
ಬಾಲಿವುಡ್ ಬೋಲ್ಡ್ ಲೇಡಿ ಕಂಗನಾ ರಣಾವತ್ ತಮಿಳುನಾಡು ಐರನ್ ಲೇಡಿ ಜಯಲಲಿತಾ ಬಯೋಪಿಕ್ ಚಿತ್ರೀಕರಣವನ್ನು ಸುಮಾರು 7 ತಿಂಗಳ ನಂತರ ಪ್ರಾರಂಭಿಸಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಬ್ಲಾಕ್ ಆಂಡ್ ವೈಟ್ ಲುಕ್ ಹಾಗೂ ನಿರ್ದೇಶಕರ ಜೊತೆಗಿರುವ ರೆಟ್ರೋ ಲುಕ್ ಫೋಟೋ ವೈರಲ್ ಆಗುತ್ತಿದೆ.
ಬಾಲಿವುಡ್ ನಟಿ ಕಂಗನಾಗೆ ಮತ್ತೊಂದು ಸಂಕಷ್ಟ : ದಾಖಲಾಯ್ತು FIR
ಚಿತ್ರೀಕರಣ ಪ್ರಾರಂಭ:
'ಜಯ ಮಾ ಅವರ ಆಶೀರ್ವಾದದಿಂದ ತಲೈವಿ- ರೆವಲ್ಯೂಷನ್ ಲೀಡರ್ ಚಿತ್ರದ ಒಂದು ಶೂಟಿಂಗ್ ಶೆಡ್ಯೂಲ್ ಮುಗಿದಿದೆ. ಕೊರೋನಾದಿಂದ ಚಿತ್ರೀಕರಣದಲ್ಲಿ ಸಾಕಷ್ಟು ಬದಲಾವಣೆಯಾಗಿದೆ. ಆದರೆ ಆ್ಯಕ್ಷನ್ ಹಾಗೂ ಕಟ್ ಮುಂಚೆ ನಡೆಯುವುದು ಯಾವುದೂ ಬದಲಾಗಿಲ್ಲ. ಥ್ಯಾಂಕ್ಯೂ ಟೀಂ' ಎಂದು ಬರೆದುಕೊಂಡಿದ್ದರು.
ಇನ್ನು ಕೆಲವು ದಿನಗಳ ಹಿಂದೆ ನಿರ್ದೇಶಕ ವಿಜಯ್ ಎಎಲ್ ಜೊತೆ ಸನ್ನಿವೇಶವೊಂದನ್ನು ಚರ್ಚಿಸುತ್ತಿರುವ ಫೋಟೋ ಹಂಚಿಕೊಂಡಿದ್ದರು. ಗುಂಗರು ಕೂದಲು, ರೆಟ್ರೋ ಲುಕ್ ಸೀರೆಯಲ್ಲಿ ಕಂಗನಾಳನ್ನು ನೋಡಿ ನೆಟ್ಟಿಗರು ಮೆಚ್ಚುಗೆ ವ್ಯಕ್ತ ಪಡಿಸಿದ್ದರು. ' ಗುಡ್ ಮಾರ್ನಿಂಗ್ ಫ್ರೆಂಡ್ಸ್. ಬೆಳ್ಳಂ ಬೆಳಗ್ಗೆ ನಮ್ಮ ಟ್ಯಾಲೆಂಟೆಂಡ್ ನಿರ್ದೇಶಕ ವಿಜಯ್ ಜೀ ಜೊತೆ. ನಮ್ಮ ಶೂಟಿಂಗ್ ಸೆಟ್ ಅದ್ಭುತವಾಗಿತ್ತು'ಎಂದು ಟ್ಟೀಟ್ ಮಾಡಿದ್ದರು.
ಸೌದೆ ಒಲೆ ಉರಿಸಿ ಜೋಳದ ರೊಟ್ಟಿ ಮಾಡ್ತಾರೆ ಕಂಗನಾ ಅಮ್ಮ..!
ಕ್ಲೈಮ್ಯಾಕ್ಸ್‌ಗೆ ಸಂಕಷ್ಟ:
ತಲೈವಿ ಕ್ಲೈಮ್ಯಾಕ್ಸ್ ಚಿತ್ರೀಕರಣಕ್ಕೆ ಸುಮಾರು 350 ಜನರು ಇರಬೇಕಾಗುತ್ತದೆ. ಆದರೆ ಸರ್ಕಾರ ಹೊರಡಿಸಿರುವ ಆದೇಶದ ಪ್ರಕಾರ ಸಾಮಾಜಿಕ ಅಂತರ ಕಾರಣ. ಸದ್ಯಕ್ಕೆ ಅಷ್ಟು ಜನರನ್ನು ಸೇರಿಲಾಗುವುದಿಲ್ಲ. ಚಿತ್ರೀಕರಣ ಮಾಡುವುದು ಅಸಾಧ್ಯವಾಗಿದೆ. ಮುಂಬರುವ ದಿನಗಳಲ್ಲಿ ಚಿತ್ರೀಕರಣದ ಬಗ್ಗೆ ಚರ್ಚಿಸ ಬೇಕು' ಎಂದು ಹೇಳಲಾಗಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.