
ಎಸ್ ಬಾಸ್ (Yes Boss) ಮೂಲಕ ಕವಿತಾ ವಿನೋದ್ ವರ್ಮಾ ಅಗಿ ಜನಪ್ರಿಯತೆ ಪಡೆದುಕೊಂಡಿರುವ ನಟಿ ಡೆಲ್ನಾಜ್ (Delnaaz Irani) ಬಿಗ್ ಬಾಸ್ ಸೀಸನ್ 6ರಲ್ಲಿ (Bigg Boss 6) ಕಾಣಿಸಿಕೊಂಡ ನಂತರ ಅಪಾರ ಸಂಖ್ಯೆಯಲ್ಲಿ ಅಭಿಮಾನಿಗಳನ್ನು ಗಳಿಸಿದ್ದರು. ಶೋ ನಂತರ ಬ್ಯಾಕ್ ಟು ಬ್ಯಾಕ್ ಪ್ರಾಜೆಕ್ಟ್‌ಗಳಲ್ಲಿ ಬ್ಯುಸಿಯಾಗಿರುವ ಡೆಲ್ನಾಜ್ ಸಿನಿಮಾ ಕ್ಷೇತ್ರದಲ್ಲಿ ದೊಡ್ಡ ಮಟ್ಟದಲ್ಲಿ ಸಾಧನೆ ಮಾಡಿದ್ದಾರೆ. ಸದ್ಯ ಕಿರುತೆರೆ ಮತ್ತು ನಿರೂಪಣೆಯಲ್ಲಿ ಬ್ಯುಸಿಯಾಗಿರುವ ನಟಿಗೆ ಕೊರೋನಾ ಸೋಂಕು ತಗಲಿದೆ.
ಹೌದು! ಕಭಿ ಕಭಿ ಇತ್ತೆಫಕ್ ಸೇ ( Kabhi Kabhie Ittefaq Sey) ನಲ್ಲಿ ಕಾಣಿಸಿಕೊಳ್ಳಲು ಸಿದ್ಧವಾಗುತ್ತಿದ್ದ ನಟಿ, ಶನಿವಾರ ಕೊರೋನಾ ಟೆಸ್ಟ್ (Covid19 test) ಮಾಡಿಸಿಕೊಂಡಿದ್ದಾರೆ. ರಿಪೋರ್ಟ್ ಪಾಸಿಟಿವ್ ಬಂದಿದೆ ಎಂದಿದ್ದಾರೆ. 'ನಾನು ಡಿಸೆಂಬರ್ 30ರವರೆಗೂ ಚಿತ್ರೀಕರಣ ಮಾಡುತ್ತಿದ್ದೆ. ಇದಾದ ನಂತರ ಎರಡು ದಿನಗಳ ನಂತರ ಬ್ರೇಕ್ ಇತ್ತು. ಡಿಸೆಂಬರ್ 31ರಂದು ಚಳಿ ಆಗುತ್ತಿತ್ತು. ಜ್ವರ (Fever) ಹೆಚ್ಚಾಗಿತ್ತು, ದೇಹದಲ್ಲಿ ನೋವಿತ್ತು. ಪರ್ಸಿ (Percy) (ಕರ್ಕರಿಯಾ ಬಾಯ್‌ಫ್ರೆಂಡ್) ಮತ್ತು ನಾನು ಟೆಸ್ಟ್ ಮಾಡಿಸಿಕೊಳ್ಳಲು ಮುಂದಾದೆವು. ಪರ್ಸಿ ಅವರಿಗೆ ನೆಗೆಟಿವ್ ಬಂತು. ಆದರೆ ನನಗೆ ಪಾಸಿಟಿವ್ ವರದಿ ಬಂದಿದೆ,' ಎಂದು ಹೇಳಿಕೊಂಡಿದ್ದಾರೆ.
ಹೊಸ ವರ್ಷವನ್ನು ಈ ರೀತಿ ಆರಂಭಿಸುತ್ತಿರುವುದಕ್ಕೆ ಬೇಸರವಾಗುತ್ತಿದೆ, ಎಂದು ಡೆಲ್ನಾಜ್ ಹೇಳಿಕೊಂಡಿದ್ದಾರೆ. 'ನನಗೆ ತುಂಬಾನೇ ಬೇಸರವಾಗುತ್ತಿದೆ. ಇಡೀ ವರ್ಷ ಸೆಟ್‌ನಲ್ಲಿ ನಾನು ಎಲ್ಲರಿಗೂ ಮಾಸ್ಕ್ (Mask) ಧರಿಸಿಕೊಂಡು ಸೋಷಿಯಲ್ ಡಿಸ್ಟೆನ್ಸ್ (Social Distance) ಪಾಲಿಸುವಂತೆ ಹೇಳುತ್ತಿದ್ದೆ. ಆದರೆ ನನಗೆ ಹೀಗೆ ಆಗಿದೆ. ವರ್ಷದ ಆರಂಭದಲ್ಲಿ ಹೀಗೆ ಆಗುತ್ತಿರುವುದಕ್ಕೆ ಬೇಸರ ಆಗಿದೆ. ನಾನು ಹಲವು ವರ್ಷಗಳ ನಂತರ ಮತ್ತೆ ಕಮ್ ಬ್ಯಾಕ್ ಮಾಡುತ್ತಿರುವ ಒಳ್ಳೆಯ ಪಾತ್ರ ಮತ್ತು ರೀತಿಯಲ್ಲಿ ಬರುವೆ. ಎಲ್ಲರೂ ಹೇಳುವ ಹಾಗೆ ಸರಿಯಾಗಿ ಏನೇ ನಡೆಯುತ್ತಿದ್ದರೂ, ಅದಕ್ಕೆ ದೃಷ್ಠಿ ಬೀಳುತ್ತದೆ. ಹಾಗೇ ನನಗೆ ನನ್ನ ದೃಷ್ಟಿಯೇ ಆಗಿರಬೇಕು,' ಎಂದು ಮಾತನಾಡಿದ್ದಾರೆ.
'ಕೊರೋನಾ ರಿಪೋರ್ಟ್ ಬಂದ ತಕ್ಷಣ ನಾನು ಪುಟ್ಟ ಮಗು ರೀತಿ ಅತ್ತಿರುವೆ (Cry). ಪರ್ಸಿ ನನಗೆ ತುಂಬಾನೇ ಸಪೋರ್ಟ್ ಕೊಟ್ಟಿದ್ದಾರೆ. ನಾನು ಆದಷ್ಟು ಬೇಗ ಚೇತರಿಸಿಕೊಳ್ಳುವೆ. ನಾವು 12-13 ಎಪಿಸೋಡ್ ರೆಕಾರ್ಡ್ ಮಾಡಿರುವ ಕಾರಣ ವಿಶ್ರಾಂತಿ ತೆಗೆದುಕೊಳ್ಳಲು ಸಾಧ್ಯವಾಯಿತು. ನನ್ನ ಇಬ್ಬರು ನಿರ್ಮಾಪಕರು (Producer) ಸದಾ ಕರೆ ಮಾಡಿ ಆರೋಗ್ಯದ ಬಗ್ಗೆ ವಿಚಾರಿಸುತ್ತಿದ್ದಾರೆ. ನನ್ನ ಕಲಾವಿದ ಸ್ನೇಹಿತರು ಕರೆ ಮತ್ತು ಮೆಸೇಜ್ ಮಾಡುತ್ತಿದ್ದಾರೆ. ನಾನು ಸೆಟ್ ಮಿಸ್ ಮಾಡಿಕೊಳ್ಳುತ್ತಿರುವೆ,' ಎಂದಿದ್ದಾರೆ.
'ಡೆಲ್ನಾಜ್ ಇರಾನಿ ಅವರು ನಮ್ಮ ಕಭಿ ಕಭಿ ಇತ್ತೆಫಕ್ ಸೇನಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಆದರೆ ಈಗ ಅವರಿಗೆ ಕೊರೋನಾ ಪಾಸಿಟಿವ್ ಆಗಿದೆ. ಲಕ್ಷಣಗಳು ಕಾಣಿಸಿಕೊಳ್ಳುತ್ತಿದ್ದಂತೆ, ಅವರು ಮೆಡಿಕಲ್ ಎಮರ್ಜೆನ್ಸಿ (Medical Emergency) ತೆಗೆದುಕೊಂಡು ಕ್ವಾರಂಟೈನ್‌ಗೆ (Quarantine) ಒಳಗಾದರು. ಸೆಟ್‌ನಲ್ಲಿದ್ದ ಪ್ರತಿಯೊಬ್ಬರೂ ಟೆಸ್ಟ್ ಮಾಡಿಸಿಕೊಂಡು ಕ್ವಾರಂಟೈನ್‌ಗೆ ಒಳಗಾಗುವಂತೆ ನೋಡಿಕೊಳ್ಳಬೇಕು. ಬಿಎಂಸಿ (BMC) ಮಾಹಿತಿ ಕೊಟ್ಟಿರುವ ಪ್ರಕಾರ ಇಡೀ ಸೆಟ್ ಅನ್ನು ಸ್ಯಾನಿಟೈಜ್ (Sanitize) ಮಾಡಲಾಗುತ್ತದೆ. ಇಡೀ ತಂಡದ ಜೊತೆ ನಾವು ಸಂಪರ್ಕದಲ್ಲಿರುವೆ. ಅವರ ಆರೋಗ್ಯದ ಬಗ್ಗೆ ವಿಚಾರಿಸಿಕೊಳ್ಳುತ್ತಿರುವೆ,' ಎಂದು ನಿರ್ಮಾಪಕ ರಾಜೇಶ್ ರಾಮ್ (Rajesh Ram) ಮತ್ತು ಪ್ರದೀಪ್ ಕುಮಾರ್ (Pradeep Kumar) ಹೇಳಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.