ಮಾಹಾಮಾರಿ ಕೊರೋನಾ ವಿರುದ್ಧ ಹೋರಾಡಲು ಪ್ರಜ್ಞಾವಂತ ನಾಗರಿಕರಾಗಿ ಮನೆಯಲ್ಲಿ ಕೂತು, ಸಮಯ ಕಳೆಯುತ್ತಿರುವ ಸೆಲೆಬ್ರಿಟಿಗಳು, ಜೊತೆಯಲ್ಲಿಲ್ಲದ ಕುಟಂಬದ ಸದಸ್ಯರನ್ನು ಮಿಸ್ ಮಾಡಿ ಕೊಳ್ಳುತ್ತಿದ್ದಾರೆ.
ಕೊರೋನಾ ವೈರಸ್ ದೂರ ಮಾಡಲು ಹರಸಾಹಸ ಮಾಡುತ್ತಿರುವ ಭಾರತ ಸರ್ಕಾರಕ್ಕೆ ನಾಗರಿಕ ಪ್ರಜೆಗಳು, ಒಮ್ಮತದಿಂದ ಒಪ್ಪಿಗೆ ನೀಡಿ 21 ದಿನಗಳ ಕಾಲ ಗೃಹ ಬಂಧನಕ್ಕೊಳಗಾಗಿದ್ದಾರೆ. ಇನ್ನು ಕೆಲವರು ಮನೆಯಲ್ಲಿ ಹಿರಿಯರಿರುವ ಕಾರಣ ಮತ್ತೊಂದು ಮನೆಯಲ್ಲಿ ವಾಸವಿದ್ದಾರೆ.
ಹೌದು! ನಟಿ ಆಲಿಯಾ ಭಟ್ ಹಾಗೂ ಸಹೋದರಿ ಶಾಹೀನ್ ಜೂಹೂನಲ್ಲಿರುವ ಅಪಾರ್ಟ್‌ಮೆಂಟ್‌ನಲ್ಲಿ 21 ದಿನಗಳ ಕಾಲ ಗೃಹ ಬಂಧನದಲ್ಲಿರಬೇಕಾಗಿದೆ. ಈ ಮನೆಯಲ್ಲಿ 71 ವರ್ಷದ ತಂದೆ ಮಹೇಶ್ ಭಟ್ ಇರುವ ಕಾರಣ ಅವರ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕೆಂಬ ನಿಟ್ಟಿನಲ್ಲಿ ನಿರ್ದೇಶಕ ಮಹೇಶ್ ಭಟ್ ಹಾಗೂ ಪತ್ನಿ ದೆಹಲಿಯಲ್ಲಿ ಇರಲು ನಿರ್ಧರಿಸಿದ್ದಾರೆ.
ಆಲಿಯಾ ಭಟ್‌ಗೆ ಹೇಗೆ ಬಂತು ಬಿಕಿನಿ ಬಾಡಿ? ಯಪ್ಪೋ ನೋಡ್ರಿ ಈ ಟಿಪ್ಸ್
ಈ ಸಮಯದಲ್ಲಿ ತಂದೆಯನ್ನು ಮಿಸ್ ಮಾಡಿಕೊಳ್ಳುತ್ತಿರವ ಅಲಿಯಾ ಭಟ್ ತಮ್ಮ ಹಳೇ ಫೋಟೋ ಆಲ್ಬಂ ನೋಡುತ್ತಾ ತಂದೆ ಜೊತೆಗಿರುವ ಬ್ಲಾಕ್ ಆ್ಯಂಡ್ ವೈಟ್ ಫೋಟೋವೊಂದನ್ನು ಶೇರ್ ಮಾಡಿಕೊಂಡಿದ್ದಾರೆ. 'ಮನೆಯಲ್ಲೇ ಸುರಕ್ಷಿತವಾಗಿರುವ ತೆಂದೆಯನ್ನು ಮಿಸ್ ಮಾಡಿಕೊಳ್ಳುತ್ತಿರುವ ಕಾರಣ ಹಳೆ ಫೋಟೋಗಳನ್ನು ನೋಡುತ್ತಿರುವೆ...' ಎಂದು ಬರೆದುಕೊಂಡಿದ್ದಾರೆ.
ಸದ್ಯಕ್ಕೆ ಹೋಂ ಕ್ವಾರಂಟೈನಲ್ಲಿರುವ ಆಲಿಯಾ ಭಟ್ ಸೀರಿಸ್ ಆಗ ಫೋಟೋಗಳನ್ನು ಶೇರ್ ಮಾಡಿಕೊಳ್ಳುತ್ತಿದ್ದಾರೆ. ಕೆಲವು ದಿನಗಳ ಹಿಂದೆ ಬಾಯ್‌ಫ್ರಂಡ್ ರಣ್ಬೀರ್ ಕಪೂರ್ ಸೆರೆ ಹಿಡಿದ ಚಿತ್ರವನ್ನು ಶೇರ್ ಮಾಡಿಕೊಂಡಿದ್ದು, 'RK ಸೆರೆ ಹಿಡಿದ ಬೆಸ್ಟ್ ಫೋಟೋ' ಎಂದು ಬರೆದು ಕೊಂಡಿದ್ದರು. ಅದಕ್ಕೆ ಸ್ವಂತ ತಂಗಿ 'ಹೌದು ಇದೇ ಬೆಸ್ಟ್. ಆದರೆ ರಣ್ಬೀರ್ ನಮ್ಮದೆಲ್ಲಾ ವರ್ಸ್ಟ್ ಫೋಟೋ ತೆಗೆಯುತ್ತಾರೆ.. ' ಎಂದು ಕಾಲೆಳೆದಿದ್ದರು.