90ರ ದಶಕದಲ್ಲಿಯೇ ಕುಟುಂಬಕ್ಕಾಗಿ ಸಿನಿಮಾ ತೊರೆಯುವ ನಿರ್ಧಾರ ಮಾಡಿದ್ದರು ಆಮೀರ್ ಖಾನ್. ಅದರ ವಿಡಿಯೋ ವೈರಲ್ ಆಗಿದೆ. ಹಾಗಿದ್ದ ಮೇಲೆ ಇಬ್ಬರೂ ಪತ್ನಿಯರಿಂದ ದೂರವಾಗಿದ್ದೇಕೆ?
ನಿನ್ನೆ ಅಂದ್ರೆ ಮಾರ್ಚ್ 14ರಂದು ನಟ ಆಮೀರ್ ಖಾನ್ 59ನೇ ವರ್ಷದ ಹುಟ್ಟುಹಬ್ಬವನ್ನು ಆಚರಿಸಿಕೊಂಡರು. ಮಿಸ್ಟರ್ ಪರ್ಫೆಕ್ಷನಿಸ್ಟ್ ಎಂದೂ ಕರೆಯಲ್ಪಡುವ ಆಮೀರ್ ಖಾನ್, ವರ್ಷಗಳ ಕಾಲ ವೃತ್ತಿಜೀವನದೊಂದಿಗೆ, ಬಾಲಿವುಡ್‌ನಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ಮತ್ತು ಬೇಡಿಕೆಯಿರುವ ನಟರಲ್ಲಿ ಒಬ್ಬರಾಗಿದ್ದಾರೆ. ಆದರೆ 90 ರ ದಶಕದಲ್ಲಿ ಆಮೀರ್ ಖಾನ್ ಚಿತ್ರರಂಗವನ್ನೇ ತೊರೆಯುವ ನಿರ್ಧಾರವನ್ನು ಮಾಡಿದ್ದರು ಎಂಬ ವಿಷಯ ಬಹುತೇಕ ಮಂದಿಗೆ ತಿಳಿದಿಲ್ಲ. ಹೌದು. ಅದು ಮೊದಲು ಪತ್ನಿ ರೀನಾ ದತ್ ಅವರನ್ನು ವಿವಾಹವಾದ ಸಂದರ್ಭವಾಗಿತ್ತು. ಆಗ ಚಿತ್ರರಂಗವನ್ನೇ ತೊರೆಯುವ ಯೋಚನೆ ಮಾಡಿದ್ದರಂತೆ ನಟ ಆಮೀರ್ ಖಾನ್,
ಈ ವಿಷಯವನ್ನು ಖುದ್ದು ಅವರೇ, ಚಲನಚಿತ್ರ ಪತ್ರಕರ್ತೆ ಮತ್ತು ವಿಮರ್ಶಕಿ ಭಾವನಾ ಸೋಮಯ್ಯ ಅವರೊಂದಿಗಿನ ಸಂದರ್ಶನದಲ್ಲಿ ಈ ವಿಷಯವನ್ನು ತಿಳಿಸಿದ್ದಾರೆ. ತಮಿಳುನಾಡಿನ ಗಿರಿಧಾಮ ಊಟಿ ಸಮೀಪದ ಕುನೂರಿಗೆ ತೆರಳಿ ಅಲ್ಲಿಯೇ ಸೆಟ್ಲ್ ಆಗುವ ಬಗ್ಗೆ ನಿರ್ಧರಿಸಿದ್ದಂತೆ ನಟ. 1994ರ ಸಮಯದಲ್ಲಿ ಈ ನಿರ್ಧಾರ ತೆಗೆದುಕೊಂಡಿದ್ದುದಾಗಿ ಅವರು ಹೇಳಿದ್ದಾರೆ. ಕುನೂರಿನಲ್ಲಿ ಹೊಸ ಜೀವನ ಆರಂಭಿಸಲು ಅವರು ಇಷ್ಟಪಟ್ಟಿದ್ದರು. ಆ ಸಂದರ್ಭದಲ್ಲಿ ನಡೆದ ಸಂದರ್ಶನದಲ್ಲಿ ಆಮೀರ್ ಖಾನ್, ಸದ್ಯ ನಾನು ಚಿತ್ರರಂಗವನ್ನು ತೊರೆಯುವ ನಿರ್ಧಾರ ಮಾಡಿದ್ದೇನೆ. ಕೂನೂರಿಗೆ ಹೋಗಿ ಸಮಯ ಕಳೆಯಲು ಬಯಸಿದ್ದೇನೆ. ಅಲ್ಲಿಯೇ ಹೊಸ ಜೀವನವನ್ನು ಪ್ರಾರಂಭಿಸಲು ಉದ್ದೇಶಿಸಿದ್ದೇನೆ. ಬದುಕಲು ಇದು ಉತ್ತಮವಾದ ಸ್ಥಳವಾಗಿದೆ. ಆದ್ದರಿಂದ ಇಲ್ಲಿಯೇ ಮನೆ ಖರೀದಿ ಮಾಡಲು ಯೋಚಿಸಿದ್ದೇನೆ ಎಂದಿದ್ದರು. ಆ ವಿಡಿಯೋ ಇದೀಗ ವೈರಲ್ ಆಗಿದೆ.
ಆಮೀರ್ ಖಾನ್@ 59: ಆರು ರೂ. ಶಾಲಾ ಫೀಸ್ ಕಟ್ಟಲಾಗದೇ ಒದ್ದಾಡಿದ್ದ ನಟನ ರೋಚಕ ಸ್ಟೋರಿ ಇಲ್ಲಿದೆ..
ಆಗ ಚಿತ್ರರಂಗ ತೊರೆದು ಈ ಒಂದು ನಿರ್ಧಾರಕ್ಕೆ ಬರುವ ಕಾರಣವನ್ನೂ ಅವರು ತಿಳಿಸಿದ್ದರು. ನಟರಾದ ಕಾರಣ ಮಾಡಲು ಸಾಧ್ಯವಾಗದ ಕೆಲಸಗಳನ್ನು ನಾನು ಕುನೂರಿನಲ್ಲಿ ಮಾಡಲು ಬಯಸುತ್ತೇನೆ. ಏಕೆಂದರೆ ನನಗೆ ಹಣವೊಂದೇ ಎಂದಿದ್ದರು. ಜೀವನದಲ್ಲಿ ಹಣ ಮುಖ್ಯ ನಿಜ. ಆದರೆ ಇದು ಒಂದೇ ಪ್ರಮುಖ ಅಂಶವಲ್ಲ. ನಾನು ಚಲನಚಿತ್ರಗಳನ್ನು ಹೊರತುಪಡಿಸಿ ಇತರ ವಿಷಯಗಳನ್ನು ಮಾಡಲು ಬಯಸುತ್ತೇನೆ. ಈ ವಿಷಯಗಳು ಹಣದ ಹರಿವನ್ನು ತರದಿರಬಹುದು, ಆದರೆ ನಾನು ಅವುಗಳನ್ನು ಮಾಡುತ್ತೇನೆ, ಏಕೆಂದರೆ ನಾನು ಬಯಸುತ್ತೇನೆ. ನನ್ನ ಕುಟುಂಬದಿಂದ ನಾನು ಬೇರೆಯಾಗಬಾರದು. ಆದ್ದರಿಂದ ಹೀಗೆ ಮಾಡಲು ನಾನು ಬಯಸುತ್ತೇನೆ ಎಂದಿದ್ದರು.
ನನ್ನ ಪತ್ನಿ ರೀನಾಗೂ ಇದೇ ಆಸೆ ಇದೆ. ನಾನು ಚಿತ್ರರಂಗ ತೊರೆದರೆ ಆಕೆಗೂ ತುಂಬಾ ಸಂತೋಷವಾಗುತ್ತದೆ. ಆದ್ದರಿಂದ ಈ ನಿರ್ಧಾರಕ್ಕೆ ಬಂದಿದ್ದೇನೆ. ಇದರಿಂದ ನನ್ನ ಸಿನಿ ಕರಿಯರ್ಗೆ ತೊಂದರೆಯಾಗುತ್ತದೆ ನಿಜ. ಆದರೆ ಕರಿಯರೇ ಜೀವನವಲ್ಲ.ಪತ್ನಿ ಕುಟುಂಬದ ಜೊತೆ ಸಮಯ ಕಳೆಯಬೇಕು ಎಂದರೆ ಕುನೂರಿಗೆ ಹೋಗುವುದು ಅನಿವಾರ್ಯ ಎಂದಿದ್ದರು. ಹಣಕ್ಕಿಂತಲೂ ನನಗೆ ಕುಟುಂಬ ಮುಖ್ಯ ಎಂದಿದ್ದರು. ಆದರೆ ಈ ನಿರ್ಧಾರ ಬದಲಿಸಲು ಅದೇನು ಕಾರಣವಾಯಿತೋ ಗೊತ್ತಿಲ್ಲ. ಬಳಿಕ ರೀನಾ ದತ್ತ ಅವರಿಗೆ ವಿಚ್ಛೇದನಕೊಟ್ಟ ನಟ ಕಿರಣ್ ರಾವ್ ಅವರನ್ನೂ ಮದುವೆಯಾಗಿ, ಅವರಿಗೂ ಡಿವೋರ್ಸ್ ಕೊಟ್ಟಿದ್ದಾರೆ. ಇದನ್ನೇ ಈಗ ಫ್ಯಾನ್ಸ್ ಪ್ರಶ್ನಿಸುತ್ತಿದ್ದಾರೆ. ಅಂದಹಾಗೆ, ಆಮೀರ್ ಖಾನ್ ಕೊನೆಯ ಬಾರಿಗೆ ಲಾಲ್ ಸಿಂಗ್ ಚಡ್ಡಾ (2022) ನಲ್ಲಿ ಕಾಣಿಸಿಕೊಂಡರು. ರೇವತಿಯ ಸಲಾಮ್ ವೆಂಕಿ (2022) ಚಿತ್ರದಲ್ಲಿ ಕಾಜೋಲ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಅವರ ಮುಂದಿನ ನಟನೆಯ ಪ್ರಾಜೆಕ್ಟ್ ಕುರಿತು ಹೇಳುವುದಾದರೆ, ಆಮೀರ್ ಮತ್ತು ಸನ್ನಿ ಡಿಯೋಲ್ ಲಾಹೋರ್ 1947 ರಲ್ಲಿ ಒಟ್ಟಿಗೆ ಕೆಲಸ ಮಾಡಲು ಸಿದ್ಧರಾಗಿದ್ದಾರೆ, ಇದನ್ನು ರಾಜ್‌ಕುಮಾರ್ ಸಂತೋಷಿ ನಿರ್ದೇಶಿಸುತ್ತಿದ್ದಾರೆ.
ಡಿವೋರ್ಸ್ ಆದ್ಮೇಲೆ ಡೇಟಿಂಗ್ ಶುರು ಮಾಡಿದ್ವಿ: ಆಮೀರ್ ಖಾನ್ 2ನೇ ಮಾಜಿ ಪತ್ನಿ ಕಿರಣ್ ಓಪನ್ ಮಾತು!