ಪತಿ ಜಹೀರ್ ಇಕ್ಬಾಲ್ ಜೊತೆ ಸೇರಿ ಗಣೇಶನಿಗೆ ಆರತಿ ಮಾಡಿದ ಸೋನಾಕ್ಷಿ: ನೆಟ್ಟಿಗರಿಂದ ಕಾಮೆಂಟ್‌ನಲ್ಲಿ ಕಿತ್ತಾಟ

By Anusha Kb  |  First Published Sep 8, 2024, 5:36 PM IST

ಬಾಲಿವುಡ್‌ ನಟಿ ಸೋನಾಕ್ಷಿ ಸಿನ್ಹಾ ಹಾಗೂ ನಟ ಜಹೀರ್ ಇಕ್ಬಾಲ್ ಬಾಲಿವುಡ್‌ನ ನವ ದಂಪತಿಗಳು. ಈ ಜೋಡಿ ಅಂತರ್‌ಧರ್ಮಿಯ ವಿವಾಹವಾಗಿದ್ದಕ್ಕೆ ಸಾಕಷ್ಟು ಟ್ರೋಲ್ ಆಗಿದ್ದರು. ಆದರೆ ಈಗ ನವದಂಪತಿ ಜೊತೆಯಾಗಿ ಗಣೇಶನಿಗೆ ಆರತಿ ಬೆಳಗಿದ್ದು, ಇದರ ವೀಡಿಯೋ ಈಗ ಸಖತ್ ವೈರಲ್ ಆಗಿದೆ.


ಬಾಲಿವುಡ್‌ ನಟಿ ಸೋನಾಕ್ಷಿ ಸಿನ್ಹಾ ಹಾಗೂ ನಟ ಜಹೀರ್ ಇಕ್ಬಾಲ್ ಬಾಲಿವುಡ್‌ನ ನವ ದಂಪತಿಗಳು. ಈ ಜೋಡಿ ಅಂತರ್‌ಧರ್ಮಿಯ ವಿವಾಹವಾಗಿದ್ದಕ್ಕೆ ಸಾಕಷ್ಟು ಟ್ರೋಲ್ ಆಗಿದ್ದರು. ಸಾಮಾಜಿಕ ಜಾಲತಾಣದಲ್ಲಿ ಈ ಜೋಡಿಯ ಫೋಟೋ ಕಂಡಲೆಲ್ಲ ಲವ್ ಜಿಹಾದ್ ಎಂಬ ಕಾಮೆಂಟೊಂದು ಇದ್ದೇ ಇರುತ್ತಿತ್ತು. ಆದರೆ ಈ ಜೋಡಿ ಮಾತ್ರ ಧರ್ಮದ ಎಲ್ಲೆ ಮೀರಿ ತಮ್ಮ ಪೋಷಕರನ್ನು ಒಪ್ಪಿಸಿ ಮದ್ವೆಯಾಗಿ ಖುಷಿ ಖುಷಿಯಿಂದ ಇದ್ದಾರೆ. ಈ ಬಾರಿಯ ಗಣೇಶ ಹಬ್ಬ ನವಜೋಡಿಗೆ ಮದುವೆಯ ನಂತರದ ಮೊದಲ ಹಬ್ಬವಾಗಿದ್ದು, ದಂಪತಿ ಜೊತೆಯಾಗಿ ನಿಂತು ಗಣೇಶನಿಗೆ ಆರತಿ ಬೆಳಗುತ್ತಿರುವ ವೀಡಿಯೋವೊಂದು ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ನೆಟ್ಟಿಗರು ಸಖತ್ ಕಾಮೆಂಟ್‌ಗಳನ್ನು ಮಾಡ್ತಿದ್ದಾರೆ.

ಬಾಲಿವುಡ್ ಹಿರಿಯ ನಟ ಹಾಗೂ ಸಂಸದ ಶತ್ರುಘ್ನ ಸಿನ್ಹಾ ಪುತ್ರಿಯಾಗಿರುವ ಸೋನಾಕ್ಷಿ ಸಿನ್ಹಾ ಕಳೆದ ಜೂನ್‌ 23 ರಂದು ತನ್ನ ಬಹುಕಾಲದ ಗೆಳೆಯ ಜಾಹೀರ್ ಇಕ್ಬಾಲ್ ಜೊತೆ ವಿಶೇಷ ವಿವಾಹ ಕಾಯ್ದೆಯಡಿ ಸರಳವಾಗಿ ಮದ್ವೆಯಾಗಿದ್ದರು. 2017ರಿಂದಲೂ ಜಹೀರ್ ಇಕ್ಬಾಲ್ ಹಾಗೂ ಸೋನಾಕ್ಷಿ ಪರಸ್ಪರ ಪ್ರೀತಿಸುತ್ತಿದ್ದು, ಆರು ವರ್ಷಗಳ ಡೇಟಿಂಗ್ ಬಳಿಕ ಮದುವೆಯಾಗಿದ್ದರು. ಆದರೆ ಇವರ ಪ್ರೇಮದ ಗಾಸಿಪ್ ಹಬ್ಬಿದಾಗಲೆಲ್ಲಾ,  ಹಿಂದೂ ಹಾಗೂ ಮುಸ್ಲಿಂ ಸಮುದಾಯದ ನೆಟ್ಟಿಗರು ಸೋಶಿಯಲ್ ಮೀಡಿಯಾದ ಕಾಮೆಂಟ್ ಸೆಕ್ಷನ್‌ನಲ್ಲಿ ಫೈಟ್‌ಗಿಳಿಯುತ್ತಿದ್ದರು. ಒಬ್ರು ಇದು ಲವ್ ಜಿಹಾದ್ ಎಂದರೆ ಇದು ನಿಜ ಪ್ರೀತಿ ಎಂದು ಮತ್ತೊಂದು ಸಮುದಾಯ ಸಮರ್ಥನೆ ನೀಡಿಕೊಳ್ಳುತ್ತಿದ್ದರು. 

Tap to resize

Latest Videos

ಮದುವೆಯಾದ ಮನೆಯನ್ನು 25 ಕೋಟಿಗೆ ಮಾರಾಟಕ್ಕಿಟ್ಟ ಸೋನಾಕ್ಷಿ; ಧರ್ಮ ಸಮಸ್ಯೆಯಲ್ಲಿ ಸಿಲುಕಿಕೊಂಡ್ರಾ ಎಂದ ನೆಟ್ಟಿಗರು!

ಆದರೆ ಈಗ ಇಬ್ಬರು ಜೊತೆಯಾಗಿ ಸಿದ್ಧಿವಿನಾಯಕ ಗಣೇಶನಿಗೆ ಆರತಿ ಬೆಳಗುತ್ತಿರುವ ವೀಡಿಯೋ ವೈರಲ್ ಆಗಿದ್ದು, ಇದಕ್ಕೆ ಬಂದಿರುವ ಕಾಮೆಂಟ್‌ಗಳೇ ಸ್ವಾರಸ್ಯಕರವಾಗಿದೆ. ಸೋನಾಕ್ಷಿ ಸಿನ್ಹಾ ಕಡುನೀಲಿ ಬಣ್ಣದ ಚೂಡಿಧಾರ್ ಧಿರಿಸ ತಲೆಗೆ ಶಾಲು ಹೊದ್ದು ಹಣೆಗೆ ಸಣ್ಣದೊಂದು ಬಿಂದಿ ಇಟ್ಟಿದ್ದರೆ ಇತ್ತ ಜಹೀರ್‌ ಇಕ್ಬಾಲ್ ತಿಳಿ ನೀಲಿ ಬಣ್ಣದ ಶರ್ಟ್ ಬಿಳಿ ಬಣ್ಣದ ಪ್ಯಾಂಟ್ ಧರಿಸಿ ಸಂಪ್ರದಾಯಿಕ ಲುಕ್‌ನಲ್ಲಿ ಗಣೇಶನಿಗೆ ಆರತಿ ಬೆಳಗಿದ್ದಾರೆ.

ಇದನ್ನು ನೋಡಿದ ನೆಟ್ಟಿಗರು ಎಂದಿನಂತೆ ಕಾಮೆಂಟ್‌ನಲ್ಲಿ ಕಿತ್ತಾಟ ಶುರು ಮಾಡಿದ್ದಾರೆ. ನಾನು ಸೋನಾಕ್ಷಿ ಮುಸ್ಲಿಂ ಆಗ್ತಾಳೆ ಅನ್ಕೊಂಡಿದ್ದೆ. ಆದ್ರೆ ಇಲ್ಲಿ ನೋಡಿದ್ರೆ ಎಲ್ಲಾ ಉಲ್ಟಾ ಆಗ್ತಿದ್ಯಲ್ಲಪ್ಪ. ಬಹುಶಃ ಶತ್ರುಘ್ನ ಸಿನ್ಹಾ ಅವರ ಭಯ ಜಹೀರ್ ಕಣ್ಣಲ್ಲಿ ಕಾಣಿಸ್ತಿದೆ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ಆಕೆ ಮುಸ್ಲಿಂ ಆಗಿದ್ದಾಳೆ. ಆದರೂ ಮುಂಬೈನಲ್ಲಿ ಬಾಲಿವುಡ್ ಮಂದಿ ಗಣೇಶ ಹಬ್ಬ ಮಾಡುವುದು ಕಡ್ಡಾಯವಾಗಿದೆ. ಹೀಗಾಗಿ ಆಕೆಯೂ ಗಣೇಶ ಹಬ್ಬ ಮಾಡುತ್ತಿದ್ದಾಳೆ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ಇಲ್ಲ ಇವರು ಮುಂದೆ ಈದ್ ಹಬ್ಬ ಕೂಡ ಜೊತೆಯಾಗಿ ಮಾಡಲಿದ್ದಾರೆ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ.  ಓರ್ವ ಮುಸ್ಲಿಂ ಆಗಿ ಅಲ್ಲಾನ ಹೊರತು ಬೇರೆ ಯಾರನ್ನೂ ಪೂಜೆ ಮಾಡುವ ಹಾಗಿಲ್ಲ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. 

ಜಹೀರ್‌ ಇಕ್ಬಾಲ್‌ನನ್ನು ಮದುವೆಯಾಗಲು ಅಪ್ಪನನ್ನು ಒಪ್ಪಿಸಿದ್ದು ಹೇಗೆ ಅನ್ನೋದನ್ನ ತಿಳಿಸಿದ ಸೋನಾಕ್ಷಿ ಸಿನ್ಹಾ!

ಒಟ್ಟಿನಲ್ಲಿ ಅವರಿಬ್ಬರೂ ಧರ್ಮ ಭೇದ ಮರೆತು ಖುಷಿಯಾಗಿ ಬದುಕ್ತಿದ್ರೆ ಕೆಲ್ಸ ಇಲ್ಲದ ಕೆಲವರು ಕಾಮೆಂಟ್ ಸೆಕ್ಷನ್‌ನಲ್ಲಿ ಫುಲ್ ಕಿತ್ತಾಡ್ತಿದ್ದಾರೆ. 

 

click me!