ಆರ್‌ಜೆಗಳು ಕೇಳಿದ ಖಡಕ್ ಪ್ರಶ್ನೆಗೆ ಉತ್ತರಿಸಿದ ರಾಖಿ. ಮದುವೆ ಪ್ಲ್ಯಾನಿಂಗ್ ಬಗ್ಗೆ ಮೊದಲ ಬಾರಿ ರಿವೀಲ್ ಮಾಡಿದ ಸುಂದರಿ.....
Bigg boss is not complete without Rakshi Sawant ಹೀಗಂಥ ನಾವಲ್ಲ, ವೀಕ್ಷಕರು ಪ್ರತಿ ಸೀಸನ್ ಆರಂಭದದಿಂದಲೂ ಹೇಳುತ್ತಿದ್ದರು. ಜಗಳು, ಲವ್, ರೊಮ್ಯಾನ್ಸ್ ಮತ್ತು ಸ್ನೇಹ ಇಷ್ಟೇ ಬಿಗ್ ಬಾಸ್ ಅಂದು ಕೊಂಡಿದ್ದ ಜನರಿಗೆ ಫನ್ ಎಲಿಮೆಂಟ್ ತಂದು ಕೊಟ್ಟಿದ್ದು ರಾಖಿ. ಮನೆಯಲ್ಲಿರುವ ವಸ್ತುಗಳಿಗೆ ಜೀವ ಇದೆ. ಅವು ನಮ್ಮ ಬಗ್ಗೆ ಏನಂದುಕೊಳ್ಳುತ್ತಾರೆಂದು ತಮಾಷೆಯಾಗಿ ಮಾತನಾಡಲು ಶುರು ಮಾಡಿದ್ದು ರಾಖಿ. ಅಬ್ಬಾ! ವಸ್ತು ಬಿಡಿ ಸ್ವಿಮ್ಮಿಂಗ್ ಪೂಲ್‌ನಲ್ಲಿರುವ ನೀರಿನ ಜೊತೆಗೂ ರಾಖಿ ಮಾತನಾಡಿದ್ದರು.
ಕಲ್ಲನ್ನೂ ಮಾತನಾಡಿಸುವ ಸಾಮರ್ಥ್ಯ ಹೊಂದಿರುವ ರಾಖಿ ವೈಯಕ್ತಿಕ ಜೀವನದಲ್ಲಿ ಮಾತ್ರ ಏನೂ ಸರಿ ಹೋಗುತ್ತಿಲ್ಲ. ಅಥವಾ ಎಲ್ಲವೂ ಸರಿ ಇಲ್ಲ. ಮದುವೆ ಆಗಿದೆ, ಆಗಿಲ್ಲ. ಹೀಗೆ, ಹಾಗೆ ಎಂದು ಕಾಮೆಂಟ್ ಮಾಡುತ್ತಿದ್ದವರಿಗೆ ಮದುವೆ ಬಗ್ಗೆ ಸಣ್ಣ ಸುಳಿವು ನೀಡಬೇಕು ಎಂದು ಬಿಗ್ ಬಾಸ್ ಸೀಸನ್ 14ರಲ್ಲಿ ಹಂಚಿಕೊಂಡಿದ್ದರು. ನಾನು ಮದುವೆ ಆಗಿದ್ದೀನಿ, ಅಂದರೂ ಯಾರೂ ರಾಖಿ ಮಾತು ಕೇಳಲು ರೆಡಿಯಾಗಿರಲಿಲ್ಲ. ಸೀಸನ್ 15ರಲ್ಲಿ ಪತಿ ಜೊತೆಗೆಎಂಟ್ರಿ ಕೊಟ್ಟಿರುವ ರಾಖಿಗೆ ಆರ್‌ಜೆ ಪ್ರಶ್ನೆ ಮಾಡಿದ್ದಾರೆ.
ಸೀಸನ್ 15 ಶೀಘ್ರದಲ್ಲಿ ಅಂತ್ಯವಾಗಲಿದೆ. ಹೀಗಾಗಿ ಕೊಂಚ ಮಸಾಲ ಸೇರಿಸಲು ಇಬ್ಬರೂ ಆರ್‌ಜೆಗಳು ಎಂಟ್ರಿ ಕೊಟ್ಟು ಪ್ರತಿಯೊಬ್ಬ ಸ್ಪರ್ಧಿಯೂ ಜೀವನದ ಬಗ್ಗೆ ಪ್ರಶ್ನೆ ಮಾಡಿದ್ದಾರೆ. ರಿತೇಷ್ ಅವರೇ ನನ್ನ ಗಂಡ ಎಂದು ಪರಿಚಯ ಮಾಡಿಸಲು ಯಾಕೆ ಬಿಗ್ ಬಾಸ್ ಆಯ್ಕೆ ಮಾಡಿಕೊಂಡಿದ್ದು, ಹಾಗೇ ಈ ಮದುವೆ ಲೀಗಲ್ ಆ? ಎಂದು ಆರ್‌ಜೆ ಪ್ರಶ್ನೆ ಮಾಡಿದ್ದಾರೆ.
Bigg Boss 15: ಶೋನಿಂದ ಹೊರ ಬಿದ್ದ ಪತಿ ರಿತೇಶ್ ಸಿಂಗ್ , ರಾಖಿ ಸಾವಂತ್‌ಗೆ ಭಯ ಸ್ಟಾರ್ಟ್!'ನಾನು ಬಿಗ್ ಬಾಸ್ 14ರಲ್ಲಿ ಮದುವೆ ಆಗಿದ್ದೀನಿ ಎಂದು ಹೇಳಿದ್ದರೂ, ಯಾjt ನನ್ನನ್ನು ನಂಬಲು ರೆಡಿ ಇರಲಿಲ್ಲ. ಆ ಸಮಯದಲ್ಲಿ ನನ್ನ ಗಂಡ, ಅಮ್ಮ ಮತ್ತು ನಾನು ಒಟ್ಟಿಗೇ ಅತ್ತಿದ್ದೀವಿ. ಆನಂತರ ನನ್ನ ಗಂಡ ಭಾರತಕ್ಕೆ ಬರುವುದಾಗಿಯೂ ಹೇಳಿದ್ದರು. ಆಗ ನಾವು ಮುಂಬೈನಲ್ಲಿ ಮದುವೆ ರಿಸೆಪ್ಶನ್ ಹಮ್ಮಿಕೊಳ್ಳುವುದಕ್ಕೆ ಪ್ಲ್ಯಾನ್ ಮಾಡಿಕೊಂಡೆವು. ಅದೇ ಸಮಯಕ್ಕೆ ನನಗೆ ಬಿಗ್ ಬಾಸ್ ಆಫರ್ ಸಿಕ್ಕಿತ್ತು. ನನ್ನ ಜೀವನ ನಡೆಸಲು ಇದೇ ನನಗೆ bread and butter. ಹೀಗಾಗಿ ನಾನು ಬಿಗ್ ಬಾಸ್‌ನಲ್ಲಿ ಮದುವೆ ವಿಚಾರ ಮತ್ತು ಗಂಡನನ್ನು ಪರಿಚಯ ಮಾಡಲು ನಿರ್ಧರಿಸಿದೆ. ಇಡೀ ವಿಶ್ವವೇ ನಮ್ಮನ್ನು ನೋಡಬಹುದು ಎಂಬ ಕಾರಣದಿಂದ,' ಎಂದು ರಾಖಿ ಉತ್ತರಿಸಿದ್ದಾರೆ.
'ಮನೆಯಲ್ಲಿದ್ದ ಸ್ಪರ್ಧಿಗಳೇ ನೀವು ಮದುವೆ ಆಗಿಲ್ಲ ಎಂದು ಹೇಳುತ್ತಿದ್ದಾರೆ. ನೀವು ಫೇಕ್ ಮಾಡುತ್ತಿದ್ದೀರಾ ಎಂದು ಹೇಳುತ್ತಿದ್ದಾರೆ ಯಾಕೆ?' ಎಂದು ಆರ್‌ಜೆ ಪ್ರಶ್ನೆ ಮಾಡಿದ್ದಾರೆ.
Big Boss 15- ಕ್ಯಾಮೆರಾ ಮುಂದೆಯೇ ಪತಿ ರಿತೇಶ್ ಜೊತೆ ರಾಖಿ ಸಾವಂತ್ ರೊಮ್ಯಾನ್ಸ್!'ಜನರು ಈ ರೀತಿ ತಪ್ಪಾಗಿ ತಿಳಿದುಕೊಳ್ಳುತ್ತಿರುವುದಕ್ಕೆ ಕಾರಣವಿದೆ. ನಾನು ಎಲ್ಲರಂತೆ ಸರಿಯಾಗಿ ಮೆಹಂದಿ, ಭಾರತ್ ಮತ್ತು ಸಂಗೀತ್ ಅಂತ ಮಾಡಿಕೊಂಡಿಲ್ಲ. ಯಾರೂ ನನಗೆ ಹುಡುಗನನ್ನು ಹುಡುಕಲಿಲ್ಲ. ನಾನು ಆಯ್ಕೆ ಮಾಡಿಕೊಂಡೆ. ಒಂದು ಹೋಟೆಲ್‌ನ ರೂಮ್‌ನಲ್ಲಿ ಬಾಗಿಲು ಹಾಕಿಕೊಂಡು, ಮದುವೆ ಆಗಿದ್ದು. ಆತನ ಬ್ಯಾಂಕ್ ಬ್ಯಾಲೆನ್ಸ್ ಮತ್ತು ಪಾರ್ಸ್‌ಬುಕ್ ನೋಡಿ ನಾನು ಯಸ್ ಅಂದಿದ್ದು,' ಎಂದು ರಾಖಿ ಹೇಳಿದ್ದಾರೆ.
'ಮೊದಲ ವಾರ ನನ್ನ ತಾಯಿ ಹೇಳಿದ್ದರು, ರಿತೇಷ್ ಹೊರಗಡೆ ಕಾಯುತ್ತಿದ್ದಾರೆ ಎಂದು. ನಾನು ಅಗ ಹೇಳಿ ನನಗೆ ನೀವು ಮ್ಯಾರೇಜ್ ಸರ್ಟಿಫಿಕೇಟ್ ಕೊಡುವವರೆಗೂ ನಿಮ್ಮ ಜೊತೆ ಬದುಕುವುದಿಲ್ಲ ಎಂದು. ರಿತೇಷ್ ನೋಡಿದರೆ ಬೇಸರವಾಗುತ್ತದೆ. ನಾನು ಒಳ್ಳೆಯ ವ್ಯಕ್ತಿ ಹಾಗೂ ನಿಮ್ಮ ಪ್ರೀತಿಗೆ ಅರ್ಹನು ಎಂದು ಅನಿಸಿದರೆ ಮಾತ್ರ ಈ ಸಂಬಂಧ ಮುಂದುವರೆಸೋಣ ಎಂದರು. ನನಗೆ ಸಿಂಪತಿ ಹುಟ್ಟಲಿಲ್ಲ. ಹೆಂಡತಿಯಾಗಿ ನನಗೆ ನನ್ನ ಹಕ್ಕು ಬೇಕು. ಹೀಗಾಗಿ ನೀವು ಸರ್ಟಿಫಿಕೇಟ್ ಕೊಡಿ. ಆಗ ನನ್ನ ಸಂಪೂರ್ಣ ಜೀವನ ನಿಮ್ಮ ಜೊತೆ ಕಳೆಯುವುದಕ್ಕೆ ಒಪ್ಪಿಕೊಳ್ಳುವೆ. ಆದರೆ ಅವರು ಇನ್ನೂ ಕೊಟ್ಟಿಲ್ಲ, ಹೀಗಾಗಿ ನಾನು ಈ ಸಂಬಂಧ ಮುಂದುವರಿಸಲು ಆಗುವುದಿಲ್ಲ ಅನಿಸುತ್ತದೆ,' ಎಂದಿದ್ದಾರೆ ರಾಖಿ.
ಆ ಮೂಲಕ ರಾಖಿ ಜೀವನದಲ್ಲಿ ಆಗಮಿಸಿರುವ ಮತ್ತೊಬ್ಬ ಗಂಡನೊಟ್ಟಿಗೂ ಬಾಳುವುದು ಸುಳ್ಳು ಎಂಬ ಅನುಮಾನ ಹುಟ್ಟಿಕೊಂಡಿದೆ.