ಕ್ಯಾನ್ಸರ್​ ಬೆನ್ನಲ್ಲೇ ಹಿನಾ ಖಾನ್​ಗೆ ಇದೆಂಥ ಸಮಸ್ಯೆ? ತಿನ್ನಲೂ ಆಗ್ತಿಲ್ಲ ಎಂದು ನೋವು ತೋಡಿಕೊಂಡ ನಟಿ

By Suchethana D  |  First Published Sep 8, 2024, 5:10 PM IST

ಸ್ತನ ಕ್ಯಾನ್ಸರ್​ ಬೆನ್ನಲ್ಲೇ ನಟಿ ಹಿನಾ ಖಾನ್​ಗೆ ಇನ್ನೊಂದು ಸಮಸ್ಯೆ ಎದುರಾಗಿದೆ. ಕಿಮೋ ಥೆರಪಿಯ ಅಡ್ಡ ಪರಿಣಾಮದಿಂದ  ತಿನ್ನಲೂ ಆಗ್ತಿಲ್ಲ ಎಂದು ನೋವು ತೋಡಿಕೊಂಡಿದ್ದಾರೆ ನಟಿ.
 


ಹಿಂದಿ ದೂರದರ್ಶನ ಉದ್ಯಮದಲ್ಲಿ ಜನಪ್ರಿಯ ಹೆಸರಾಗಿರುವ ಹಿನಾ ಖಾನ್. ಬಿಗ್​ಬಾಸ್​ನಿಂದ ಫೇಮಸ್​ ಆಗಿರೋ ಇವರು ಕೆಲವು ಬಾಲಿವುಡ್​ ಚಿತ್ರಗಳಲ್ಲಿಯೂ ನಟಿಸಿದ್ದಾರೆ.  ಖತ್ರೋನ್ ಕೆ ಖಿಲಾಡಿ ಸೀಸನ್ 8, ನಾಗಿನ್ 5 ನಲ್ಲಿ ಕೂಡ ಕಾಣಿಸಿಕೊಂಡಿದ್ದರು. ಇದರಲ್ಲದೆ  ಹ್ಯಾಕ್, ಸ್ಮಾರ್ಟ್‌ಫೋನ್, ಲೈನ್‌ಗಳು, ವಿಶ್‌ಲಿಸ್ಟ್ ಮತ್ತು ಅನ್‌ಲಾಕ್  ಎಂಬ ಸಿನೆಮಾಗಳು ಮತ್ತು ಡ್ಯಾಮೇಜ್ಡ್ 2 ನ ಎರಡನೇ ಸೀಸನ್‌ ವೆಬ್-ಸರಣಿಯಲ್ಲಿ ಕೂಡ  ನಟಿಸಿದ್ದಾರೆ. ಪ್ರಖ್ಯಾತ ಸೀರಿಯಲ್​ ಯೇ ರಿಶ್ತಾ ಕ್ಯಾ ಕೆಹ್ಲಾತಾ ಹೈನಲ್ಲಿ ಅಕ್ಷರಾ ಪಾತ್ರದಲ್ಲಿ ಕಾಣಿಸಿಕೊಂಡ ನಂತರ ತುಂಬಾ ಪ್ರಸಿದ್ಧರಾದರು. ನಟಿ ಕಸೌಟಿ ಜಿಂದಗಿ ಕೇ 2 ನಲ್ಲಿ ಕೂಡ ನಟಿಸಿದ್ದರು. ಆದರೆ ಇದೀಗ ನಟಿಯ ಬಾಳಿನಲ್ಲಿ ಬಿರುಗಾಳಿ ಎದ್ದಿದೆ. ಇತ್ತೀಚೆಗಷ್ಟೇ ನಟಿ ತಮಗೆ ಮೂರನೇ ಹಂತದ ಸ್ತನ ಕ್ಯಾನ್ಸರ್ ಇರುವುದು ಪತ್ತೆಯಾಗಿದೆ ಮತ್ತು ಅದಕ್ಕೆ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಬಹಿರಂಗ ಪಡಿಸಿದ್ದರು.

ಕ್ಯಾನ್ಸರ್​ ಜೊತೆ ಹೋರಾಟ ಮಾಡುತ್ತಿದ್ದು, ಈ ಕಾಯಿಲೆಯಿಂದ ಹೊರಬರಲು ನಿರ್ಧರಿಸಿದ್ದೇನೆ ಎಂದು  36 ವರ್ಷದ ಹಿನಾ ಖಾನ್​ ಹೇಳಿದ್ದರು. ನನಗೆ ಮೂರನೇ ಹಂತದ ಸ್ತನ ಕ್ಯಾನ್ಸರ್ ಇರುವುದು ಪತ್ತೆಯಾಗಿದೆ. ಇದೊಂದು ಸವಾಲಿನ ರೋಗದ ವಿರುದ್ಧ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದೇನೆ ಎಂದು ಎಲ್ಲರಿಗೂ ಭರವಸೆ ನೀಡಲು ನಾನು ಬಯಸುತ್ತೇನೆ. ನಾನು ಬಲಶಾಲಿ, ದೃಢನಿಶ್ಚಯ ಹೊಂದಿದ್ದೇನೆ. ಈ ರೋಗವನ್ನು ಜಯಿಸಲು ನಿಜವಾಗಿಯೂ ಬದ್ಧನಾಗಿದ್ದೇನೆ. ನನ್ನ ಚಿಕಿತ್ಸೆಯು ಈಗಾಗಲೇ ಪ್ರಾರಂಭವಾಗಿದೆ ಮತ್ತು ಇದರಿಂದ ಇನ್ನಷ್ಟು ಶಕ್ತಿಶಾಲಿಯಾಗಿ ಹೊರಬರಲು ಅಗತ್ಯವಿರುವ ಎಲ್ಲವನ್ನೂ ಮಾಡಲು ನಾನು ಸಿದ್ಧನಿದ್ದೇನೆ ಎಂದು ಬರೆದುಕೊಂಡಿದ್ದರು. ಇದು ಪಬ್ಲಿಸಿಟಿಯ ಸ್ಟಂಟ್​ ಎಂದವರೂ ಇದ್ದಾರೆ. ಆದರೆ ಈಕೆಯ ನೋವಿಗೆ ಹಲವರು ಸ್ಪಂದಿಸಿದ್ದಾರೆ.  ಆಕೆಯ ಧೈರ್ಯದ ಮಾತುಗಳಿಗೆ ಅನೇಕ ಮಂದಿ ಪ್ರಶಂಸೆ ವ್ಯಕ್ತಪಡಿಸಿದ್ದಾರೆ. 

Tap to resize

Latest Videos

ದೀಪಿಕಾ ವಿಷ್ಯದಲ್ಲಿ ಸುಳ್ಳಾಯ್ತು ಸೆಲೆಬ್ರಿಟಿ ಜ್ಯೋತಿಷಿ ಭವಿಷ್ಯ! ರಾಜಯೋಗದ ಕಥೆಯೇನು ಕೇಳ್ತಿರೋ ಫ್ಯಾನ್ಸ್​...

  ಆದರೆ ಇದೀಗ ಕ್ಯಾನ್ಸರ್​ ನಡುವೆಯೇ ನಟಿಗೆ ಇನ್ನೊಂದು ಭಯಾನಕ ಸಮಸ್ಯೆ ಎದುರಾಗಿದೆ. ಎಲ್ಲರಿಗೂ ತಿಳಿದಿರುವಂತೆ ಕ್ಯಾನ್ಸರ್​ಗೆ ಅತ್ಯಂತ ಭಯಾನಕ ಎನ್ನುವ ಕಿಮೋ ಥೆರಪಿ ಮಾಡಲಾಗುತ್ತದೆ. ಆದರೆ ಹಲವು ಸಂದರ್ಭಗಳಲ್ಲಿ ಇದು ಅಡ್ಡ ಪರಿಣಾಮ ಬೀರುತ್ತದೆ. ಅದೇ ರೀತಿ ಹಿನಾ ಖಾನ್​ ಅವರಿಗೂ ಆಗಿದೆ. ಈ ಕುರಿತು ಇನ್​ಸ್ಟಾಗ್ರಾಮ್ ಸ್ಟೋರಿಯಲ್ಲಿ ಫೋಟೋವನ್ನು ಪೋಸ್ಟ್ ಮಾಡಿಕೊಂಡಿರುವ ನಟಿ,  ಕಿಮೋಥೆರಪಿಯ ಅಡ್ಡ ಪರಿಣಾಮಗಳಿಂದ  ಮ್ಯೂಕೋಸಿಟಿಸ್‌ನಿಂದ ಬಳಲುತ್ತಿರುವುದಾಗಿ ಹೇಳಿದ್ದಾರೆ!  ನಟಿ ತಮ್ಮ ಚಿಕಿತ್ಸೆ ಮತ್ತು ಆರೋಗ್ಯದ ಬಗ್ಗೆ ಅಭಿಮಾನಿಗಳಿಗೆ ಅಪ್​ಡೇಟ್ ನೀಡುತ್ತಿದ್ದಾರೆ. ಈಗ ಮ್ಯೂಕೋಸಿಟಿಸ್‌ ಬಗ್ಗೆ ಹೇಳಿಕೊಂಡಿದ್ದು, ಅಭಿಮಾನಿಗಳಲ್ಲಿ ಆತಂಕ ಮನೆಮಾಡಿದೆ.
 
ತಮ್ಮ ಪೋಸ್ಟ್​ನಲ್ಲಿ ನಟಿ, ‘ಒಂದು ಕಡೆ ಕೀಮೋಥೆರಪಿ ಮತ್ತು ಇನ್ನೊಂದು ಮ್ಯೂಕೋಸಿಟಿಸ್. ವೈದ್ಯರು ಮ್ಯೂಕೋಸಿಟಿಸ್‌ಗೆ ಚಿಕಿತ್ಸೆಯಾಗಿ ಕೆಲವು ಸಲಹೆಗಳನ್ನು ನೀಡಿದ್ದಾರೆ. ಆದರೆ ನಿಮ್ಮಲ್ಲಿ ಯಾರಾದರೂ ಈ ರೋಗವನ್ನು ಎದುರಿಸಿದ್ದರೆ, ಔಷಧವನ್ನು ದಯವಿಟ್ಟು ಹೇಳಿ. ಇದು ತುಂಬಾ ನೋವಿನ ಪ್ರಯಾಣ. ಏನನ್ನೂ ತಿನ್ನಲು ಸಾಧ್ಯವಾಗುತ್ತಿಲ್ಲ ಎಂದು ನೋವು ತೋಡಿಕೊಂಡಿದ್ದಾರೆ ನಟಿ. ಅಭಿಮಾನಿಗಳು ಹಲವಾರು ರೀತಿಯಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ. ಬೇಗ ಗುಣಮುಖರಾಗಿ ಬನ್ನಿ ಎನ್ನುವುದು ಬಿಟ್ಟರೆ ಏನನ್ನೂ ಹೇಳಲು ಆಗುತ್ತಿಲ್ಲ ಎಂದು ಹಲವರು ಭಾವುಕರಾಗಿ ಪ್ರತಿಕ್ರಿಯೆ ನೀಡಿದ್ದಾರೆ. 

ಶಮಿಕಾ ಭೈರಾದೇವಿಗೆ ಕೊಟ್ಟ ಆಡಿಷನ್ ನೋಡಿ ಅತ್ತುಬಿಟ್ಟೆ... ಸಿನಿಮಾಕ್ಕೆ ಪುತ್ರಿ ಎಂಟ್ರಿಗೆ ರಾಧಿಕಾ ಹೇಳಿದ್ದೇನು?
  
 

click me!