ಸಲ್ಮಾನ್ ಖಾನ್ ಜೊತೆ ಸಮಂತಾ ರೊಮ್ಯಾನ್ಸ್? 'ನೋ ಎಂಟ್ರಿ'ಗೆ ಸ್ಯಾಮ್ ಎಂಟ್ರಿ

Published : Jun 22, 2022, 04:12 PM IST
ಸಲ್ಮಾನ್ ಖಾನ್ ಜೊತೆ ಸಮಂತಾ ರೊಮ್ಯಾನ್ಸ್? 'ನೋ ಎಂಟ್ರಿ'ಗೆ ಸ್ಯಾಮ್ ಎಂಟ್ರಿ

ಸಾರಾಂಶ

ಬಾಲಿವುಡ್ ಸ್ಟಾರ್ ಸಲ್ಮಾನ್ ಖಾನ್ ಸಿನಿಮಾದಲ್ಲಿ ಸಮಂತಾ ನಟಿಸಲಿದ್ದಾರೆ ಎನ್ನುವ ಸುದ್ದಿ ವೈರಲ್ ಆಗಿದೆ. ಸಲ್ಮಾನ್ ಖಾನ್ ಸಿನಿಮಾದಲ್ಲಿ ಸಮಂತಾ ನಾಯಕಿ ಎನ್ನುವ ಸುದ್ದಿ ಕೇಳಿಯೇ ಅಭಿಮಾನಿಗಳು ಸಖತ್ ಥ್ರಿಲ್ ಆಗಿದ್ದಾರೆ. ಅಂದಹಾಗೆ ದಕ್ಷಿಣ ಭಾರತದ ಅನೇಕ ನಟಿಯರು ಬಾಲಿವುಡ್‌ನಲ್ಲಿ ಸ್ಟಾರ್ ಆಗಿ ಮಿಂಚಿದ್ದಾರೆ ಮತ್ತು ಮಿಂಚುತ್ತಿದ್ದಾರೆ. 

ದಕ್ಷಿಣ ಭಾರತದ ಖ್ಯಾತ ನಟಿ ಸಮಂತಾ(Samantha) ವಿಚ್ಛೇದನದ ಬಳಿಕ ಒಂದಲ್ಲೊಂದು ವಿಚಾರದ ಮೂಲಕ ಸುದ್ದಿಯಲ್ಲಿರುತ್ತಾರೆ. ಸಾಲು ಸಾಲು ಸಿನಿಮಾಗಳಲ್ಲಿ ಸಮಂತಾ ಬ್ಯುಸಿಯಾಗಿದ್ದಾರೆ. ತೆಲುಗು (Telugu) ಮತ್ತು ಹಿಂದಿ (Hindi) ಎರಡಲ್ಲೂ ನಟಿಸುತ್ತಿರುವ ಸಮಂತಾ ಬಗ್ಗೆ ಮತ್ತೊಂದು ಇಂಟ್ರಸ್ಟಿಂಗ್ ಹೊರಬಿದ್ದಿದೆ. ಇತ್ತೀಚಿಗಷ್ಟೆ ಸಮಂತಾ ಮಾಜಿ ಪತಿ ನಾಗಚೈತನ್ಯ (Naga Chaitanya) ವಿಚಾರವಾಗಿ ಗರಂ ಆಗಿದ್ದರು. ನಾಗ ಚೈತನ್ಯ ಬಗ್ಗೆ ಗಾಸಿಪ್ ಹಬ್ಬಿಸುತ್ತಿರುವುದೇ ಸಮಂತಾ ಪಿಆರ್ ಟೀಂ ಎಂದು ನಾಗಚೈತನ್ಯ ಫ್ಯಾನ್ಸ್ ಆರೋಪ ಮಾಡಿದ್ದರು. ಇದಕ್ಕೆ ಕೆಂಡವಾಗಿದ್ದ ಸಮಂತಾ ಟ್ವಿಟ್ಟರ್‌ನಲ್ಲಿ ಪ್ರತಿಕ್ರಿಯೆ ನೀಡುವ ಮೂಲಕ ನೆಟ್ಟಿಗರ ಬಾಯಿ ಮುಚ್ಚಿಸಿದ್ದರು. ಜೊತೆಗೆ ಮೊದಲು ನಿಮ್ಮ ಕುಟುಂಬ ಮತ್ತು ಕೆಲಸದ ಕಡೆ ಹಚ್ಚು ಗಮನ ಕೊಡಿ ಎಂದು ಎಚ್ಚರಿಸಿದ್ದರು. 

ಇದೀಗ ಸಮಂತಾ ಹೊಸ ಸಿನಿಮಾದ ಬಗ್ಗೆ ಸುದ್ದಿಯಾಗಿದ್ದಾರೆ. ಅದು ಬಾಲಿವುಡ್ ಸ್ಟಾರ್ ನಟನ ಜೊತೆ. ಹೌದು, ಬಾಲಿವುಡ್ ಸ್ಟಾರ್ ಸಲ್ಮಾನ್ ಖಾನ್ (Salman Khan) ಸಿನಿಮಾದಲ್ಲಿ ಸಮಂತಾ ನಟಿಸಲಿದ್ದಾರೆ ಎನ್ನುವ ಸುದ್ದಿ ವೈರಲ್ ಆಗಿದೆ. ಸಲ್ಮಾನ್ ಖಾನ್ ಸಿನಿಮಾದಲ್ಲಿ ಸಮಂತಾ ನಾಯಕಿ ಎನ್ನುವ ಸುದ್ದಿ ಕೇಳಿಯೇ ಅಭಿಮಾನಿಗಳು ಸಖತ್ ಥ್ರಿಲ್ ಆಗಿದ್ದಾರೆ. ಅಂದಹಾಗೆ ದಕ್ಷಿಣ ಭಾರತದ ಅನೇಕ ನಟಿಯರು ಬಾಲಿವುಡ್‌ನಲ್ಲಿ ಸ್ಟಾರ್ ಆಗಿ ಮಿಂಚಿದ್ದಾರೆ ಮತ್ತು ಮಿಂಚುತ್ತಿದ್ದಾರೆ. ಇತ್ತೀಚಿಗಷ್ಟೆ ಲೇಡಿ ಸೂಪರ್ ಸ್ಟಾಪ್  ನಯನತಾರಾ ಬಾಲಿವುಡ್‌ಗೆ ಹಾರಿದ್ದರು. ಶಾರುಖ್ ಖಾನ್ ಜೊತೆ ನಟಿಸುವ ಮೂಲಕ ಹಿಂದಿ ಅಭಿಮಾನಿಗಳ ಮನಗೆಲ್ಲಲೂ ಸಜ್ಜಾಗಿದ್ದರು. ಇದರ ಬೆನ್ನಲ್ಲೇ ಸಮಂತಾ ಇದೀಗ ಸಲ್ಮಾನ್ ಖಾನ್ ಜೊತೆ ನಟಿಸಲಿದ್ದಾರೆ ಎನ್ನುವ ಸುದ್ದಿ ವೈರಲ್ ಆಗಿದೆ.

ಸಮಂತಾಗೆ ಗುಡ್‌ಬೈ ಬಳಿಕ ಶೋಭಿತಾ ಜೊತೆ ನಾಗಚೈತನ್ಯ ಲವ್ವಿಡವ್ವಿ?

ಅಂದಹಾಗೆ ಸಮಂತಾ ಆಯ್ಕೆಯಾಗಿದ್ದು ಸಲ್ಮಾನ್ ಖಾನ್ ನಟನೆಯ ನೋ ಎಂಟ್ರಿ -2 ಸಿನಿಮಾಗೆ. ಹೌದು, ಈ ಸಿನಿಮಾಗಾಗಿ ದಕ್ಷಿಣ ಭಾರತೀಯ ನಟಿಯರನ್ನು ಹುಡುಕುತಿದೆ ಸಿನಿಮಾತಂಡ. ಈಗಾಗಲೇ ಅನೇಕ ನಟಿಯರ ಹೆಸರನ್ನು ಲಿಸ್ಟ್ ಮಾಡಲಾಗಿತ್ತು. ಅದರಲ್ಲಿ ರಶ್ಮಿಕಾ ಮಂದಣ್ಣ, ಪೂಜಾ ಹೆಗ್ಡೆ, ತಮನ್ನಾ ಹೆಸರು ಸೇರಿದಂತೆ ಅನೇಕ ನಟಿಯರ ಹೆಸರು ಕೇಳಿಬಂದಿತ್ತು. ಇದೀಗ ಸಮಂತಾ ಫೈನಲ್ ಆಗಿದ್ದಾರೆ ಎನ್ನುವ ಮಾತು ಕೇಳಿಬರುತ್ತಿದೆ.        

ನಾಗಚೈತನ್ಯ-ಶೋಭಿತಾ ಬಗ್ಗೆ ವದಂತಿ ಹರಡಿಸಿದ್ರಾ ಸಮಂತಾ ಫ್ಯಾನ್ಸ್? ಗರಂ ಆದ ಸ್ಯಾಮ್

ಅಂದಹಾಗೆ ಸಮಂತಾ ದಿ ಫ್ಯಾಮಿಲಿ ಮ್ಯಾನ್-2 ಮೂಲಕ ಹಿಂದಿಗೆ ಕಾಲಿಟ್ಟಿದ್ದರು. ಒಟಿಟಿ ಪ್ರೇಕ್ಷಕರನ್ನು ರಂಜಿಸಿದ್ದ ಸಮಂತಾ ಬಳಿಕ ಅನೇಕ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಸದ್ಯ ಮತ್ತೊಂದು ವೆಬ್ ಸೀರಿಸ್‌ಗೆ ತಯಾರಿ ನಡೆಸುತ್ತಿದ್ದಾರೆ. ದಿ ಫ್ಯಾಮಿಲಿ ಮ್ಯಾನ್-2 ನಿರ್ದೇಶನ ಮಾಡಿದ್ದ ರಾಜ್ ಮತ್ತು ಡಿಕೆ ಹೊಸ ವೆಬ್ ಸೀರಿಸ್‌ಗೆ ತಯಾರಿ ನಡೆಸಿದ್ದಾರೆ. ಈಗಾಗಲೇ ಎಲ್ಲಾ ಸಿದ್ಧತೆ ಮಾಡಿಕೊಳ್ಳಲಾಗಿದೆ. ನಾಯಕನಾಗಿ ಬಾಲಿವುಡ್ ಸ್ಟಾರ್ ವರುಣ್ ಧವನ್ ಕಾಣಿಸಿಕೊಳ್ಳುತ್ತಿದ್ದಾರೆ. ಇದರ ಬೆನ್ನಲ್ಲೇ ಸಲ್ಮಾನ್ ಖಾನ್‌ಗೆ ನಾಯಕಿ ಯಾಗಲಿದ್ದಾರೆ ಎನ್ನುವ ಸುದ್ದಿ ವೈರಲ್ ಆಗಿದೆ.

ಇನ್ನು ತೆಲುಗಿನಲ್ಲಿ ಸಮಂತಾ ಖುಷಿ, ಯಶೋಧ ಸಿನಿಮಾದ ಚಿತ್ರೀಕರಣದಲ್ಲೂ ನಿರತರಾಗಿದ್ದಾರೆ. ಈಗಾಗಲೇ ಶಾಕುಂತಲಂ ಸಿನಿಮಾದ ಚಿತ್ರೀಕರಣ ಮುಗಿಸಿದ್ದು ಬಿಡುಗಡೆಗೆ ಕಾಯುತ್ತಿದ್ದಾರೆ. 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಕಿರಿಕ್ ಕಿಲಾಡಿ ಉತ್ತರ ಕೊಟ್ಟ ದೀಪಿಕಾ ಪಡುಕೋಣೆ; ಶಾಕಿಂಗ್‌ ಮೂಡ್‌ಗೆ ನೆಟ್ಟಿಗರನ್ನು ದೂಡಿದ ಸ್ಟಾರ್ ನಟಿ!
ಕನ್ನಡದಲ್ಲಿಯೇ ಮಾತನಾಡಿದ ನಟ ವಿಜಯ ದೇವರಕೊಂಡ: ಕೊಡವರ ಮನಗೆದ್ದ Rashmika Mandanna ಪತಿ