ಏರ್‌ ಡೆಕ್ಕನ್‌ ಮಾಲೀಕನ ಕಥೆ ಸಿನಿಮಾ ಆಗಿದ್ದು ಹೇಗೆ? ಕ್ಯಾ. ಗೋಪಿನಾಥ್‌ ಬಯೋಪಿಕ್‌ ಹಿಂದಿರುವ ರಹಸ್ಯ!

By Kannadaprabha NewsFirst Published Feb 20, 2020, 9:35 AM IST
Highlights

ಹಳ್ಳಿಯಲ್ಲಿ ಬರಿಗಾಲಲ್ಲಿ ಸರ್ಕಾರಿ ಶಾಲೆಗೆ ಹೋಗುತ್ತಿದ್ದ ಹುಡುಗನೊಬ್ಬ ಬಾನೆತ್ತರದ ಸಾಧನೆ ಮಾಡಿದ ಕಥೆ ‘ಸಿಂಪ್ಲೀ ಫ್ಲೈ’. ಇದು ಕ್ಯಾಪ್ಟನ್‌ ಗೋಪಿನಾಥ್‌ ಅವರ ಆತ್ಮಕತೆ. ಈ ಕತೆ ದಕ್ಷಿಣ ಭಾರತೀಯ ಭಾಷೆ ಹಾಗೂ ಹಿಂದಿಯಲ್ಲಿ ಸಿನಿಮಾ ಆಗ್ತಿದೆ. ಆತ್ಮಕಥೆಯೊಂದು ಸಿನಿಮಾ ರೂಪು ತಳೆದ ಬಗೆ ಹೇಗೆ ಅನ್ನುವ ಕುತೂಹಲಕ್ಕೆ ಉತ್ತರ ಇಲ್ಲಿದೆ.

ಪ್ರಿಯಾ ಕೆರ್ವಾಶೆ

ಗೋರೂರಿನ ಒಂದು ಸರ್ಕಾರಿ ಶಾಲೆ. ಒಂದಿನ ಆ ಸ್ಕೂಲ್‌ನ ಹೆಡ್ಮಾಷ್ಟು್ರ ಕೈಯಲ್ಲೊಂದು ಪತ್ರ ಹಿಡಿದುಕೊಂಡು ಕ್ಲಾಸಿಗೆ ಬಂದರು. ಹುಡುಗರಿಗೆ ಆ ಲೆಟರ್‌ ತೋರಿಸಿ ಕೇಳಿದರು, ‘ಸೈನಿಕ್‌ ಶಾಲೆಗೆ ಹೋಗುವ ಆಸಕ್ತಿ ನಿಮ್ಮಲ್ಲಿ ಯಾರಿಗಾದರೂ ಇದೆಯಾ, ಇದ್ದವರು ಕೈ ಎತ್ತಿ’.

ಇಡೀ ಕ್ಲಾಸ್‌ನಲ್ಲಿ ಒಬ್ಬ ಹುಡುಗ ಮಾತ್ರ ಕೈ ಎತ್ತಿದ. ಹೆಡ್ಮಾಷ್ಟು್ರ ಆ ಹುಡುಗನಿಂದ ಸೈನಿಕ್‌ ಶಾಲೆಗೆ ಅರ್ಜಿ ಹಾಕಿಸಿದರು. ಅವನಿಗೆ ಸೀಟೂ ಸಿಕ್ಕಿತು. ಮುಂದಿನದೆಲ್ಲ ಸಿನಿಮೀಯ ರೀತಿಯ ಬದಲಾವಣೆಗಳು.

ಗುನಿತ್‌ ಮಾಂಗ ಅವರಿಗೆ ‘ಸಿಂಪ್ಲೀ ಫ್ಲೈ’ ಕೃತಿಯ ಹಕ್ಕನ್ನು ಕೊಟ್ಟಿದ್ದೇನೆ. ಸಿನಿಮಾ ಅಂದಮೇಲೆ ಜನರನ್ನು ಆಕರ್ಷಿಸಲು ಒಂದಿಷ್ಟುನಾಟಕೀಯತೆ ಬೇಕಾಗುತ್ತದೆ. ಅದಕ್ಕೆ ನನ್ನ ಒಪ್ಪಿಗೆ ಇದೆ. ಕೃತಿಯಲ್ಲಿ ವಿವಾದಾತ್ಮಕ ಅಂಶಗಳೂ ಇರುವ ಕಾರಣ ಕೆಲವೊಂದು ಮಾರ್ಪಾಡು ಮಾಡಬೇಕಾಗುತ್ತೆ. ಆದರೆ ಮೂಲ ಆಶಯಕ್ಕೆ ಧಕ್ಕೆ ಬರದಂತೆ ಸಿನಿಮಾ ಮಾಡಬೇಕು ಎಂದಿದ್ದೇನೆ. ಅದಕ್ಕೆ ಅವರು ಒಪ್ಪಿದ್ದಾರೆ.- ಕ್ಯಾ. ಗೋಪಿನಾಥ್‌

ಅಂದಹಾಗೆ ಅವತ್ತು ಹೆಡ್‌ ಮಾಸ್ಟರ್‌ ಮುಂದೆ ಕೈ ಎತ್ತಿದ ಹುಡುಗ ಬೇರಾರೂ ಅಲ್ಲ, ಕ್ಯಾ.ಗೋಪಿನಾಥ್‌ ಎಂಬ ಹೆಮ್ಮೆಯ ಕನ್ನಡಿಗ. ಸಣ್ಣ ಹಳ್ಳಿಯಿಂದ ಅಂತಾರಾಷ್ಟ್ರೀಯ ಮಟ್ಟಕ್ಕೇರಿದ ಪ್ರತಿಭೆ ಇವರು. ಏರ್‌ ಡೆಕ್ಕನ್‌ ಮೂಲಕ ಜನಸಾಮಾನ್ಯರ ವಿಮಾನಯಾನದ ಕನಸು ನನಸು ಮಾಡಿದವರು. ಹಳ್ಳಿಗಳಲ್ಲಿನ ಯುವಕರಲ್ಲಿ ಸಾಧನೆಯ ಕನಸು ಬಿತ್ತಿದ್ದು ಇವರ ಆತ್ಮಕಥೆ ‘ಸಿಂಪ್ಲೀ ಫ್ಲೈ’. ಇದು ‘ಬಾನಯಾನ’ ಎಂಬ ಹೆಸರಿನಲ್ಲಿ ಕನ್ನಡಕ್ಕೂ ಅನುವಾದವಾಗಿದೆ.

ಈಗ ಇದೇ ಆತ್ಮಕಥೆ ಸಿನಿಮಾವಾಗುವ ಮೂಲಕ ಇನ್ನಷ್ಟುಜನರನ್ನು ತಲುಪಲಿದೆ. ಮೂಲ ತಮಿಳಿನಲ್ಲಿ ಬರಲಿರುವ ಈ ಸಿನಿಮಾದ ಟೈಟಲ್‌ ‘ಸೂರರೈ ಪೊಟ್ರು’. ಕಳೆದ ಬಾರಿ ಪೀರಿಯೆಡ್ಸ್‌ ಕುರಿತ ತನ್ನ ಡಾಕ್ಯುಮೆಂಟರಿಗೆ ಆಸ್ಕರ್‌ ಪ್ರಶಸ್ತಿ ಪಡೆದ ಗುನಿತ್‌ ಮೊಂಗ ಈ ಸಿನಿಮಾ ನಿರ್ದೇಶಿಸುತ್ತಾರೆ. ತಮಿಳು ಹೀರೋ ಸೂರ್ಯ ನಾಯಕನಾಗಿ ಕ್ಯಾ.ಗೋಪಿನಾಥ್‌ ಪಾತ್ರ ಮಾಡಲಿದ್ದಾರೆ. ಈ ಸಿನಿಮಾದ ಶೂಟಿಂಗ್‌ ಎಲ್ಲ ಮುಗಿದಿದೆ. ಇದು ಕನ್ನಡವೂ ಸೇರಿದಂತೆ ಇತರೆ ದಕ್ಷಿಣ ಭಾರತೀಯ ಭಾಷೆಗಳಲ್ಲೂ ಬರಲಿದೆ.

ಬಯೋಪಿಕ್‌ನಲ್ಲಿರುವ ಮುಖ್ಯ ಅಂಶಗಳು

ಕ್ಯಾಪ್ಟನ್‌ ಗೋಪಿನಾಥ್‌ ಅವರ ಆತ್ಮಕಥೆ ‘ಸಿಂಪ್ಲೀ ಫ್ಲೈ’ ಆಧರಿಸಿದ ಸಿನಿಮಾ.

- ಗೋರೂರಿನಂಥಾ ಸಣ್ಣ ಹಳ್ಳಿಯಲ್ಲಿ ಕಳೆದ ಬಾಲ್ಯದ ದಿನಗಳು ಸಿನಿಮಾದಲ್ಲಿ ಒಂದು ಭಾಗ. ಬರಿಗಾಲಲ್ಲೇ ಸ್ಕೂಲ್‌ಗೆ ಓಡುತ್ತಿದ್ದ ಆ ದಿನಗಳು, ಬಡ ಮೇಷ್ಟಾ್ರಗಿದ್ದ ತಂದೆ, ಆ ಹಳ್ಳಿಯ ಬದುಕು ಸಿನಿಮಾದಲ್ಲಿ ಬರಲಿದೆ. ಇದಕ್ಕೋಸ್ಕರ ಚಿತ್ರತಂಡ ಕ್ಯಾ.ಗೋಪಿನಾಥ್‌ ಅವರ ಹುಟ್ಟೂರು ಗೋರೂರಿಗೂ ಪ್ರಯಾಣ ಬೆಳೆಸಿತ್ತು. ಸ್ಕೂಲ್‌ ಲೈಫ್‌ನಲ್ಲಿ ಅವರಿಗೆ ಸಿಕ್ಕ ಟರ್ನಿಂಗ್‌ ಪಾಯಿಂಟ್‌- ಪುತಿನ ಅವರ ‘ಗುಡಿಯಾಚೆ, ಗಿಡದಾಚೆ, ಗಡಿಯಾಚೆ, ಹೋಗೋಣ ಬನ್ನಿರೋ ಹೊಸ ನಾಡಿಗೆ’ ಎಂಬಂತೆ ಹಳ್ಳಿಯಿಂದಾಚೆ ಹೆಜ್ಜೆ ಇಟ್ಟು ಸೈನಿಕ್‌ ಶಾಲೆಯಲ್ಲಿ ಕಳೆದ ದಿನಗಳ ಚಿತ್ರಣವಿದೆ.

ವಿಮಾನದ ಮೇಲೆ 'ಸುರರೈ ಪೊಟ್ರು' ಪ್ರಚಾರ; ರಜನಿ ಪ್ರಚಾರದ ಐಡಿಯಾ ಕದ್ದರಾ?

- ಈ ಶಾಲೆಯಲ್ಲಿ ಕಲಿತ ಮೇಲೆ ದೇಶದ ನಾನಾ ಕಡೆ ಮಿಲಿಟರಿ ಟ್ರೈನಿಂಗ್‌ ಸಿಕ್ಕಿತು.

- ಮುಂದೆ ಯುದ್ಧ ಶುರುವಾಯ್ತು. ಕಾಶ್ಮೀರ, ಸಿಕ್ಕಿಂಗಳ ಗಡಿಯಲ್ಲಿ ಗೋಪಿನಾಥ್‌ ವೀರ ಸೈನಿಕನಾಗಿ ಯುದ್ಧದಲ್ಲಿ ಭಾಗವಹಿಸಿದರು.

- ಆಮೇಲೆ ರಾಜೀನಾಮೆ ಕೊಟ್ಟು ಹಳ್ಳಿಗೆ ಬಂದಾಗ ಇವರ ಜಮೀನು ನೀರೊಳಗೆ ಸೇರಿ ಹೋಗಿತ್ತು. ಗೋರೂರು ಅಣೆಕಟ್ಟು ನಿರ್ಮಾಣದ ವೇಳೆ ಜಮೀನು ಕಳೆದುಕೊಂಡವರಲ್ಲಿ ಇವರೂ ಒಬ್ಬರಾಗಿದ್ದರು. ಈ ಜಮೀನಿಗೆ ಪರಾರ‍ಯಯವಾಗಿ ಮತ್ತೊಂದು ಕಡೆ ಬರಡು ಭೂಮಿಯನ್ನು ನೀಡಲಾಗಿತ್ತು. ಆದದ್ದಾಗಲಿ ಎಂದು ಅಲ್ಲೇ ಟೆಂಟ್‌ ಹಾಕಿ ಕೃಷಿ ಆರಂಭಿಸುತ್ತಾರೆ ಗೋಪಿನಾಥ್‌. ಸುಮಾರು 10 ವರ್ಷ ಕಾಲ ಕೃಷಿ ಮಾಡುತ್ತಾರೆ.

- ಇವರು ರೈತನಾಗಿದ್ದಾಗಲೇ ಮದುವೆಯಾಗುತ್ತಾರೆ. ಇದು ಎರಡನೇ ಭಾಗ.

- ಮೂರನೇ ಭಾಗದಲ್ಲಿ ಇವರು ಹೆಲಿಕಾಫ್ಟರ್‌ ಕಂಪೆನಿ ಆರಂಭಿಸಿದ ದಿನಗಳ ಚಿತ್ರವಿದೆ.

- ಏರ್‌ ಡೆಕ್ಕನ್‌ ಸ್ಥಾಪಿಸುವ ಮೂಲಕ ವಿಶ್ವಾದ್ಯಂತ ಹೆಸರು ಮಾಡಿದ ಭಾಗ ನಾಲ್ಕನೆಯದು.

- ಕೊನೆಯ ಹಾಗೂ ಐದನೇ ಭಾಗ ತಮ್ಮ ಕನಸಿನ ಏರ್‌ ಡೆಕ್ಕನ್‌ಅನ್ನು ವಿಜಯ್‌ ಮಲ್ಯ ಅವರಿಗೆ ಮಾರಿದ ಸನ್ನಿವೇಶ.

ದೇಶಕ್ಕೆ ಬೇಕು ಮಧ್ಯಮ ಮಾರ್ಗದ ನಾಯಕ: ಕೇಜ್ರಿಗೆ ಕ್ಯಾ.ಗೋಪಿನಾಥ್ ಬಹಿರಂಗ ಪತ್ರ

ಆತ್ಮಕಥೆ ಯಥಾವತ್‌ ಆಗಿ ಸಿನಿಮಾದಲ್ಲಿ ಬಂದಿದೆಯಾ?

ಇಲ್ಲ. ಜನರನ್ನು ಆಕರ್ಷಿಸುವ ಸಲುವಾಗಿ ಆತ್ಮಕಥೆಯನ್ನು ಕೊಂಚ ನಾಟಕೀಯಗೊಳಿಸಲಾಗಿದೆ. ಜೊತೆಗೆ ಈ ಕೃತಿಯಲ್ಲಿ ಇಂಡಿಗೋ, ವಿಜಯ್‌ ಮಲ್ಯ ಕುರಿತಾಗಿ ವಿವಾದಾತ್ಮಕ ಅಂಶಗಳಿರುವ ಕಾರಣ ಅದು ಸಮಸ್ಯೆಗೆ ಕಾರಣವಾಗಬಾರದೆಂದು ಕೊಂಚ ಬದಲಾವಣೆ ಮಾಡಲಾಗಿದೆ.

ದೇಶದಲ್ಲಿ ನಾವೆಲ್ಲರೂ ಕೂಡ ವಲಸಿಗರೇ!: ಕಾಯ್ದೆ ಹಿಂಪಡೆದು ಒಮ್ಮತದಿಂದ ಮತ್ತೆ ಮಂಡಿಸಿ

ಬಯಾಗ್ರಫಿ ಸಿನಿಮಾವಾದ ಬಗೆ ಹೇಗೆ?

ಈ ಹಿಂದೆಯೇ ಕ್ಯಾ. ಗೋಪಿನಾಥ್‌ ಅವರ ಬಳಿ ಅವರ ಆತ್ಮಕಥೆಯನ್ನು ಸಿನಿಮಾ ಮಾಡುತ್ತೇವೆ ಎಂದು ಹಿಂದಿ ಚಿತ್ರರಂಗದ ಕೆಲವರು ಮುಂದೆ ಬಂದಿದ್ದರು. ಆದರೆ ಎಲ್ಲಿ ತಮ್ಮ ಪಾತ್ರವನ್ನು ಉತ್ಪ್ರೇಕ್ಷೆ ಮಾಡಿ ಬಿಡುತ್ತಾರೋ ಎಂಬ ಭಯದಲ್ಲಿ ಗೋಪಿನಾಥ್‌ ಅವರು ಇದಕ್ಕೆ ಒಪ್ಪಿರಲಿಲ್ಲ. ಆದರೆ ತಮಿಳುನಾಡಿನ ಸುಧಾ ಎಂಬ ನಿರ್ಮಾಪಕಿಯೊಬ್ಬರು ಹತ್ತು ವರ್ಷಗಳ ಹಿಂದೆಯೇ ಗೋಪಿನಾಥ್‌ ಅವರ ಆತ್ಮಕತೆ ಓದಿದ್ದರು. ಅದನ್ನು ತೆರೆಗೆ ತರಲು ಹಂಬಲಿಸಿದ್ದರು. ಈ ಆತ್ಮಕಥೆಯನ್ನು ಸಮರ್ಥವಾಗಿ ತೆರೆಗೆ ತರುವವರಿಗೆ ಹುಡುಕುತ್ತಿದ್ದಾಗ ಅವರಿಗೆ ಸಿಕ್ಕವರು ಗುನಿತ್‌ ಮಾಂಗ ಎಂಬ ಪ್ರತಿಭಾವಂತ ನಿರ್ದೇಶಕಿ. ಗುನಿತ್‌ ಅವರೇ ಕ್ಯಾ.ಗೋಪಿನಾಥ್‌ ಅವರ ಬಳಿ ಆತ್ಮಕಥೆಯನ್ನು ಸಿನಿಮಾವಾಗಿಸುವ ಇಂಗಿತ ಬಿಚ್ಚಿಟ್ಟರು. ಗುನಿತ್‌ ಅವರಂಥಾ ಆಸ್ಕರ್‌ ವಿಜೇತ ನಿರ್ದೇಶಕಿ ಹೀಗೆ ಕೇಳಿದಾಗ ಕ್ಯಾ.ಗೋಪಿನಾಥ್‌ ಅವರಿಗೆ ಇಲ್ಲವೆನ್ನಲಾಗಲಿಲ್ಲ. ಕೃತಿಯ ಮೂಲ ಆಶಯಕ್ಕೆ ಎಲ್ಲೂ ಧಕ್ಕೆ ಬರದಂತೆ ಸಿನಿಮಾ ಮಾಡಬೇಕು ಅನ್ನುವ ಷರತ್ತಿನೊಂದಿಗೆ ‘ಸಿಂಪ್ಲೀ ಫ್ಲೈ’ ಆತ್ಮಕಥೆಯ ಸಿನಿಮಾ ರೈಟ್‌ಅನ್ನು ಗುನಿತ್‌ ಅವರಿಗೆ ನೀಡುತ್ತಾರೆ. ನಿರ್ಮಾಪಕಿ ಸುಧಾ ಅವರ ಆಶಯದಂತೇ ಮೂಲ ಸಿನಿಮಾ ತಮಿಳು ಭಾಷೆಯಲ್ಲೇ ಬರುತ್ತಿದ್ದು, ನಾಯಕನಾಗಿ ಸೂರ್ಯ ಅವರನ್ನು ಆಯ್ಕೆ ಮಾಡಲಾಗಿದೆ.

click me!