ಮತ್ತೆ ಬ್ರೇಕಪ್ ಮಾಡಿಕೊಂಡ ಶಮಿತಾ ಶೆಟ್ಟಿ; ಗಾಸಿಪ್‌ಗೆ ಬ್ರೇಕ್ ಹಾಕಿದ ಲವ್‌ ಬರ್ಡ್ಸ್‌!

By Suvarna News  |  First Published Mar 10, 2022, 5:02 PM IST

ಸುಳ್ಳು ಸುದ್ದಿ ಹಬ್ಬಿಸುತ್ತಿರುವವರಿಗೆ ಕ್ಲಾಸ್ ತೆಗೆದುಕೊಂಡ ಶಮಿತಾ ಶೆಟ್ಟಿ. ಲವ್ ಬರ್ಡ್ಸ್‌ ಫೋಟೋ ವೈರಲ್...
 


ಬಾಲಿವುಡ್‌ನ ಮೋಸ್ಟ್‌ ಹ್ಯಾಪೆನಿಂಗ್ ಲವ್ ಬರ್ಡ್ಸ್‌ ಅಂದ್ರೆ ಶಮಿತಾ ಶೆಟ್ಟಿ ಮತ್ತು ರಾಕೇಶ್. ಬಿಗ್ ಬಾಸ್ ಓಟಿಟಿಯಲ್ಲಿ ಅರಳಿದ ಇವರ ಪ್ರೀತಿ, ಟಿವಿ ಬಿಗ್ ಬಾಸ್‌ವರೆಗೂ ನಡೆದು ಈಗ ಮನೆ ಬಾಗಿಲಿನವರೆಗೂ ಬಂದು ನಿಂತಿದೆ. ಆದರೆ ಕೆಲವು ದಿನಗಳಿಂದ ಇವರಿಬ್ಬರು ಬ್ರೇಕಪ್ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಹೀಗಾಗಿ ಇನ್‌ಸ್ಟಾಗ್ರಾಂ ಪೋಸ್ಟ್ ಹಾಕುವ ಮೂಲಕ ಗಾಸಿಪ್‌ಗೆ ಬ್ರೇಕ್ ಹಾಕಿದ್ದಾರೆ. 

'ಎಲ್ಲರಿಗೂ ಒಂದು ರಿಕ್ವೆಸ್ಟ್‌ ಮಾಡಿಕೊಳ್ಳುತ್ತಿದ್ದೀವಿ. ದಯವಿಟ್ಟು ಯಾರೂ ಹರಿದಾಡುತ್ತಿರುವ ಗಾಸಿಪ್‌ಗೆ ಕೇರ್ ಮಾಡಬೇಡಿ. ಇದರಲ್ಲಿ ಯಾವುದೂ ಸತ್ಯವಲ್ಲ. ನಮ್ಮ ಸಂಬಂಧದಲ್ಲಿ ಇರುವುದು ಪ್ರೀತಿ ಮಾತ್ರ. ನಿಮ್ಮೆಲ್ಲರಿಗೂ ನಮ್ಮ ಪ್ರೀತಿ ಇರಲಿದೆ' ಎಂದು ಶಮಿತಾ ಮತ್ತು ರಾಕೇಶ್ ಬರೆದುಕೊಂಡಿದ್ದಾರೆ. ಇಬ್ಬರು ತುಂಬಾನೇ ಡಿಫರೆಂಟ್ ವ್ಯಕ್ತಿತ್ವದವರು ಆಗಿರುವ ಕಾರಣ ಸಣ್ಣ ಪುಟ್ಟ ಮನಸ್ತಾಪಗಳು ಆಗುತ್ತಿದೆ, ಅದಕ್ಕೆ ಜಗಳ ಆಗುತ್ತಿದೆ ಎಂದು ಹೇಳಲಾಗಿದೆ ಆದರೆ ಬ್ರೇಕಪ್ ಮಾಡಿಕೊಂಡಿಲ್ಲ. 

Tap to resize

Latest Videos

ಅಕ್ಕ ಶಿಲ್ಪಾ ಶೆಟ್ಟಿ ಹೆಸರು ಬಳಸಿಕೊಂಡು ಜೀವನ ಮಾಡುತ್ತಿರುವ ತಂಗಿ ಶಮಿತಾ ಶೆಟ್ಟಿ ಎನ್ನುವ ಟೈಟಲ್‌ ಬೋರ್ಡ್‌ನ ಕಿತ್ತು ಬಿಸಾಕಬೇಕು ಎಂದು ಶಮಿತಾ ಬಿಗ್ ಬಾಸ್ ಪ್ರಾಜೆಕ್ಟ್‌ನ ಒಪ್ಪಿಕೊಂಡರು. ಬಿಗ್ ಬಾಸ್‌ ಸೀಸನ್‌ 3ರಲ್ಲಿ ಸ್ಪರ್ಧಿಸುವಾಗ ಸಹೋದರಿ ಶಿಲ್ಪಾಗೆ ಮದುವೆ ನಿಶ್ಚಯವಾಗಿತ್ತು ಇದ್ದಕ್ಕಿದ್ದಂತೆ ಮದುವೆ ಸಿದ್ಧತೆಗಳು ನಡೆಯಬೇಕು ಹೀಗಾಗಿ ಅರ್ಧಕ್ಕೆ ಆಟವನ್ನು ನಿಲ್ಲಿಸಿ ಹೊರಟು. ಇದಾದ ಮೇಲೆ 2021 ರಲ್ಲಿ ಒಪ್ಪಿಕೊಂಡಿದ್ದು ಕರಣ್ ಜೋಹಾರ್‌ ಓಟಿಟಿಯಲ್ಲಿ ನಿರೂಪಣೆ ಮಾಡಿದ ಬಿಗ್ ಬಾಸ್ ಸೀಸನ್ 1.  ಈ ಸೀಸನ್‌ ಶುರುವಾಗುವ ಮುನ್ನವೇ ಭಾವ ರಾಜ್‌ ಕುಂದ್ರಾ ಅಶ್ಲೀಲ ವಿಡಿಯೋ ಚಿತ್ರೀಕರಣ ಪ್ರಕರಣದ ಮೇಲೆ ಜೈಲು ಸೇರಿದ್ದರು. ಹೀಗಾಗಿ ಬಿಗ್ ಬಾಸ್ ಮನೆಯಲ್ಲಿ ಶಮಿತಾಗೆ ಮಾನಸಿಕ ಹಿಂಸೆ ಆಗಿದ್ದು ನಿಜ, ನಮ್ಮ ಕುಟುಂಬದ ಬಗ್ಗೆ ಕೀಳಾಗಿ ಮಾತನಾಡುತ್ತಿದ್ದವರ ಜೊತೆ ಜಗಳ ಮಾಡುತ್ತಿದ್ದರು ಜೀವನದಲ್ಲಿ ಎಂದೂ ಬಳಸದ ಪದಗಳನ್ನು ಬಿಬಿ ಮನೆಯಲ್ಲಿ ಬಳಸಿದ್ದರು. ಆಟ ಆಡಿದ್ದು ಅಷ್ಟಕ್ಕೆ ಅಷ್ಟೆ ಆದರೂ ಕಾಂಟ್ರವರ್ಸಿಯಿಂದ ಫಿನಾಲೆ ತಲುಪಿದ್ದರು. 

ಜನರೊಂದಿಗೆ ಬೆರೆಯಲು ಕಷ್ಟ, ಥೆರಪಿ ತೆಗೆದುಕೊಳ್ಳುತ್ತಿರುವೆ: Shamita Shetty

ಓಟಿಟಿ ಬಿಬಿಯಲ್ಲಿ ಮೆಂಟಲಿ ಮತ್ತು ಫಿಸಿಕಲಿ ಶಮಿತಾಗೆ ಸಪೋರ್ಟ್ ಮಾಡಿದ್ದು ರಾಕೇಶ್. ಇಬ್ಬರು ಒಟ್ಟಿಗೆ ಇದ್ದು ಹೆಚ್ಚಿನ ಸಮಯ ಕಳೆಯುತ್ತಿದ್ದ ಕಾರಣ ಪ್ರೀತಿ ಅರಳಿತ್ತು. ರಾಕೇಶ್‌ಗೆ ನೇರವಾಗಿ ಬಿಗ್ ಬಾಸ್ ಟಿವಿ ಸೀಸನ್ 15 ಪ್ರವೇಶಿಸುವ ಅವಾಶ ಪಡೆದುಕೊಂಡ ಹೀಗಾಗಿ ಶಮಿತಾ ಕೂಡ  16ರಲ್ಲಿ ಒಬ್ಬ ಸ್ಪರ್ಧಿಯಾಗಿ ಎಂಟ್ರಿ ಕೊಟ್ಟರು. ಮಜಾ ಏನೆಂದರೆ ರಾಕೇಶ್ ಬೇಗ ಎಲಿಮಿನೇಟ್ ಆದರೆ ಶಮಿತಾ ಒಂಟಿಯಾಗಿ ಫಿನಾಲೆ ವಾರ ಕಳೆದು ಹೊರ ಬಂದರು. ಎಲಿಮಿನೇಟ್ ಆಗಿ ಹೊರ ಬರುತ್ತಿದ್ದಂತೆ ರಾಕೇಶ್ ಜೊತೆ ಕಾಣಿಸಿಕೊಂಡರು, ಇಬ್ಬರು ಒಟ್ಟಿಗೆ ಪಾರ್ಟಿ ಮಾಡಿದ್ದು ಅದಾದ ನಂತರ ಶಿಲ್ಪಾ ಪುತ್ರಿ ಬರ್ತಡೇ ದಿನ ರಾಕೇಶ್‌ನೂ ಸೇರಿಸಿಕೊಂಡು ಫ್ಯಾಮಿಲಿ ಫೋಟೋ ಕ್ಲಿಕ್ ಮಾಡಿಕೊಂಡಿದ್ದಾರೆ. 42 ವರ್ಷದ ಸುಂದರಿ ತಮ್ಮ ರಿಲೇಷ್‌ಶಿಪ್‌ನಲ್ಲಿ ಇಷ್ಟು ಮುಂದುವರೆದಿದ್ದಾರೆ ಅಂದ್ಮೇಲೆ ಬ್ರೇಕಪ್ ಮಾಡಿಕೊಳ್ಳಲು ಸಾಧ್ಯವೇ? ಇಲ್ಲ ಎಂದು ಅನೇಕರು ಹೇಳುತ್ತಿದ್ದಾರೆ.  ಸೆಲೆಬ್ರಿಟಿ ಜೀವನ ಹೇಗೆ ಎಂದು predict ಮಾಡೋಕೆ ಆಗೋಲ್ಲ ಎಂದು ಕೆಲವರು ಕಾಮೆಂಟ್ ಮಾಡಿದ್ದಾರೆ. 

ರಾಕೇಶ್ ಬಾಪಟ್‌ ಜೊತೆ ಮದುವೆ,ಮಕ್ಕಳು ಮತ್ತು ಕೆಲಸ ಪ್ಲ್ಯಾನ್ ಮಾಡಿದ Shamita Shetty!

ಒಟ್ಟಿನಲ್ಲಿ ಶಮಿತಾ ಮತ್ತು ರಾಕೇಶ್ ಮದುವೆ ದಿನಕ್ಕೆ ನೆಟ್ಟಿಗರು ಕಾಯುತ್ತಿದ್ದಾರೆ.

click me!