ದೃಶ್ಯ ನ್ಯಾಚುರಲ್ ಆಗಿ ಬರ್ಬೇಕು ಅಂತ ಹೇಳಿ ಕೋಣೆಗೆ ಕರ್ಕೊಂಡು ಹೋದ, ಆದ್ರೆ 6 ತಿಂಗಳ ಬಳಿಕ ಹಾಗೆ ಆಯ್ತು.. ಆ ನಟಿ ಹೇಳಿದ್ದೇನು?

Published : Dec 27, 2025, 01:24 PM IST
Telugu Senior actress Jayalalitha

ಸಾರಾಂಶ

ಇತ್ತೀಚಿನ ಸಂದರ್ಶನವೊಂದರಲ್ಲಿ ಹಿರಿಯ ನಟಿ ಜಯಲಲಿತಾ ಕೆಲವು ಆಸಕ್ತಿದಾಯಕ ವಿಷಯಗಳನ್ನು ಹಂಚಿಕೊಂಡರು. ಇಂದ್ರಡು ಚಂದ್ರಡು ಚಿತ್ರಕ್ಕಾಗಿ ಅವರು 1 ಲಕ್ಷ ರೂ. ಸಂಭಾವನೆ ಪಡೆದಿದ್ದಾಗಿ ಬಹಿರಂಗಪಡಿಸಿದರು. ಮಲಯಾಳಂ ಚಿತ್ರ ಮಾಡುವಾಗ ಸಹಾಯಕ ನಿರ್ದೇಶಕರು ತಮ್ಮೊಂದಿಗೆ ಮಾಡಿದ್ದ ಕೃತ್ಯವನ್ನು ನಟಿ ಹೇಳಿದ್ದಾರೆ.

ತೆಲುಗು ನಟಿ ಜಯಲಲಿತಾ ಹೇಳಿದ್ದೇನು?

Telugu Senior actress Jayalalitha: ತೆಲುಗಿನ ಹಿರಿಯ ನಟಿ ಜಯಲಲಿತಾ ಭಾರತೀಯ ಸಿನಿಪ್ರೇಕ್ಷಕರಿಗೆ ಚಿರಪರಿಚಿತರು. ಅವರು ತೆಲುಗು, ತಮಿಳು ಮತ್ತು ಮಲಯಾಳಂ ಭಾಷೆಗಳಲ್ಲಿ ಅನೇಕ ಸೂಪರ್ ಹಿಟ್ ಚಿತ್ರಗಳಲ್ಲಿಯೂ ನಟಿಸಿದ್ದಾರೆ. ಪೋಷಕ ನಟಿ ಮತ್ತು ಹಾಸ್ಯನಟಿಯಾಗಿಯೂ ಮನರಂಜನೆ ನೀಡಿದ್ದಾರೆ. ಆ ಸಮಯದಲ್ಲಿ ಅವರು ತಮ್ಮ ಗ್ಲಾಮರ್ ಪಾತ್ರಗಳಿಂದಲೂ ಅಭಿಮಾನಿಗಳನ್ನು ಗಳಿಸಿದರು.

ಕಮಲ್ ಹಾಸನ್ ನಟಿಸಿದ 'ಇಂದ್ರಡು ಚಂದ್ರಡು' ಚಿತ್ರದಲ್ಲಿ ನಟಿಸುವ ಮೂಲಕ ನಟಿ ಜಯಲಲಿತಾ ತೆಲುಗು ಚಿತ್ರರಂಗಕ್ಕೆ ಪರಿಚಯವಾದರು. ಆ ಬಳಿಕ ಅವರು ಜಂಬಲಕಿಡಿ ಪಂಬ, ಮೆಕ್ಯಾನಿಕ್ ಅಲ್ಲುಡು, ಮತ್ತು ಮುತ್ತ ಮೇಷ್ಟ್ರು, ಮಾಮಾ ಅಲ್ಲುಡು, ಲಾರಿ ಡ್ರೈವರ್, ಅಪ್ಪುಲ ಅಪ್ಪರಾವ್ ಮುಂತಾದ ಹಲವು ಚಿತ್ರಗಳಲ್ಲಿ ನಟಿಸಿದ್ದಾರೆ. ಒಂದು ಕಾಲದಲ್ಲಿ ಚಲನಚಿತ್ರಗಳಲ್ಲಿ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದ ಈ ನಟಿ ಈಗ ದೂರದರ್ಶನ ಧಾರಾವಾಹಿಗಳಲ್ಲಿ ನಿರತರಾಗಿದ್ದಾರೆ.

'ಪ್ರೇಮ ಎಂತ ಮಧುರಂ' ಮತ್ತು 'ಬಂಗಾರು ಗಾಜುಲು' ಮುಂತಾದ ಧಾರಾವಾಹಿಗಳ ಮೂಲಕ ಕುಟುಂಬ ಪ್ರೇಕ್ಷಕರಿಗೆ ಜಯಲಲಿತಾ ಹತ್ತಿರವಾದರು. ಅವರು ತಮ್ಮ ವೃತ್ತಿಜೀವನ ಉತ್ತುಂಗ ಸ್ಥಿತಿಯಲ್ಲಿದ್ದಾಗ ಲವ್ ಮಾಡಿ ಮಲಯಾಳಂ ನಿರ್ದೇಶಕ ವಿನೋದ್ ಅವರನ್ನು ವಿವಾಹವಾದರು. ಏಳು ವರ್ಷಗಳ ಕಾಲ ಪ್ರೀತಿಸಿದ ನಂತರ, ಅವರು ಹಿರಿಯರ ಸಮ್ಮುಖದಲ್ಲಿ ವಿವಾಹವಾದರು.

ಇಂದ್ರಡು ಚಂದ್ರಡು ಸಂಭಾವನೆ ಎಷ್ಟು?

ಇತ್ತೀಚಿನ ಸಂದರ್ಶನವೊಂದರಲ್ಲಿ ಹಿರಿಯ ನಟಿ ಜಯಲಲಿತಾ ಕೆಲವು ಆಸಕ್ತಿದಾಯಕ ವಿಷಯಗಳನ್ನು ಹಂಚಿಕೊಂಡರು. ಇಂದ್ರಡು ಚಂದ್ರಡು ಚಿತ್ರಕ್ಕಾಗಿ ಅವರು 1 ಲಕ್ಷ ರೂ. ಸಂಭಾವನೆ ಪಡೆದಿದ್ದಾಗಿ ಬಹಿರಂಗಪಡಿಸಿದರು. ಮಲಯಾಳಂ ಚಿತ್ರ ಮಾಡುವಾಗ ಸಹಾಯಕ ನಿರ್ದೇಶಕರು ತಮ್ಮೊಂದಿಗೆ ಅನುಚಿತವಾಗಿ ವರ್ತಿಸಿದ್ದಾರೆ ಎಂದೂ ಕೂಡ ನಟಿ ಹೇಳಿದ್ದಾರೆ.

'ಆರಂಭದಲ್ಲಿ ನನಗೆ ಮಲಯಾಳಂ ಭಾಷೆ ತಿಳಿದಿರಲಿಲ್ಲ, ಮಲಯಾಳಂ ಚಿತ್ರಕ್ಕಾಗಿ ನಾನು ಕೆಲಸ ಮಾಡುತ್ತಿರುವುದು ಅದೇ ಮೊದಲಾಗಿತ್ತು. ಸಹಾಯಕ ನಿರ್ದೇಶಕರು ತಮ್ಮ ಕೋಣೆಗೆ ನನ್ನನ್ನು ಕರೆದು ಅದರಲ್ಲಿನ ಲೈಂಗಿಕ ದೌರ್ಜನ್ಯದ ದೃಶ್ಯದ ಬಗ್ಗೆ ಹೇಳಲು ನನ್ನೊಂದಿಗೆ ಅನುಚಿತವಾಗಿ ವರ್ತಿಸಿದ್ದರು. ಆ ಘಟನೆ ನಡೆದ ಆರು ತಿಂಗಳ ನಂತರ ಅವರು ನಿಧನರಾದರು. ಅವರು ಹೇಗೆ ಸತ್ತರು ಎಂದು ನನಗೆ ತಿಳಿದಿಲ್ಲ' ಎಂದಿದ್ದಾರೆ ನಟಿ ಜಯಲಲಿತಾ.

ಚಿರಂಜೀವಿ ಜೊತೆ ‘ಖೈದಿ’ ಕೈತಪ್ಪಿದ್ದು ಯಾಕೆ?

ಜೊತೆಗೆ, 'ತೆಲುಗಿನ ಮೆಗಾಸ್ಟಾ‌ರ್ ಚಿರಂಜೀವಿ ನಟನೆಯ 'ಖೈದಿ' ಚಿತ್ರದಲ್ಲಿ ನಾಯಕಿ ಪಾತ್ರವೂ ನನಗೆ ಕೈತಪ್ಪಿ ಹೋಯಿತು. ಅದಕ್ಕೆ ಕಾರಣ, ಅಂದು ನಾನು ಹೆಚ್ಚಾಗಿ ಮಾಡುತ್ತಿದ್ದ 'ವ್ಯಾಂಪ್' ಪಾತ್ರಗಳು. ನನ್ನ ವೃತ್ತಿಜೀವನದ ಆರಂಭದಲ್ಲಿ ನನ್ನ ತಪ್ಪು ಆಯ್ಕೆಯ ಪಾತ್ರಗಳಿಂದಾಗಿ ನಾನು ಹಲವು ಒಳ್ಳೆಯ ಅವಕಾಶಗಳನ್ನು ಕಳೆದುಕೊಂಡಿದ್ದೇನೆ. ಆದರೆ, ಈಗ ನನಗೆ ಸಿನಿಮಾಗಳಲ್ಲಿ ಸೂಕ್ತ ಅವಕಾಶಗಳು ಸಿಗುತ್ತಿಲ್ಲ. ನಾನು ಸಣ್ಣ ಪರದೆಯಲ್ಲಿ ಧಾರಾವಾಹಿಗಳಲ್ಲಿ ನಿರತರಾಗಿದ್ದಾರೆ. ಈಗ ಕಿರುತೆರೆಯೇ ನನಗೆ ಊಟ ಕೊಡುತ್ತಿದೆ' ಎಂದಿದ್ದಾರೆ ನಟಿ ಜಯಲಲಿತಾ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

2025ರಲ್ಲಿ ಸಣ್ಣ ಬಜೆಟ್ ಸಿನಿಮಾಗಳಲ್ಲಿ ಹಿಟ್ ಆದ ಟಾಪ್ 5 ನಟಿಯರು.. ಈ ಮೂವರನ್ನು ಮರೆಯೋಕೆ ಆಗಲ್ಲ!
Salman Khan Birthday: ಬ್ರೇಸ್ಲೆಟ್‌ನಿಂದ ಸಲ್ಮಾನ್ ಖಾನ್ ಅದೃಷ್ಟ ಬದಲಾಗಿದ್ದು ಹೇಗೆ, ಏನಿದರ ರಹಸ್ಯ?