10 ವರ್ಷಗಳಿಂದ ಲೇಖಕಿಗೆ ಕಿರುಕುಳ; ನಟ ರಣದೀಪ್ ಹೂಡಾ ವಿರುದ್ಧ ದೂರು, 10 ಕೋಟಿ ಪರಿಹಾರ ಬೇಡಿಕೆ

Suvarna News   | Asianet News
Published : Aug 20, 2021, 04:54 PM IST
10 ವರ್ಷಗಳಿಂದ ಲೇಖಕಿಗೆ ಕಿರುಕುಳ; ನಟ ರಣದೀಪ್ ಹೂಡಾ ವಿರುದ್ಧ ದೂರು, 10 ಕೋಟಿ ಪರಿಹಾರ ಬೇಡಿಕೆ

ಸಾರಾಂಶ

ಚಿತ್ರಕತೆ ಹಾಗೂ ಹಾಡುಗಳನ್ನು ಪಡೆದು, ಸಂಪರ್ಕಿಸಿದರೆ ಜೀವ ಬೆದರಿಕೆ ಹಾಕುತ್ತಿದ್ದಾರೆ ಎಂದು ಸೂರತ್‌ನ ಲೇಖಕಿಯೊಬ್ಬರು ನಟ ರಣದೀಪ್ ಹೂಡಾ ದೂರು ನೀಡಿದ್ದಾರೆ.    

ಮರ್ಡರ್ 3, ಕಿಕ್, ಲವ್ ಆಜ್‌ ಕಲ್ ಸೇರಿ ಸುಮಾರು 30ಕ್ಕೂ ಹೆಚ್ಚು ಸಿನಿಮಾಗಳಲ್ಲಿ ವಿಭಿನ್ನ ಪಾತ್ರಗಳ ಮೂಲಕ ಹಿಂದಿ ಸಿನಿ ರಸಿಕರನ್ನು ಮನೋರಂಜಿಸುತ್ತಿರುವ ರಣದೀಪ್ ಹೂಡಾ ವಿರುದ್ಧ ಸೂರತ್‌ನ ಲೇಖಕಿ, , ಗೀತರಚನೆಕಾರ್ತಿ ಪ್ರಿಯಾಂಕಾ ಶರ್ಮಾ ಬೆದರಿಕೆ ಮತ್ತು ಕಿರುಕುಳ ನೀಡುತ್ತಿದ್ದಾರೆ ಎಂಬ ಆರೋಪಿಸಿ, ದೂರು ದಾಖಲಿಸಿದ್ದಾರೆ.

'ಸೆಕ್ಸ್ ಪೊಜಿಶನ್' ಮಾಯಾವತಿ ಮೇಲೆ ಅಶ್ಲೀಲ ಕಮೆಂಟ್, ಹೂಡಾಗೆ ಗೇಟ್ ಪಾಸ್!

ಸಾಮಾಜಿಕ ಜಾಲತಾಣದ ಮೂಲಕ ಪ್ರಿಯಾಂಕಾ ಮತ್ತು ರಣದೀಪ್ ಪರಿಚಯವಾಗಿತ್ತು. ಪ್ರಿಯಾಂಕಾ ಮೂಲಕ ಅನೇಕ ಸಿನಿಮಾ ಕಥೆಗಳು ಹಾಗೂ ಹಾಡುಗಳನ್ನು ರಣದೀಪ್ ಪಡೆದುಕೊಂಡಿದ್ದಾರೆ. ಆದರೆ ಯಾವುದನ್ನೂ ಬಳಸಿಕೊಂಡಿಲ್ಲ ಬೇರೆಯವರಿಗೆ ನೀಡಬೇಕೆಂದರೂ ಅವರು ನೀಡುತ್ತಿಲ್ಲ. ಬದಲಿಗೆ ಬೆದರಿಕೆ ಹಾಕುತ್ತಿದ್ದಾರೆ ಎಂದು ಪ್ರಿಯಾಂಕಾ ಆರೋಪಿಸುತ್ತಿದ್ದಾರೆ. 10 ವರ್ಷಗಳಿಂದಲೂ ಇದೇ ರೀತಿ ಸತಾಯಿಸುತ್ತಿದ್ದಾರೆ, ಎಂದು  10 ಕೋಟಿ ಪರಿಹಾರ ನೀಡಬೇಕು ಎಂದು ಆಗ್ರಹಿಸಿ ವಕೀಲರ ಮೂಲಕ ನೋಟಿಸ್ ಕಳುಹಿಸಿದ್ದಾರೆ. ಈ ವಿಚಾರಕ್ಕೆ ಸಂಬಂಧಿಸಿದಂತೆ ಹರಿಯಾಣ ಪೊಲೀಸರು ಇ-ಮೇಲ್ ಮೂಲಕ ದೂರಿನ ಬಗ್ಗೆ ಹೂಡಾ ಅವರನ್ನು ಸಂಪರ್ಕಿಸಿದ್ದಾರೆನ್ನಲಾಗಿದೆ. 

'ರಣದೀಪ್ ಹೂಡಾ ನನ್ನನ್ನು ಸಾಮಾಜಿಕ ಜಾಲತಾಣದ ಮೂಲಕ ಸಂಪರ್ಕಿಸಿದರು. ತಾನು ಬರೆದಿದ್ದ ಬಹಳ ಕಥೆಗಳನ್ನು ಕಳುಹಿಸಿದ್ದೆ. ಶೀಘ್ರದಲ್ಲಿಯೇ ಕೆಲಸ ಪ್ರಾರಂಭಿಸೋಣ ಎಂದಿದ್ದರು. ಒಟ್ಟು 1200 ಹಾಡುಗಳು ಮತ್ತು 40 ಕತೆಗಳನ್ನು ರಣದೀಪ್ ಹೂಡಾ, ಆಶಾ ಹೂಡಾ, ಮಂದೀಪ್ ಹೂಡಾ, ಅಜ್ಲಿ ಹೂಡಾ, ಮನೀಶ್, ರಣದೀಪ್ ಮ್ಯಾನೇಜರ್ ಪಾಂಚಾಲಿ ಔಧರಿ, ಮೇಕಪ್ ಆರ್ಟಿಸ್ಟ್ ರೇಣುಕಾ ಪಿಳೈ ಅವರಿಗೆ ವಾಟ್ಸಾಪ್ ಮತ್ತು ಮೇಲ್ ಮೂಲಕ ಕಳುಹಿಸಿದ್ದೇನೆ. ಈ ಘಟನೆ ನಡೆದು ವರ್ಷಗಳು ಕಳೆದಿವೆ. ಇನ್ನೂ ಅವರಿಂದ ಯಾವುದೇ ಪ್ರತಿಕ್ರಿಯೆ ಸಿಕ್ಕಲ್ಲ. ತಮ್ಮ ಕಥೆ ಮತ್ತು ಹಾಡುಗಳನ್ನು ವಾಪಸ್ ಕಳುಹಿಸಿ, ಎಂದು ಅವರ ತಂಡವನ್ನು ಸಂಪರ್ಕಿಸಿದರೆ, ಜೀವ ಬೆದರಿಕೆ ಹಾಕ್ತಿದ್ದಾರೆ,' ಎಂದು ಪ್ರಿಯಾಂಕಾ ದೂರು ನೀಡಿದ್ದಾರೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ನಾನೇನು ಸಾಧುವಲ್ಲ.. ಹೀಗೆ ಮಾತಾಡೋಕೆ ನನಗೂ ಬರುತ್ತೆ: ಪುಷ್ಪ ನಟಿ ಹೇಳಿದ್ದೇನು?
ವೃತ್ತಿಜೀವನದಲ್ಲಿ 2 ಬಾರಿ ದೊಡ್ಡ ತಪ್ಪು ಮಾಡಿದ ರಾಮ್ ಚರಣ್.. ಚಿರಂಜೀವಿಯೂ ಏನೂ ಮಾಡಲಾಗಲಿಲ್ಲವೇ?