
ಎಸ್‌ಎಸ್ ರಾಜಮೌಳಿ ನಿರ್ದೇಶಕರ ಸಾಲಿನಲ್ಲಿ ವಿಶೇಷ ಸ್ಥಾನ ಪಡೆದವರು. ಕಮರ್ಷಿಯಲ್ ಸಿನಿಮಾಗಳ ಸಾಲಿನಲ್ಲಿ ಬೆಸ್ಟ್ ಡೈರೆಕಟರ್ ಎಂದರೆ ಅದರಲ್ಲಿ ಏನೂ ಅತಿಶಯೋಕ್ತಿ ಇಲ್ಲ. ಅಷ್ಟೊಂದು ಡಿಫರೆಂಟ್ ಸಿನಿಮಾಗಳನ್ನು ಕೊಟ್ಟ ನಿರ್ದೇಶಕರಿವರು.
ಬಾಹುಬಲಿ ಇರಲಿ, ಈಗ ಸಿನಿಮಾ ಇರಲಿ ನಿರ್ದೇಶಕನಾವಗಿ ಸಿನಿಮಾ ಮೂಲಕ ಜನರನ್ನು ಮೆಚ್ಚಿಸುವಲ್ಲಿ ಸೋತಿಲ್ಲ ರಾಜಮೌಳಿ. ತುಂಬಾ ಡಿಫರೆಂಟ್ ಸಿನಿಮಾ ಕೊಟ್ಟ ನಿರ್ದೇಶಕರ ಹಿಟ್ ಸಿನಿಮಾಗಳ ಅದ್ಭುತ ಸೀನ್‌ಗಳು ಇಲ್ಲಿವೆ
ವಿಕ್ರಮಾರ್ಕುಡು ಸಿನಿಮಾದಲ್ಲಿ ರವಿ ತೇಜ ಡಬಲ್ ರೋಲ್ ಮಾಡಿದ್ದು, ಪೊಲೀಸ್ ಸಿನಿಮಾದಲ್ಲಿ ಟಾಪ್ ಆಗ ಮೂವಿ ಇದು. ಪೊಲೀಸ್ ಆಫೀಸರ್ ಆಗಿ ರವಿ ತೇಜ ಪಾತ್ರ ಅಚ್ಚಳಿಯದೆ ನೆನಪಿನಲ್ಲಿ ಉಳಿಯುವಂತಿದೆ. ಯಾರ ಜೊತೆ ಕೆಲಸ ಮಾಡಿದರೂ ಅಲ್ಲಿರುವ ನಟರ ಬೆಸ್ಟ್ ಕಲೆಯನ್ನು ಹೊರ ತರುವ ಸಾಮರ್ಥ್ಯ ರಾಜಮೌಳಿಗಿದೆ.
ಮಗಧೀರ ಸಿನಿಮಾ ನೋಡದವರಿಲ್ಲ. ಅದ್ಭುತ ಪ್ರಣಯ ಮತ್ತು ವೀರ ಸೇನಾನಿ ಎರಡನ್ನೂ ಒಬ್ಬರಲ್ಲೇ ತಂದ ಸಿನಿಮಾ ಇದು. ಇದರಲ್ಲಿ ಬರುವ ಹಿರೋ ಪಾತ್ರ ಮಾತ್ರವಲ್ಲದೆ ಪ್ರತಿ ಪಾತ್ರವೂ ಬೆಸ್ಟ್ ಇಂಪ್ರಷನ್ ಮೂಡಿಸುತ್ತದೆ.
ಈಗ ಸಿನಿಮಾ ಸುದೀಪ್‌ಗೆ ಖ್ಯಾತಿ ತಂದು ಕೊಟ್ಟ ಸಿನಿಮಾ. ವಿಲ್ ಆಗಿ ಸುದೀಪ್‌ನನ್ನು ಬೆಸ್ಟ್ ನಟನಾಗಿ ತೋರಿಸಿದ ಮೂವಿ ಇದು. ಸಿಕ್ಕಾಪಟ್ಟೆ ಡಿಫರೆಂಟ್ ಸ್ಟೋರಿ. ಒಂದು ನೊಣ ವಿಲನ್ ವಿರುದ್ಧ ಸೇಡು ತೀರಿಸಿಕೊಳ್ಳೋದನ್ನು ಪರದೆ ಮೇಲೆ ತೋರಿಸಿದ ರೀತಿಯೇ ಸಿನಿಮಾಗೆ ಸಕ್ಸಸ್ ತಂದುಕೊಟ್ಟಿದೆ
ಛತ್ರಪತಿ ಸಿನಿಮಾದಲ್ಲಿ ಒಂದಾದ ಪ್ರಭಾಸ್ ಹಾಗೂ ರಾಜಮೌಲಿ ಕೊಲಾಬರೇಷನ್ ಪ್ರಭಾಸ್ ಭವಿಷ್ಯವನ್ನೇ ಬದಲಾಯಿಸಿತು.
ಬಾಹುಬಲಿ: ಬಾಹುಬಲಿ ಸಿನಿಮಾ ಕೇಳದವರೇ ಇಲ್ಲ. ಈ ಸಿನಿಮಾ ಮೂಲಕ ಜಗತ್ತಿಗೇ ಪರಿಚಯವಾದರು ರಾಜಮೌಳಿ, ಬಾಹುಬಲಿಯ ಎಲ್ಲ ಸೀನ್‌ಗಳೂ ಅಲ್ಟಿಮೇಟ್
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.