ಸಣ್ಣಗಿರೋ ದಿಶಾ ಇಷ್ಟೊಂದು ತಿನ್ತಾರಾ? ಅನಿಲ್ ಕಪೂರ್ ಧನ್ಯವಾದ ಹೇಳಿದ್ದೇಕೆ?

Suvarna News   | Asianet News
Published : Feb 24, 2020, 09:39 AM ISTUpdated : Feb 24, 2020, 04:50 PM IST
ಸಣ್ಣಗಿರೋ ದಿಶಾ ಇಷ್ಟೊಂದು ತಿನ್ತಾರಾ? ಅನಿಲ್ ಕಪೂರ್ ಧನ್ಯವಾದ ಹೇಳಿದ್ದೇಕೆ?

ಸಾರಾಂಶ

ಸಣ್ಣಗೆ ಇರುವವರನ್ನು ಕಂಡರೆ ಇವರೇನು ಊಟವನ್ನೇ ಮಾಡುವುದಿಲ್ಲವಾ? ಮಾಡಿದರೂ ಎಷ್ಟುಮಾಡುತ್ತಾರೆ? ಅದು ತಿನ್ನಬೇಕು, ಇದು ತಿನ್ನಬೇಕು ಎನ್ನುವ ಕನಿಷ್ಟಆಸೆಯೂ ಇವರಿಗೆ ಬರುವುದಿಲ್ಲವಾ ಎನ್ನುವುದರೆ ಜೊತೆಗೆ ಇನ್ನಷ್ಟುಪ್ರಶ್ನೆಗಳು ಬರುವುದು ಸಹಜ.

ಇನ್ನು ಸ್ಟಾರ್‌ ನಟ, ನಟಿಯರ ವಿಚಾರದಲ್ಲಿ ಇದು ಇನ್ನಷ್ಟುಚರ್ಚೆಗಳನ್ನು ಹುಟ್ಟುಹಾಕುತ್ತದೆ. ಅದೇ ರೀತಿ ದಿಶಾ ಪಟಾಣಿ ವಿಚಾರದಲ್ಲಿಯೂ ಆಗಿದೆ. ದಿಶಾ ಇರುವುದೇ ಸಣ್ಣ. ವರ್ಕ್ಔಟ್‌, ಡಯಟ್‌ ಎಲ್ಲಾ ಮಾಡಿ ಸಾಕಷ್ಟುಸ್ಲಿಮ್‌ ಇದ್ದರೂ ದಿಶಾ ಫುಟ್‌ ಸ್ಟೈಲ್‌ ಹೇಗಿದೆ ಎನ್ನುವ ಕುತೂಹಲ ಸಾಕಷ್ಟುಮಂದಿಗೆ ಇದ್ದೇ ಇದೆ.

ದಿಶಾ ಪಠಾನಿ 2020ಗೆ ಮತ್ತೆ ಪ್ಯಾಂಟಿಳಿಸಿಕೊಂಡ್ರಾ ?

ಈಗ ಅದು ರಿವೀಲ್‌ ಆಗಿದೆ. ಅದು ಅನಿಲ್‌ ಕಪೂರ್‌ ಮೂಲಕ. ಮೊನ್ನೆಯಷ್ಟೇ ‘ಮಲಂಗ್‌’ ಚಿತ್ರತಂಡ ಮುಂಬೈನಲ್ಲಿ ಲಂಚ್‌ಗೆ ಜೊತೆಯಾಗಿದೆ. ಈ ವೇಳೆ ದಿಶಾ ಬಾಯಿ ಚಪ್ಪರಿಸಿ ಒಂದಷ್ಟುಖಾದ್ಯಗಳನ್ನು ಸವಿದಿದ್ದಾರೆ. ಇದನ್ನು ಕಂಡ ಅನಿಲ್‌ ಕಪೂರ್‌ ದಿಶಾ ಊಟದ ಬಗ್ಗೆ ಮೆಚ್ಚಿದ್ದಾರೆ. ಅದರೊಂದಿಗೆ ‘ಜನರು ಈಕೆ ಊಟವನ್ನೇ ಮಾಡುವುದಿಲ್ಲವಾ ಎಂದುಕೊಳ್ಳುತ್ತಿದ್ದರು, ಈಗ ಅದನ್ನು ಸುಳ್ಳು ಮಾಡಿದ ದಿಶಾ ಪಟಾಣಿಗೆ ಧನ್ಯವಾದ’ ಎಂದು ಹೇಳಿದ್ದಾರೆ. ಆ ಮೂಲಕ ದಿಶಾ ಸಣ್ಣಗೆ ಇದ್ದರೂ ಒಂದಷ್ಟುಹೆಚ್ಚಾಗಿಯೇ ಊಟ ಬಾರಿಸುತ್ತಾರೆ ಎನ್ನುವುದು ಗೊತ್ತಾಗಿದೆ.

ಬಿಕಿನಿ ಫೋಟೋ ನೋಡಿ ನಟಿಗೆ 'ದೇಶ ಬಿಟ್ಟು ಹೋಗು' ಎಂದ ನೆಟ್ಟಿಗರು!

ಫೆಬ್ರವರಿ 24ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ಅತ್ತ ಪಂಚೆ ಉದುರಿ ಹೋಗುತ್ತಿದೆ.. ಇತ್ತ ಕುಣಿದು ಕುಪ್ಪಳಿಸಿ ಇಳಯರಾಜಾ ಕಂಪೋಸ್ ಮಾಡಿದ ಮಜವಾದ ಹಾಡು ಯಾವುದು?
ಅಖಂಡ 2 ರಿಲೀಸ್ ನಿಲ್ಲೋಕೆ ಅಸಲಿ ಕಾರಣ ಇದೇನಾ? ಅಷ್ಟಕ್ಕೂ ಬಾಲಯ್ಯ ಮುಂದೆ ಏನ್ಮಾಡ್ತಾರೆ?