
ಬಾಲಿವುಡ್ ಬ್ಯೂಟಿ ಕರೀನಾ ಕಪೂರ್ ಹಾಗೂ ರಾಜವಂಶದ ನಟ ಸೈಫ್ ಅಲಿ ಖಾನ್ ಕೆಲವು ದಿನಗಳ ಹಿಂದೆ ತಮ್ಮ ಕುಟುಂಬಕ್ಕೆ ಹೊಸ ಅತಿಥಿಯನ್ನು ಬರ ಮಾಡಿಕೊಳ್ಳುತ್ತಿರುವ ವಿಚಾರವನ್ನು ಹಂಚಿಕೊಂಡರು. ಆ ನಂತರ ಕರೀನಾ ಶೇರ್ ಮಾಡಿಕೊಳ್ಳುವ ಪ್ರತಿಯೊಂದೂ ಪೋಸ್ಟ್ ವಿಪರೀತ ಸೆನ್ಸೇಶನ್ ಕ್ರಿಯೇಟ್ ಮಾಡುತ್ತಿದೆ.
ಸೈಫ್ ಲವ್‌ನಲ್ಲಿ ಬಿದ್ದ ಕರೀನಾಗೆ ಜನ ಏನಂದಿದ್ರು ಗೊತ್ತಾ?
ಲಾಕ್‌ಡೌನ್ ಪ್ರಾರಂಭದಿಂದಲೂ ಮನೆಯಲ್ಲಿಯೇ ಸಮಯ ಕಳೆಯುತ್ತಿದ್ದ ಕರೀನಾ, ತೈಮೂರ್‌ನ ಪ್ರತೀ ತುಂಟಾಟವನ್ನೂ ಸೆರೆ ಹಿಡಿದು, ಇನ್‌ಸ್ಟಾಗ್ರಾಂ ಸ್ಟೋರಿ ಅಥವಾ ಪೋಸ್ಟ್‌ನಲ್ಲಿ ಅಪ್ಲೋಡ್ ಮಾಡುತ್ತಿದ್ದಾರೆ. ಅಲ್ಲದೇ 'ಇನ್ ಹೌಸ್ ಪಿಕಾಸೋ' ಎಂದಲೂ ಕರೆಯುತ್ತಿದ್ದರು.
ಇತ್ತೀಚಿಗೆ ಶೇರ್ ಮಾಡಿಕೊಂಡ ಫೋಟೋದಲ್ಲಿ ತೈಮೂರ್ ಸಿಂಹದ ಪೇಂಟಿಂಗ್ ಹಾಗೂ ಮಿನಿಯೇಚರ್‌ನನ್ನು ಹಿಡಿದು ನಿಂತಿದ್ದನು. ಅದನ್ನು ಅಪ್ಲೋಡ್ ಮಾಡಿ 'ಕಾಡಿನ ರಾಜ ಯಾರು?' ಎಂದು ಪ್ರಶ್ನಿಸಿದ್ದಾರೆ. ಅಲ್ಲದೇ ಪ್ರತಿ ತೈಮೂರ್ ಪೋಸ್ಟ್‌ಗೆ ಬಳಸಲಾಗುವ #QuaranTimDiaries ಹಾಗೂ #InHousePicasso ಸೇರಿಸಿದ್ದಾರೆ.
ಕರೀನಾ ಮಗ ತೈಮೂರ್‌ನ ಸ್ಪೆಷಲ್ ಗಣಪನನ್ನು ನೋಡಿ..!
ಪೋಸ್ಟ್ ಶೇರ್ ಆದ ಕೆಲವೇ ನಿಮಿಷಗಳಲ್ಲಿ ದಿವಾ ಸೋನಂ ಕಪೂರ್ 'ಉಫ್ ತೈಮೂರ್ ತುಂಬಾ ಕ್ಯೂಟ್ ಆಗಿದ್ದಾನೆ ಬೇಬೋ' ಎಂದು ಕಾಮೆಂಟ್ ಮಾಡಿದ್ದಾರೆ. ತೈಮೂರ್ ಅಭಿಮಾನಿ ಪೇಜ್‌ಗಳಲ್ಲಿ ಈಗಾಗಲೇ ಫೋಟೋ ಎಲ್ಲೆಡೆ ಶೇರ್ ಮಾಡಿಕೊಂಡು ವೈರಲ್ ಮಾಡಿದ್ದಾರೆ. ಸೆಲೆಬ್ರಿಟಿ ಕಿಡ್ ತೈಮೂರ್ ತಮ್ಮ ಸಿಬ್ಲಿಂಗ್ ಬರ ಮಾಡಿಕೊಳ್ಳುವಷ್ಟು ದೊಡ್ಡವನಾಗಿದ್ದಾನೆ, ಎಂದು ಫ್ಯಾನ್ಸ್ ಕಾಮೆಂಟ್ ಮಾಡುತ್ತಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.