ಬಚ್ಚನ್ ಮೇಲೆ ಅಸಮಾಧಾನ ; ಹೋದಲ್ಲೆಲ್ಲಾ ಇದನ್ನೇ ಕೇಳ್ತಾರೆಂದು ತಾಪ್ಸಿ ಬೇಸರ

Published : Nov 25, 2019, 01:01 PM IST
ಬಚ್ಚನ್ ಮೇಲೆ ಅಸಮಾಧಾನ ; ಹೋದಲ್ಲೆಲ್ಲಾ ಇದನ್ನೇ ಕೇಳ್ತಾರೆಂದು ತಾಪ್ಸಿ ಬೇಸರ

ಸಾರಾಂಶ

  ಬಿ-ಟೌನ್‌ ಕಿಂಗ್ ಮೇಕರ್ ಅಮಿತಾಭ್ ಬಚ್ಚನ್ ವಿರುದ್ಧ ಬೇಸರ ವ್ಯಕ್ತಪಡಿಸಿದ್ದ ತಾಪ್ಸಿ ಪನ್ನು; ಮುಖ್ಯ ಪಾತ್ರಗಳ ಬಗ್ಗೆ ಕೇಳಲ್ಲ ಆದರೆ ಸಂಭಾವನೆ ಬಗ್ಗೆ ಮಾತನಾಡುತ್ತಾರೆ ಎಂದು ಆರೋಪಿಸಿದ್ದಾರೆ.

 

ಬಾಲಿವುಡ್‌ ಬಿಗ್ ಬಿ ಅಮಿತಾಭ್‌ ಬಚ್ಚನ್ ಮತ್ತು ತಾಪ್ಸಿ ಪನ್ನು ಒಟ್ಟಾಗಿ ಕಾಣಿಸಿಕೊಂಡ ಚಿತ್ರ 'ಬದ್ಲಾ' ಮಾರ್ಚ್‌ 8 ರಂದು ತೆರೆ ಕಂಡು ಬಾಕ್ಸ್‌ ಆಫೀಸ್ ಮುಟ್ಟವುದರಲ್ಲಿ ಕೊಂಚ ವಿಫಲವಾಗಿತ್ತು. ಆದರೀಗ ಅದರ ಬಗ್ಗೆ 50 ನೇ ಅಂತರಾಷ್ಟ್ರೀಯ ಚಲನಚಿತ್ರೋತ್ಸವ ಕಾರ್ಯಕ್ರಮದಲ್ಲಿ ಅಮಿತಾಭ್‌ಗೆ ಸಿಕ್ಕ ಪ್ರಾಮುಖ್ಯತೆ ಬಗ್ಗೆ ಮಾತನಾಡಿದ್ದಾರೆ.

ತಾಪ್ಸಿ ಪನ್ನುಗೆ ಈ ನಟಿಯರೇ ಗುರುಗಳು!

ಬಣ್ಣದ ಲೋಕಕ್ಕೆ ಕಾಲಿಟ್ಟ ನಂತರ ಪ್ರಾಮುಖ್ಯತೆ ಬಗ್ಗೆ ಚಿಂತಿಸಬಾರದು ಎಂಬ ಮಾತುಗಳು ಕೇಳಿ ಬರುವುದು ಸಹಜ. ಚಿತ್ರದ ಬಿಡುಗಡೆ ಸಮಯದಲ್ಲಿ ಇದರ ಬಗ್ಗೆ ಮಾತನಾಡದೇ ಈಗ ಪ್ರಾಮುಖ್ಯತೆ ಬಗ್ಗೆ ಮಾತನಾಡಿರುವುದಕ್ಕೆ ತಾಪ್ಸಿ ವಿರುದ್ಧ ಬಚ್ಚನ್ ಅಭಿಮಾನಿಗಳು ಕಿಡಿ ಕಾಡಿದ್ದಾರೆ. ಅಷ್ಟಕ್ಕೂ ಏನ್‌ ಈ ಘಟನೆ ಇಲ್ಲಿದೆ ನೋಡಿ.

50 ನೇ ಅಂತರಾಷ್ಟ್ರೀಯ ಚಲನಚಿತ್ರೋತ್ಸವ ಕಾರ್ಯಕ್ರಮದಲ್ಲಿ ನಡೆದ ಪ್ಯಾನಲ್‌ನಲ್ಲಿ ನಟಿ ತಾಪ್ಸಿ ನಟರಿಗೆ ಸಿಗುತ್ತಿರುವ ಪ್ರಾಮುಖ್ಯತೆ ಬಗ್ಗೆ ಮಾತನಾಡಿದ್ದಾರೆ. ಇದಕ್ಕೆ ಉದಾಹರಣೆಯಾಗಿ ಆಕೆಯ 'ಬದ್ಲಾ' ಸಿನಿಮಾ ಬಗ್ಗೆ ಮಾತನಾಡಿದ್ದಾರೆ. 'ಬದ್ಲಾ' ಚಿತ್ರದಲ್ಲಿ ಅಮಿತಾಬ್‌ಗಿಂತ ತಾಪ್ಸಿ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಆದರೆ ತಾಪ್ಸಿಗಿಂತ ಹೆಚ್ಚಾಗಿ ಅಮಿತಾಬ್‌ಗೆ ಹೆಚ್ಚು ಪ್ರಚಾರ ಸಿಕ್ಕಿದೆ. ಸಣ್ಣ ಪಾತ್ರ ಮಾಡಿದ ಅಮಿತಾಬ್‌ದೇ ಸಿನಿಮಾ ಅನ್ನುವ ರೀತಿ ಪ್ರಚಾರದ ವೇಳೆ ಮಾತುಗಳು ಕೇಳಿ ಬರುತ್ತಿತ್ತು. ಇದನ್ನು ಕೇಳಿದಾಗ ಬೇಸರವಾಗುತ್ತಿತ್ತು ಎಂದು ಹೇಳಿದ್ದಾರೆ.

ಈ ನಟಿಗೂ ಇದ್ಯಂತಪ್ಪಾ ಈ ವೀಕ್‌ನೆಸ್!

ತಾಪ್ಸಿ ನೀಡಿರುವ ಈ ಹೇಳಿಕೆ ಬಗ್ಗೆ ನೆಟ್ಟಿಗರು ಗರಂ ಆಗಿದ್ದಾರೆ. ಖ್ಯಾತ ನಟನೊಂದಿಗೆ ನಟಿಸುವ ಅವಕಾಶ ಸಿಕ್ಕಿರುವುದೇ ಹೆಚ್ಚು. ಈ ರೀತಿ ಮಾತನಾಡಬೇಡಿ ಎಂದು ಕೆಲವರು ಹೇಳಿದ್ದರೆ ಇನ್ನು ಕೆಲವರು ತಾಪ್ಸಿ ನೀಡಿರುವುದು ಉದಾಹರಣೆ ಅಷ್ಟೇ. ಅದರಿಂದ ಅವರ ನಡುಗೆ ಮನಸ್ತಾಪ ತರಬೇಡಿ ಎಂದಿದ್ದಾರೆ. ಈ ವಿಚಾರದ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಪರ-ವಿರೋಧ ಚರ್ಚೆ ವ್ಯಕ್ತವಾಗುತ್ತಿದೆ.

 

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ಅಮಿತಾಭ್ 14 ಚಿತ್ರಗಳ ರೀಮೇಕ್ ಮಾಡಿ, 33 ವರ್ಷಗಳ ಬಳಿಕ ಅಮಿತಾಭ್ ಜೊತೆ ನಟಿಸಿದ ನಟ ರಜನಿಕಾಂತ್!
Sonali Bendre: 'ಅಡುಗೆಮನೆಗೆ ಹೋಗ್ಬೇಡ ನೀನು'.. ಅಂತ ಖಡಕ್ ಆಗಿ ಹೇಳಿದ್ರು ನನ್ ಅತ್ತೆ!