ಮೊದಲ ಮೂರು ತಿಂಗಳು ಅದೆಷ್ಟು ಕಠಿಣ: ಗರ್ಭಾವಸ್ಥೆಯ ಕಷ್ಟ ಹಂಚಿಕೊಂಡ ಸೋನಮ್

By Anusha KbFirst Published Mar 24, 2022, 7:26 PM IST
Highlights
  • ಮೊದಲ ಮಗುವಿನ ನಿರೀಕ್ಷೆಯಲ್ಲಿರುವ ಸೋನಮ್ ಕಪೂರ್‌
  • ಮೊದಲ ಮೂರು ತಿಂಗಳು ಅದೆಷ್ಟು ಕಠಿಣ
  • ಗರ್ಭಾವಸ್ಥೆಯ ಕಷ್ಟ ಹಂಚಿಕೊಂಡ ಸೋನಮ್

ನವದೆಹಲಿ(ಮಾ.24): ಮೊದಲ ಮಗುವಿನ ನಿರೀಕ್ಷೆಯಲ್ಲಿರುವ ಸೋನಮ್ ಕಪೂರ್ ಇತ್ತೀಚೆಗೆ ತಮ್ಮ ಗರ್ಭಧಾರಣೆ ಮತ್ತು ಮೊದಲ ಮೂರು ತಿಂಗಳು ತಾನು ಎದುರಿಸಿದ ಸಮಸ್ಯೆಗಳ ಬಗ್ಗೆ ಮನಬಿಚ್ಚಿ ಮಾತನಾಡಿದ್ದಾರೆ. ಅಮೆರಿಕನ್‌ ಮ್ಯಾಗಜಿನ್‌ ವೋಗ್‌  (Vogue) ಗೆ ನೀಡಿದ ಸಂದರ್ಶನದಲ್ಲಿ ಅವರು ಆರಂಭಿಕ ಮೂರು ತಿಂಗಳುಗಳು  ತುಂಬಾ ಕಠಿಣ ಹೇಳಿಕೊಂಡರು. ತಮ್ಮ ಕಷ್ಟದ ಸಮಯದ ಬಗ್ಗೆ ಮಾತನಾಡುತ್ತಾ ಸೋನಮ್ ಕಪೂರ್, ಇದು ಕಠಿಣವಾಗಿದೆ ಯಾರೂ ನಿಮಗೆ ಎಷ್ಟು ಕಷ್ಟ ಎಂದು ಹೇಳುವುದಿಲ್ಲ. ಅದು ಎಷ್ಟು ಅದ್ಭುತವಾಗಿದೆ ಎಂದು ಎಲ್ಲರೂ ಹೇಳುತ್ತಾರೆ ಎಂದು ಸೋನಮ್ ಹೇಳಿದರು. ಅಲ್ಲದೇ  ತಮ್ಮ ಜೀವನದ ಹೊಸ ಅಧ್ಯಾಯಕ್ಕಾಗಿ ಎದುರು ನೋಡುತ್ತಿರುವುದಾಗಿ ಅವರು ಹೇಳಿದರು. ನಮ್ಮನ್ನು ನಾವು ಬದಲಾಯಿಸಿಕೊಳ್ಳುವುದು ಮತ್ತು ನಮ್ಮದೇ ಉತ್ತಮ ಆವೃತ್ತಿಗಳಾಗುವ ಕಾರಣಕ್ಕೆ ನಾವೆಲ್ಲರೂ ಇಲ್ಲಿದ್ದೇವೆ. ಹಾಗಾಗಿ ವಿಕಾಸವನ್ನು ನಾನು ಎದುರು ನೋಡುತ್ತಿದ್ದೇನೆ ಎಂದರು.

ಸೋನಮ್ ಕಪೂರ್ ಈಗ ಸುಂದರ ಆದರ್ಶ ಗಾತ್ರವನ್ನು ಪಡೆಯುವ ಹಾಗೂ ಆಹಾರ ಮತ್ತು ವ್ಯಾಯಾಮವನ್ನು ಮಾಡುವುದಕ್ಕಿಂತ ಹೆಚ್ಚಾಗಿ ತಮ್ಮನ್ನು ತಾವು ಆರೋಗ್ಯವಾಗಿರಿಸಿಕೊಳ್ಳುವುದರ ಮೇಲೆ ಗಮನ ಕೇಂದ್ರೀಕರಿಸಿದ್ದಾರೆ. ಸೋನಂ ತಮ್ಮ ದೇಹವನ್ನು ಆರೋಗ್ಯವಾಗಿಡಲು ಯೋಗ ಮತ್ತು ಸಣ್ಣ ವ್ಯಾಯಾಮವನ್ನು ಮಾಡುತ್ತಿದ್ದಾರೆ. ನಾನು ಇಂದು ಬೆಳಗ್ಗೆ ಉಪಾಹಾರಕ್ಕಾಗಿ ದೋಸೆಯನ್ನು ಸೇವಿಸಿದೆ. ಹದಿನೈದು ಪ್ರತಿಶತದಷ್ಟು ದೇಹದ ಕೊಬ್ಬನ್ನು ಪಡೆಯಲು ನಾನು ಹೆಚ್ಚಿನ ಪ್ರೋಟೀನ್ ಆಹಾರವನ್ನು ಸೇವಿಸಲು ಪ್ರಯತ್ನಿಸುತ್ತಿಲ್ಲ. ಈ ಡಯಟಿಂಗ್ ಕೇವಲ ಸುಸ್ಥಿರವಾದುದಲ್ಲ. ನೀವು ನಿಮ್ಮೊಳಗೆ ಮತ್ತೊಂದು ಜೀವವನ್ನು ಇಟ್ಟುಕೊಳ್ಳಲು ಬಯಸಿದರೆ, ನಿಮ್ಮನ್ನು ನೀವು ಮೊದಲು ಗೌರವಿಸಬೇಕು ಎಂದು ಸೋನಮ್ ಹೇಳಿದರು.

Latest Videos

ನಟ Anil Kapoor ಅಳಿಯ ವಿರುದ್ಧ ತೆರಿಗೆ ವಂಚನೆ ಆರೋಪ; ಫ್ರಾಡ್ ಮಾಡಿದ್ದು ನಿಜವೇ?

ಮಾರ್ಚ್ 21 ರಂದು, ಸೋನಮ್ ಕಪೂರ್ (Sonam Kapoor) ಮತ್ತು ಪತಿ ಆನಂದ್ ಅಹುಜಾ (Anand Ahuja) ಅವರು ತಮ್ಮ ಮೊದಲ ಮಗುವಿನ ನಿರೀಕ್ಷೆಯಲ್ಲಿರುವುದಾಗಿ ವಿಚಾರ ಹಂಚಿಕೊಂಡಿದ್ದರು. ಬಾಲಿವುಡ್ ನಟಿ ಸೋನಮ್ ಕಪೂರ್ ಮೇ 2018 ರಲ್ಲಿ ಉದ್ಯಮಿ ಆನಂದ್ ಅಹುಜಾ ಅವರನ್ನು ವಿವಾಹವಾಗಿದ್ದರು. 

ಈ ಕಾರಣಕ್ಕೆ ಟ್ರೋಲ್‌ ಆದ Sonam Kapoor ಪತಿ Anand Ahuja!

ನಟಿ ಸೋನಂ ಕಪೂರ್ ಇತ್ತೀಚೆಗೆ, ತಮ್ಮ ಇನ್ಸ್ಟಾಗ್ರಾಮ್‌ನಲ್ಲಿ ಬೇಬಿ ಬಂಪ್ ಅನ್ನು ತೋರಿಸುತ್ತಿರುವ ಕೆಲವು ಫೋಟೋಗಳನ್ನು ಹಂಚಿಕೊಂಡಿದ್ದರು. ಫೋಟೋಗಳಲ್ಲಿ, ಅವರು ಕಪ್ಪು ಬಿಕಿನಿಯನ್ನು ಧರಿಸಿ ಪತಿ ಆನಂದ್ ಅಹುಜಾ ಅವರ ಮಡಿಲಲ್ಲಿ ಮಲಗಿದ್ದಾರೆ. ಸೋನಂ ಗರ್ಭಿಣಿಯಾಗಿರುವ ಸುದ್ದಿ ಕೇಳಿ ಬಾಲಿವುಡ್ ಸೆಲೆಬ್ರಿಟಿಗಳು ಮತ್ತು ಅಭಿಮಾನಿಗಳು ಸಂತಸ ವ್ಯಕ್ತಪಡಿಸಿದ್ದಾರೆ. ಅದೇ ಸಮಯದಲ್ಲಿ, ತನ್ನ ಪ್ರೆಗ್ನೆಂಸಿ ಘೋಷಣೆಯ ನಂತರ ಮೊದಲ ಬಾರಿಗೆ, ಸೋನಂ ಬೇಬಿ ಬಂಪ್‌ನೊಂದಿಗೆ ಕಾರ್ಯಕ್ರಮವೊಂದರಲ್ಲಿ ಕಾಣಿಸಿಕೊಂಡರು. ವಾಸ್ತವವಾಗಿ, ಸೋನಂ ಅವರ ಪತಿ ಮುಂಬೈನಲ್ಲಿ ಹೊಸ ಅಂಗಡಿಯನ್ನು ತೆರೆದಿದ್ದಾರೆ. ಅನಿಲ್ ಕಪೂರ್ ಸೇರಿದಂತೆ ಹಲವರು ಈ ಸಂದರ್ಭದಲ್ಲಿ ಕಾಣಿಸಿಕೊಂಡರು. ಈವೆಂಟ್‌ನಲ್ಲಿ ಸೋನಂ ಕಪೂರ್ ಸ್ಟೈಲಿಶ್ ಲುಕ್‌ನಲ್ಲಿ ಕಾಣಿಸಿಕೊಂಡರು.

ಬಾಲಿವುಡ್‌ನ (Bollywood) ಮೋಸ್ಟ್‌ ಸೆನ್ಸೇಷನಲ್ ಕಪಲ್ ಅಂದ್ರೆ ನಟಿ ಸೋನಮ್ ಕಪೂರ್ (Sonam Kapoor) ಮತ್ತು ಆನಂದ್ ಅಹುಜಾ (Anand Ahuja). ಸೋನಮ್‌ ತಂದೆ ಖ್ಯಾತ ನಟ ಅನಿಲ್ ಕಪೂರ್ (Anil Kapoor) ಆದರೂ ಯಾವುದೇ ಬ್ಯಾಕಪ್ ಇಲ್ಲದೇ ಫ್ಯಾಷನ್ ಲೋಕಕ್ಕೆ ಕಾಲಿಟ್ಟು, ಆನಂತರ ಚಿತ್ರರಂಗಕ್ಕೆ ಕಾಲಿಟ್ಟು ಅನೇಕ ಸೋಲುಗಳನ್ನು ಎದುರಿಸಿದ್ದರು. ಈ ನಡುವೆ ವಿಭಿನ್ನ ಔಟ್‌ಫಿಟ್‌ಗಳನ್ನು ಸೆಲೆಕ್ಟ್‌ ಮಾಡಿಕೊಂಡು, ಫ್ಯಾಷನ್ ಐಕಾನ್ (Fashion Icon) ಆಗಿ ಗುರುತಿಸಿಕೊಂಡ ಟಾಪ್ ನಟಿಯರ ಸ್ಥಾನದಲ್ಲಿ ಮಿಂಚುತ್ತಿದ್ದಾರೆ ಈ ನಟಿ

click me!