ಸ್ವರಾ ಭಾಸ್ಕರ್ ದಿನಸಿ ಸಾಮಾನುಗಳನ್ನು ಕದ್ದೊಯ್ದ Uber ಚಾಲಕ; ಹಿಂದಿರುಗಿಸುವಂತೆ ಮನವಿ

Published : Mar 24, 2022, 06:24 PM IST
ಸ್ವರಾ ಭಾಸ್ಕರ್ ದಿನಸಿ ಸಾಮಾನುಗಳನ್ನು ಕದ್ದೊಯ್ದ Uber ಚಾಲಕ; ಹಿಂದಿರುಗಿಸುವಂತೆ ಮನವಿ

ಸಾರಾಂಶ

ಉಬರ್ ಚಾಲಕ(Uber driver) ತನ್ನ ದಿನಸಿ ಸಾಮಾನುಗಳನ್ನು ಕದ್ದೊಯ್ದಿದ್ದಾನೆ ಎಂದು ನಟಿ ಸ್ವಾರ ಭಾಸ್ಕರ್ ಆರೋಪ ಮಾಡಿದ್ದಾರೆ. ಅಲ್ಲದೆ ಹಿಂದಿರಿಗಿಸುವಂತೆ ಟ್ವಿಟ್ಟರ್ ನಲ್ಲಿ ಮನವಿ ಮಾಡಿದ್ದಾರೆ.

ಬಾಲಿವುಡ್ ನಟಿ ಸ್ವರಾ ಭಾಸ್ಕರ್(Swara Bhaskar) ಒಂದಲ್ಲೊಂದು ವಿಚಾರದ ಮೂಲಕ ಸುದ್ದಿಯಲ್ಲಿದ್ದಾರೆ. ಇತ್ತೀಚಿಗಷ್ಟೆ ದಿ ಕಾಶ್ಮೀರ್ ಫೈಲ್ಸ್(The Kashmir Files) ಸಿನಿಮಾದ ಬಗ್ಗೆ ವ್ಯಂಗ್ಯವಾಡಿ ಟ್ರೋಲಿಗರಿಗೆ ಆಹಾರವಾಗಿದ್ದ ಸ್ವರಾ ಇದಾಗ ಮತ್ತೊಂದು ವಿಚಾರಕ್ಕೆ ಸುದ್ದಿಯಾಗಿದ್ದಾರೆ. ಉಬರ್ ಚಾಲಕ(Uber driver) ತನ್ನ ದಿನಸಿ ಸಾಮಾನುಗಳನ್ನು ಕದ್ದೊಯ್ದಿದ್ದಾನೆ ಎಂದು ಸ್ವಾರ ಭಾಸ್ಕರ್ ಆರೋಪ ಮಾಡಿದ್ದಾರೆ. ಅಲ್ಲದೆ ತನ್ನ ವಸ್ತುಗಳನ್ನು ಹಿಂದಿರುಗಿಸಿ ಕೊಡುವಂತೆ ಉಬರ್ ಸಂಸ್ಥೆ ಬಳಿ ಮನವಿ ಮಾಡಿದ್ದಾರೆ.

ಈ ಬಗ್ಗೆ ಸ್ವರಾ ಭಾಸ್ಕರ್ ಸಾಮಾಜಿಕ ಜಾಲತಾಣದಲ್ಲಿ ಬಹಿರಂಗ ಪಡಿಸಿದ್ದಾರೆ. ಸ್ವರಾ ಭಾಸ್ಕರ್ ಸದ್ಯ ಲಾಸ್ ಏಂಜಲೀಸ್ ನಲ್ಲಿದ್ದಾರೆ. ಈ ಘಟನೆ ಸಂಭವಿಸಿದ್ದು ಸಹ ಅಲ್ಲೆ. ಈ ಬಗ್ಗೆ ದೂರು ನೀಡಲು ಉಬರ್ ಆಪ್ ನಲ್ಲಿ ಯಾವುದೇ ಅಪ್ಲಿಕೇಶನ್ ಇಲ್ಲ ಎಂದಿದ್ದಾರೆ. ಈ ಬಗ್ಗೆ ಬರೆದುಕೊಂಡಿರುವ ಸ್ವರಾ, 'ಹೇ ಉಬರ್ ಸಪೋರ್ಟ್, ನಿಮ್ಮ ಚಾಲಕರೊಬ್ಬರು ಲಾಸ್ ಏಂಜಲೀಸ್ ನಲ್ಲಿ ನನ್ನ ಎಲ್ಲಾ ದಿನಸಿ ಸಾಮಾನುಗಳನ್ನು ಕದ್ದೊಯ್ದಿದ್ದಾರೆ. ಈ ಬಗ್ಗೆ ವರದಿ ಮಾಡಲು ನಿಮ್ಮ ಅಪ್ಲಿಕೇಶನ್ ನಲ್ಲಿ ಯಾವುದೇ ಮಾರ್ಗವಿಲ್ಲ. ಇದು ಕಳೆದುಹೋದ ವಸ್ತುವಲ್ಲ, ಅದನ್ನು ತೆಗೆದುಕೊಂಡು ಹೋಗಿದ್ದಾರೆ. ನನ್ನ ವಸ್ತುಗಳನ್ನು ಹಿಂದಿರುಗಿಸಬಹುದೇ' ಎಂದು ಕೇಳಿದ್ದಾರೆ. ಕೊನೆಯಲ್ಲಿ 'ಪ್ರವಾಸಿಗರ ಸಮಸ್ಯೆ' ಎಂದು ಬರೆದು ಹ್ಯಾಶ್ ಟ್ಯಾಗ್ ಹಾಕಿದ್ದಾರೆ.

'ನಮ್ಮನೆ ಕೆಲಸದವಳು ಸೀರೆಯಲ್ಲಿ ನಿಮಗಿಂದ ಚೆಂದ ಕಾಣ್ತಾಳೆ'; ನಟಿ ಸ್ವರಾ ಭಾಸ್ಕರ್ ಟ್ರೋಲ್!

ಇದಕ್ಕೆ ಉಬರ್ ಪ್ರತಿಕ್ರಿಯೆ ನೀಡಿದೆ. 'ನಿಮ್ಮ ಅನುಭವವು ಖಂಡಿತವಾಗಿ ನಮ್ಮ ಮಾನದಂಡಗಳಿಗೆ ಅನುಗುಣವಾಗಿಲ್ಲ. ನಾವು ಚಾಲಕನನ್ನು ಸಂಪರ್ಕಿಸುತ್ತಿದ್ದೇವೆ. ನಿಮಗೆ ಸಹಾಯ ಮಾಡಲು ಬಯಸುತ್ತೇವೆ' ಎಂದು ಹೇಳಿದರು.

ಕಾಶ್ಮೀರ್ ಫೈಲ್ಸ್ ಬಗ್ಗೆ ವ್ಯಂಗ್ಯವಾಡಿದ್ದ ನಟಿ

ಇತ್ತೀಚಿಗಷ್ಟೆ ಸ್ವರಾ ಭಾಸ್ಕರ್ ದಿ ಕಾಶ್ಮೀರ್ ಫೈಲ್ಸ್ ಸಿನಿಮಾ ಬಗ್ಗೆ ವ್ಯಂಗ್ಯವಾಡಿ ಟ್ರೋಲಿಗೆ ಗುರಿಯಾಗಿದ್ದರು. ಚಿತ್ರದ ಪರೋಕ್ಷವಾಗಿ ಟ್ವೀಟ್ ಮಾಡಿದ್ದ ಸ್ವರಾ ವಿರುದ್ಧ ನೆಟ್ಟಿಗರು ಆಕ್ರೋಶ ಹೊರಹಾಕಿದ್ದರು. ನಿರ್ದೇಶಕ ಅಗ್ನಿಹೋತ್ರಿಯನ್ನು ಕೆಣಕಿದ್ದ ಸ್ವರಾ ಅವರನ್ನು ನೆಟ್ಟಿರು ತರಾಟೆ ತೆಗೆದುಕೊಂಡಿದ್ದರು.

The Kashmir Files ಚಿತ್ರದ ಬಗ್ಗೆ ವ್ಯಂಗ್ಯವಾಡಿದ ಸ್ವರಾ ಭಾಸ್ಕರ್ ಹಿಗ್ಗಾಮುಗ್ಗಾ ಟ್ರೋಲ್

ಸ್ವರಾ ಮಾಡಿರುವ ಟ್ವೀಟ್ ದಿ ಕಾಶ್ಮೀರ್ ಫೈಲ್ಸ್(The Kashmir Files) ಸಿನಿಮಾದ ಬಗ್ಗೆಯೇ ಎನ್ನುವುದು ಮೊದಲು ನೆಟ್ಟಿಗರ ಗಮನಕ್ಕೆ ಬಂದಿರಲಿಲ್ಲ. ಆದರೆ ಗೊತ್ತಾಗುತ್ತಿದ್ದಂತೆ ಕೆಲವೇ ಕ್ಷಣದಲ್ಲಿ ಟ್ರೋಲಿಗರು ಸ್ವರಾ ವಿರುದ್ಧ ಮುಗಿಬಿದ್ದಿದ್ದರು. ಸ್ವರಾ ಪೋಸ್ಟ್ ಗೆ ಪ್ರತಿಕ್ರಿಯೆ ನೀಡಿರುವ ನೆಟ್ಟಿಗರು, 'ಎಲ್ಲವನ್ನು ನೀವು ತಪ್ಪಾಗಿ ಗ್ರಹಿಸುತ್ತೀರಿ' ಎಂದು ಹೇಳುತ್ತಿದ್ದಾರೆ. ಮತ್ತೋರ್ವ ಕಾಮೆಂಟ್ ಮಾಡಿ, 'ಅಭಿನಂದನೆಗಳು ಸ್ವರಾ, ಮತ್ತೊಮ್ಮೆ ನೀವು ಮತ್ತೊಬ್ಬರ ಯಶಸ್ಸಿನಲ್ಲಿ ಜನರ ಗಮನವನ್ನು ನಿಮ್ಮ ಕಡೆ ಸೆಳೆದಿದ್ದೀರಿ. ಆದರೆ ಈ ಬಾರಿ ಹೆಚ್ಚು ಪ್ರತಿಕ್ರಿಯೆ ಬಂದಿಲ್ಲ, ಯಾಕೆಂದರೆ ಜನರು ಉಪಯುಕ್ತ ಕೆಲಸಗಳಲ್ಲಿ ಬ್ಯುಸಿಯಾಗಿದ್ದಾರೆ' ಎಂದು ವ್ಯಂಗ್ಯವಾಗಿ ಪ್ರತಿಕ್ರಿಯಿಸಿದ್ದರು.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

'ರೀನಾ, ಕಿರಣ್ & ಲವರ್ ಗೌರಿ.. 'ನಾವೆಲ್ಲರೂ ಒಂದೇ ಫ್ಯಾಮಿಲಿ' ಎಂದ ಅಮೀರ್ ಖಾನ್; ಒಳಗೊಳಗೇ ನಕ್ಕ ನೆಟ್ಟಿಗರು!
ಆರ್ಯನ್ ಖಾನ್‌ಗೆ ಝೈದ್ ಖಾನ್ ಸಪೋರ್ಟ್; ಆದ್ರೂ ಪಬ್ಲಿಕ್‌ ಪ್ಲೇಸ್‌ನಲ್ಲಿ 'ಮಿಡ್ಲ್ ಫಿಂಗರ್' ಎತ್ತಿದ್ದು ತಪ್ಪು ಅಂತಿರೋ ನೆಟ್ಟಿಗರು!