅರ್ಥವಾಗಿರಲಿಲ್ಲ ಎಂದು ಅಮೃತಾ ಹೇಳಿದ್ದಾರೆ. 'ಕೆಲವೊಮ್ಮೆ ನಿಮ್ಮ ಪಾತ್ರಗಳನ್ನು ಸಂಪೂರ್ಣವಾಗಿ ಅರ್ಥಮಾಡಿಕೊಳ್ಳದಿರುವುದು ಉತ್ತಮ. ಆಗ ಮಾತ್ರ ನೀವು ವ್ಯಕ್ತಿಯಾಗಿ ವಿಸ್ತರಿಸಬಹುದು. ತಿಳಿದೋ, ತಿಳಿಯದೆಯೋ ಪಾತ್ರವನ್ನು ಒಪ್ಪಿಕೊಂಡಾಗ ಅದರಲ್ಲಿಲ ಸಂಪೂರ್ಣ ತೊಡಗಿಸಿಕೊಳ್ಳಬೇಕು  ಎನ್ನುವುದು ನನ್ನ ಭಾವನೆ ಎಂದು ನಟಿ ಅಮೃತಾ ಹೇಳಿದ್ದಾರೆ. 

Lust Stories 2: ಮದುವೆಗೂ ಮುನ್ನ ಟೆಸ್ಟ್ ಡ್ರೈವ್ ಬೇಡ್ವಾ ಎಂದ ನಟಿ ನೀನಾ ಸೆಕ್ಸ್​ ಬಗ್ಗೆ ಹೇಳಿದ್ದೇನು?
 

click me!