Prashanth neel Birthday; KGF ನಿರ್ದೇಶಕರ ಬರ್ತಡೇ ಪಾರ್ಟಿಯಲ್ಲಿ ಪ್ರಭಾಸ್, ಯಶ್; ಇನ್ನು ಯಾರೆಲ್ಲಾ ಹಾಜರಿದ್ದರು?

Published : Jun 04, 2022, 11:10 AM ISTUpdated : Jun 04, 2022, 11:20 AM IST
Prashanth neel Birthday; KGF ನಿರ್ದೇಶಕರ ಬರ್ತಡೇ ಪಾರ್ಟಿಯಲ್ಲಿ ಪ್ರಭಾಸ್, ಯಶ್; ಇನ್ನು ಯಾರೆಲ್ಲಾ ಹಾಜರಿದ್ದರು?

ಸಾರಾಂಶ

ಪ್ರಶಾಂತ್ ನೀಲ್, ಕನ್ನಡ ಸಿನಿಮಾರಂಗದ ಹೆಮ್ಮೆಯ ನಿರ್ದೇಶಕ. ಇಡೀ ವಿಶ್ವವೇ ಕನ್ನಡ ಸಿನಿಮಾರಂಗದ ಕಡೆ ತಿರುಗಿ ನೋಡುವಂತೆ ಮಾಡಿದ ಮಾಂತ್ರಿಕ. ಕೆಜಿಎಫ್ ಸಿನಿಮಾ ಮೂಲಕ ಭಾರತೀಯ ಚಿತ್ರರಂಗವೇ ಬೆರಗಾಗುವಂತೆ ಮಾಡಿದ ನಿರ್ದೇಶಕ ಪ್ರಶಾಂತ್ ನೀಲ್ ಅವರಿಗೆ ಇಂದು ತುಂಬಾ ವಿಶೇಷವಾದ ದಿನ. ಹೌದು, ಪ್ರಶಾಂತ್ ನೀಲ್ ಅವರಿಗೆ ಇಂದು (ಜೂನ್ 4) ಹುಟ್ಟುಹಬ್ಬದ ಸಂಭ್ರಮ.

ಪ್ರಶಾಂತ್ ನೀಲ್(Prashanth Neel), ಕನ್ನಡ ಸಿನಿಮಾರಂಗದ ಹೆಮ್ಮೆಯ ನಿರ್ದೇಶಕ. ಇಡೀ ವಿಶ್ವವೇ ಕನ್ನಡ ಸಿನಿಮಾರಂಗದ ಕಡೆ ತಿರುಗಿ ನೋಡುವಂತೆ ಮಾಡಿದ ಮಾಂತ್ರಿಕ. ಕೆಜಿಎಫ್(KGF) ಸಿನಿಮಾ ಮೂಲಕ ಭಾರತೀಯ ಚಿತ್ರರಂಗವೇ ಬೆರಗಾಗುವಂತೆ ಮಾಡಿದ ನಿರ್ದೇಶಕ ಪ್ರಶಾಂತ್ ನೀಲ್ ಅವರಿಗೆ ಇಂದು ತುಂಬಾ ವಿಶೇಷವಾದ ದಿನ. ಹೌದು, ಪ್ರಶಾಂತ್ ನೀಲ್ ಅವರಿಗೆ ಇಂದು (ಜೂನ್ 4) ಹುಟ್ಟುಹಬ್ಬದ ಸಂಭ್ರಮ. ಈ ಬಾರಿಯ ಹುಟ್ಟುಹಬ್ಬ ಪ್ರಶಾಂತ್ ನೀಲ್ ಅವರಿಗೆ ತುಂಬಾನೇ ಸ್ಪೆಷಲ್. ಡಬಲ್ ಸಂಭ್ರಮದಲ್ಲಿರುವ ನೀಲ್ ಈ ಬಾರಿಯ ಹುಟ್ಟುಹಬ್ಬವನ್ನು ಅದ್ದೂರಿಯಾಗಿ ಆಚರಿಸಿದ್ದಾರೆ.

ಪ್ರಶಾಂತ್ ನೀಲ್ ಅವರಿಗೆ ಅಭಿಮಾನಿಗಳು, ಸ್ನೇಹಿತರು, ಚಿತ್ರರಂಗದ ಗಣ್ಯರಿಂದ ಶುಭಾಶಯಗಳ ಸುರಿಮಳೆಯೇ ಬರುತ್ತಿದೆ. ಕೆಜಿಎಫ್-2 ಸಿನಿಮಾ ಅತೀ ಹೆಚ್ಚು 1200 ಕೋಟಿ ರೂಪಾಯಿಗೂ ಅಧಿಕ ಕಲೆಕ್ಷನ್ ಮಾಡುವ ಮೂಲಕ ಅತೀ ಹೆಚ್ಚು ಗಳಿಕೆ ಮಾಡಿದ ಸಿನಿಮಾಗಳ ಪಟ್ಟಿಯಲ್ಲಿ 3ನೇ ಸ್ಥಾನದಲ್ಲಿದೆ. ಈ ಸಾಧನೆ ಮಾಡುವ ಮೂಲಕ ಪ್ರಶಾಂತ್ ನೀಲ್ ಭಾರತೀಯ ಬಾಕ್ಸ್ ಆಫೀಸ್ ಕಿಂಗ್ ಅಂದರು ತಪ್ಪಾಗಲ್ಲ. ಇಡೀ ಭಾರತವೇ ಪ್ರಶಾಂತ್ ನೀಲ್ ಅವರನ್ನು ಹಾಡಿಹೊಗಳುತ್ತಿದೆ. ಪ್ರಶಾಂತ್ ನೀಲ್ ಜೊತೆ ಸಿನಿಮಾ ಮೂಡಲು ಸ್ಟಾರ್ ನಿರ್ದೇಶಕರು ಸಹ ತುದಿಗಾಲಿನಲ್ಲಿ ನಿಂತಿದ್ದಾರೆ. ದೇಶ ಮೂಲೆಮೂಲೆಯಲ್ಲೂ ಪ್ರಶಾಂತ್ ನೀಲ್ ಅವರ ಅಭಿಮಾನಿಗಳಿದ್ದಾರೆ. ಅಪಾರ ಸಂಖ್ಯೆ ಅಭಿಮಾನಿಗಳಿಂದ ಶುಭಾಶಯಗಳ ಮಹಾಪೂರವೇ ಬರುತ್ತಿದೆ.

ಪ್ರಶಾಂತ್ ಬೆಂಗಳೂರಿನಲ್ಲಿ ಅದ್ದೂರಿ ಹುಟ್ಟುಹಬ್ಬದ ಪಾರ್ಟಿ ಆಯೋಜಿಸಿದ್ದರು. ಕೆಜಿಎಫ್ ನಿರ್ದೇಶಕರ ಬರ್ತಡೇ ಪಾರ್ಟಿಯಲ್ಲಿ ಅನೇಕ ಸ್ಟಾರ್ಸ್ ಭಾಗಿಯಾಗಿದ್ದರು. ವಿಶೇಷ ಎಂದರೇ ಟಾಲಿವುಡ್ ಸ್ಟಾರ್ ಪ್ರಭಾಸ್ ಕೂಡ ಪ್ರಶಾಂತ್ ನೀಲ್ ಬರ್ತಡೇಗಾಗಿ ಹೈದರಾಬಾದ್ ನಿಂದ ಬೆಂಗಳೂರಿಗೆ ಆಗಮಿಸಿದ್ದರು. ಪ್ರಶಾಂತ್ ನೀಲ್ ಬರ್ತಡೇಯಲ್ಲಿ ಭಾಗಿಯಾಗಿದ್ದರು. ಇನ್ನು ರಾಕಿಂಗ್ ಸ್ಟಾರ್ ಯಶ್, ಹೊಂಬಾಳೆ ಸಂಸ್ಥೆಯ ಮುಖ್ಯಸ್ಥ ವಿಜಯ್ ಕಿರಗಂದೂರು ಸೇರಿದಂತೆ ಅನೇಕರು ಭಾಗಿಯಾಗಿದ್ದರು.

ಪ್ರಭಾಸ್ ಮತ್ತು ಪ್ರಶಾಂತ್ ನೀಲ್ ಇಬ್ಬರು ಸಲಾರ್ ಸಿನಿಮಾದಲ್ಲಿ ಒಟ್ಟಿಗೆ ಕೆಲಸ ಮಾಡುತ್ತಿದ್ದಾರೆ. ಕೆಜಿಎಫ್-2 ಚಿತ್ರೀಕರಣ ಮುಗಿಯುತ್ತಿದ್ದಂತೆ ಪ್ರಶಾಂತ್ ನೀಲ್, ಪ್ರಭಾಸ್ ಜೊತೆ ಸಲಾರ್ ಸಿನಿಮಾ ಅನೌನ್ಸ್ ಮಾಡಿದ್ದರು. ಈಗಾಗಲೇ ಚಿತ್ರೀಕರಣ ಸಹ ಪ್ರಾರಂಭವಾಗಿದ್ದು 40 ರಷ್ಟು ಚಿತ್ರೀಕರಣ ಮಾಡಿದ್ದಾರೆ. ಸಲಾರ್ ಕೂಡ ಹೊಂಬಾಳೆ ಫಿಲ್ಮ್ಸ್ ಬ್ಯಾನರ್‌ನಲ್ಲಿ ಮೂಡಿಬರುತ್ತಿದೆ. ಕೆಜಿಎಫ್-2 ಬಳಿಕ ಸಿನಿ ಅಭಿಮಾನಿಗಳು ಸಲಾರ್ ಸಿನಿಮಾಗಾಗಿ ಕಾತರದಿಂದ ಕಾಯುತ್ತಿದ್ದಾರೆ.

ಸಲಾರ್; ತೂಕ ಇಳಿಸಿಕೊಳ್ಳುವಂತೆ ಪ್ರಭಾಸ್‌ಗೆ ಖಡಕ್ ಎಚ್ಚರಿಕೆ ನೀಡಿದ್ದಾರಾ ಪ್ರಶಾಂತ್ ನೀಲ್?

ಪ್ರಶಾಂತ್ ನೀಲ್ ಹುಟ್ಟುಹಬ್ಬ ಸಂಭ್ರಮದ ಕೆಲವು ಫೋಟೋಗಳನ್ನು ಹೊಂಬಾಳೆ ಫಿಲ್ಮ್ಸ್ ತನ್ನ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ಶೇರ್ ಮಾಡಿದೆ. ಭಾರತೀಯ ಸಿನಿಮಾರಂಗದ ಇಬ್ಬರು ಸ್ಟಾರ್ ಕಲಾವಿದರು ಯಸ್ ಮತ್ತು ಪ್ರಭಾಸ್ ಪ್ರಶಾಂತ್ ನೀಲ್ ಹುಟ್ಟುಹಬ್ಬ ಸಂಭ್ರಮದಲ್ಲಿ. ಡಾರ್ಲಿಂಗ್ ಪ್ರಭಾಸ್ ಹೈದರಾಬಾದ್‌ನಿಂದ ಬೆಂಗಳೂರಿಗೆ ಬಂದಿದ್ದಾರೆ ಎಂದು ಹೇಳಿದ್ದಾರೆ.

ಕೆಜಿಎಫ್ ನಿರ್ದೇಶಕ ಪ್ರಶಾಂತ್ ನೀಲ್ ಇನ್ನು 6 ವರ್ಷ ಸ್ಯಾಂಡಲ್‌ವುಡ್‌ಗೆ ಸಿಗಲ್ಲ

ಪ್ರಶಾಂತ್ ನೀಲ್ ನಿರ್ದೇಶನದ ಬ್ಲಾಕ್ ಬಸ್ಟರ್ ಕೆಜಿಎಫ್-2 ಸಿನಿಮಾ 50 ದಿನಗಳನ್ನು ಪೂರೈಸಿದೆ. ಈಗಲೂ ಅನೇಕ ಕಡೆ ಭರ್ಜರಿ ಪ್ರದರ್ಶನ ಕಾಣುತ್ತಿದೆ. 50 ದಿನ ಪೂರೈಸಿದ ಸಂಭ್ರಮ ಮತ್ತು ಪ್ರಶಾಂತ್ ನೀಲ್ ಬರ್ತಡೇ ಎರಡನ್ನು ಒಂದೇ ದಿನ ಸಂಭ್ರಮಿಸಿದೆ ಸಿನಿಮಾತಂಡ. ಸದ್ಯ ಪ್ರಶಾಂತ್ ನೀಲ್ ಸಲಾರ್ ಸಿನಿಮಾದಲ್ಲಿ ನಿರತರಾಗಿದ್ದಾರೆ. ಈ ಸಿನಿಮಾ ಮುಗಿಯುತ್ತಿದ್ದಂತೆ ಟಾಲಿವುಡ್‌ನ ಮತ್ತೋರ್ವ ಸ್ಟಾರ್ ಜೂ.ಎನ್ ಟಿ ಆರ್ ಜೊತೆ ಸಿನಿಮಾ ಮಾಡಲಿದ್ದಾರೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ರಗಡ್‌ ಕಾಪ್‌, ಮ್ಯಾಕ್ಸಿಮಮ್‌ ಮಾಸ್‌.. 'ಮಾರ್ಕ್' ಕಥೆ ಬಗ್ಗೆ ಸ್ಫೋಟಕ ಸತ್ಯ ಬಿಚ್ಚಿಟ್ಟ ಕಿಚ್ಚ ಸುದೀಪ್!
ನನ್ನ ತಂದೆ ಕೂಡ ಗುಮ್ಮಡಿ ನರಸಯ್ಯ ಅವರಂತೆಯೇ ಜನರ ಸೇವೆ ಮಾಡಿದವರು: ನಟ ಶಿವಣ್ಣ ಹೇಳಿದ್ದೇನು?