ಸ್ಟಾರ್‌ ನಟನಾದರೂ ಹಳ್ಳಿಗೋದ್ರೆ ಮನೆಗೆ ಸೇರ್ಸಲ್ವಂತೆ, ಜಾತಿಯತೆ ಕಾರಣ!

By Suvarna NewsFirst Published Oct 10, 2020, 2:25 PM IST
Highlights

'ನನ್ನ ಕುಟುಂಬದಲ್ಲಿ ನಮ್ಮ ಅಜ್ಜಿ ಕೆಳಜಾತಿಯವರು. ಈಗಲೂ ಊರಿನಲ್ಲಿ ನಮ್ಮನ್ನು ಯಾರೂ ಸೇರಿಸಿಕೊಳ್ಳುವುದಿಲ್ಲ,' ಖಾಸಗಿ ಸಂದರ್ಶನದಲ್ಲಿ ನಟ ನವಾಜುದ್ದೀನ್ ಸಿದ್ದಕ್ಕಿ ಉತ್ತರ ಪ್ರದೇಶದ ಹಥ್ರಾಸ್ ಘಟನೆ ಬಗ್ಗೆ ಮಾತನಾಡುವಾಗ ಹೇಳಿದ್ದಿಷ್ಟು. 

ಬಾಲಿವುಡ್‌ನಲ್ಲಿ ಸ್ಟಾರ್ ನಟನಾಗಿ ಬೆಳೆದ ಅಪ್ಪಟ ಉತ್ತರ ಪ್ರದೇಶ ಮೂಲದ ಕಲಾವಿದ ನವಾಜುದ್ದೀನ್ ಸಿದ್ದಿಕಿ ಜಾತಿ ತಾರತಮ್ಯದ ಬಗ್ಗೆ ಖಾಸಗಿ ವಾಹಿನಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ್ದಾರೆ. ನವಾಜುದ್ದೀನ್ ಹೇಳಿದ ಪ್ರತಿಯೊಂದೂ ಮಾತು ಸೋಷಿಯಲ್ ಮೀಡಿಯಾದಲ್ಲಿ ಚರ್ಚೆ ಹುಟ್ಟು ಹಾಕಿದೆ.

#MeToo: ಚಿತ್ರಗಂದಾ ಪರವಾಗಿ ನವಾಜುದ್ದೀನ್‌ ನಿಲ್ಲಲಿಲ್ಲವಂತೆ, ಯಾಕೆ ಗೊತ್ತಾ?

ಇಡೀ ದೇಶವೇ ಧ್ವನಿ ಎತ್ತುವಂತೆ ಮಾಡಿರುವ ಹಥ್ರಾಸ್ ಘಟನೆ ಬಗ್ಗೆ ನವಾಜುದ್ದೀನ್ 'very unfortunate' ಎಂದು ಹೇಳುತ್ತಾ, ತಮ್ಮ ಊರಿನಲ್ಲಿ ಜನರು ದಲಿತರನ್ನು ನಡೆಸಿಕೊಳ್ಳುವ ರೀತಿ ಹಾಗೂ ಜಾತಿ ಬಗ್ಗೆ ತಾರತಮ್ಯ ಮಾಡುವ ವಿಚಾರದ ಬಗ್ಗೆ ನೇರ ನುಡಿಯಲ್ಲಿ ಉತ್ತರಿಸಿದ್ದಾರೆ. 'ನಮ್ಮ ಕುಟುಂಬದಲ್ಲಿ ನನ್ನ ಅಜ್ಜಿ ಕೆಳ ಜಾತಿಗೆ ಸೇರಿದವರು. ಇಂದಿಗೂ ಆಕೆಯನ್ನು ಯಾರೂ ಸ್ವೀಕರಿಸಿಲ್ಲ. ಹಥ್ರಾಸ್ ಘಟನೆ ಬಗ್ಗೆ ನಾವು ಕಲಾವಿದರೂ ಕೂಡ ಮಾತನಾಡುತ್ತಿದ್ದೀವಿ. ಅತ್ಯಂತ ದುರದೃಷ್ಟ ಘಟನೆ ಬಗ್ಗೆ ನಾವು ಮಾತನಾಡಲೇ ಬೇಕಾಗಿದೆ,' ಎಂದು ಹೇಳಿದ್ದಾರೆ.

ನವಾಜುದ್ದೀನ್ ಟ್ಟೀಟ್‌ ಬಗ್ಗೆ ಚರ್ಚೆ:
'ಜನರು ಜಾತಿ ತಾರತಮ್ಯ ಇಲ್ಲ ಎಂದು, ಏನು ಬೇಕಾದರೂ ಹೇಳಬಹುದು. ಅವರು ಬೇರೆ ಬೇರೆ ಜಾಗಗಳಿಗೆ ಪ್ರಾಯಾಣಿಸಿದರ ನೈಜ ಚಿತ್ರಣ ಸಿಗುತ್ತದೆ,' ಎಂದು ಟ್ಟೀಟ್ ಮಾಡಿದ್ದಾರೆ.

ನಾನು ಗರ್ಭಿಣಿಯಾದರೂ ಗರ್ಲ್‌ಫ್ರೆಂಡ್ಸ್‌ ಜೊತೆ ಬ್ಯುಸಿಯಾಗಿದ್ದ: ಸಿದ್ದಿಕಿ ಪತ್ನಿ ಅರೋಪ 

'ನಾನು ಚಿತ್ರರಂಗದಲ್ಲಿ ಕೆಲಸ ಮಾಡುತ್ತಿದ್ದೀನಿ. ಖ್ಯಾತಿ ಪಡೆದಿದ್ದೇನೆ ಎಂಬುದೆಲ್ಲ ನನ್ನ ಗ್ರಾಮದ ಜನರಿಗೆ ಮುಖ್ಯವಲ್ಲ.  ಜಾತಿ ಎಂಬುದು ಅವರ ರಕ್ತದಲ್ಲಿಯೇ ಸೇರಿ ಹೋಗಿದೆ. ಅದನ್ನು ಹೆಮ್ಮೆ ಎಂದೇ ಪರಿಗಣಿಸುತ್ತಾರೆ. ಶೇಖ್ ಸಿದ್ದಿಕಿ ಅವರು ಮೇಲ್ಜಾತಿಯವರು. ಅವರಿಗೆಲ್ಲಾ ಇದು ಲೆಕ್ಕಕ್ಕೂ ಬರುವುದಿಲ್ಲ. ಅವರ ಕೆಳಗಿರುವವರೆಗೆ ಏನಾದರೂ ತಲೆಯೇ ಕೆಡೆಸಿಕೊಳ್ಳುವುದಿಲ್ಲ,' ಎಂದು 46 ವರ್ಷದ ವರ್ಸಟೈಲ್ ನಟ ನವಾಜುದ್ದೀನ್ ಮಾತನಾಡಿದ್ದಾರೆ.

ನವಾಜುದ್ದೀನ್ ಹೇಳುತ್ತಿರುವ ಮಾತುಗಳು ನಿಜ. ಏಸಿ ರೂಮಿನಲ್ಲಿ ಕುಳಿತು ಜಾತಿ ಧರ್ಮಗಳ ಬಗ್ಗೆ ಮಾತನಾಡುವುದು ಸುಲಭ. ಆದರೆ ಇಂಥ ಹಳ್ಳಿಗಳಲ್ಲಿ ವಾಸವಿದ್ದು, ಮಾತನಾಡಿದರೆ ವಾಸ್ತವ ತಿಳಿಯುತ್ತದೆ ಎಂದು ನೆಟ್ಟಿಗರು ಕಾಮೆಂಟ್ ಮಾಡಿದ್ದಾರೆ.

click me!