ಮಕ್ಕಳಾಗದ ಸೆಲೆಬ್ರಿಟಿಗಳು ಮಕ್ಕಳಿಗಾಗಿ ಹೊಸ ಉಪಾಯ ಕಂಡುಕೊಂಡರು. ಇದರಿಂದ ಅವರ ಸೌಂದರ್ಯವೂ ಉಳಿಯಿತು, ಮಕ್ಕಳ ಭಾಗ್ಯವೂ ಸಿಕ್ಕಿತು.
ಬಾಲಿವುಡ್‌ನಲ್ಲಿ ಹಲವು ಸೆಲೆಬ್ರಿಟಿಗಳು ದಂಪತಿಗಳು, ಮಕ್ಕಳಾಗದ ಸಮಸ್ಯೆಯನ್ನು ನಾನಾ ಕಾರಣಗಳಿಗಾಗಿ ಎದುರಿಸಿದ್ದಾರೆ. ಆಗ ಅವರು ಏನು ಮಾಡಿದ್ರು ಅಂತ ತಿಳಿಯೋದು ಕುತೂಹಲಕರ.
ಶಾರುಕ್ ಖಾನ್- ಗೌರಿ ಖಾನ್
ಶಾರುಕ್ ಖಾನ್ ಮತ್ತು ಗೌರಿ ಮದುವೆಯಾಗಿ ಕೆಲವೇ ವರ್ಷಗಳಲ್ಲಿ ದೊಡ್ಡ ಮಗ ಆರ್ಯನ್ ಹಾಗೂ ಎರಡನೆಯ ಮಗಳು ಸುಹಾನಾಳನ್ನು ಗೌರಿ ಹೊತ್ತು ಹೆತ್ತಿದ್ದರು. ಮದುವೆಯಾಗಿ ಆರು ವರ್ಷದಲ್ಲಿ ಮೊದಲ ಮಗು. ಆರ್ಯನ್‌ಗೆ ಹನ್ನೆರಡು ವರ್ಷ, ಸುಹಾನಾಗೆ ಹನ್ನೊಂದು ವರ್ಷ ಆದಾಗ ಇನ್ನೊಂದು ಮಗು ಬೇಕು ಎಂದು ದಂಪತಿಗೆ ಆಸೆಯಾಗಿತ್ತು. ಆದರೆ ಅಷ್ಟೊತ್ತಿಗಾಗಲೇ ಇಬ್ಬರಿಗೂ ನಲುವತ್ತೈದು ವರ್ಷಕ್ಕಿಂತ ಹೆಚ್ಚು ಪ್ರಾಯ ಆಗಿತ್ತು. ಈ ವಯಸ್ಸಿನಲ್ಲಿ ಗರ್ಭ ಧರಿಸುವುದು ಡೇಂಜರ್ ಅಂತ ವೈದ್ಯರು ಹೇಳಿದರು.
undefined
ಶಾರುಖ್ ಮಗ ಅಬ್ರಹಾಂ ಬಾಡಿಗೆ ತಾಯಿ ಯಾರು?
ಸರಿ, ಶಾರುಕ್‌ನ ವೀರ್ಯ, ಗೌರಿಯ ಅಂಡ ಸೇರಿಸಿ ಫಲಿತಗೊಳಿಸಲಾಯಿತು. ಅಬ್ರಾಮ್ ಹುಟ್ಟಿದಾಗ ಆರ್ಯನ್‌ಗೆ ಹದಿನಾರು ವರ್ಷ, ಸುಹಾನಾಗೆ ಹದಿಮೂರು. ಮದುವೆಯಾಗಿ ಇಪ್ಪತ್ತೆರಡು ವರ್ಷದ ಬಳಿಕ ಮೂರನೇ ಮಗು! ಬಾಡಿಗೆ ಗರ್ಭ ಮಾಡಲು ಕಾರಣ ಇನ್ನೊಮ್ಮೆ ಗರ್ಭ ಹೊರುವ ಶಕ್ತಿ ಸಾಮರ್ಥ್ಯ ಗೌರಿಯಲ್ಲಿ ಇಲ್ಲದಿದ್ದುದೇ. ಮಗುವನ್ನು ಹೊತ್ತ ತಾಯಿ ಯಾರೆಂಬುದು ಇಂದಿಗೂ ಗುಪ್ತ. ಕೆಲವರು ಗೌರಿಯ ಸೋದರಿ ಎಂದೂ ಹೇಳುತ್ತಾರೆ. ಇನ್ನೊಂದು ರೂಮರ್ ಅಂದ್ರೆ, ಅಬ್ರಾಮ್, ಶಾರುಕ್‌ನ ಮೊದಲ ಮಗ ಆರ್ಯನ್‌ನ ಪುತ್ರ ಅನ್ನುವುದು. ಆರ್ಯನ್ ಹಾಗೂ ಆತನ ರೊಮೇನಿಯನ್ ಗರ್ಲ್‌ಫ್ರೆಂಡ್ ಸೇರಿ ಮಾಡಿಕೊಂಡ ಅವಸರದ ಫಲ ಈತ. ಆತನನ್ನು ಶಾರುಕ್ ಸಾಕಿಕೊಂಡಿದ್ದಾರೆ ಅಂತಲೂ ಗಾಸಿಪ್ ಮಾಡುವವರು ಇದ್ದಾರೆ.
ಅಮೀರ್ ಖಾನ್- ಕಿರಣ್
ಅಮೀರ್ ಖಾನ್‌ನ ಮೊದಲ ಪತ್ನಿ ರೀನಾ ದತ್ತಾ. ಇವರಿಬ್ಬರ ದಾಂಪತ್ಯದಲ್ಲಿ ಹುಟ್ಟಿದ ಇಬ್ಬರು ಮಕ್ಕಳು ಇರಾ ಖಾನ್ ಮತ್ತು ಜುನೈದ್ ಖಾನ್. ಈ ದಾಂಪತ್ಯಕ್ಕೆ ಅಮೀರ್ ೨೦೦೨ರಲ್ಲಿ ವಿಚ್ಛೇದನ ನೀಡಿ, ಕಿರಣ್ ರಾವ್ ಅವರನ್ನು ಮದುವೆಯಾದ, ಇಬ್ಬರಿಗೂ ಮಗು ಮಾಡಬೇಕೆಂಬ ಆಸೆ ತುಂಬಾ ಇತ್ತು. ಹಾಗೇ ಕಿರಣ್ ಗರ್ಭ ಧರಿಸಿದಳು. ಆದರೆ ೨೦೧೧ರಲ್ಲಿ ಆಕೆಗೆ ಗರ್ಭಪಾತವಾಯಿತು. ಇನ್ನೊಮ್ಮೆ ಗರ್ಭ ಧರಿಸುವುದು ಅಪಾಯಕರ ಅಂತ ಡಾಕ್ಟರ್ ಹೇಳಿದರು. ಇಬ್ಬರೂ ಐವಿಎಫ್ ಮೊರೆ ಹೋದರು. ಹಾಗೆ ಹುಟ್ಟಿದ ಮಗುವೇ ಆಜಾದ್ ರಾವ್ ಖಾನ್. ಇದಾದ ಬಳಿಕ ಅಮೀರ್ ಖಾನ್, ಸರೊಗೆಸಿ ಅಥವಾ ಬಾಡಿಗೆ ತಾಯ್ತನ ತಪ್ಪಲ್ಲ, ಅದು ಎಲ್ಲ ರೀತಿಯಿಂದಲೂ ನೈತಿಕ ಎಂದು ಪ್ರಚಾರ ಮಾಡುತ್ತಾ ಬಂದಿದ್ದಾರೆ.
ಶಿಲ್ಪಾ ಶೆಟ್ಟಿ ಏಕೆ ಬಾಡಿಗೆ ತಾಯಿ ಮೂಲಕ ಮಗು ಪಡೆದಿದ್ದು?
ಸನ್ನಿ ಲಿಯೋನ್- ಡೇನಿಯಲ್ ವೆಬರ್
ಸನ್ನಿ ಲಿಯೋನ್- ಡೇನಿಯಲ್ ವೆಂಬರ್ ದಂಪತಿಗೆ ಈಗ ಮೂವರು ಮಕ್ಕಳು, ಮೂವರೂ ಸನ್ನಿ ಹೊತ್ತು ಹೆತ್ತ ಮಕ್ಕಳಲ್ಲ. ಇಬ್ಬರ ದಾಂಪತ್ಯಕ್ಕೆ ಹತ್ತಾರು ವರ್ಷಗಳನ್ನು ದಾಟಿದ್ದರೂ, ಮಕ್ಕಳಾಗಿರಲಿಲ್ಲ. ಹಾಗೆಂದು ಇಬ್ಬರೂ ಮಗು ಮಾಡಲು ಪ್ರಯತ್ನಿಸುತ್ತಿದ್ದುದು ನಿಜ. ಆದರೆ ವೃತ್ತಿ ಜೀವನದ ಒತ್ತಡದಲ್ಲಿ ಅದು ಸಾಧ್ಯವಾಗಿರಲಿಲ್ಲ. ೨೦೧೭ರಲ್ಲಿ ಇಬ್ಬರೂ ಒಂದು ಮಗುವನ್ನು ದತ್ತು ತೆಗೆದುಕೊಳ್ಳಲು ನಿರ್ಧರಿಸಿದರು. ಹಾಗೇ ಮಹಾರಾಷ್ಟ್ರದಿಂದ ಒಂದು ಹೆಣ್ಣು ಮಗುವನ್ನು ದತ್ತು ತೆಗೆದುಕೊಂಡರು. ಆಕೆಗೆ ನಿಶಾ ಎಂದು ಹೆಸರಿಟ್ಟರು.ಆ ಮಗುವಿನ ಆಟಪಾಠಗಳನ್ನು ನೋಡುತ್ತಾ, ನಮ್ಮದೇ ಮಗು ಬೇಕು ಎಂಬ ಆಸೆ ದಂಪತಿಗೆ ಬಂತು. ಹಾಗೇ ಇಬ್ಬರೂ ಪ್ರಯತ್ನಿಸಿದರು. ಆದರೆ ಆಗಲಿಲ್ಲ. ಕಡೆಗೆ, ಐವಿಎಫ್ ಮಾಡಿಸಿಕೊಂಡು, ಬಾಡಿಗೆ ತಾಯಿಯನ್ನು ಪಡೆದು ತಮ್ಮ ಭ್ರೂಣವನ್ನು ಆಕೆಯಲ್ಲಿ ಬೆಳೆಸಿದರು. ಸನ್ನಿಯ ಅದೃಷ್ಟ ನೋಡಿ, ಒಂದು ಮಗು ಬೇಕೆಂದು ಮಾಡಿದ್ದು, ಅವಳಿ ಮಕ್ಕಳು ಹುಟ್ಟಿದವು. ಹೀಗೆ ಹುಟ್ಟಿದ ಅವಳಿಯೇ ಅಶರ್ ಸಿಂಗ್ ವೆಬರ್ ಹಾಗೂ ನೋವಾ ಸಿಂಗ್ ವೆಬರ್.
ಎಕ್ತಾ ಕಪೂರ್
ಟಿವಿ ಸೀರಿಯಲ್ ಕ್ಷೇತ್ರದಲ್ಲಿ ಭಾರಿ ಹೆಸರು ಮಾಡಿದ ಎಕ್ತಾ ಕಪೂರ್, ಸಿಂಗಲ್ ಮದರ್. ಈಕೆ ಮದುವೆಯಾಗಿಲ್ಲ. ಆದರೆ ಮಗು ಮಾಡಿಕೊಳ್ಳಲು, ತಾಯ್ತನ ಸಂತಸ ಪಡೆಯಲು ಹಲವು ವಿಧಾನಗಳಿಂದ ಪ್ರಯತ್ನಿಸುತ್ತಲೇ ಇದ್ದಳು. ೭ ವರ್ಷ ಹೋರಾಡಿದರೂ ಮಗುವಾಗಲಿಲ್ಲ. ಕಡೆಗೆ, ಐವಿಎಫ್ ಹಾಗೂ ಬಾಡಿಗೆ ತಾಯಿ ಪದ್ಧತಿ ಅಳವಡಿಸಿಕೊಂಡು, ತನ್ನದೇ ಅಂಡದಿಂದ ಮಗು ಮಾಡಿಕೊಂಡಳು. ಈ ಮಗುವಿನ ತಂದೆ ಯಾರೆಂಬುದು ಗೊತ್ತಿಲ್ಲ.
ಫರ್ಹಾ ಖಾನ್- ಶಿರೀಶ್ ಕುಂದರ್
ಫರ್ಹಾ ಖಾನ್ ಹಾಗೂ ಶಿರೀಶ್ ಕುಂದರ್ ಮದುವೆ ಆಗುವಾಗಲೇ ಆಕೆಗೆ ೪೦ ವರ್ಷ ವಯಸ್ಸು ದಾಟಿತ್ತು. ಈ ವಯಸ್ಸಿನಲ್ಲಿ ನಿಂಗೆ ಮಗು ಆಗೋ ಚಾನ್ಸೇ ಇಲ್ಲ ಅಂದರು ಡಾಕ್ಟರ್. ಆಕೆ ಹಠ ತೊಟ್ಟು, ಐವಿಎಫ್ ಮೊರೆ ಹೋದಳು. ಕುತೂಹಲಕರ ಅಂದರೆ ಈಕೆ ಭ್ರೂಣವನ್ನು ತಾನೇ ಹೊತ್ತಳು. ಅದೃಷ್ಟದ ಸಂಗತಿ ಎಂದರೆ ಮೂವರು ಮಕ್ಕಳು ತಾಯಿಯಾದಳು!
ಬಾಡಿಗೆ ತಾಯಿ ಮೂಲಕ ಮಗು ಪಡೆದ ಕಾರಣ ಬಿಚ್ಚಿಟ್ಟ ತುಷಾರ್ ಕಪೂರ್