ಕಾರ್ತಿಕ್ ಆರ್ಯನ್‌ನನ್ನು ಕಿಕ್ಔಟ್ ಮಾಡಿದ ಕರಣ್ ಜೋಹರ್ | ದೋಸ್ತಾನಾ 2ನಲ್ಲಿ ಕಾರ್ತಿಕ್ ಇಲ್ಲ | ಧರ್ಮ ಪ್ರೊಡಕ್ಷನ್ಸ್‌ಗೆ 20 ಕೋಟಿ ನಷ್ಟ
ಸಿನಿಮಾದಿಂದ ನಟರನ್ನು ರಿಪ್ಲೇಸ್ ಮಾಡುವುದು ಹೊಸ ವಿದ್ಯಾಮಾನವೇನಲ್ಲ. ಇಂತಹ ಘಟನೆ ನಡೆಯುತ್ತಲೇ ಇರುತ್ತದೆ. ಆದರೆ ಇದು ಸಿನಿಮಾದ ಆರಂಭದಲ್ಲಿ. ಆದ್ರೆ ಅರ್ಧದಷ್ಟು ಸಿನಿಮಾ ಶೂಟಿಂಗ್ ಮಾಡಿ ನಂತರ ಈ ನಟ ಬೇಡ ಎನ್ನುವ ವಿದ್ಯಾಮಾನ ನಡೆಯೋದು ಅಂದ್ರೆ ಸ್ವಲ್ಪ ಮಟ್ಟಿಗೆ ವಿಚಿತ್ರ. ಆದ್ರೆ ಬಾಲಿವುಡ್‌ನಲ್ಲಿ ಇಂತಹ ಘಟನೆ ನಡೆದಿದೆ.
ಪ್ರೊಫೆಷನ್ ನಡತೆ ಸರಿ ಇಲ್ಲ ಎಂದು ಬಾಲಿವುಡ್‌ನ ಯುವ ನಟ ಕಾರ್ತಿಕ್ ಆರ್ಯನ್ ಅವರನ್ನು ದೋಸ್ತಾನ 2 ಸಿನಿಮಾದಿಂದ ಕಿಕ್ಔಟ್ ಮಾಡಿದ್ದಾರೆ ಟಾಪ್ ನಿರ್ಮಾಪಕ ಕರಣ್ ಜೋಹರ್.
ತಮಿಳಿನ ಖ್ಯಾತ ಹಾಸ್ಯ ನಟ ವಿವೇಕ್ ಇನ್ನಿಲ್ಲ!
ಕಾರ್ತಿಕ್ ಅವರು ಸ್ಕ್ರಿಪ್ಟ್ ಮಧ್ಯೆ ಮೂಗು ತೂರಿಸುವುದು ಮತ್ತು ಔದ್ಯೋಕಿವಲ್ಲದ ವರ್ತನೆ ತೋರಿಸುವುದು ಅವರು ತಂಡದಿಂದ ಹೊರಬೀಳೋಖೆ ಕಾರಣ ಎನ್ನಲಾಗುತ್ತಿದೆ. ಏನೇ ಇದ್ದರು ಧರ್ಮ ಪ್ರೊಡಕ್ಷನ್ ಮತ್ತು ಕರಣ್ ಜೋಹರ್‌ಗೆ ಕೋಟಿಗಳಲ್ಲಿ ನಷ್ಟವಾಗಿರುವುದು ಹೌದು.
ಕಾರ್ತಿಕ್ ಸಿನಿಮಾದಿಂದ ಹೊರಗೆ ಹೋಗಿ ಬರೋಬ್ಬರಿ 20 ಕೋಟಿ ರೂ. ನರ್ಷವಾಗಿದೆ. ಜೋಹರ್ ಅವರ ಸಿನಿಮಾಗಳ ಬೃಹತ್ ಪ್ರಮಾಣದ ಬಜೆಟ್ ಗಮನಿಸಿದರೆ 20 ಕೋಟಿ ಅಷ್ಟು ದೊಡ್ಡ ಮೊತ್ತವೇನಲ್ಲ. ಆದರೂ ಕಾರ್ತಿಕ್ ನಿರ್ಗಮನದಿಂದ ಉಂಟಾದ ನಷ್ಟವು ‘ದೋಸ್ತಾನಾ 2’ ಸಿನಿಮಾ ಬಜೆಟ್ ಮೇಲೆ ಪರಿಣಾಮ ಬೀರಲಿದೆ.
ವಕೀಲ್ ಸಾಬ್‌ಗೆ ಕೊರೋನಾ, ಪವರ್ ಸ್ಟಾರ್‌ಗೆ ಚಿಕಿತ್ಸೆ
ಕಾರ್ತಿಕ್ ಆರ್ಯನ್ ಸ್ವಭಾವದಿಂದ ಬೇಸತ್ತ ಕರಣ್ ಇನ್ನೂ ಟಾಲರೇಟ್ ಮಾಡದಿರಲು ನಿರ್ಧರಿಸಿದ್ದಾರೆ. ಕೋಟ್ಯಂತರ ಮೌಲ್ಯದ ನಷ್ಟವನ್ನು ಭರಿಸಬೇಕಾಗಿದೆ ಎಂದು ಗೊತ್ತಿದ್ದರೂ ಕಾರ್ತಿಕ್ ಅವರನ್ನು ಚಿತ್ರದಿಂದ ಕೈಬಿಟ್ಟಿದ್ದಾರೆ. ಕಾರ್ತಿಕ್ ಅವರನ್ನು ಚಿತ್ರದಿಂದ ತೆಗೆದುಹಾಕುವುದು ಉತ್ತಮ ಮತ್ತು ಭವಿಷ್ಯದಲ್ಲಿ ಅವರೊಂದಿಗೆ ಕೆಲಸ ಮಾಡದಿರುವುದು ಉತ್ತಮ ಎಂಬ ನಿರ್ಧಾರಕ್ಕೆ ಕರಣ್ ಬಂದಿದ್ದಾರೆ ಎನ್ನಲಾಗಿದೆ.
'ದೋಸ್ತಾನಾ 2' ಚಿತ್ರೀಕರಣಕ್ಕಾಗಿ ಕಾರ್ತಿಕ್ ತಮ್ಮ ದಿನಾಂಕಗಳನ್ನು ನಿಗದಿಪಡಿಸುವಾಗ ಸಮಸ್ಯೆ ಮಾಡಿದ್ದಾರೆ ಎಂದು ಮೂಲಗಳು ತಿಳಿಸಿವೆ. ಕಾರ್ತಿಕ್ ಅನ್ನು ನಿರ್ವಹಿಸುವ ಏಜೆನ್ಸಿಯಾದ ಕೆಡಬ್ಲ್ಯುಎಎನ್ ಅವರೊಂದಿಗೆ ಧರ್ಮ ಪ್ರೊಡಕ್ಷನ್ಸ್ ಹಲವಾರು ಸುತ್ತಿನ ಸಭೆಗಳನ್ನು ನಡೆಸಿತು. ಈ ಎಲ್ಲ ಪ್ರಯತ್ನಗಳ ಹೊರತಾಗಿಯೂ, ಕಾರ್ತಿಕ್ ಅವರ ದಿನಾಂಕಗಳ ಆಯ್ಕೆಯ ಬಗ್ಗೆ ಪ್ರೊಡಕ್ಷನ್ ಹೌಸ್ಗೆ ಸ್ಪಷ್ಟ ಉತ್ತರ ಸಿಗದಿರುವುದು ಕರಣ್ ಜೋಹರ್ ಕೋಪಕ್ಕೆ ಕಾರಣವಾಗಿತ್ತು.
ಮಾಲ್ಡೀವ್ಸ್ ವೆಕೇಷನ್ ನಂತರ ಉದಯ್‌ಪುರದಲ್ಲಿ ಜಾನ್ವಿ ಕಪೂರ್!
'ದೋಸ್ತಾನಾ 2' ಚಿತ್ರದ ಎರಡನೇ ಅರ್ಧ ಭಾಗದ ಬಗ್ಗೆ ಕಾರ್ತಿಕ್ ಆರ್ಯನ್ ಖುಷಿಯಾಗಿರಲಿಲ್ಲ. ಈ ಸಂಬಂಧ ನಿರ್ಮಾಪಕರಿಗೆ ತೊಂದರೆ ನೀಡಿದ್ದರು ಎನ್ನಲಾಗಿದೆ. ಚಿತ್ರಕ್ಕೆ ಸಹಿ ಹಾಕುವ ಮೊದಲು ಕಾರ್ತಿಕ್ ಆರ್ಯನ್ ನೋಡಿದ ಸ್ಕ್ರಿಪ್ಟ್‌ನಲ್ಲಿ ಧರ್ಮ ಪ್ರೊಡಕ್ಷನ್ಸ್ ಯಾವುದೇ ಬದಲಾವಣೆ ಮಾಡಿಲ್ಲ. ಕಾರ್ತಿಕ್ ಸ್ಕ್ರಿಪ್ಟ್‌ನಲ್ಲಿ ಹಸ್ತಕ್ಷೇಪ ಮಾಡುವುದನ್ನು ಸಹಿಸಲಾಗಲಿಲ್ಲ ಮತ್ತು ಕರಣ್ ಜೋಹರ್ ಅಂತಹ ದೊಡ್ಡ ನಿರ್ಧಾರ ತೆಗೆದುಕೊಳ್ಳಬೇಕಾಯಿತು ಎನ್ನಲಾಗಿದೆ. ಕಾರ್ತಿಕ್, ಜಾನ್ವಿ ಕಪೂರ್ ಮತ್ತು ಲಕ್ಷ್ಯ ಲಾಲ್ವಾನಿ ಅವರು 2019 ರಲ್ಲಿ 20 ದಿನಗಳ ಕಾಲ ‘ದೋಸ್ತಾನಾ 2’ ಚಿತ್ರೀಕರಣ ನಡೆಸಿದ್ದಾರೆ.