ಬಾಲಿವುಡ್​ ಕ್ವೀನ್​ ನಿಗೂಢ ಸಾವಿಗೆ 6 ವರ್ಷ: ಶ್ರೀ ಅಮ್ಮ ಯಂಗೇರ್ ಅಯ್ಯಪ್ಪನ್, ಶ್ರೀದೇವಿ ಆಗಿದ್ದು ಹೇಗೆ?

By Suvarna News  |  First Published Feb 24, 2024, 12:42 PM IST

ಬಾಲಿವುಡ್​ನ ಮೊದಲ ಮಹಿಳಾ ಸೂಪರ್​ಸ್ಟಾರ್​ ಎನಿಸಿಕೊಂಡಿರೋ ಶ್ರೀದೇವಿ ಅವರು ನಿಗೂಢ ಸಾವನ್ನಪ್ಪಿ 6 ವರ್ಷವಾಗಿದೆ. ಶ್ರೀ ಅಮ್ಮ ಯಂಗೇರ್ ಅಯ್ಯಪ್ಪನ್ ಹೆಸರಿನ ಯುವತಿ ಶ್ರೀದೇವಿ ಆಗಿದ್ದು ಹೇಗೆ?
 


 ಬಾಲಿವುಡ್ ಹಿರಿಯ ನಟಿ ಶ್ರೀದೇವಿ ಇಂದು ನಮ್ಮ ನಡುವೆ ಇಲ್ಲದಿರಬಹುದು, ಆದರೆ ಅವರು ತಮ್ಮ ಅಭಿಮಾನಿಗಳ ಹೃದಯದಲ್ಲಿ ಇನ್ನೂ ಜೀವಂತವಾಗಿದ್ದಾರೆ. ಆಕೆಯ ನಟನೆ ಮಾತ್ರವಲ್ಲದೆ ಆಕೆಯ ಸೌಂದರ್ಯದ ಬಗ್ಗೆಯೂ ಜನರು ಹುಚ್ಚರಾಗಿದ್ದರು. "ಬಾಲಿವುಡ್‌ನ ಮೊದಲ ಮಹಿಳಾ ಸೂಪರ್‌ಸ್ಟಾರ್" ಎಂದೂ ಇವರನ್ನು ಕರೆಯಲಾಗುತ್ತಿತ್ತು.  ಭಾರತೀಯ ಚಿತ್ರರಂಗದ ಲೆಜೆಂಡರಿ ನಟಿ ಎಂದು ಕರೆಸಿಕೊಂಡಿರೋ ಶ್ರೀದೇವಿ (Sridevi) ನಿಗೂಢವಾಗಿ ಸಾವನ್ನಪ್ಪಿ ಇಂದು ಅಂದರೆ ಫೆ. 24ರಂದು ಆರು ವರ್ಷಗಳೇ ಕಳೆದಿದೆ.  ಸೌಂದರ್ಯದ ಘನಿಯಂತಿದ್ದ ಶ್ರೀದೇವಿ ದುರಂತ ಅಂತ್ಯ (sad end) ಕಂಡವರು. ಇವರದ್ದು ಸಹಜ  ಸಾವು ಎಂದು ಹೇಳಲಾಗುತ್ತಿದ್ದರೂ,  ಸಾವಿನ ರಹಸ್ಯ  (Secret) ಕೊನೆಗೂ ರಹಸ್ಯವಾಗಿಯೇ ಉಳಿದಿದೆ. ಶ್ರೀದೇವಿಯ ಸಾವಿನ ರಹಸ್ಯದ ಬಗ್ಗೆ ಹಲವರು ಹಲವು ರೀತಿ ಆಡಿಕೊಳ್ಳುತ್ತಿದ್ದಾರೆ. ಇದು ಬಹುತೇಕ ಕೊಲೆ ಎನ್ನುವುದು ಎಲ್ಲರ ಮಾತು. ಕೊಲೆಗಾರ ಯಾರು ಎನ್ನುವ ಬಗ್ಗೆಯೂ ಜನರು ಆಡಿಕೊಳ್ಳುತ್ತಿದ್ದರೂ ನಿಜ ಏನು ಎಂಬ ರಹಸ್ಯ ಮಾತ್ರ ಶ್ರೀದೇವಿಯ ಜೊತೆಗೇ ಸುಟ್ಟು ಭಸ್ಮವಾಗಿದೆ.  1963ರಲ್ಲಿ ಹುಟ್ಟಿದ್ದ ಈ ತಾರೆ ಇಂದು ಬದುಕಿರುತ್ತಿದ್ದರೆ, 61 ವರ್ಷ ವಯಸ್ಸಾಗಿರುತ್ತಿತ್ತು. ಆದರೆ 2018ರಲ್ಲಿ ಈಕೆ ದುರಂತ ಅಂತ್ಯ ಕಂಡರು. 

 2018ರಲ್ಲಿ ಫೆಬ್ರವರಿ 20ರಂದು ನಟಿ ಕುಟುಂಬ ಸಹಿತವಾಗಿ ಮದುವೆಯಲ್ಲಿ ಪಾಲ್ಗೊಳ್ಳಲು ದುಬೈಗೆ ಹೋಗಿದ್ದರು. ಇನ್ನೊಂದೆಡೆ,  ಭಾರತದಲ್ಲಿ ಇದ್ದರು ಎನ್ನಲಾದ ಇವರ ಪತಿ ಬೋನಿ ಕಪೂರ್​ (Bony Kapoor), ಫೆಬ್ರವರಿ 24ರಂದು ಶ್ರೀದೇವಿ ಭೇಟಿ ಮಾಡಿ ಸರ್​ಪ್ರೈಸ್ ಕೊಡೋಕೆ ರೆಡಿ ಆಗಿದ್ದರು ಎಂದು ಹೇಳಲಾಗುತ್ತಿದೆ. ಆದರೆ, ಹೋಟೆಲ್​ ಬಾತ್​ರೂಮ್​ಗೆ ಹೋಗಿದ್ದಷ್ಟೇ. ಅಲ್ಲಿಯೇ ಶ್ರೀದೇವಿ ಮೃತಪಟ್ಟಿದ್ದರು. ಬಾತ್​ಟಬ್​ನಲ್ಲಿ ಮುಳುಗಿ ಶ್ರೀದೇವಿ ಮೃತಪಟ್ಟರು ಎಂದೇ ಹೇಳಲಾಗುತ್ತಿದೆ. ಇವರ ಶವ ಸಿಕ್ಕಿದ್ದು ಬಾತ್​ಟಬ್​ನಲ್ಲಿ.(bathtub) ಆದರೆ ನಿಜವಾಗಿಯೂ ಏನು ಆಗಿದೆ ಎನ್ನುವುದು ಮಾತ್ರ ನಿಗೂಢವಾಗಿಯೇ ಉಳಿದಿದೆ.  

Latest Videos

undefined

ಶ್ರೀದೇವಿಯನ್ನು ಹುಚ್ಚನಂತೆ ಪ್ರೀತಿಸುತ್ತಿದ್ದೆ, ಕಾಲುಗಳು ನಡುಗುತ್ತಿದ್ದವು ಎಂದು ನೆನಪಿಸಿಕೊಂಡ ಕರಣ್​ ಜೋಹರ್​

 ಶ್ರೀದೇವಿ ತಮ್ಮ ವೃತ್ತಿ ಜೀವನದಲ್ಲಿ ಹಿಂದಿ ಚಿತ್ರಗಳಲ್ಲದೆ, ಅವರು ತಮಿಳು, ತೆಲುಗು, ಮಲಯಾಳಂ ಮತ್ತು ಕನ್ನಡ ಚಿತ್ರಗಳಲ್ಲಿಯೂ ಕೆಲಸ ಮಾಡಿದ್ದಾರೆ. ನಾಲ್ಕನೇ ವಯಸ್ಸಿನಲ್ಲಿ ಬಾಲ ಕಲಾವಿದೆಯಾಗಿ ಕೆಲಸ ಮಾಡಲು ಪ್ರಾರಂಭಿಸಿದರು. ಐದು ದಶಕಗಳ ಕಾಲದ ಅವರ ವೃತ್ತಿಜೀವನದಲ್ಲಿ ಅವರು 300 ಕ್ಕೂ ಹೆಚ್ಚು ಚಲನಚಿತ್ರಗಳಲ್ಲಿ ಕೆಲಸ ಮಾಡಿದ್ದಾರೆ. ಆದರೆ ಒಂದು ಕುತೂಹಲದ ವಿಷಯ ಬಹುತೇಕ ಮಂದಿಗೆ ತಿಳಿದಿರಕ್ಕಿಲ್ಲ. ಅದೇನೆಂದರೆ, ಶ್ರೀದೇವಿ ಅವರ ನಿಜವಾದ ಹೆಸರು ಶ್ರೀದೇವಿ ಅಲ್ಲ. ಬದಲಿಗೆ,  ಶ್ರೀ ಅಮ್ಮ ಯಂಗೇರ್ ಅಯ್ಯಪ್ಪನ್. ಆದರೆ ಸಿನಿಮಾ ಕ್ಷೇತ್ರಕ್ಕೆ ಕಾಲಿಡುತ್ತಿದ್ದಂತೆಯೇ ನಟಿ ತಮ್ಮ ಹೆಸರನ್ನು ಶ್ರೀದೇವಿ ಎಂದು ಬದಲಾಯಿಸಿಕೊಂಡರು. ಈ ಹೆಸರು ಅವರಿಗೆ ಅದೃಷ್ಟವನ್ನೇ ತಂದುಕೊಟ್ಟಿತು.  80 ರ ದಶಕದಲ್ಲಿ, ಚಲನಚಿತ್ರಗಳು ಕೇವಲ ಪುರುಷ ನಟರ ಬಲದ ಮೇಲೆ ಓಡುತ್ತಿದ್ದವು, ಆದರೆ ಆ ಸಮಯದಲ್ಲಿಯೂ ಶ್ರೀದೇವಿ ತಮ್ಮ ನಟನೆಯ ಮೂಲಕ ಖ್ಯಾತಿ ಗಳಿಸಿದರು. ತಮ್ಮ ನಟನೆಯ ಆಧಾರದ ಮೇಲೆ ಮೊದಲ ಮಹಿಳಾ ಸೂಪರ್​ ಸ್ಟಾರ್​ ಎಂಬ ಬಿರುದನ್ನು ಪಡೆದ ಮೊದಲ ನಟಿ ಎಂಬ ಹೆಗ್ಗಳಿಕೆಗೆ ಪಾತ್ರರಾದರು, ಬಹುಶಃ ಆ ಸಮಯದಲ್ಲಿ ಶ್ರೀದೇವಿ ಪುರುಷ ನಟನಿಗಿಂತ ಹೆಚ್ಚು ಶುಲ್ಕ ವಿಧಿಸುತ್ತಿದ್ದರು. ವರದಿಗಳ ಪ್ರಕಾರ, ಅವರು ನಾಗಿನಾ ಚಿತ್ರಕ್ಕಾಗಿ ರಿಷಿ ಕಪೂರ್‌ಗಿಂತ ಹೆಚ್ಚಿನ ಶುಲ್ಕವನ್ನು ವಿಧಿಸಿದ್ದರು.

ಮೊದಲ ಬಾರಿಗೆ 1 ಕೋಟಿ ರೂಪಾಯಿ ಶುಲ್ಕ ಪಡೆದ ಬಾಲಿವುಡ್ ನಟಿ ಶ್ರೀದೇವಿ. 80-90ರ ದಶಕದಲ್ಲಿ ಶ್ರೀದೇವಿ ಚಿತ್ರದ ಯಶಸ್ಸಿನ ಗ್ಯಾರಂಟಿ ಎಂದು ಪರಿಗಣಿಸಲಾಗಿತ್ತು. ಹೀಗಿರುವಾಗ ಎಲ್ಲ ನಿರ್ಮಾಪಕರು, ನಿರ್ದೇಶಕರು ಅವರಿಗೆ ಬೇಡಿಕೆಯಷ್ಟು ಕೊಡಲು ಸಿದ್ಧರಾಗಿದ್ದರು. ಶ್ರೀದೇವಿ ಸೌತ್ ಚಿತ್ರಗಳ ಮೂಲಕ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು ಮತ್ತು ದಕ್ಷಿಣ ಚಲನಚಿತ್ರಗಳಲ್ಲಿ ಸಾಕಷ್ಟು ಹೆಸರು ಗಳಿಸಿದರು. ಅಲ್ಲಿ ಶ್ರೀದೇವಿ ದೊಡ್ಡ ನಟಿ ಎಂದೇ ಗುರುತಿಸಿಕೊಂಡಿದ್ದರು. 15 ವರ್ಷಗಳ ಸುದೀರ್ಘ ಸಮಯದ ನಂತರ, ಶ್ರೀದೇವಿ 2013 ರಲ್ಲಿ 'ಇಂಗ್ಲಿಷ್ ವಿಂಗ್ಲಿಷ್' ಚಿತ್ರದ ಮೂಲಕ ಮತ್ತೆ ಮರಳಿದರು. ಚಿತ್ರದಲ್ಲಿ ಶ್ರೀದೇವಿ ಗೃಹಿಣಿಯಾಗಿ ನಟಿಸಿದ್ದಾರೆ. ಇದರಲ್ಲಿ ಅವಳ ಮಕ್ಕಳು ಮತ್ತು ಪತಿ ಅವಳ ಕಳಪೆ ಇಂಗ್ಲಿಷ್ ಅನ್ನು ಗೇಲಿ ಮಾಡುತ್ತಲೇ ಇರುತ್ತಾರೆ. ಅದರ ನಂತರ ಅವಳು ಲಂಡನ್‌ಗೆ ಹೋದಾಗ, ಅವಳು ಕೋಚಿಂಗ್ ಸೆಂಟರ್‌ನಿಂದ ಇಂಗ್ಲಿಷ್ ಕಲಿಯಲು ನಿರ್ಧರಿಸುತ್ತಾಳೆ. ಈ ಚಿತ್ರವನ್ನು ಶ್ರೀದೇವಿಯ ಪುನರಾಗಮನ ಚಿತ್ರ ಎಂದು ಪರಿಗಣಿಸಲಾಗಿದೆ. ಬೇರೆ ದೇಶಗಳಲ್ಲೂ ಈ ಚಿತ್ರ ಉತ್ತಮ ಪ್ರದರ್ಶನ ಕಂಡಿದೆ. ಅದರ ನಂತರ, 2018 ರಲ್ಲಿ, ಶ್ರೀದೇವಿ 'ಮಾಮ್' ಚಿತ್ರದಲ್ಲಿ ಮಲ ತಾಯಿಯ ಪಾತ್ರವನ್ನು ನಿರ್ವಹಿಸಿದರು. ಈ ಚಿತ್ರ ಜನ ಮತ್ತು ಪ್ರೇಕ್ಷಕರಿಗೆ ತುಂಬಾ ಇಷ್ಟವಾಯಿತು.

ಹೇಮಾ ಮಾಲಿನಿ ಪತಿ ಧರ್ಮೇಂದ್ರ ಮೇಲೆ ಶ್ರೀದೇವಿ ಕಣ್ಣು ಹಾಕಿದ್ರಾ? ನಟಿಯ ಖಡಕ್​ ಉತ್ರ ಏನಿತ್ತು?
 
 

click me!