ಮಾನವೀಯ ಕಾರ್ಯಗಳಿಗೆ ಗೌರವ: ಸೋನು ಸೂದ್‌ಗೆ‌ ವಿಶ್ವಸಂಸ್ಥೆ ಪ್ರಶಸ್ತಿ..!

By Suvarna NewsFirst Published Sep 30, 2020, 12:47 PM IST
Highlights

ನಟ ಸೋನು ಸೂದ್ ಅವರ ಮಾನವೀಯ ಕಾರ್ಯಗಳನ್ನು ಗುರುತಿಸಿ ವಿಶ್ವಸಂಸ್ಥೆ ಎಸ್‌ಡಿಜಿ ವಿಶೇಷ ಮಾನವೀಯ ಕ್ರಿಯಾ ಪ್ರಶಸ್ತಿ (Special Humanitarian Action Award) ನೀಡಿ ಗೌರವಿಸಿದೆ.

ಬಾಲಿವುಡ್ ನಟ ಸೋನು ಸೂದ್ ಅವರ ಮಾನವೀಯ ಕಾರ್ಯಗಳನ್ನು ಗುರುತಿಸಿ ವಿಶ್ವಸಂಸ್ಥೆ ಎಸ್‌ಡಿಜಿ ವಿಶೇಷ ಮಾನವೀಯ ಕ್ರಿಯಾ ಪ್ರಶಸ್ತಿ (Special Humanitarian Action Award) ನೀಡಿ ಗೌರವಿಸಿದೆ.

ಕೊರೋನಾ ಲಾಕ್‌ಡೌನ್ ಆದ ಸಂದರ್ಭ ಜಾತಿ, ಧರ್ಮ, ಪ್ರಾದೇಶಿಕ ಭಿನ್ನತೆ ಇಲ್ಲದೆ ಊರು ಸೇರಲು ಕಷ್ಟಪಡುತ್ತಿದ್ದ ಕಾರ್ಮಿಕರೆಲ್ಲರು ತವರು ಸೇರಲು ನೆರವಾಗಿದ್ದರು ನಟ. ಕೊರೋನಾ ಸಂಕಷ್ಟದ ಸಮಯದಲ್ಲಿ ಆಹಾರ, ವಾಹನ, ರೈಲು, ವಿಮಾನಗಳ ಮೂಲಕ ನಟ ಕಾರ್ಮಿಕರನ್ನು ಅವರ ಮನೆಗಳಿಗೆ ತಲುಪಿಸಿದ್ದರು.

ಬಡ ವಿದ್ಯಾರ್ಥಿಗಳಿಗೆ ಸೋನು ಸ್ಕಾಲರ್ ಶಿಪ್..! ಯಾರು ಎಪ್ಲೈ ಮಾಡಬಹುದು..?

ವರ್ಚುವಲ್ ಕಾರ್ಯಕ್ರಮದಲ್ಲಿ ಅವಾರ್ಡ್‌ ನೀಡಲಾಗಿದೆ. 47 ವರ್ಷ ನಟ ಮುಂಬೈನಲ್ಲಿರುವ ತಮ್ಮ ಹೋಟೆಲ್‌ನ್ನು ವೈದ್ಯಕೀಯ ಸಿಬ್ಬಂದಿಗೆ ನೀಡಿದ್ದರು.  ಮಹಾರಾಷ್ಟ್ರದ ಕರಾವಳಿಯಲ್ಲಿ ಸೈಕ್ಲೋನ್ ನಿಸರ್ಗ ಅಪ್ಪಳಿಸುವ ಮುನ್ನ ಬಹಳಷ್ಟು ಜನರಿಗೆ ಸುರಕ್ಷಿತ ವಾಸಕ್ಕೆ ವ್ಯವಸ್ಥೆ ಮಾಡಿದ್ದರು.

ಪ್ರಿಯಾಂಕ ಚೋಪ್ರಾ, ಲೆನಾರ್ಡೊ ಡಿಕಾಪ್ರಿಯೋ, ಆಂಜೆಲೀನಾ ಜೂಲಿ, ಡೇವಿಡ್ ಬೆಖಾಂ, ಎಮ್ಮಾ ವಟ್ಸನ್, ಲಯಾಮ್ ನೀಸನ್, ಕ್ಲೇಟ್ ಬೇಂಚೆಟ್, ಆಂಟೋನಿಯೋ ಬಂಡೆರಾಸ್, ನಿಕೋಲೆ ಕಿಡ್‌ಮೆನ್‌ ಕೂಡಾ ಈ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ಸಾಂಕ್ರಾಮಿಕವಲ್ಲದ ರೋಗ ನಿಯಂತ್ರಣ: ಕೇರಳಕ್ಕೆ ವಿಶ್ವಸಂಸ್ಥೆ ಪ್ರಶಸ್ತಿ

ಲಾಕ್‌ಡೌನ್ ಸಂದರ್ಭ ಸೋನು ಸೂದ್ ಟೋಲ್‌ ಫ್ರೀ ಹೆಲ್ಪ್‌ಲೈನ್ ನಂಬರ್‌ಗಳನ್ನಿಟ್ಟು ಬಡವರಿಗೆ ನೆರವಾಗಿದ್ದರು. ಬಹಳಷ್ಟು ಜನ ಸಾಮಾಜಿಕ ಜಾಲತಾಣಗಳಲ್ಲಿ ನೆರವು ಕೇಳಿದ್ದರು. 

click me!