ಚೀಪ್ ಗಿಮಿಕ್‌ ಮಾಡ್ತಿದ್ಯಾ ಬಾಲಿವುಡ್? ಭಯಬಿದ್ದು ಯಶ್ ಸಿನಿಮಾ ಬಗ್ಗೆ ಅಪಪ್ರಚಾರ ನಡಿತಿದೆಯಾ..?!

Published : Jan 02, 2026, 07:44 PM IST
Rocking Star Yash

ಸಾರಾಂಶ

ಸಿನಿಮಾ ಉತ್ತಮವಾಗಿದ್ದರೆ ಎಷ್ಟೇ ನೆಗೆಟಿವ್ ಟಾಕ್ ಮಾಡಿದರೂ, ಅಪಪ್ರಚಾರಗಳನ್ನು ಮಾಡಿದರೂ ಜನರು ಸಿನಿಮಾವನ್ನು ನೋಡಿಯೇ ನೋಡುತ್ತಾರೆ. ಯಶ್ ಅವರು ಪ್ರತಿ ಸ್ಕ್ರಿಪ್ಟ್‌ಗಳನ್ನೂ ಎಚ್ಚರಿಕೆಯಿಂದ ಆಯ್ಕೆ ಮಾಡುತ್ತಾರೆ. ಅವರು ಒಂದು ಸಿನಿಮಾಗೋಸ್ಕರ ನಾಲ್ಕು ವರ್ಷ ಶ್ರಮ ಹಾಕಿದ್ದಾರೆ ಎಂದರೆ ಅದರಲ್ಲಿ ಏನೋ ಇದೆ..!

ಯಶ್ (Rocking Star Yash) ನಟನೆಯ 'ಟಾಕ್ಸಿಕ್' ಸಿನಿಮಾ ಮಾರ್ಚ್ 19ರಂದು ರಿಲೀಸ್ ಆಗುತ್ತಿದೆ. 'ಕೆಜಿಎಫ್ 2' ಬಳಿಕ ಯಶ್ ನಟನೆಯ ಪ್ರಾಜೆಕ್ಟ್ Toxic ಇದಾಗಿದ್ದು, ನಿರೀಕ್ಷೆ ಹೆಚ್ಚಿದೆ. ಸದ್ಯ 'ಟಾಕ್ಸಿಕ್' ತಂಡದವರು ಒಂದೊಂದೇ ಪೋಸ್ಟರ್ ರಿಲೀಸ್ ಮಾಡುತ್ತಿದ್ದಾರೆ. ಈ ಪೋಸ್ಟರ್ ನೋಡಿ ಕೆಲವರು ಸುಖಾ ಸುಮ್ಮನೆ ಅಪಪ್ರಚಾರ ಮಾಡುವ ಕೆಲಸ ಮಾಡುತ್ತಿದ್ದಾರೆ. ಹಾಗಿದೆ, ಹೀಗಿದೆ.. ಇನ್ನೂ ಏನೋ ಬೇಕಿತ್ತು, ಅದೂ ಇದೂ ಎಂದು ಅವಹೇಳನ ಮಾಡುತ್ತಿದ್ದಾರೆ. ಈ ಅಪಪ್ರಚಾರದ ಹಿಂದೆ ಬಾಲಿವುಡ್‌ ಕೈವಾಡ ಇದೆಯೇ ಎಂಬ ಅನುಮಾನ ಮೂಡಿದೆ.

ಯಶ್ ನಟನೆಯ 'ಟಾಕ್ಸಿಕ್' ಸಿನಿಮಾಗೆ ಗೀತು ಮೋಹನ್ ದಾಸ್ ನಿರ್ದೇಶನ ಮಾಡುತ್ತಿದ್ದಾರೆ. ಈ ಚಿತ್ರಕ್ಕೆ ಯಶ್ ಅವರು ಕೂಡ ಕಥೆ ಬರೆದಿದ್ದಾರೆ. ಈ ಸಿನಿಮಾ ರೆಟ್ರೋ ಶೈಲಿಯಲ್ಲಿ ಮೂಡಿ ಬಂದಿದೆ ಎಂಬ ಮಾಹಿತಿ ಇದೆ. ಈ ಚಿತ್ರದ ಟೀಸರ್ ಯಶ್ ಬರ್ತಡೇ ದಿನ ರಿಲೀಸ್ ಆಗೋ ಸಾಧ್ಯತೆ ಕೂಡ ಇದೆ. ಇದಕ್ಕೂ ಮೊದಲು ಸಿನಿಮಾದ ವಿವಿಧ ಪೋಸ್ಟರ್‌ಗಳನ್ನು ಬಿಡುಗಡೆ ಮಾಡಲಾಗುತ್ತಿದೆ.

ಸದ್ಯ ಬಿಡುಗಡೆಯಾಗಿರುವ ಟಾಕ್ಸಿಕ್ ಪೋಸ್ಟರ್‌ನ ನೋಡಿ ಕೆಲವರು ಟೀಕಿಸುತ್ತಿದ್ದಾರೆ. ಇದರಲ್ಲಿ ಬಹುತೇಕರು ಬಾಲಿವುಡ್‌ನವರು ಎನ್ನಲಾಗಿದೆ. ಮಾರ್ಚ್ 19ರಂದು 'ಧುರಂಧರ್ 2' ಸಿನಿಮಾ ಕೂಡ ರಿಲೀಸ್ ಆಗುತ್ತಿದೆ. 'ಟಾಕ್ಸಿಕ್' ಹಾಗೂ 'ಧುರಂಧರ್ 2' ಸಿನಿಮಾ ಒಟ್ಟಿಗೆ ತೆರೆಗೆ ಬರುತ್ತಿರುವುದರಿಂದ ಇದನ್ನು ದೊಡ್ಡ 'ವಾರ್' ಎಂದೇ ಬಿಂಬಿಸಲಾಗುತ್ತಿದೆ. 'ಟಾಕ್ಸಿಕ್' ಬಗ್ಗೆ ನೆಗೆಟಿವ್ ಸುದ್ದಿ ಹಬ್ಬಿದರೆ ಅದು 'ಧುರಂದರ್ 2' ಚಿತ್ರಕ್ಕೆ ವರವಾಗಬಹುದು ಎಂಬ ಲೆಕ್ಕಾಚಾರ ಕೆಲವರು ಹಾಕಿದ್ದಾರಾ? ಹೌದು ಎನ್ನಲಾಗುತ್ತಿದೆ.

ಸಿನಿಮಾ ಉತ್ತಮವಾಗಿದ್ದರೆ ಎಷ್ಟೇ ನೆಗೆಟಿವ್ ಟಾಕ್ ಮಾಡಿದರೂ, ಅಪಪ್ರಚಾರಗಳನ್ನು ಮಾಡಿದರೂ ಜನರು ಸಿನಿಮಾವನ್ನು ನೋಡಿಯೇ ನೋಡುತ್ತಾರೆ. ಯಶ್ ಅವರು ಪ್ರತಿ ಸ್ಕ್ರಿಪ್ಟ್‌ಗಳನ್ನೂ ಎಚ್ಚರಿಕೆಯಿಂದ ಆಯ್ಕೆ ಮಾಡುತ್ತಾರೆ. ಅವರು ಒಂದು ಸಿನಿಮಾಗೋಸ್ಕರ ನಾಲ್ಕು ವರ್ಷ ಶ್ರಮ ಹಾಕಿದ್ದಾರೆ ಎಂದರೆ ಅದರಲ್ಲಿ ಏನೋ ಇದೆ ಎಂಬುದಂತೂ ಪಕ್ಕಾ ಎನ್ನಲಾಗುತ್ತಿದೆ. ಟೀಸರ್ ಹಾಗೂ ಟ್ರೇಲರ್ ರಿಲೀಸ್ ಆಗುವವರೆಗೆ ಕಾಯಬೇಕಾದ ಅನಿವಾರ್ಯತೆ ಇದೆ. ಅಷ್ಟರೊಳಗೆ ಇಷ್ಟು ಚೀಪ್ ಗಿಮಿಕ್‌ನ ಯಾರೂ ಮಾಡಬಾರದು ಎಂದು ಅನೇಕರು ಅಭಿಪ್ರಾಯಪಟ್ಟಿದ್ದಾರೆ.

ಅಷ್ಟಕ್ಕೂ, ನಟ ಯಶ್‌ಗೆ ಈ ಮೊದಲೂ ಕೂಡ ದೊಡ್ಡ ಸಿನಿಮಾಗಳು ಬಿಡುಗಡೆ ದಿನ ಅಡ್ಡಬಂದಿವೆ. ಆದರೆ, ಯಶ್ ಎದುರು ಬಂದಿರುವ ಸಿನಿಮಾಗಲೇ ಸೋತುಹೋಗಿವೆ. ಈ ಮೊದಲು 'ಕೆಜಿಎಫ್' ಎದುರು ಶಾರುಖ್ ಸಿನಿಮಾ 'ಜೀರೋ' ರಿಲೀಸ್ ಆಗಿ ಹೀನಾಯವಾಗಿ ಸೋತಿತ್ತು. 'ಕೆಜಿಎಫ್ 2' ಎದುರು ಬಂದ ವಿಜಯ್ ಅಭಿನಯದ 'ಬೀಸ್ಟ್' ಕೂಡ ಹೇಳಹೆಸರಿಲ್ಲದಂತೆ ಮಕಾಡೆ ಮಲಗಿತ್ತು. ಈ ಎರಡೂ ಸಂದರ್ಭದಲ್ಲಿ ಯಶ್ ಚಿತ್ರವೇ ಸೋಲುತ್ತದೆ ಎಂಬ ಲೆಕ್ಕಾಚಾರ ಹಲವರಲ್ಲಿ ಇತ್ತು. ಆದರೆ, ಈ ಲೆಕ್ಕಾಚಾರ ಉಲ್ಟಾ ಆಗಿ ಯಶ್ ಸಿನಿಮಾಗಳೇ ಗೆದ್ದಿವೆ. 'ಟಾಕ್ಸಿಕ್' ಹಾಗೂ 'ಧುರಂಧರ್ 2' ವಿಷಯದಲ್ಲೂ ಹಾಗೆಯೇ ಆಗಲಿದೆಯಾ? ಸದ್ಯಕ್ಕೆ ಏನೂ ಹೇಳುವ ಹಾಗಿಲ್ಲ.. ಇತಿಹಾಸ ಮರುಕಳಿಸಬಹುದು ಅಥವಾ ಹೊಸ ಇತಿಹಾಸ ಸೃಷ್ಟಿಯಾಗಬಹುದು. ಎಲ್ಲಕ್ಕೂ ಕಾಲವೇ ಉತ್ತರ ಕೊಡಲಿದೆ, ಕಾಯಬೇಕಷ್ಟೇ..!

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಮತ್ತೊಂದು ಚಿತ್ರದಿಂದಲೂ ಔಟ್.. ವಿಜಯ್ ದೇವರಕೊಂಡ ಟೈಮ್ ಕೆಟ್ಟಿದ್ಯಾ? ಏನು ಆಟ ಆಡ್ತಿದೆ..?
ಆತ 'ಐ ಲವ್‌ ಯೂ' ಎನ್ನುತ್ತಿದ್ದಂತೆ ತಲೆ ಅಲ್ಲಾಡಿಸಿ 'ಓಕೆ' ಅಂದೆ ಎಂದ ಅನುಷ್ಕಾ ಶೆಟ್ಟಿ; ಕೊನೆಗೂ ಲವ್ ಸ್ಟೋರಿ ಹೊರಬಿತ್ತು!