ಕೋಟ್ಯಾಧಿಪತಿ ಅಪ್ಪನಿಂದ ಪೈಸೆಯೂ ತೆಗೆದುಕೊಳ್ಳದೇ, ಸಾಲ ಮಾಡಿ ಮನೆ ಕೊಂಡಿದ್ದ ಸೋನಾಕ್ಷಿ!

By Roopa Hegde  |  First Published Jun 25, 2024, 1:32 PM IST

ನಾವಂದುಕೊಂಡಂತೆ ಸೆಲೆಬ್ರಿಟಿಗಳ ಜೀವನ ಕೂಡ ಸುಲಭವೇನಲ್ಲ. ಅವರಲ್ಲೂ ಕೆಲವರ ಮೈಮೇಲೆ ಸಾಲದ ಹೊರೆ ಇರುತ್ತೆ. ಇದಕ್ಕೆ ಸೋನಾಕ್ಷಿ ಸಿನ್ಹಾ ಉತ್ತಮ ನಿದರ್ಶನ. ಸೋನಾಕ್ಷಿ ಅಪ್ಪ ಕೋಟ್ಯಾಧಿಪತಿಯಾದ್ರೂ ಅವರು ಸಾಲ ಮಾಡಿ ಮನೆ ತೆಗೆದ್ಕೊಂಡಿದ್ದಾರೆ.
 


ಬಾಲಿವುಡ್ ಶಾಟ್ ಗನ್ ಸ್ಟಾರ್ ಎಂದೇ ಶತ್ರುಘ್ನ ಸಿನ್ಹಾ (Bollywood Shotgun hatrughan Sinha) ಪ್ರಸಿದ್ಧಿ ಪಡೆದಿದ್ದಾರೆ. ನಟನೆ, ರಾಜಕೀಯದಲ್ಲಿ ಹೆಚ್ಚು ಪ್ರಸಿದ್ಧಿ ಪಡೆದಿರುವ ಶತ್ರುಘ್ನ ಸಿನ್ಹಾ ಕೋಟ್ಯಾಧಿಪತಿ. ಕೋಟಿಗಟ್ಟಲೆ ಆಸ್ತಿ ಅವರು ಹೊಂದಿದ್ದಾರೆ. ಶತ್ರುಘ್ನ ಸಿನ್ಹಾ ಬಳಿ ಬಂಗಲೆ, ಭೂಮಿ, ಆಸ್ತಿ ಸಾಕಷ್ಟಿದೆ. ಐಷಾರಾಮಿ ಕಾರಿನ ಸಂಖ್ಯೆ ಕೂಡ ಹೆಚ್ಚಿದೆ. ಇಷ್ಟೊಂದು ಶ್ರೀಮಂತ ತಂದೆಯನ್ನು ಹೊಂದಿದ್ರೂ ಅವರ ಮಗಳು ಹಾಗೂ ನಟಿ ಸೋನಾಕ್ಷಿ ಸಿನ್ಹಾ ಮೈಮೇಲೆ ಸಾಲವಿದೆ. ಹೌದು, ಮೊನ್ನೆಯಷ್ಟೇ ಜಹೀರ್ ಇಕ್ಬಾಲ್ ಮದುವೆ ಆಗಿರುವ ಸೋನಾಕ್ಷಿ ಸಿನ್ಹಾ ಮನೆ ನಿರ್ಮಾಣಕ್ಕೆ ಸಾಲ ಪಡೆದಿದ್ದಾರೆ ಅಂದ್ರೆ ನೀವು ನಂಬ್ಲೇಬೇಕು. 

ಸಾಲ (Loan) ಪಡೆದು ಐಷಾರಾಮಿ ಮನೆ ನಿರ್ಮಿಸಿದ ಸೋನಾಕ್ಷಿ ಸಿನ್ಹಾ (Sonakshi Sinha) : ನಾಲ್ಕು ವರ್ಷಗಳ ಹಿಂದೆ ಅಂದ್ರೆ 2020 ರಲ್ಲಿ ಸೋನಾಕ್ಷಿ ಸಿನ್ಹಾ ಅವರು ಕಷ್ಟಪಟ್ಟು ದುಡಿದ ಹಣದಿಂದ ಮುಂಬೈ (Mumbai) ನ ಸಮುದ್ರ ತೀರದಲ್ಲಿ ಸ್ವಂತ ಮನೆಯನ್ನು ಖರೀದಿಸಿದ್ದಾರೆ. ನಟಿಯ ಮನೆ 4 ಸಾವಿರ ಚದರ ಅಡಿ ವಿಸ್ತಾರವಾಗಿದೆ. ಮುಂಬೈನ ಐಷಾರಾಮಿ ಪ್ರದೇಶವಾದ ಬ್ರಾಂಡಾದಲ್ಲಿದೆ 81 ಓರಿಯಟ್‌  ಪ್ರೀಮಿಯಂ ವಸತಿ ಗೋಪುರದಲ್ಲಿ ಮನೆ ಇದೆ. ಸೋನಾಕ್ಷಿ ಸಿನ್ಹಾ ವ್ಯವಸ್ಥಿತವಾಗಿ ಈ ಮನೆಯನ್ನು ನಿರ್ಮಿಸಿಕೊಂಡಿದ್ದಾರೆ. ಮನೆಯಲ್ಲಿಯೇ ಕಚೇರಿ ಕೆಲಸ ಕೂಡ ನಡೆಯುತ್ತದೆ. ಮನೆಯಲ್ಲಿಯೇ ಸೋನಾಕ್ಷಿ ಸಿನ್ಹಾ  ಫೋಟೋಶೂಟ್ ಮತ್ತು ಇತರ ಕಚೇರಿಗೆ ಸಂಬಂಧಿಸಿದ ಕೆಲಸಗಳನ್ನು ಮಾಡುತ್ತಾರೆ. ಸೋನಾಕ್ಷಿ ಸಿನ್ಹಾ ಈ ಮನೆ ನಿರ್ಮಾಣಕ್ಕೆ ತಂದೆಯಿಂದ 11.58 ಕೋಟಿ ಹಾಗೂ ತಾಯಿಯಿಂದ 4.77 ಕೋಟಿ ಸಾಲ ಪಡೆದಿದ್ದಾರೆ. ಮನೆ ಸಿದ್ಧವಾದ್ಮೇಲೆ ಸೋನಾಕ್ಷಿ ಸಿನ್ಹಾ ಇದ್ರ ಬಗ್ಗೆ ಖುಷಿ ವ್ಯಕ್ತಪಡಿಸಿದ್ರು. ನನ್ನದೇ ಮನೆ ಹೊಂದುವ ಕನಸನ್ನು ನಾನು ಹೊಂದಿದ್ದೆ. ಅದು ಪೂರ್ಣಗೊಂಡಿದೆ ಎಂದಿದ್ದರು. 

Tap to resize

Latest Videos

NITA AMBANI : ಕಾಶಿ ಚಾಟ್ ಶಾಪ್ ನಲ್ಲಿ ನೀತಾ ಅಂಬಾನಿ…ಟೊಮಾಟೊ ಚಾಟ್ ತಿಂದು ಮದುವೆಗೆ ಆಹ್ವಾನ

ಶತ್ರುಘ್ನ ಸಿನ್ಹಾ ಬಳಿ ಇದೆ ಇಷ್ಟೊಂದು ಆಸ್ತಿ : ಚುನಾವಣೆ ಅಫಿಡವಿಟ್ ನಲ್ಲಿ ಸಿನ್ಹಾ ತಮ್ಮ ಆಸ್ತಿಯ ಮಾಹಿತಿಯನ್ನು ಹಂಚಿಕೊಂಡಿದ್ದಾರೆ. ಅದರ ಪ್ರಕಾರ ಅವರು ಒಟ್ಟು 210 ಕೋಟಿ ಆಸ್ತಿ ಮತ್ತು 17.60 ಕೋಟಿ ರೂಪಾಯಿ ಚರ ಆಸ್ತಿಯನ್ನು ಹೊಂದಿದ್ದಾರೆ. ಅವರ ಪತ್ನಿ 10.40 ಕೋಟಿ ಮೌಲ್ಯದ ಚರ ಆಸ್ತಿ ಹೊಂದಿದ್ದಾರೆ. ಎಲ್ಲ ಸೇರಿಸಿದ್ರೆ ಶತ್ರುಘ್ನ ಸಿನ್ಹಾ 122 ಕೋಟಿ ರೂಪಾಯಿ ಸಂಪತ್ತನ್ನು ಹೊಂದಿದ್ದಾರೆ. ಅವರ ಪತ್ನಿ ಪೂನಂ ಸಿನ್ಹಾ 155 ಕೋಟಿ ರೂಪಾಯಿ ಸಂಪತ್ತನ್ನು ಹೊಂದಿದ್ದಾರೆ. ಇಬ್ಬರ ಬಳಿಯೂ ಸುಮಾರು 65.54 ಕೋಟಿ ಮೌಲ್ಯದ ಕಾರುಗಳಿವೆ. ಶತ್ರುಘ್ನ ಸಿನ್ಹಾ ಮತ್ತು ಪೂನಂ ಸಿಂಗ್ ಕೃಷಿ ಭೂಮಿಯನ್ನು ಕೂಡ ಹೊಂದಿದ್ದಾರೆ. ಇಬ್ಬರು ನಾಲ್ಕು ಮನೆಗಳನ್ನು ಹೊಂದಿದ್ದಾರೆ. ಪಾಟ್ನಾ, ಮುಂಬೈ, ಮೆಹಾಲ್ರಿ, ಡೆಹ್ರಾಡೂನ್ ಮತ್ತು ದೆಹಲಿಯಲ್ಲಿ ಮನೆ ಇದೆ. ಅವರ ರಾಮಾಯಣ ಮನೆ 88 ಕೋಟಿ ಮೌಲ್ಯದ್ದಾಗಿದೆ. 

ಮಗಳ ಹೆಸರಿನಲ್ಲಿ ಆಸ್ತಿ ಮಾಡಿಲ್ಲ ಶತ್ರುಘ್ನ ಸಿನ್ಹಾ : ಅಚ್ಚರಿ ಅಂದ್ರೆ ಈ ಎಲ್ಲ ಆಸ್ತಿಯಲ್ಲಿ ಶತ್ರುಘ್ನ ಸಿನ್ಹಾ ಮತ್ತು ಪೂನಂ ಸಿನ್ಹಾ ಹಾಗೂ ಇಬ್ಬರು ಪುತ್ರರ ಹೆಸರಿದೆ. ಆದ್ರೆ ಯಾವ ಆಸ್ತಿಯಲ್ಲೂ ಸೋನಾಕ್ಷಿ ಸಿನ್ಹಾ ಹೆಸರು ಸೇರ್ಪಡೆಯಾಗಿಲ್ಲ. 

2000 ರೂ.ನಿಂದ ಬಿಸ್ನೆಸ್ ಶುರು ಮಾಡಿದ ಈ ವಿದ್ಯಾರ್ಥಿನಿ ಇಂದು 10 ಕೋಟಿ ಕಂಪನಿ ಒಡತಿ!

ಸೋನಾಕ್ಷಿ ಸಿನ್ಹಾ ಆಸ್ತಿ  : ಸೋನಾಕ್ಷಿ ಸಿನ್ಹಾ ಅವರ ನಿವ್ವಳ ಮೌಲ್ಯ ಸುಮಾರು 100 ಕೋಟಿ ರೂಪಾಯಿ ಎಂದು ಅಂದಾಜಿಸಲಾಗಿದೆ. ಈ ನಟಿ ಚಿತ್ರಕ್ಕೆ 2-3 ಕೋಟಿ ಚಾರ್ಜ್ ಮಾಡುತ್ತಾರೆ. ಸಿನಿಮಾ ಹೊರತಾಗಿ ಸೋನಾಕ್ಷಿ ಜಾಹೀರಾತುಗಳು ಮತ್ತು ಬ್ರಾಂಡ್ ಎಂಡಾರ್ಸ್‌ಮೆಂಟ್‌ಗಳಿಂದಲೂ ಸಾಕಷ್ಟು  ಹಣ ಸಂಪಾದನೆ ಮಾಡ್ತಿದ್ದಾರೆ. 

click me!