
ಹಿಂದಿ (Hindi) ಕಿರುತೆರೆ ವಾಹಿನಿಯ ಜನಪ್ರಿಯ ನಟಿ ಗರಿಮಾ ವಿಕ್ರಾಂತ್ ಸಿಂಗ್ (Garima Vikrant Singh) ಫ್ಯಾಮಿಲಿ ಜೊತೆ ಹೆಚ್ಚಿನ ಸಮಯ ಕಳೆಯುತ್ತಿದ್ದಾರೆ. ಇದರಿಂದ ನನ್ನ ಸೆಲ್ಫ್ ಕಾನ್ಫಿಡೆನ್ಸ್ (Self Confidence) ಹೆಚ್ಚಾಗಿದೆ ಎಂದು ಹೇಳಿಕೊಂಡಿದ್ದಾರೆ. 12 ಹಿಟ್ ಧಾರಾವಾಹಿಗಳಲ್ಲಿ ನಟಿಸಿರುವ ಗರಿಮಾ ಫ್ಯಾಮಿಲಿ ಟೈಮ್ ಎಷ್ಟು ಪ್ರಾಮುಖ್ಯತೆ ಹೊಂದಿರುತ್ತದೆ ಎಂದು ಹಂಚಿಕೊಂಡಿದ್ದಾರೆ.
'ಕುಟುಂಬಸ್ಥರು ಒಟ್ಟಿಗೆ ಸಮಯ ಕಳೆದರೆ ಎಲ್ಲರಿಗೂ ಕಾನ್ಫಿಡೆನ್ಸ್ ಹೆಚ್ಚುತ್ತದೆ. ನಿಜ ಜೀವನದಲ್ಲಿ ಎದುರಿಸುತ್ತಿರುವ ಸಮಸ್ಯೆಗಳು ಮತ್ತು ಕಮ್ಯೂನಿಕೇಶ್‌ನಿಂದ (Communication) ಪೋಷಕರು ಮಕ್ಕಳಿಗೆ ಸೆಲ್ಫ್ ಎಸ್ಟೀಮ್ (Self Esteem) ಬಿಲ್ಡ್ ಮಾಡಿಕೊಳ್ಳುವುದು ಹೇಗೆ ಎಂದು ಹೇಳಿ ಕೊಡುತ್ತಾರೆ. ಯಾವ ಮೆಚ್ಚುಗೆಯೂ ಇಲ್ಲದೆ ನಮ್ಮನ್ನ ನಾವು ಹೇಗೆ ಪ್ರೀತಿಸಬೇಕು ಎಂಬುದನ್ನೂ ಹೇಳಿ ಕೊಡುತ್ತಾರೆ,' ಎಂದು ಗರಿಮಾ ಮಾತನಾಡಿದ್ದಾರೆ.
'ಪೋಷಕರು ಮತ್ತು ಮಕ್ಕಳಿಗೆ ಕಾನ್ಫಿಡೆನ್ಸ್ ಹುಟ್ಟುವುದೇ ಪ್ರೀತಿ ಮತ್ತು ಜೀವನದಲ್ಲಿ ಮೌಲ್ಯಗಳ ಬಗ್ಗೆ ಪಾಠ ಮಾಡಿದಾಗ. ನನ್ನ ವೃತ್ತಿಯೇ ನಟನೆ ಮಾಡುವುದು. ನಾನು ಸುಲಭವಾಗಿ ನಟಿಸುವುದಕ್ಕೆ ನನ್ನ ಹ್ಯಾಪಿ ಫ್ಯಾಮಿಲಿಯೇ (Happy Family) ಕಾರಣ. ನನ್ನ ಇಡೀ ಸಮಯ ಚಿತ್ರೀಕರಣದಲ್ಲಿ ಹೋಗುತ್ತದೆ. ಹೀಗಾಗಿ ಪತಿ ಮತ್ತು ಪುತ್ರಿಗೆ ಹೆಚ್ಚಿನ ಸಮಯ ನೀಡಲು ಅಗುವುದಿಲ್ಲ. ಒಂದು ಧಾರಾವಾಹಿ ಮುಗಿದು ಮತ್ತೊಂದು ಶುರುವಾಗುವಷ್ಟರಲ್ಲಿ ನಾನು ಸಣ್ಣ ಬ್ರೇಕ್ ತೆಗೆದುಕೊಳ್ಳುವೆ,' ಎಂದು ಗರಿಮಾ ಹೇಳಿದ್ದಾರೆ.
'ಕುಟುಂಬದ ಜೊತೆ ಸಮಯ ಕಳೆಯುವುದು ಅಂದ್ರೆ ನನಗೆ ತುಂಬಾನೇ ಇಷ್ಟ. ನಮ್ಮ ಫಿಸಿಕಲ್ (Physical) ಮತ್ತು ಮೆಂಟಲ್ ಆರೋಗ್ಯವನ್ನು (Mental Health) ಅದು ಕಾಪಾಡುತ್ತದೆ.ಫೋನ್ ಆಫ್ ಮಾಡಿ ಪಕ್ಕಕ್ಕಿಟ್ಟು, ಎಲ್ಲರೂ ಒಟ್ಟಾಗಿ ಸೇರಿಕೊಂಡು ಮಜಾ ಮಾಡಬೇಕು. ಜೀವನ ಪೂರ್ತಿ ಮೆಯಲಾಗದ ಕ್ಷಣಗಳನ್ನು ಕ್ರಿಯೇಟ್ ಮಾಡುತ್ತದೆ. ಕುಟುಂಬದ ಜೊತೆ ಬೇಕೆಂದಾಗಲೆಲ್ಲ ಸಮಯ ಕಳೆಯುವುದಕ್ಕೆ ಕೆಲಸದಲ್ಲಿ ಕಾಂಪ್ರೋಮೈಸ್ ಮಾಡಿಕೊಳ್ಳ ಬೇಕಾಗುತ್ತದೆ. ಸಂಬಂಧಗಳು ಗಟ್ಟಿ ಆಗುತ್ತವೆ ಅಂದ್ರೆ ಕಾಂಪ್ರೋಮೈಸ್ ಮಾಡಿಕೊಳ್ಳುವುದಲ್ಲ ತಪ್ಪಲ್ಲ. ನನಗೆ ಪತಿ ಯೋಗೇಶ್ ಮತ್ತು ಪುತ್ರಿ ವೀರಾ ಸ್ಟ್ರೆಸ್ ಬಸ್ಟರ್ (Stress buster). ನನ್ನ ಸಮಸ್ಯೆಗಳನ್ನು ಅವರ ಜೊತೆ ಕೂತು ಮಾತನಾಡಿದ್ದರೆ, ಸುಲಭವಾಗಿ ಪರಿಹಾರ ಸಿಗುತ್ತದೆ. ಹಾಗೆಯೇ ಮೈಂಡ್ ಕೂಲ್ ಆಗುತ್ತದೆ,' ಎಂದಿದ್ದಾರೆ.
2005ರಲ್ಲಿ ಸಿಐಡಿ ಧಾರಾವಾಹಿ ಮೂಲಕ ಕಿರುತೆರೆ ಜರ್ನಿ ಆರಂಭಿಸಿದ್ದ ಗರಿಮಾ ಇದೀಗ ನಾಮ್ ಇಸ್ ಕಾ ಧಾರಾವಾಹಿಯಲ್ಲಿ ನಟಿಸುತ್ತಿದ್ದಾರೆ. ಲೈಫ್ ಓಕೆಯಲ್ಲಿ (Life OK) ಸರಸ್ವತಿಯಾಗಿ, ಚೋಟಿ ಬಹು ಮತ್ತು ಫರ್ ಶುಭ್ ಹೋಗಿ ಧಾರಾವಾಹಿ ಈ ನಟಿಗೆ ಹೆಚ್ಚಿನ ಜನಪ್ರಿಯತೆ ತಂದುಕೊಟ್ಟವು.
ಇಡೀ ವರ್ಷ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದ ಕಾರಣ ಈ ಸಲ ಹುಟ್ಟುಹಬ್ಬವನ್ನು (Birthday) ಸೆಟ್‌ನಲ್ಲಿ ಆಚರಣೆ ಮಾಡಿಕೊಂಡಿದ್ದರು. 'ನನ್ನ ಹುಟ್ಟು ಹಬ್ಬದ ದಿನ ಫ್ಯಾಮಿಲಿಯಿಂದ ದೂರ ಇರುವೆ. ನನ್ನ ಪತಿ ಮತ್ತು ಮಗಳು ನನ್ನನ್ನು ತುಂಬಾನೇ ಮಿಸ್ ಮಾಡಿಕೊಳ್ಳುತ್ತಿದ್ದಾರೆ. ಇಡೀ ಮನೆಯನ್ನು ಸೂಪರ್ ಆಗಿ ಅಲಂಕಾರ ಮಾಡಿ ನನಗೆ ಸರ್ಪ್ರೈಸ್ ನೀಡಿದ್ದರು. ಅದಲ್ಲದೆ ವಿಡಿಯೋ ಕಾಲ್ ಮೂಲಕ ಕೇಕ್ ಕಟ್ ಮಾಡಿದ್ದರು. ಇದೇ ಮೊದಲ ಹುಟ್ಟುಹಬ್ಬ ಹೀಗೆ ಆಚರಿಸಿಕೊಳ್ಳುತ್ತಿರುವುದು. ಪ್ರತಿ ವರ್ಷವೂ ನನಗೆ ತುಂಬಾನೇ ಸ್ಪೆಷಲ್. ಹಾಗೆಯೇ ಪ್ರತಿ ವರ್ಷವೂ ಆಚರಿಸಿಕೊಳ್ಳಲು ಕಾಯುತ್ತಿರುವೆ,' ಎಂದು ಹೇಳಿಕೊಂಡಿದ್ದರು.
ತನ್ನ ವಯಸ್ಸಿನ ನಟನಿಗೆ ತಾಯಿ ಪಾತ್ರದಲ್ಲಿ ಗರಿಮಾ ಕಾಣಿಸಿಕೊಂಡು ಮೆಚ್ಚುಗೆ ಪಡೆದುಕೊಂಡಿದ್ದರು. 'ನಾನು ತಾಯಿ ಅಥವಾ ಅತ್ತೆ ಪಾತ್ರ ಮಾಡುವುದಕ್ಕೆ ಆಫರ್‌ಗಳು ಹರಿದು ಬರುತ್ತಿವೆ. ಅದು ನನ್ನ ವಯಸ್ಸಿನ ನಟನ ಜೊತೆ. ಇದರ ಬಗ್ಗೆ ನಾನು ತಲೆ ಕೆಡಿಸಿಕೊಳ್ಳುವುದಿಲ್ಲ. ನನಗೆ ಸಿಗುವ ಸ್ಕ್ರೀನ್ ಟೈಂ ಮತ್ತು ಕಂಟೆನ್ಟ್ ತುಂಬಾ ಮುಖ್ಯ ಆಗುತ್ತದೆ. ಲೀಡ್ ಪಾತ್ರ ಮಾಡುವುದಕ್ಕಿಂತಲೂ ತಾಯಿ ಪಾತ್ರಕ್ಕೆ ಪ್ರಮುಖ್ಯತೆ ಹೆಚ್ಚಿರುತ್ತದೆ. ರೊಮ್ಯಾನ್ಸ್‌ಗಿಂತ ಅತ್ತೆ ಸೊಸೆ ಕಾಂಬಿನೇಷನ್ ಕ್ಲಿಕ್ ಆಗುತ್ತದೆ,' ಎಂಬುವುದು ಈ ನಟಿಯ ಅಭಿಪ್ರಾಯ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.