
ಹಿಂದಿ ಕಿರುತೆರೆ ಲೋಕದ ಜನಪ್ರಿಯ ಹಾಸ್ಯಕಲಾವಿದೆ ಭಾರತಿ ಸಿಂಗ್ (Bharati Singh) ಮತ್ತು ಪತಿ ಹರ್ಷ್ ಲಿಂಬಾಚಿಯಾ (Harsh Limbaachiya) ಮಗುವಿನ ನಿರೀಕ್ಷೆಯಲ್ಲಿದ್ದೇವಿ ಎಂದು ಕಳೆದ ವರ್ಷ ಸೋಷಿಯಲ್ ಮೀಡಿಯಾದಲ್ಲಿ (Social Media) ಅನೌನ್ಸ್ ಮಾಡಿದ್ದರು. ಈಗ ಪ್ಯಾಪರಾಜಿಗಳು ಭಾರತಿ ಅವರ ಹೊಸ ವಿಡಿಯೋ ಹಂಚಿಕೊಂಡಿದ್ದಾರೆ. ಈ ವಿಡಿಯೋದಲ್ಲಿ ಧೋಲ್ ವಾದ್ಯಕ್ಕೆ ಭಾರತಿ ಕುಣಿಯುತ್ತಾ ಮಗು ಏಪ್ರಿಲ್ (April) ಮೊದಲ ವಾರ ಎಂಟ್ರಿ ಕೊಡಲಿದೆ ಎಂದಿದ್ದಾರೆ. ಅಲ್ಲದೆ ಕೆಂಪು ಬಣ್ಣದ ಸಿಂಗಲ್ ಫೀಸ್‌ನಲ್ಲಿ ಮಿಂಚಿದ್ದಾರೆ.
ಇನ್ನು ಒಂದು ತಿಂಗಳಲ್ಲಿ ತಾಯಿ ಆಗುತ್ತಿರುವ ಭಾರತಿ ಈಗಲೂ ಚಿತ್ರೀಕರಣದಲ್ಲಿ ಭಾಗಿಯಾಗುತ್ತಿದ್ದಾರೆ. ಕ್ಯಾರವಾನ್‌ನಿಂದ ರೆಡಿಯಾಗಿ ಸೆಟ್‌ಗೆ ತೆರಳುವಾಗ ಪಕ್ಕದಲ್ಲೊಂದು ಮದುವೆ ನಡೆಯುತ್ತಿತ್ತು. ಅಲ್ಲಿಂದ ಧೋಲ್ ವಾದ್ಯ ಕೇಳಿ ಬರುತ್ತಿತ್ತು. ವಾದ್ಯಕ್ಕೆ ಹೆಜ್ಜೆ ಹಾಕುತ್ತಿದ್ದ ಭಾರತಿ ಪಕ್ಕದಲ್ಲಿದ್ದ ವ್ಯಕ್ತಿಗೆ ದಯವಿಟ್ಟು ಮಾಸ್ಕ್ (Mask) ಹಾಕಿ ನಾನು ಗರ್ಭಿಣಿ ಎಂದು ಹೇಳಿದ್ದಾರೆ. ಅಲ್ಲದೆ ಫೋಟೋ ಮತ್ತು ವಿಡಿಯೋ ಕ್ಲಿಕ್ ಮಾಡುತ್ತಿದ್ದ ಪ್ಯಾಪರಾಜಿಗಳಿಗೆ 'ನೀವುಗಳು ಏಪ್ರಿಲ್ ಮೊದಲ ವಾರದಲ್ಲಿ ಅಂಕಲ್ ಆಗುತ್ತಿದ್ದೀರಿ. ರೆಡಿಯಾಗಿರಿ' ಎಂದು ಹೇಳಿದ್ದಾರೆ.
ಡಿಸೆಂಬರ್ 2021ರಲ್ಲಿ ಭಾರತಿ ತಮ್ಮ ಯುಟ್ಯೂಬ್ ಚಾನೆಲ್ ಲೈಫ್ ಆಫ್ ಲಿಂಬಾಚಿಯಾದಲ್ಲಿ (Life of Limbaachiya) ತಾಯಿ ಆಗುತ್ತಿರುವ ವಿಚಾರ ರಿವೀಲ್ ಮಾಡಿದ್ದರು. ವಿಶೇಷ ಏನೆಂದರೆ ಪತಿ ಕೂಡ ವಿಡಿಯೋದಲ್ಲಿ ಕಾಣಿಸಿಕೊಂಡಿದ್ದರು ಇದಕ್ಕೆ ನಾನು ತಾಯಿ ಆಗುತ್ತಿರುವುದು ಎನ್ನವ ಶೀರ್ಷಿಕೆ ನೀಡಿದ್ದರು.
'ನಾನು ದಿನ ಯೋಗ ಮಾಡುವುದಕ್ಕೆ ಶುರು ಮಾಡಿದ್ದೀನಿ.ನನಗೆ ಸಿ-ಸೆಕ್ಷನ್ (c section) ಆಫರೇಷನ್ ಬಗ್ಗೆ ತುಂಬಾನೇ ಭಯವಿದೆ. ಮಾಡಿಸಿಕೊಂಡ ಕೆಲವು ದಿನಗಳ ನಂತರ ತುಂಬಾನೇ ನೋವು ಇರುತ್ತದೆ ಎಂದು ಅನೇಕರು ಹೇಳುವುದನ್ನು ಕೇಳಿದ್ದೀನಿ. ಮಗು ಹುಟ್ಟಿದ ಮೇಲೂ ಕೆಲಸ ಮಾಡುವ ತಾಯಿ ನಾನು. ಅದಕ್ಕೆ ನಾರ್ಮಲ್ (Normal delivery) ಆಗಲಿ ಎಂದು ಪ್ರಾರ್ಥಿಸುತ್ತಿರುವೆ. ನಾರ್ಮಲ್ ಡೆಲಿವರಿ ಆಗುವುದಕ್ಕೆ ನನ್ನ ಡಾಕ್ಟರ್ (doctor) ಏನ್ ಹೇಳಿದ್ದಾರೆ ಅದನ್ನು ಪಾಲಿಸುತ್ತಿರುವೆ. ನಾನು ದಿನ ಒಂದು ಗಂಟೆ ವಾಕಿಂಗ್ ಮಾಡುತ್ತೀನಿ. ಒಂದು ದಿನವೂ ಮಿಸ್ ಮಾಡುವುದಿಲ್ಲ, ಟ್ರೈಲರ್ ನನ್ನ ಜೊತೆಗಿರುತ್ತಾರೆ' ಎಂದು ಭಾರತಿ ಖಾಸಗಿ ಸಂದರ್ಶನದಲ್ಲಿ ಮಾತನಾಡಿದ್ದಾರೆ.
ಕೆಲವು ದಿನಗಳ ಹಿಂದೆ ಮಗು ಬಗ್ಗೆ ಪ್ರಶ್ನೆ ಕೇಳಿ ನಾವು ಯುಟ್ಯೂಬ್‌ನಲ್ಲಿ ಉತ್ತರಿಸುತ್ತೇವೆ ಎಂದು ಭಾರತಿ ಹೇಳಿದ್ದರು. ಮಗು ಭಾರತಿ ರೀತಿ ಕಾಮಿಡಿಯನ್ (Comedian) ಆಗುತ್ತಾ ಅಥವಾ ಹರ್ಷ್ ರೀತಿ ಬರಹಗಾರ (writer) ಆಗುತ್ತಾ ನಾ? ಎಂದು ನೆಟ್ಟಿಗರು ಕೇಳಿದ್ದರು. 'ನನ್ನ ಮಗು ಕಾಮಿಡಿಯನ್ ಆಗುವುದು ಏಕೆಂದರೆ ರೈಟರ್‌ಗಳಿಗೆ ಸರಿಯಾದ ಸಂಬಳ ಸಿಗುವುದಿಲ್ಲ' ಎಂದು ಭಾರತಿ ಹೇಳಿದ್ದಾರೆ. 'ಎಷ್ಟು ಹಣ ಬರುತ್ತೆ ಅಂದ್ರೆ ಆ ಹಣದಿಂದ ನೀವು 5 ರಿಂದ 6 ಭಾರತಿಯರನ್ನು ಖರೀದಿಸಬಹುದು' ಎಂದು ಪತಿ ಹರ್ಷ್ ಹೇಳಿದ್ದಾರೆ.
'ನಮಗೆ ಕನಿಷ್ಠ ನಾಲ್ಕು ಮಕ್ಕಳು ಇರಬೇಕು' ಎಂದು ಹರ್ಷ್ ಹೇಳಿದಾಗ 'ನಾನು ಅಷ್ಟು ತಿಂಗಳು ಮನೆಯಲ್ಲಿ ಸುಮ್ಮನೆ ಕೂರುವುದಕ್ಕೆ ಆಗುವುದಿಲ್ಲ. ನಾನು ಕೆಲಸ ಮಾಡಬೇಕು ನಾನು ಇಂಡಿಪೆಂಡೆಂಟ್ ಮಹಿಳೆ' ಎಂದು ಭಾರತಿ ಹೇಳುತ್ತಾರೆ. ಆಗ ನಿಮ್ಮ ತಾಯಿ ನೋಡಿ ಕಲಿ ಎಂದು ಹರ್ಷ್ ಕಾಲೆಳೆಯುತ್ತಾನೆ. 'ನನ್ನ ಅಮ್ಮನ ಕೈಯಲ್ಲಿ ತುಂಬಾನೇ ಟೈಂ ಇತ್ತು ಆದರೆ ನನಗೆ ಇಲ್ಲ' ಎಂದಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.