ಅಮ್ಮನನ್ನು ಅಜ್ಜಿ ಮನೆಗೆ ಕಳ್ಸಿ, ಅಪ್ಪ ಕೇಳ್ತಿದ್ದಾರೆ; ಸೋನ್‌ ಸೂದ್‌ಗೆ ಪುಟ್ಟ ಕಂದಮ್ಮ ಮನವಿ!

By Suvarna NewsFirst Published Jun 1, 2020, 3:43 PM IST
Highlights

ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿದೆ ಪುಟ್ಟ ಕಂದಮ್ಮನ ಮನವಿ, ಸೋನು ಸೂದ್‌ಗೆ ಹೊಸ ಚಾಲೆಂಜ್ ಹಾಕಿ ಕಣ್ಹೊಡೆದ ಪುಟ್ಟ ಹುಡುಗಿ....

ರೀಲ್‌ ಲೈಫ್‌ನಲ್ಲಿ ವಿಲನ್‌ ಆಗಿ ಗುರುತಿಸಿಕೊಂಡಿರುವ ನಟ ಸೋನು ಸೂದ್‌ ಅನೇಕ ವಲಸೆ ಕಾರ್ಮಿಕರ ರಿಯಲ್‌ ಲೈಫ್‌ ಹೀರೋ ಆಗಿದ್ದಾರೆ.  ಲಾಕ್‌ಡೌನ್‌ನಿಂದಾಗಿ ಕೆಲಸವಿಲ್ಲ ತವರೂರಿಗೆ ಹೊರಟ ಕಾರ್ಮಿಕರು ನೂರಾರು ಕಿಲೋಮಿಟರ್ ಕಾಲ್ನಡಿಗೆಯಲ್ಲಿ ಪಯಣಿಸಬೇಕಾದ ಪರಿಸ್ಥಿತಿ ಎದುರಾಗಿತ್ತು. ಸರ್ಕಾರದ ನೆರವಿಲ್ಲದೆ ಪರದಾಡುತ್ತಿದ್ದವರಿಗೆ ಸಹಾಯ ಮಾಡಿ ಮಾನವೀಯತೆ ಮೆರೆಯುತ್ತಿರುವ ಸೋನು ಸೂದ್‌ ಈಗ ಇಡೀ  ಭಾರತವೇ ಮೆಚ್ಚುವಂತ ಸ್ಟಾರ್‌ ಆಗಿದ್ದಾರೆ. 

ಕಂದಮ್ಮ ಮನವಿ:

ಹಣ ಪಡೆಯದೆ ಅದೆಷ್ಟೋ ಕಾರ್ಮಿಕರು ತಮ್ಮ ಮನೆ ಸೇರಲು ಸಾಧ್ಯವಾಗಿದ್ದು ಸೋನ್‌ ಸೂದ್‌ ಸಹಾಯದಿಂದ, ಈಗ ಅದೇ ಸಹಾಯ ಪಡೆದು ತಂದೆ-ಮಗಳು ತಾಯಿಯನ್ನು ತವರೂರಿಗೆ ಕಳುಹಿಸಲು ಕೇಳಿಕೊಂಡಿದ್ದಾರೆ. 'ಸೋನು ಅಂಕಲ್, ನೀವು ಎಲ್ಲರಿಗೂ ಮನೆಗೆ ಹೋಗುವುದಕ್ಕೆ ಸಹಾಯ ಮಾಡುತ್ತಿದ್ದೀರಲ್ವಾ ಹಾಗೆ ನಮ್ಮ ಅಪ್ಪನೂ ಒಂದು ಸಹಾಯ ಕೇಳುತ್ತಿದ್ದಾರೆ. ಅಮ್ಮನನ್ನು  ನೀವು ಅಜ್ಜಿ ಮನೆಗೆ ತಲುಪಿಸಿ ಪ್ಲೀಸ್.' ಎಂದು ಮನವಿ ಮಾಡಿಕೊಳ್ಳುತ್ತಾ ವಿಡಿಯೋ ಮಾಡಿರುವ ಮಗ ಕೊನೆಯಲ್ಲಿ ಕಣ್ಣ  ಸನ್ನೆ ಮಾಡುವ ಮೂಲಕ ಗಮನ ಸೆಳೆದಿದ್ದಾಳೆ. 

ಎಸಿ ರೂಂನಲ್ಲಿ ಕುಳಿತು ಕಾರ್ಮಿಕರ ಬಗ್ಗೆ ಕಳವಳ ವ್ಯಕ್ತಪಡಿಸುವುದು ಸರಿಯಲ್ಲ: ಸೋನು ಸೂದ್!

ಈ ವಿಡಿಯೋ ಈಗ ಸೋಷಿಯಲ್‌ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದ್ದು ಸೋನು ಶೇರ್ ಮಾಡಿಕೊಂಡು 'ಇದು ನನಗೆ ಚಾಲೆಂಜಿಂಗ್‌ ಕೆಲಸ. ಆದರೆ ನಿಮಗೆ ಸಹಾಯ ಮಾಡಲು ನಾನು ಪ್ರಯತ್ನ ಪಡುವೆ' ಉತ್ತರಿಸುತ್ತಾ ಕಣ್ಣು ಸನ್ನೆ ಮಾಡುತ್ತಿರುವ ಎಮೋಜಿ ಶೇರ್ ಮಾಡಿಕೊಂಡಿದ್ದಾರೆ.

 

Very Very Urgent Demand ,So Kindly Notice And Please Fulfill The Same !!!! pic.twitter.com/xtDGfE3Kkx

— ChintanDesai (@chintandesai)

ರೈಲು ಪಾಸ್:

ಲೆಕ್ಕವಿಲ್ಲದಷ್ಟು ಕಾರ್ಮಿಕರಿಗೆ ಸಹಾಯ ಮಾಡುತ್ತಿರುವ ಸೋನು ಮುಂಬೈಗೆ ಕೆಲಸ ಹುಡುಕಿಕೊಂಡು ಬಂದಾದ ನಂತರ  ಖರೀದಿಸಿದ ಪಾಸ್‌ ಫೋಟೋವನ್ನು ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದಾರೆ.  'ಜೀವನದಲ್ಲಿ ಕಷ್ಟ ನೋಡಿದವರು ಮಾತ್ರ ಮತ್ತೊಬ್ಬರ ಕಷ್ಟ ಅರ್ಥ ಮಾಡಿಕೊಳ್ಳಲು ಸಾಧ್ಯ. ಕೆಲಸ ಹುಡುಕಿಕೊಂಡು ಲೋಕಲ್‌ ಟ್ರೈನ್‌ನಲ್ಲಿ ಬಂದ ಸೋನು ಪಡೆದ ಮೊದಲು 420 ರೂ.ಗಳ ಪಾಸ್ ಫೋಟೋ ಇದು' ಎಂದು .

ಲಾಕ್‌ಡೌನ್‌ ಪ್ರಾರಂಭದಿಂದಲ್ಲೂ ಸಹಾಯ:

ಮಹಾಮಾರಿ ಕೊರೋನಾ ವೈರಸ್‌ ತನ್ನ ಹುಚ್ಚಾಟ  ಪ್ರಾರಂಭಿಸಿದ ದಿನಗಳಿಂದಲೇ ಸೋನು ಸಹಾಯ ಮಾಡುತ್ತಿದ್ದಾರೆ. ಸೋಂಕಿತರಿಗೆ ಚಿಕಿತ್ಸೆ ನೀಡುವ ವೈದ್ಯರಿಗೆ ಹಾಗೂ ಹಗಲು ರಾತ್ರಿ ಲೆಕ್ಕಿಸದೆ ಕೆಲಸ ಮಾಡುತ್ತಿರುವ ಪೊಲೀಸರಿಗೆ ವಿಶ್ರಾಂತಿ ಪಡೆಯಲು ತಮ್ಮ ಐಷಾರಾಮಿ ಐದು ಸ್ಟಾರ್ ಹೋಟೆಲ್ ನೀಡಿದ್ದರು. 

ಪ್ರತಿಯೊಬ್ಬ ಕಾರ್ಮಿಕ ಮನೆ ತಲುಪುವವರೆಗೆ ವಿಶ್ರಾಂತಿ ಪಡೆಯಲ್ಲ: ಸೋನು ಸೂದ್!

ಅಷ್ಟೇ ಅಲ್ಲದೆ ಮುಂಬೈನಲ್ಲಿ ಸಿಲುಕಿಕೊಂಡಿದ ಕಲಬುರಗಿ, ಬಿಹಾರ, ಜಾರ್ಖಂಡ್ ಹಾಗೂ ಉತ್ತರ ಪ್ರದೇಶಕ 177 ಯುವತಿಯರಿಗೆ ವಿಮಾನದಲ್ಲಿ ತವರೂರಿಗೆ ತಲುಪುವ ಸಹಾಯ ಮಾಡಿದ್ದಾರೆ.   ರಿಯಲ್‌ ಲೈಫ್‌ನಲ್ಲಿ ಅನೇಕರಿಗೆ ಹೀರೋ ಆಗಿರುವ ಸೋನು ಸೂದ್‌ಗೆ ಹಿರಿಯರು ಆಶೀರ್ವಾದಿಸಿದ್ದಾರೆ.

click me!