
ಬಾಲಿವುಡ್ ಸ್ಟಾರ್ ಸಲ್ಮಾನ್ ಖಾನ್ ಆಸ್ತಿ ಎಷ್ಟು?
ಬಾಲಿವುಡ್ ಸ್ಟಾರ್ ನಟ 'ಬ್ಯಾಡ್ ಬಾಯ್' ಖ್ಯಾತಿಯ ನಟ ಸಲ್ಮಾನ್ ಖಾನ್ () ಮೂರು ದಶಕಗಳಿಗೂ ಹೆಚ್ಚು ಕಾಲದಿಂದ ಚಿತ್ರರಂಗದಲ್ಲಿದ್ದಾರೆ. ಅವರಿಗೆ ಇಂದು (ಡಿಸೆಂಬರ್ 27) ಜನ್ಮದಿನದ ಸಂಭ್ರಮ. ಇಷ್ಟು ವರ್ಷಗಳಲ್ಲಿ ನಟ ಸಲ್ಮಾನ್ ಖಾನ್ ಅವರು ಅನೇಕ ಸಿನಿಮಾಗಳಲ್ಲಿ ಕೆಲಸ ಮಾಡಿದ್ದಾರೆ. ಹೀಗಾಗಿ ಅವರೇ ಇಂದು ಒಂದು ಬ್ರಾಂಡ್ ಎಂಬಂತೆ ಆಗಿದ್ದಾರೆ. ಸಿಕ್ಕಿರುವ ಮಾಹಿತಿ ಪ್ರಕಾರ. ಸಲ್ಮಾನ್ ಖಾನ್ 3000 ಕೋಟಿ ರೂಪಾಯಿಗಳ ಸಂಪತ್ತಿಗೇ ಮಾಲೀಕರಾಗಿದ್ದಾರೆ.
ಸಲ್ಮಾನ್ ಖಾನ್ ಚಲನಚಿತ್ರಗಳಲ್ಲಿ ಮುಖ್ಯ ನಾಯಕನ ಪಾತ್ರದಲ್ಲಿ ಕಾಣಿಸಿಕೊಳ್ಳುವುದು ಗೊತ್ತೇ ಇದೆ. ಬೆಳ್ಳಿ ಪರದೆಯಲ್ಲಿ ಮಾತ್ರವಲ್ಲ, ಟಿವಿಯ ಪ್ರಸಿದ್ದ ರಿಯಾಲಿಟಿ ಶೋ 'ಬಿಗ್ ಬಾಸ್'ನ ಹಲವು ಸೀಸನ್‌ಗಳನ್ನು ಸಹ ನಡೆಸಿಕೊಟ್ಟಿದ್ದಾರೆ. ಇದಲ್ಲದೆ, ಸಲ್ಮಾನ್ ಖಾನ್ ಅನೇಕ ಬ್ರಾಂಡ್‌ಗಳ ಜಾಹೀರಾತುಗಳಲ್ಲಿಯೂ ಕಾಣಿಸಿಕೊಳ್ಳುತ್ತಾರೆ. ಸಲ್ಮಾನ್ ಖಾನ್ ಅವರು ಭಾರತ ಮತ್ತು ದುಬೈನ ಅನೇಕ ಸುಂದರ ಸ್ಥಳಗಳಲ್ಲಿ ಐಷಾರಾಮಿ ಆಸ್ತಿಗಳನ್ನು ಖರೀದಿಸಿದ್ದಾರೆ. ಸಲ್ಮಾನ್ ಚಲನಚಿತ್ರ ನಿರ್ಮಾಣದಿಂದ ಹಿಡಿದು ಫಿಟ್‌ನೆಸ್ ಮತ್ತು ಅನೇಕ ಬ್ರಾಂಡ್‌ಗಳವರೆಗೆ ಭಾರಿ ಹೂಡಿಕೆ ಮಾಡಿದ್ದಾರೆ.
ನಟ ಸಲ್ಮಾನ್ ಖಾನ್ ಅವರು 1988ರಲ್ಲಿ ಬಾಲಿವುಡ್ ಚಿತ್ರರಂಗಕ್ಕೆ ಕಾಲಿಟ್ಟರು. 'ಬೀವಿ ಹೋ ತೋ ಐಸಿ' ಚಿತ್ರದಿಂದ ಅವರು ಬಣ್ಣದ ಬದುಕು ಆರಂಭಿಸಿದರು. ಆದರೆ ಅವರೀಗ ಬಹಳಷ್ಟು ಸಿನಿಮಾಗಳಲ್ಲಿ ನಟಿಸಿದ್ದಾರೆ. ಅವರು ಪ್ರತಿ ಚಿತ್ರಕ್ಕೆ 100 ಕೋಟಿ ರೂಪಾಯಿಗೂ ಅಧಿಕ ಸಂಭಾವನೆ ಪಡೆಯುತ್ತಾರೆ. ಸಲ್ಮಾನ್ ಖಾನ್ ಕೇವಲ ಸಿನಿಮಾಗಳಲ್ಲಿ ನಟಿಸುವುದಲ್ಲದೇ ತಮ್ಮದೇ ಆದ ನಿರ್ಮಾಣ ಸಂಸ್ಥೆಯನ್ನು ಹೊಂದಿದ್ದಾರೆ. ಈ ಕಂಪನಿಯ ಹೆಸರು 'ಸಲ್ಮಾನ್ ಖಾನ್ ಫಿಲ್ಡ್'. ಇದು 2011 ರಲ್ಲಿ ಪ್ರಾರಂಭವಾಯಿತು. ಈ ನಿರ್ಮಾಣ ಸಂಸ್ಥೆ ಅನೇಕ ಬ್ಲಾಕ್‌ಬಸ್ಟರ್ ಸಿನಿಮಾಗಳನ್ನು ನಿರ್ಮಿಸಿದೆ.
ಬೀಯಿಂಗ್ ಹೂಮನ್
'ಬೀಯಿಂಗ್ ಹೂಮನ್' ಎಂಬುದು ಸಲ್ಮಾನ್ ಖಾನ್ ಅವರ ಬಟ್ಟೆ ಬ್ರಾಂಡ್ ಆಗಿದ್ದು, ಇದು ಜನರಲ್ಲಿ ಬಹಳ ಜನಪ್ರಿಯವಾಗಿದೆ. ಸಲ್ಮಾನ್ ಈ ಬಟ್ಟೆ ಬ್ರಾಂಡ್ ಅನ್ನು 2012 ರಲ್ಲಿ ಪ್ರಾರಂಭಿಸಿದರು. ಈ ಬ್ರಾಂಡ್ ವಿಶೇಷತೆಯೆಂದರೆ ಅದು ದತ್ತಿ ಸಂಸ್ಥೆಗಳಿಗೆ ಕೊಡುಗೆ ನೀಡುತ್ತದೆ. ಅವರ ಬ್ರಾಂಡ್ ಭಾರತಕ್ಕೆ ಮಾತ್ರ ಸೀಮಿತವಾಗಿಲ್ಲ, ಮಧ್ಯಪ್ರಾಚ್ಯ ಮತ್ತು ಯುರೋಪ್‌ಗೂ ವಿಸ್ತರಿಸಿದೆ.
ಯಾತ್ರಾ.ಕಾಮ್
ಸಲ್ಮಾನ್ ಖಾನ್ ಪ್ರಯಾಣ ಕಂಪನಿ ಯಾತ್ರಾ.ಕಾಮ್ ನಲ್ಲಿಯೂ ಹೂಡಿಕೆ ಮಾಡಿದ್ದಾರೆ. ನಟ 2012 ರಲ್ಲಿ ಅದರ 5 ಪ್ರತಿಶತದಷ್ಟು ಷೇರುಗಳನ್ನು ಖರೀದಿಸಿದರು, ಇದು ಅವರಿಗೆ ಬಹಳಷ್ಟು ಲಾಭವನ್ನು ತಂದುಕೊಟ್ಟಿತು.
ಎಸ್.ಕೆ-27 ಜಿಮ್
ಸಲ್ಮಾನ್ ಖಾನ್ ಅವರ ದೇಹ ಹಾಗೂ ಫಿಟ್ನಸ್ ಲಕ್ಷಾಂತರ ಅಭಿಮಾನಿಗಳಿಗೆ ಸ್ಪೂರ್ತಿ ನೀಡಿದೆ. ಅದಕ್ಕಾಗಿಯೇ ಸಲ್ಮಾನ್ ಬಟ್ಟೆಗಳ ಜೊತೆಗೆ ಜಿಮ್ ಮತ್ತು ಫಿಟ್ನೆಸ್ ಉಪಕರಣಗಳ ಬ್ರಾಂಡ್‌ಗಳಲ್ಲಿಯೂ ಹೂಡಿಕೆ ಮಾಡಿದ್ದಾರೆ. ಸಲ್ಮಾನ್ ಖಾನ್ ದೊಡ್ಡ ಫಿಟ್ನೆಸ್ ಫ್ರೀಕ್. ಅವರು 2019 ರಲ್ಲಿ SK-27 ಜಿಮ್ ಎಂಬ ಫಿಟ್ನಸ್ ಕೇಂದ್ರಗಳನ್ನು ತೆರೆದರು.
ಫಿಟೈಸ್ ಜೊತೆಗೆ, ಸಲ್ಮಾನ್ ಖಾನ್ ಸ್ಕಿನ್ ಕೇರ್ ರೀತಿಯ ಬ್ರಾಂಡ್‌ಗಳಲ್ಲಿಯೂ ಹೂಡಿಕೆ ಮಾಡಿದ್ದಾರೆ. ಅವರು Scentials Beauty Care and Wellness Pvt. Ltd. FRESH ಬ್ರಾಂಡ್‌ನೊಂದಿಗೆ ಹೊಸ ಉದ್ಯಮವನ್ನು ಪ್ರಾರಂಭಿಸಿದ್ದಾರೆ.
ಚಿಂಗಾರಿ
ಇತ್ತೀಚಿನ ದಿನಗಳಲ್ಲಿ ಕಿರು ವೀಡಿಯೊಗಳನ್ನು ಮಾಡುವ ಪ್ರವೃತ್ತಿ ಬಹಳ ಜನಪ್ರಿಯವಾಗಿದೆ. ಅಂತಹ ಕಿರು ವೀಡಿಯೊಗಳನ್ನು ತಯಾರಿಸಲು ಚಿಂಗಾರಿ ಒಂದು ಜನಪ್ರಿಯ ವೇದಿಕೆಯಾಗಿದ್ದು, ಇದರ ಬ್ರಾಂಡ್ ರಾಯಭಾರಿ ಸ್ವತಃ ಸಲ್ಮಾನ್ ಖಾನ್.
ಸಲ್ಮಾನ್ ಖಾನ್ ತಮ್ಮ ಇಡೀ ಕುಟುಂಬದೊಂದಿಗೆ ಮುಂಬೈನ ಬಾಂದ್ರಾದಲ್ಲಿರುವ ಗ್ಯಾಲಕ್ಸಿ ಅಪಾರ್ಟ್‌ಮೆಂಟ್‌ನಲ್ಲಿ ವಾಸಿಸುತ್ತಿದ್ದಾರೆ. ಸಮುದ್ರಕ್ಕೆ ಎದುರಾಗಿರುವ ಈ ಮೂರು ಅಂತಸ್ತಿನ ಅಪಾರ್ಟ್‌ಮೆಂಟ್ ಬೆಲೆ 100 ಕೋಟಿ ರೂ. ಮಾಧ್ಯಮ ವರದಿಗಳ ಪ್ರಕಾರ, ಈ ಅಪಾರ್ಟ್‌ಮೆಂಟ್ ಹೊರತುಪಡಿಸಿ, ಸಲ್ಮಾನ್ ಖಾನ್ ಮುಂಬೈನಲ್ಲಿ ಕೋಟ್ಯಂತರ ಮೌಲ್ಯದ ಅನೇಕ ಆಸ್ತಿಗಳನ್ನು ಹೊಂದಿದ್ದಾರೆ.
ನಟ ಸಲ್ಮಾನ್ ಖಾನ್ ಕೆಲವು ಐಷಾರಾಮಿ ಕಾರುಗಳನ್ನು ಕೂಡ ಹೊಂದಿದ್ದಾರೆ. ಆದರೆ ಅವರು ಓಡಾಟಕ್ಕೆ ಹೆಚ್ಚಾಗಿ ಬಳಕೆ ಮಾಡೋದು ಲ್ಯಾಂಡ್ ಕ್ರೂಸರ್. ಇದು ಬುಲೆಟ್ ಪ್ರೊಫ್ ಆಗಿದ್ದು, ಈ ಕಾರಿನ ಬೆಲೆ 2.26 ಕೋಟಿ ರೂಪಾಯಿ. ಇದಲ್ಲದೆ ಇನ್ನೂ ಹಲವು ದುಬಾರಿ ವಾಹನಗಳು ಅವರ ಬಳಿ ಇವೆ. ಆದರೆ, ಅವುಗಳಲ್ಲಿ ಅವರು ಓಡಾಡೋದು ತುಂಬಾ ಕಡಿಮೆ. ಕಾರಣ, ಲಾರೆನ್ಸ್ ಬಿಷ್ಟೋಯ್ ಗ್ಯಾಂಗ್ ಕಡೆಯಿಂದ ಅವರಿಗೆ ಬೆದರಿಕೆ ಇದೆ. ಆ ಕಾರಣಕ್ಕೆ ಅವರು ಹೊರಗಡೆ ಓಡಾಡುವಾಗ ಹೈ-ಸೆಕ್ಯೂರಿಟಿ ಇರುತ್ತದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.