
ಬಾಲಿವುಡ್ ಖ್ಯಾತ ನಿರ್ದೇಶಕ ಅನುರಾಗ್ ಕಷ್ಯಪ್‌ಗೆ ಮುಂಬೈ ಪೊಲೀಸರು ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ಕಳುಹಿಸಿದ್ದಾರೆ.ಲೈಂಗಿಕ ಕಿರುಕುಳ ಆರೋಪ ಎದುರಿಸುತ್ತಿರುವ ನಟ, ನಿರ್ದೇಶಕ ಅನುರಾಗ್ ಅಕ್ಟೋಬರ್ 1ರಂದು ವಿಚಾರಣೆಗೆ ಹಾಜರಾಗಬೇಕಾಗಿ ನೋಟಿಸ್‌ನಲ್ಲಿ ತಿಳಿಸಲಾಗಿದೆ.
ಗುರುವಾರ ನಟ ವರ್ಸೋವಾ ಪೊಲೀಸ್ ಠಾಣೆಗೆ ವಿಚಾರಣೆಗೆ ಹಾಜರಾಗಲಿದ್ದಾರೆ. ನಟನ ವಿರುದ್ಧ ದಾಖಲಾಗಿರುವ ಕೇಸಿನ ಕುರಿತು ಪೊಲೀಸರು ನಿರ್ದೇಶಕನನ್ನು ವಿಚಾರಣೆ ಮಾಡಲಿದ್ದಾರೆ. ನಟಿ ಪಾಯಲ್ ಘೋಷ್ 7 ವರ್ಷದ ಹಿಂದೆ ಅನುರಾಗ್ ತನ್ನನ್ನು ರೇಪ್ ಮಾಡಿದ್ದಾಗಿ ಆರೋಪಿಸಿದ್ದಾರೆ.
ಮಗುವಿಗೆ ಲೈಂಗಿಕ ಕಿರುಕುಳ ನೀಡಿದ್ದೆ ಎಂದು ಒಪ್ಪಿಕೊಂಡ ನಿರ್ದೇಶಕ..!
ಬಟ್ಟೆ ಬಿಚ್ಚಿ ಮಂಚ ಏರು ಎಂದು ನಿರ್ದೇಶಕ ಅನುರಾಗ್ ಕಶ್ಯಪ್ ಕರೆದಿದ್ದರು ಎಂದು ಆರೋಪ ಮಾಡಿದ್ದರು ನಟಿ ಪಾಯಲ್ ಘೋಷ್. ಎರಡನೇ ಬಾರಿ ಅವರ ಮನೆಗೆ ಹೋದಾಗ ಲೈಂಗಿಕ ಕ್ರಿಯೆಯಲ್ಲಿ ತೊಡಗಲು ಬಲವಂತ ಮಾಡಿದ್ದದ್ದರು. ಹೆಣ್ಣು ಮಕ್ಕಳೊಂದಿಗೆ ಸುಖಕರ ಸಮಯ ಕಳೆದಿದ್ದೇನೆ ಎಂದು ಹೇಳಿ ಮೈಮೇಲೆ ಬಂದಿದ್ದರು ಎಂದು ನಟಿ ಆರೋಪಿಸಿದ್ದರು.
ಈ ಸಂಬಂಧ ಅನುರಾಗ್ ಬೆಂಬಲಕ್ಕೆ ಬಂದ ಆತನ ಮೊದಲ ಪತ್ನಿಯರು ನಟ ಹಾಗಲ್ಲ, ಹೆಣ್ಮಕ್ಕಳನ್ನು ಗೌರವಿಸುತ್ತಾರೆ ಎಂದು ಹೇಳಿದ್ದರು. ಇದೀಗ ವಿಚಾರಣೆ ನಡೆಯಲಿದ್ದು ಈ ಬಗ್ಗೆ ಅನುರಾಗ್ ಸತ್ಯ ಹೊರಬರಲಿದೆ,
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.