
ಬಾಲಿವುಡ್ ಮಿಸ್ಟರ್ ಪರ್ಫೆಕ್ಟ್ ಅಮೀರಾ ಖಾನ್ ಅಂದ್ರೆ ಹೆಣ್ಣು ಮಕ್ಕಳಿಗೆ ಅದೇನೋ ಗೌರವ ಮತ್ತು ಪ್ರೀತಿ. ಆದರೆ ಇದೇ 'ಪ್ರೀತಿ' ಜೊತೆ ಸೀಕ್ರೆಟ್ ಮದುವೆ ಆಗಿರುವುದು ನಿಜವೇ..?
ಹೌದು! ಅಮೀರ್ ಖಾನ್ ತನ್ನ ಮೊದಲ ಪತ್ನಿ ರೀನಾ ದತ್ತಾ ಜೊತೆ ವೈವಾಹಿಕ ಜೀವನಕ್ಕೆ goodbye ಹೇಳುವ ವೇಳೆ ಕೇಳಿ ಬಂದ ಹೆಸರೇ ಗುಳಿ ಕೆನ್ನೆ ಚೆಲುವೆ ಪ್ರೀತಿ ಜಿಂಟಾಳದು. 2002ರಲ್ಲಿ ನಡೆದ ಘಟನೆಗೆ ಪ್ರೀತಿ ಈಗೇಕೆ ಸ್ಪಷ್ಟನೆ ನೀಡಿದ್ದಾರೆ?
ಕೊರೋನಾ ವೈರಸ್ ರಾಜ್ಯಾದ್ಯಾಂತ ಹರಡುವ ಮುನ್ನ ಪ್ರೀತಿ ಜಿಂಟಾ ಖಾಸಗಿ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡಿದ್ದರು. ಈ ವೇಳೆ ಪತ್ರಕರ್ತರು 'ರಹಸ್ಯ ಮದುವೆ' ಬಗ್ಗೆ ಹರಿದಾಡಿದ ಗಾಳಿ ಮಾತುಗಳ ಬಗ್ಗೆ ಹೇಳಿ? ಎಂದಾಗ ಪ್ರೀತಿ ಸರಳವಾಗಿ ಉತ್ತರಿಸಿದ್ದಾರೆ.
'ದಿಲ್ ಚಹ್ತಾ ಹೈ' ಶೂಟಿಂಗ್ ವೇಳೆ ನಾನು ಅಮೀರ್ ತುಂಬಾ ಒಳ್ಳೆ ಫ್ರೆಂಡ್ಸ್ ಆದ್ವಿ. ಆದರೆ ಅವರ ಖಾಸಗಿ ಬದುಕಿನಲ್ಲಿ ಎಲ್ಲವೂ ಉಲ್ಟಾ ಆಗುತ್ತಿದ್ದಂತೆ ಜನರಿಗೆ ಕಾಣಿಸಿದ್ದು ನಾನು. ಏಕೆಂದರೆ ಆಗ ಅಮೀರ್‌ಗೆ ತುಂಬಾ ಹತ್ತಿರದ ವ್ಯಕ್ತಿ ನಾನಾಗಿದ್ದೆ. ಎಲ್ಲರೂ ಮಿಸಸ್ ಅಮೀರ್ ಎಂದು ಮಾತನಾಡಲು ಶುರು ಮಾಡಿದ್ದರು. ಹೋದಲೆಲ್ಲಾ ನಾನು ಮದುವೆಯಾಗಿಲ್ಲ ಎಂದು ಹೇಳಬೇಕಾಗಿತ್ತು' ಎಂದು ಹಳೇ ಘಟನೆಯನ್ನು ನೆನಪಿಸಿಕೊಂಡು ಮಾತನಾಡಿದರು.
'ಕಲ್ ಹೋ ನಾ ಹೋ' ಸುಂದರಿ ಪ್ರೀತಿ ಜಿಂಟಾ ಚಿತ್ರರಂಗದಿಂದ ದೂರ ಉಳಿದಿರುವುದೇಕೆ?
ಅಷ್ಟೇ ಅಲ್ಲದೆ ಅಮೀರ್ ನಂತರ ಸಂಜಯ್ ದತ್ತ ಜೊತೆನೂ ಪ್ರೀತಿ ಹೆಸರು ಕೇಳಿ ಬಂದಿತ್ತು. 'ಇದೆಲ್ಲಾ ನಿಜಕ್ಕೂ ಕೇಳಲು ನೋವಾಗುತ್ತದೆ. ಇದು ನನಗೆ ವಾಕರಿಕೆ ತರಿಸುತ್ತದೆ. ಐ ಲವ್ ಸಂಜು, ನಾನು ಚಿಕ್ಕ ಮಗುವಾಗಿದ್ದಾನಿಂದಲೂ ಸಂಜು ಅಂದ್ರೆ ತುಂಬಾ ಇಷ್ಟ. ಅವರು ನನಗೆ ತಂದೆ ಸಮಾನ... ' ಎಂದು ಹೇಳಿದ್ದಾರೆ.
2005ರಲ್ಲೇ ಸಾಯ್ತಿನಿ ಅಂದಿದ್ದ ಜ್ಯೋತಿಷಿಗೆ ಸಾವು ಬಂದಿದ್ದು 14 ವರ್ಷದ ನಂತ್ರ, ಅಮೀರ್ ಖಾನ್ ಬಳಿ ಪಾಲು ಕೇಳಿದ್ರು!
ಬಾಲಿವುಡ್‌ನಲ್ಲಿ ಕಾಡ್ಗಿಚ್ಚಿನಂತೆ ಗಾಸಿಪ್ ಹರಿದಾಡುತ್ತಿದ್ದರೂ, ಫೆಬ್ರವರಿ 29,2016ರಲ್ಲಿ ಪ್ರೀತಿ ಜಿಂಟಾ ಹಾಗೂ ಜೀನೀ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಕಳೆದ ತಿಂಗಳು ಇಬ್ಬರು ವಿದೇಶದಲ್ಲಿ 4ನೇ ವರ್ಷದ ಮದುವೆ ವಾರ್ಷಿಕೋತ್ಸವವನ್ನು ಆಚರಿಸಿಕೊಂಡಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.