ಕೊರೋನಾಕ್ಕೆ ಬಲಿಯಾದ ವಾಜಿದ್ ಜೀವನವೇ ಒಂದು ದೊಡ್ಡ ಸಾಧನೆ!

By Suvarna News  |  First Published Jun 1, 2020, 3:04 PM IST

ಕೊರೋನಾಕ್ಕೆ ಬಲಿಯಾದ ಸಂಗೀತ ನಿರ್ದೇಶಕ/ ವಾಜಿದ್ ಖಾನ್ (42) ಇನ್ನಿಲ್ಲ/  ಕಡಿಮೆ ವಯಸ್ಸಿನಲ್ಲಿಯೇ ಮಹಾನ್ ಸಾಧನೆ ಮಾಡಿದ್ದ ಗಾಯಕ/  ಸಾಜಿದ್-ವಾಜಿದ್ ಜೋಡಿಯ ಕಳಚಿದ ಕೊಂಡಿ


ಮುಂಬೈ(ಜು. 01)  ಬಾಲಿವುಡ್ ನ ಹೆಸರಾಂತ ಸಂಗೀತ ನಿರ್ದೇಶಕ ಮತ್ತು ಗಾಯಕ  ವಾಜಿದ್ ಖಾನ್(42)  ಕೊರೋನಾಕ್ಕೆ ಬಲಿಯಾಗಿದ್ದಾರೆ. 

ಮಾರಕ ಕೊರೋನಾ ವೈರಸ್ ಸೋಂಕಿಗೆ ತುತ್ತಾಗಿದ್ದ ವಾಜಿದ್ ಖಾನ್ ರನ್ನು ಕೋಕಿಲಾಬೆನ್ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ ಭಾನುವಾರ ರಾತ್ರಿ ಆರೋಗ್ಯದಲ್ಲಿ ತೀವ್ರ ಏರುಪೇರಾಗಿದೆ. ಚಿಕಿತ್ಸೆ ಫಲಿಸದೆ ಖಾನ್ ನಿಧನರಾಗಿದ್ದಾರೆ.

Latest Videos

undefined

ಕಿಡ್ನಿ ಸಂಬಂಧಿ ಖಾಯಿಲೆಯಿಂದಲೂ ಬಳಲುತ್ತಿದ್ದ ವಾಜಿದ್ ಖಾನ್, ಕೆಲವೇ ತಿಂಗಳುಗಳ ಹಿಂದೆಯಷ್ಟೇ ಕಿಡ್ನಿ ಟ್ರಾನ್ಸ್ ಪ್ಲಾಂಟ್ ಗೆ ಒಳಗಾಗಿದ್ದರು. ಈ ವೇಳೆ ಮಾರಕ ಕೊರೋನಾ ಸಹ ಅವರನ್ನು ಆಕ್ರಮಿಸಿದೆ.

120  ಲಸಿಕೆಗಳು; ಕೊರೋನಾ ಔಷಧ ಎಲ್ಲಿಗೆ ಬಂತು?

ನಮ್ಮಲ್ಲಿ ರಾಜನ್-ನಾಂಗೇಂದ್ರ ಇದ್ದ ಹಾಗೆ ಬಾಲಿವುಡ್ ನಲ್ಲಿ  ಸಾಜಿದ್-ವಾಜಿದ್ ಬ್ರದರ್ಸ್ ಕಾಂಬಿನೇಷನ್ ಕ್ಲಿಕ್ ಆಗುತ್ತಲೇ ಬಂದಿತ್ತು.  2008 ರಲ್ಲಿ ಬಿಡುಗಡೆಯಾದ  ಸಲ್ಮಾನ್ ಖಾನ್ 'ಪಾರ್ಟ್ನರ್' ಚಿತ್ರದ ಮೂಲಕ ವಾಜಿದ್ ಖಾನ್ ಗಾಯಕರಾಗಿ ಗುರುತಿಸಿಕೊಂಡರು. 'ಹುಡ್ ಹುಡ್ ದಬಾಂಗ್', 'ಜಲ್ವಾ', 'ಚಿಂತಾ ತ..'  ಮುಂತಾದ ಹಿಟ್ ಸಾಂಗ್ಸ್ ಗೆ ವಾಜಿದ್ ಖಾನ್ ದನಿಯಾಗಿದ್ದರು. 

ಹೃದಯಾಘಾತದಿಂದ ಸಹೋದರ ನಿಧನರಗಾಗಿದ್ದಾರೆ ಎಂದು ಸಹೋದರ ಸಾಜಿದ್  ತಿಳಿಸಿದ್ದಾರೆ. ಸಂಗೀತ ನಿರ್ದೇಶಕ ಸಲೀಂ ಮರ್ಚಂಟ್ ಮೊದಲ ಸಾವಿನ ಸುದ್ದಿ ಅನೌನ್ಸ್ ಮಾಡಿದರು.  ಬಹಳಷ್ಟು ಸಮಸ್ಯೆಗಳಿಂದ ವಾಜಿದ್ ಬಳಲುತ್ತಿದ್ದರು. ಕಿಡ್ನಿ ಕೆಲಸ ಮಾಡುವುದನ್ನು ನಿಲ್ಲಿಸಿತ್ತು ಎಂದು  ಸಲೀಂ ಹೇಳಿದ್ದಾರೆ.

ಮೊದಲೆ ರೋಗ ನಿರೋಧಕ ಶಕ್ತಿ ಕಡಿಮೆ ಇದ್ದ ವ್ಯಕ್ತಿಯ ದೇಹಕ್ಕೆ ಕೊರೋನಾ ಕೂಡ ಆವರಿಸಿದೆ. ಅನಿವಾರ್ಯವಾಗಿ ಬಾಲಿವುಡ್ ಸಂಗೀತ ನಿರ್ದೇಶಕನನ್ನು ಕಳೆದುಕೊಂಡಿದೆ.

ಪ್ಯಾರ್ ಕಿಯಾ ತೋ  ಢರ್ನಾ ಕ್ಯಾ ಸಿನಿಮಾದ ಮೂಲಕ ತಮ್ಮ ಪ್ರಯಾಣ ಆರಂಭಿಸಿದ್ದರು. ಗರ್ವ್, ತೇರೆ ನಾಮ್, ತುಮ್ಕೋ ನಾ ಭೂಲ್ ಪಾಯೆಂಗೆ, 'ಪಾರ್ಟ್ನರ್'  ಮತ್ತು ಹಿಟ್ ಮೇಲೆ ಹಿಟ್ ಆಗಿರುವ ದಬಾಂಗ್ ಸೀರಿಸ್ ನಲ್ಲಿ ಖಾನ್ ಕೆಲಸ ಮಾಡಿದ್ದರು.

ಸಲ್ಮಾನ್ ಖಾನ್ ಗೆ ಅನೇಕ ಚಿತ್ರಗಳಲ್ಲಿ ದನಿಯಾಗಿದ್ದಾರೆ. ಮೇರೆ ಹೇ ಜಲ್ವಾ, ಫೆವಿಕೋಲ್ ಸೇ ಹಾಡುಗಳಿಗೆ ಸ್ವರ ನೀಡಿದ್ದರು. ಪ್ಯಾರ್ ಕರೋನಾ, ಭಾಯೀ ಭಾಯೀ ಹಾಡುಗಳು ಯು ಟ್ಯೂಬ್ ನಲ್ಲಿ ಹವಾ ಸೃಷ್ಟಿಸಿದ್ದವು. ಐಪಿಎಲ್ 4  ಥೀಮ್ ಸಾಂಗ್ ಧೂಮ್ ಧೂಮ್ ಧೂಮ್ ಧಡ್ಕಾ ಸಹ ಕಂಪೋಸ್ ಮಾಡಿದ್ದರು.

ಸಚಿವರ ಪತ್ನಿ, ಪುತ್ರನಿಗೆ ಕೊರೋನಾ

ಸರೆಗಮಪ 2012  ಮತ್ತು ಸರೆಗಮಪ ಸಿಂಗಿಂಗ್ ಸೂಪರ್ ಸ್ಟಾರ್ ರಿಯಾಲಿಟಿ ಶೋ ಗಳಲ್ಲಿಯೂ ತೀರ್ಪುಗಾರರಾಗಿ ಕಾಣಿಸಿಕೊಂಡಿದ್ದರು.  ಮಹಾನ್ ಸಂಗೀತ ನಿರ್ದೇಶಕನ ಅಗಲಿಕೆಗೆ ಇಡೀ ಬಾಲಿವುಡ್ ಕಂಬನಿ ಮಿಡಿದಿದೆ.

ಇದು ಅರಗಿಸಿಕೊಳ್ಳಲಾಗದ ಸುದ್ದಿ, ಅವರು ನಗುವನ್ನು ನಾನು ಯಾವಾಗಲೂ ನೆನಪಿಡುತ್ತೇನೆ. ಅವರ ಕುಟುಂಬಕ್ಕೆ ದುಃಖ ಭರಿಸುವ ಶಕ್ತಿ  ಬರಲಿ ಎಂದು ಪ್ರಿಯಾಂಕಾ ಚೋಪ್ರಾ ಸಂತಾಪ ವ್ಯಕ್ತಪಟಡಿಸಿದ್ದಾರೆ. ಬಿಗ್ ಬಿ ಅಮಿತಾಭ್ ಬಚ್ಚನ್, ವರುಣ್ ಧವನ್, ಸ್ವರಾ ಭಾಸ್ಕರ್,  ವಿಶಾಲ್ ದಲ್ದಾನಿ, ಹರ್ಷದಿಫ್ ಕೌರ್, ಸೋನು ನಿಗಮ್, ಜೀತ್ ಗಂಗೂಲಿ, ಪರಿಣಿತಿ ಚೋಪ್ರಾ, ಶಂಕರ್ ಮಹಾದೇವನ್, ಬಿಪಾಶಾ ಬಸು ಸಂತಾಪ ಸೂಚಿಸಿದ್ದಾರೆ.

click me!