
ಮೇ 3ರಂದು ಅಕ್ಷಯ ತೃತೀಯ (Akshaya Tritiya) ಪ್ರಯುಕ್ತ ಮಲಬಾರ್ ಗೋಲ್ಡ್ (Malabar gold) ಸಂಸ್ಥೆ ಜಾಹೀರಾತುವೊಂದನ್ನು ಬಿಡುಗಡೆ ಮಾಡಿದೆ. ಅದರಲ್ಲಿ ಖ್ಯಾತ ಬಾಲಿವುಡ್ ನಟಿ ಕರೀನಾ ಕಪೂರ್ (Kareena Kapoor) ಕಾಣಿಸಿಕೊಂಡಿದ್ದು ಹಣೆಗೆ ಸಿಂಧೂರ ಇಡದೆ ಟ್ರೋಲ್ ಆಗಿದ್ದಾರೆ. ಅಕ್ಷಯ ತೃತೀಯ ಹಿಂದುಗಳ ಹಬ್ಬ ಆಗಿದ್ದು ಹಣೆಗೆ ಯಾವ ಸಿಂಧೂರ ಇಟ್ಟಿಲ್ಲ ಎಂದು ಸೋಷಿಯಲ್ ಮೀಡಿಯಾದಲ್ಲಿ ನೆಟ್ಟಿಗರು ಪ್ರಶ್ನೆ ಮಾಡಿದ್ದಾರೆ. ಈ ಸಂಸ್ಥೆಯನ್ನು ಬೈಕಾಟ್ ಮಾಡಿದರೆ ಕರೀನಾ ಬುದ್ಧಿ ಕಲಿಯುತ್ತಾರೆಂದು ಕಾಮೆಂಟ್ ಮಾಡುತ್ತಿದ್ದಾರೆ.
ಹಿಂದೂ ಧರ್ಮಗ್ರಂಥಗಳ ಪ್ರಕಾರ ಅಕ್ಷಯ ತೃತೀಯವು ವರ್ಷದ ಅತ್ಯಂತ ಶುಭ ದಿನಗಳಲ್ಲೊಂದು. ಸಂಸ್ಕೃತದಲ್ಲಿ ಅಕ್ಷಯ ಎಂದರೆ ಶಾಶ್ವತ ಮತ್ತು ತೃತೀಯ ಎಂದರೆ ಶುಕ್ಲ ಪಕ್ಷದ ಮೂರನೇ ದಿನ ಅಥವಾ ಪೂರ್ಣಿಮೆಯ ಹಂತ. ಅಕ್ಷಯ ತೃತೀಯವನ್ನು ದೇಶದ ಕೆಲವು ಭಾಗಗಳಲ್ಲಿ ಅಖಾ ತೀಜ್ ಎಂದು ಕರೆಯಲಾಗುತ್ತದೆ. ಯಾವುದೇ ನಿರ್ದಿಷ್ಟ ಕೆಲಸ ಅಥವಾ ಪೂಜೆಗೆ ಮಹೂರ್ತ ಅಥವಾ ಶುಭ ಮಹೂರ್ತವನ್ನು ಈ ದಿನ ನೋಡುವುದಿಲ್ಲ. ಯಾಕೆಂದರೆ ಈ ದಿನ ಪೂರ್ತಿ ಶುಭವಾಗಿರುತ್ತದೆ.
ಇಷ್ಟು ಮಹತ್ವ ಇರುವ ಹಬ್ಬದ ಜಾಹೀರಾತಿನಲ್ಲಿ ಕರೀನಾ ಕಪೂರ್‌ನ ಯಾಕೆ ಆಯ್ಕೆ ಮಾಡಿದ್ದೀರಾ? ಸಂಪ್ರದಾಯ ಪಾಲಿಸುವ ನಟಿಯರು ಸಿಕ್ಕಿಲ್ವಾ? ಪ್ರತಿ ವರ್ಷವೂ ಕರೀನಾ ಇದೇ ರೀತಿ ಮಾಡುತ್ತಾರೆ, ಕರೀನಾ ಖಾನ್ ಕುಟುಂಬದವರು ನೀವು ಏನೇ ಮಾಡಿದರೂ ಅವರು ಇದೆಲ್ಲಾ ಪಾಲಿಸುವುದಿಲ್ಲ ಅಂದಮೇಲೆ ನಾವು ಈ ಸಂಸ್ಥೆನ bycott ಮಾಡಬೇಕು' ಎಂದು ಕಾಮೆಂಟ್ ಮಾಡುತ್ತಿದ್ದಾರೆ.
ಕರೀನಾ ಪುತ್ರನೂ ಟ್ರೋಲ್:
ಬೇಬೋ ಆಗಾಗ ತಮ್ಮ ಇಬ್ಬರು ಮಕ್ಕಳಾದ ತೈಮೂರ್ (Taimur Ali Khan) ಮತ್ತು ಜೆಹ್ (Jeh) ಜೊತೆ ಕಾಣಿಸಿಕೊಳ್ಳುತ್ತಾರೆ. ಕೆಲವು ದಿನಗಳ ಹಿಂದೆ ಪ್ಯಾಪರಾಜಿಗಳ ಮೇಲೆ ತೈಮೂರು ಸಿಟ್ಟಾಗಿರುವ ವಿಡಿಯೋ ವೈರಲ್ ಆಗುತ್ತಿದೆ. ವೈರಲ್ ಆಗಿರುವ ವೀಡಿಯೊದಲ್ಲಿ ಜೆಹ್ ಆಟದ ಕಾರನ್ನು ಓಡಿಸುತ್ತಿದ್ದಾನೆ. ಅದೇ ಸಮಯದಲ್ಲಿ, ತಾಯಿ ಕರೀನಾ ಕಪೂರ್ ಜೊತೆಗೆ ತೈಮೂರ್ ಕೂಡ ಇದ್ದಾರೆ. ಈ ಸಮಯದಲ್ಲಿ, ಕೆಲವು ಛಾಯಾಗ್ರಾಹಕರು ಜೆಹ್ ಅವರ ಫೋಟೋಗಳನ್ನು ತೆಗೆಯಲು ಪ್ರಾರಂಭಿಸಿದಾಗ, ತೈಮೂರ್ ಕೋಪಗೊಂಡಿದ್ದು ಕಂಡುಬರುತ್ತದೆ.
ಇದಾದ ನಂತರ ತೈಮೂರ್ ವೀಡಿಯೊವನ್ನು ಮಾಡುತ್ತಿರುವ ಛಾಯಾಗ್ರಾಹಕರಿಗೆ 'ಸಾಕು ನಿಲ್ಲಿಸು, ಬಂದ್ ಮಾಡು' ಎಂದು ಕೂಗುತ್ತಿರುವುದು ವೀಡಿಯೋದಲ್ಲಿ ಕಂಡುಬಂದಿದೆ. ಕರೀನಾ ಮಗನಿಗೆ ವಿವರಿಸಿ ಅಲ್ಲಿಂದ ಕರೆದುಕೊಂಡು ಹೋದರು.
ಪತಿಗೆ ಸಲಹೆ ಕೊಟ್ಟು ಟ್ರೋಲ್:
'ಇತ್ತೀಚಿನ ಸಂದರ್ಶನವೊಂದರಲ್ಲಿ, ಕರೀನಾ ತಮ್ಮ ಪತಿ ಸೈಫ್ ಜೀವನವನ್ನು ಗಮನಿಸಿದಂತೆ ಸೈಫ್ (Saif Ali Khan) ತಮ್ಮ ಜೀವನದ ಪ್ರತಿ ದಶಕದಲ್ಲಿ ಇಪ್ಪತ್ತು, ಮೂವತ್ತು, ನಲವತ್ತು ಮತ್ತು ಐವತ್ತರಲ್ಲಿ ಮಗುವನ್ನು ಪಡೆದಿದ್ದಾರೆ ಎಂದು ಹೇಳಿದ್ದು ಇನ್ನು 60ರ ದಶಕದಲ್ಲೂ ಮಗು ಪಡೆಯದಂತೆ ಆಕೆ ಪತಿಗೆ ಸಲಹೆ ನೀಡಿದ್ದಾಳೆ.
'ಸೈಫ್‌ನಷ್ಟು ವಿಶಾಲ ಮನಸ್ಸಿನ ವ್ಯಕ್ತಿ ಮಾತ್ರ ವಿಭಿನ್ನ ಹಂತಗಳಲ್ಲಿ ನಾಲ್ಕು ಮಕ್ಕಳ ತಂದೆಯಾಗಬಹುದು ಎಂದು ನಾನು ಭಾವಿಸುತ್ತೇನೆ. ಅವರು ಎಲ್ಲರಿಗೂ ತಮ್ಮ ಸಮಯವನ್ನು ನೀಡುತ್ತಾರೆ. ಮತ್ತು ಈಗ, ಜೆಹ್ ಜೊತೆಯೂ ಕಾಲ ಕಳೆಯುತ್ತಿದ್ದು, ನಾವು ಎಲ್ಲವನ್ನೂ ಸಮತೋಲನಗೊಳಿಸಲು ಪ್ರಯತ್ನಿಸುತ್ತಿದ್ದೇವೆ. ಅವರು ಯಾವುದಾದರೂ ಸಿನಿಮಾದ ಚಿತ್ರೀಕರಣದಲ್ಲಿ ಬ್ಯುಸಿಯಾದಾಗ ನಾನು ಅದೇ ಸಮಯದಲ್ಲಿ ಕೆಲಸ ಮಾಡದಿರಲು ಪ್ರಯತ್ನಿಸುತ್ತೇನೆ. ಹೀಗೆ ನಾವು ಬದುಕನ್ನು ಪರಸ್ಪರ ಬ್ಯಾಲೆನ್ಸ್ ಮಾಡಿಕೊಳ್ಳಲು ಒಪ್ಪಂದ ಮಾಡಿಕೊಂಡಿದ್ದೇವೆ ಎಂದರು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.