ಕೆನ್ನೆಗೆ ಮುತ್ತಿಕ್ಕಿಸಿಕೊಂಡ 15 ವರ್ಷ ಹಳೆ ಕೇಸಲ್ಲಿ ಶಿಲ್ಪಾಶೆಟ್ಟಿಗೆ ಕ್ಲೀನ್‌ಚಿಟ್‌

By Kannadaprabha News  |  First Published Jan 26, 2022, 12:58 AM IST

ಸಾರ್ವಜನಿಕ ಸಭೆಯಲ್ಲಿ ಮುತ್ತಿಟ್ಟಿದ್ದ ರಿಚರ್ಡ್ ಗೇರ್
ರಿಚರ್ಡ್ ಗೇರ್ ಹಾಲಿವುಡ್ ನಟ
ದೊಡ್ಡ ಮಟ್ಟದ ವಿರೋಧಕ್ಕೆ ಕಾರಣವಾಗಿದ್ದ ಘಟನೆ
 


ಮುಂಬೈ: 15 ವರ್ಷ ಹಿಂದಿನ ಅಶ್ಲೀಲತಾ ಪ್ರಕರಣದಲ್ಲಿ (obscenity case) ನಟಿ ಶಿಲ್ಪಾಶೆಟ್ಟಿಯನ್ನು(Actress Shilpa Shetty ) ಕೃತ್ಯದ ಬಲಿಪಶು ಎಂದಿರುವ ಸ್ಥಳೀಯ ನ್ಯಾಯಾಲಯ ಅವರಿಗೆ ಕ್ಲೀನ್‌ಚಿಟ್‌  ನೀಡಿದೆ. 2007ರಲ್ಲಿ ನಡೆದ ಸಾರ್ವಜನಿಕ ಸಮಾರಂಭವೊಂದರಲ್ಲಿ ಹಾಲಿವುಡ್‌ ನಟ ರಿಚರ್ಡ್‌ ಗೇರ್‌ (Hollywood star Richard Gere), ನಟಿ ಶಿಲ್ಪಾ ಶೆಟ್ಟಿಯನ್ನು ಮುತ್ತಿಟ್ಟಿದ್ದರು. ಏಕಾಏಕಿ ನಡೆದ ಈ ಘಟನೆಯಿಂದ ಶಿಲ್ಪಾ ತಬ್ಬಿಬ್ಬಾಗಿದ್ದರೂ, ತಕ್ಷಣಕ್ಕೆ ಯಾವುದೇ ಪ್ರತಿರೋಧ ತೋರಿರಲಿಲ್ಲ. ಅದರ ಘಟನೆ ದೇಶದ ಹಲವು ನಗರಗಳಲ್ಲಿ ಭಾರೀ ವಿರೋಧ ವ್ಯಕ್ತವಾಗಿತ್ತು. ಜೊತೆಗೆ ಶಿಲ್ಪಾ ವಿರುದ್ಧ ಅಶ್ಲೀಲತೆ ಪ್ರಕರಣ ದಾಖಲಿಸಲಾಗಿತ್ತು.

ಹಾಲಿವುಡ್ ತಾರೆ ರಿಚರ್ಡ್ ಗೆರ್ ಸಾರ್ವಜನಿಕವಾಗಿ ನೀಡಿದ್ದ ಚುಂಬನದಲ್ಲಿ ಶಿಲ್ಪಾಶೆಟ್ಟಿ ಕೇವಲ ಬಲಿಪಶು ಮಾತ್ರ ಎಂದು ಕೋರ್ಟ್ ಹೇಳಿದೆ. 2007 ರಲ್ಲಿ ರಾಜಸ್ಥಾನದಲ್ಲಿ (Rajasthan) ನಡೆದ ಏಡ್ಸ್ ಜಾಗೃತಿ ಕಾರ್ಯಕ್ರಮದಲ್ಲಿ ಶಿಲ್ಪಾ ಶೆಟ್ಟಿ ಮತ್ತು ರಿಚರ್ಡ್ ಗೇರ್ ವೇದಿಕೆಯಲ್ಲಿದ್ದರು. ಈ ವೇಳೆ ಪದೇ ಪದೇ ಶಿಲ್ಪಾ ಶೆಟ್ಟಿ ಅವರನ್ನು ತಬ್ಬಿಕೊಳ್ಳುತ್ತಿದ್ದ ರಿಚರ್ಡ್ ಗೇರ್, ಒಮ್ಮೆ ಚುಂಬನವನ್ನೂ ಮಾಡಿದರು. ದೇಶಾದ್ಯಂತ ಈ ವಿಚಾರವಾಗಿ ಸಾಕಷ್ಟು ದೂರುಗಳು ಹಾಗೂ ಪ್ರತಿಭಟನೆಗಳು ನಡೆದವು. ರಿಚರ್ಡ್ ಗೇರ್ ಮುತ್ತು ಕೊಡಲು ಬಂದಾಗ ಶಿಲ್ಪಾ ಶೆಟ್ಟಿ ಅವರನ್ನು ತಡೆಯದೇ ಇರುವುದು ಕೂಡ ಅಪರಾಧವಾಗಿತ್ತು ಎಂದು ದೂರಿನಲ್ಲಿ ತಿಳಿಸಲಾಗಿತ್ತು. ಸುಪ್ರೀಂ ಕೋರ್ಟ್ ವರೆಗೂ ಈ ಪ್ರಕರಣ ಹೋಗಿತ್ತಾದರೂ, ದೇಶದ ಉನ್ನತ ಕೋರ್ಟ್ ಇದರ ವಿಚಾರಣೆಯನ್ನು ರಾಜಸ್ಥಾನ ಹೈಕೋರ್ಟ್ ನಿಂದ ಮುಂಬೈ ಕೋರ್ಟ್ ಗೆ ವರ್ಗಾವಣೆ ಮಾಡಿತ್ತು.

ಮುಂಬೈ ನ್ಯಾಯಾಲಯವು ಜನವರಿ 18 ರಂದು ಶಿಲ್ಪಾ ಶೆಟ್ಟಿಯನ್ನು ಪ್ರಕರಣದಿಂದ ಸಂಪೂರ್ಣವಾಗಿ ನಿರಪರಾಧಿ ಎಂದು ಹೇಳಿದ್ದಾಗಿ ಪಿಟಿಐ ವರದಿ ಮಾಡಿದೆ. "ಆರೋಪಿ ಶಿಲ್ಪಾ ಶೆಟ್ಟಿ ಆರೋಪಿ ನಂ. 1 (ರಿಚರ್ಡ್ ಗೇರ್) ಆಪಾದಿತ ಕೃತ್ಯಕ್ಕೆ ಬಲಿಯಾಗಿದ್ದಾಳೆ ಎಂದು ತೋರುತ್ತದೆ. ದೂರಿನಲ್ಲಿ ಆಕೆಯ ವಿರುದ್ಧ ಮಾಡಿರುವ ಆರೋಪಗಳಿಗೆ ಯಾವುದೇ ಸಾಕ್ಷಿಯನ್ನು ನೀಡಲಾಗಿಲ್ಲ" ಎಂದು ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ಕೇತ್ಕಿ ಚವಾಣ್ (metropolitan magistrate Ketki Chavan) ಹೇಳಿದ್ದಾರೆ. ಕೇವಲ ಕಲ್ಪನೆಗಳ ಮೂಲಕ ಇವರು ತಪ್ಪು ಮಾಡಿದ್ದಾರೆ ಎಂದು ಹೇಳಲು ಸಾಧ್ಯವಾಗುವಿದಲ್ಲ ಎಂದು ನ್ಯಾಯಾಲಯ ಹೇಳಿದ್ದು ಅದರ ಆದೇಶ ಪ್ರತಿ ಸೋಮವಾರ ಲಭ್ಯವಾಗಿದೆ. 

ವಿವಾದಾತ್ಮಕ ಚುಂಬನದ ಬಳಿಕ ದೊಡ್ಡ ಮಟ್ಟದ ವಿರೋಧಗಳು ವ್ಯಕ್ತವಾಗಿದ್ದು ಮಾತ್ರವಲ್ಲದೆ ರಿಚರ್ಡ್ ಗೇರ್ ಅವರ ಪ್ರತಿಕೃತಿಗಳನ್ನು ಸುಟ್ಟುಹಾಕಲಾಗಿತ್ತು. ಕೊನೆಗೆ ಗೇರ್ ತಮ್ಮ ತಪ್ಪಿಗಾಗಿ ಕ್ಷಮೆಯನ್ನೂ ಯಾಚಿಸಿದ್ದರು. ಇದಕ್ಕೆ ಪ್ರತಿಕ್ರಿಯೆ ನೀಡಿದ್ದ ಶಿಲ್ಪಾ ಶೆಟ್ಟಿ, ಈ ಘಟನೆಗೆ ದೇಶದ ಜನರು ನೀಡುತ್ತಿರುವ ಪ್ರತಿಕ್ರಿಯೆ ಅತಿಯಾದದ್ದು ಎಂದು ಹೇಳಿದ್ದರು.
46 ವರ್ಷದ ನಟಿ ನ್ಯಾಯಾಲಯದ ಆದೇಶದ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲವಾದರೂ,  ಅವರು ಇಂದು ಸಂತೋಷದ ಕಲ್ಪನೆಯ ಕುರಿತು ಸೈಕಲಾಜಿಕಲ್ ಪೋಸ್ಟ್ ಅನ್ನು ಇನ್ಸ್ ಟಾಗ್ರಾಮ್ ನಲ್ಲಿ ಹಂಚಿಕೊಂಡಿದ್ದಾರೆ.
 

Tap to resize

Latest Videos

undefined

 

 

ರಿಚರ್ಡ್ ಗೇರ್ ಅವರ ಕಿಸ್‌ನ ಹೊರತಾಗಿ ಹಲವಾರು ವಿವಾದಗಳನ್ನು ಶಿಲ್ಪಾ ಶೆಟ್ಟಿ ಎದುರಿಸಿದ್ದಾರೆ. ಇಂಗ್ಲೆಂಡ್ ನ ರಿಯಾಲಿಟಿ ಶೋ ಬಿಗ್ ಬ್ರದರ್ ನಲ್ಲಿ (Celebrity Big Brother ) ಸಹ ಸ್ಪರ್ಧಿಗಳಿಂದ ವರ್ಣಬೇಧದ ಕುರಿತಾಗಿ ಆಗಿದ್ದಂಥ ವಿವಾದ ಪ್ರಮುಖವಾದುದಾಗಿದೆ. ಕಳೆದ ವರ್ಷ ಅಶ್ಲೀಲ ವಿಡಿಯೋಗಳ ಪ್ರಕರಣದಲ್ಲಿ ಶಿಲ್ಪಾ ಶೆಟ್ಟಿಯ ಪತಿ ರಾಜ್ ಕುಂದ್ರಾ ಕೆಲ ದಿನಗಳ ಕಾಲ ಜೈಲು ಸೇರಿದ್ದರು.

Shilpa Shetty Hot Look: ಪಿಂಕ್‌ ಡ್ರೆಸ್‌ನಲ್ಲಿ ಶಿಲ್ಪಾ ಶೆಟ್ಟಿಯ ಹಾಟ್‌ ಲುಕ್‌!
1993ರಲ್ಲಿ ಶಾರುಖ್ ಖಾನ್ ಹಾಗೂ ಕಾಜೋಲ್ ಮುಖ್ಯ ಭೂಮಿಕೆಯಲ್ಲಿದ್ದ ಬಾಜಿಗರ್ ಚಿತ್ರದ ಮೂಲಕ ಬಾಲಿವುಡ್ ಗೆ ಪಾದಾರ್ಪಣೆ ಮಾಡಿದ್ದ ಶಿಲ್ಪಾ ಶೆಟ್ಟಿ, ಧಡ್ಕನ್, ಫಿರ್ ಮಿಲೇಂಗೆ, ಲೈಫ್ ಇನ್ ಎ ಮೆಟ್ರೋ ಸೇರಿದಂತೆ ಪ್ರಮುಖ ಚಿತ್ರಗಳಲ್ಲಿ ನಟಿಸಿದ್ದಾರೆ. ಕನ್ನಡದ ಪ್ರೀತ್ಸೋದ್ ತಪ್ಪಾ, ಆಟೋಶಂಕರ್ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಅವರು ಇತ್ತೀಚೆಗೆ ಸೂಪರ್ ಡ್ಯಾನ್ಸರ್ ಮತ್ತು ಇಂಡಿಯಾಸ್ ಗಾಟ್ ಟ್ಯಾಲೆಂಟ್‌ನಂತಹ ಟ್ಯಾಲೆಂಟ್ ಶೋಗಳಲ್ಲಿ ತೀರ್ಪುಗಾರರಾಗಿದ್ದಾರೆ.

click me!