
ಬಾಲಿವುಡ್ ಬೋಲ್ಡ್ ನಟಿ ಶಿಲ್ಪಾ ಶೆಟ್ಟಿ ಎಂಥ ಸಂಕಷ್ಟದಲ್ಲಿ ಸಿಲುಕಿಕೊಂಡಿದ್ದಾರೆ ಎಂದು ಎಲ್ಲರಿಗೂ ತಿಳಿದಿದೆ. ಅನೇಕ ಅದ್ಭುತ ಪ್ರಾಜೆಕ್ಟ್‌ಗಳು ಕೈ ಸೇರುತ್ತಿದ್ದ ಸಮಯದಲ್ಲಿ ಪತಿ ರಾಜ್ ಕುಂದ್ರಾ ಅಶ್ಲೀಲ ಚಿತ್ರೀಕರಣ ದಂಧೆಯಲ್ಲಿರುವ ವಿಚಾರ ತಿಳಿದು ಸ್ವತಃ ಶಿಲ್ಪಾ ಕುಟುಂಬದವರೇ ಶಾಕ್ ಆಗಿದ್ದಾರೆ.
ಹಣದ ಆಸೆಗೆ ಪತಿ ತೆಗೆದುಕೊಂಡ ಒಂದು ನಿರ್ಧಾರ ಶಿಲ್ಪಾ ಸಿನಿ ವೃತ್ತಿ ಜೀವನಕ್ಕೆ ಮುಳುವಾಗಿದೆ ಎಂದು ನೆಟ್ಟಿಗರು ಹೇಳುತ್ತಿರುವುದು ಗಮನಿಸಬಹುದು. ಅದರಲ್ಲೂ ಈ ಮೊದಲೇ ಆರಂಭವಾಗಿರುವ ಪ್ರಾಜೆಕ್ಟ್‌ಗಳು ಮುಂದುವರೆಯಲೇ ಬೇಕು. ಕಿರುತೆರೆ ಜನಪ್ರಿಯ ಶೋ ಸೂಪರ್ ಡ್ಯಾನ್ಸರ್ ಸೀಸನ್ 4ರಲ್ಲಿ ಶಿಲ್ಪಾ ತೀರ್ಪುಗಾರ್ತಿಯಾಗಿ ಕಾಣಿಸಿಕೊಂಡಿದ್ದಾರೆ. ಪತಿ ಜೈಲು ಸೇರಿದ ನಂತರ ಶಿಲ್ಪಾ ಯಾವ ಕಾರ್ಯಕ್ರಮದಲ್ಲಿ, ಚಿತ್ರೀಕರಣದಲ್ಲಿ ಕಾಣಿಸಿಕೊಂಡಿರಲಿಲ್ಲ. ಯಾರ ಸಂಪರ್ಕಕ್ಕೂ ಸಿಗದೆ ದೂರ ಉಳಿದಿದ್ದರು. ಆದರೀಗ ಪತಿ ಜೈಲು ಸೇರಿ 1 ತಿಂಗಳು ಕಳೆದಿದೆ, ಜೀವನ ಸಾಗಲೇಬೇಕು ಎಂದು ಚಿತ್ರೀಕರಣಕ್ಕೆ ಮರಳಿದ್ದಾರೆ.
ನೋವಿನಲ್ಲಿದ್ದ ಶಿಲ್ಪಾರನ್ನು ಇಡೀ ಸೂಪರ್ ಡ್ಯಾನ್ಸರ್ ತಂಡ ಅದ್ಧೂರಿಯಾಗಿ ಸ್ವಾಗತ ಮಾಡಿಕೊಂಡಿದೆ. ಸಹ ತೀರ್ಪುಗಾರರಾಗಿರುವ ಅನುರಾಗ್ ಬಸು ಹಾಗೂ ಗೀತಾರನ್ನು ಭೇಟಿ ಮಾಡಿದ ಶಿಲ್ಪಾ ಕೊಂಚ ಭಾವುಕರಾಗಿ ಕಣ್ಣಾಲಿಗಳು ಒದ್ದೆಯಾದವು ಎಂದು ಕೆಲವು ಮೂಲಗಳಿಂದ ತಿಳಿದುಬಂದಿದೆ. ಸೋನಿ ಟಿವಿ ಹಂಚಿಕೊಂಡಿರುವ ಪ್ರೋಮೋದಲ್ಲಿ ಪುಟ್ಟ ಮಕ್ಕಳ ಡ್ಯಾನ್ಸ್ ನೋಡಿ ಶಿಲ್ಪಾ ಎಂಜಾಯ್ ಮಾಡುತ್ತಿದ್ದಾರೆ. ಕೆಲವು ದಿನಗಳಿಂದ ಶಿಲ್ಪಾ ಜೊತೆ ಸಂಪರ್ಕದಲ್ಲಿದ್ದ ತಂಡದವರು, ಶಿಲ್ಪಾ ಮಕ್ಕಳಿಗಾಗಿ ಅಥವಾ ಕುಟುಂಬದವರಿಗಾಗಿ ಚಿತ್ರೀಕರಣಕ್ಕೆ ಬಂದಿರುವುದಲ್ಲ. ತನ್ನತನ, ತನ್ನ ಶ್ರಮ ಹಾಗೂ ತಾವು ನಡೆಸಿಕೊಂಡು ಬಂದಿರುವ ಕಲಾವಿದೆಯ ಶಿಸ್ತಿನ ಜೀವನಕ್ಕೆ ಬೆಲೆ ಕೊಟ್ಟು ಎಂದು ಹೇಳಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.