ಬಾಲಿವುಡ್ ನಟಿ ಸಾರಾ ಅಲಿ ಖಾನ್ ಮಾತ್ರ ಒಂದೈವತ್ತು ಹಳೆ ಸೀರೆ ಕೊಟ್ಟು ಅದ್ರಿಂದ ಒಂದೇ ಒಂದು ಲೆಹೆಂಗಾ ಹೋಲ್ಸಿಕೊಂಡಿದ್ದಾರೆ ನೋಡಿ. 50 ಹಳೆಸೀರೆಗಳನ್ನು ಸೇರಿಸಿ ನಿರ್ಮಾಣವಾದ ಈ ಲೆಹೆಂಗಾವನ್ನು ಹಾಕಿ ನಟಿ ಅಂಬಾನಿ ಮನೆ ಗಣೇಶ ಹಬ್ಬದ ಸಂಭ್ರಮದಲ್ಲಿ ಮಿಂಚಿದ್ದಾರೆ.
ಬಾಲ್ಯದಲ್ಲಿ ಅಮ್ಮ ಅಜ್ಜಿಯ ಸೀರೆಗಳನ್ನ ಮನೆ ಪಕ್ಕದ ಮನೆ ಟೈಲರ್‌ಗೆ ಕೊಟ್ಟು ಚಂದದ ಲಂಗ ಬೌಸ್, ಮಿಡಿ ಲಂಗ ದಾವಣಿ ಮುಂತಾದ ವಿಭಿನ್ನ ಧಿರಿಸುಗಳನ್ನಾಗಿ ಮಾಡಿಕೊಂಡು ಹಾಕಿ ಮೆರೆಯುವುದನ್ನು ಬಹುತೇಕ ಹೆಣ್ಣು ಮಕ್ಕಳು ಮಾಡಿರ್ತಾರೆ. ಆದರೆ ಒಂದು ಸೀರೆ ಕೊಟ್ಟರೆ ಅದರಲ್ಲಿ ಅಕ್ಕ ತಂಗಿಯರಿದ್ದರೆ ಇಬ್ಬರಿಗೂ ಒಂದೊಂದು ಜೊತೆ ಡ್ರೆಸ್ ಸಿದ್ಧವಾಗುತ್ತಿತ್ತು. ಆದರೆ ನಮ್ ಬಾಲಿವುಡ್ ನಟಿ ಸಾರಾ ಅಲಿ ಖಾನ್ ಮಾತ್ರ ಒಂದೈವತ್ತು ಹಳೆ ಸೀರೆ ಕೊಟ್ಟು ಅದ್ರಿಂದ ಒಂದೇ ಒಂದು ಲೆಹೆಂಗಾ ಹೋಲ್ಸಿಕೊಂಡಿದ್ದಾರೆ ನೋಡಿ. 50 ಹಳೆಸೀರೆಗಳನ್ನು ಸೇರಿಸಿ ನಿರ್ಮಾಣವಾದ ಈ ಲೆಹೆಂಗಾವನ್ನು ಹಾಕಿ ನಟಿ ಅಂಬಾನಿ ಮನೆ ಗಣೇಶ ಹಬ್ಬದ ಸಂಭ್ರಮದಲ್ಲಿ ಮಿಂಚಿದ್ದಾರೆ. ಈ ಫೋಟೋಗಳನ್ನು ಸಾರಾ ತಮ್ಮ ಸೋಶಿಯಲ್ ಮೀಡಿಯಾ ಇನ್ಸ್ಟಾಗ್ರಾಂ ಖಾತೆಯಲ್ಲೂ ಪೋಸ್ಟ್ ಮಾಡಿದ್ದು, ಫೋಟೋಗಳು ಸಖತ್ ವೈರಲ್ ಆಗಿವೆ. ಆದರೆ ಇದು 50 ಸೀರೆಗಳಿಂದ ನಿರ್ಮಾಣ ಆಗಿದ್ದು ಎಂದು ತಿಳಿದ ಜನ ಮಾತ್ರ ಮೂಗಿನ ಮೇಲೆ ಬೆರಳಿಡ್ತಿದ್ದಾರೆ.
ಅಂದಹಾಗೆ ಸಾರಾ ಅಲಿ ಖಾನ್ ಅವರಿಗಾಗಿ ಈ 50 ವಿಂಟೇಜ್ ಸೀರೆಗಳ ಲೆಹೆಂಗಾವನ್ನು ಭಾರತೀಯ ಡಿಸೈನರ್ ಆದ ಮಯ್ಯೂರ್ ಗಿರೊತ್ರಾ ಅವರು ಡಿಸೈನ್ ಮಾಡಿದ್ದಾರೆ. ಅಂಬಾನಿ ಮನೆ ಗಣೇಶ ಹಬ್ಬದಲ್ಲಿ ಈ ಅತ್ರಂಗಿ ರೇ ನಟಿ ಈ ವಿಂಟೇಜ್ ಸೀರೆಗಳ ಲೆಹೆಂಗಾ ಧಿರಿಸಿ ಮಿಂಚಿದ್ದಾರೆ.
undefined
A post shared by Mayyur Girotra Official (@mayyurgirotracouture)
60 ರಿಂದ 50 ವರ್ಷಗಳಿಗೂ ಹಳೆಯ ಕಸೂತಿ ಇರುವ ಝರಿ ಸೀರೆಗಳು ಕೂಡ ಇದರಲ್ಲಿದ್ದು, ಇವೆಲ್ಲವುಗಳನ್ನು ಸೇರಿಸಿ ಒಂದು ಕಸ್ಟಮೈಸ್ಡ್ ಲೆಹೆಂಗಾ ರೆಡಿ ಆಗಿದೆ. ಆದರೆ ಇಷ್ಟೊಂದು ಹಳೆ ಸೀರೆ ಬಳಸಿ ಒಂದೇ ಒಂದು ಲೆಹೆಂಗಾ ಹೋಲಿಸಿಕೊಂಡಿರುವ ಸಾರಾ ಆಲಿ ಖಾನ್ ನಡೆಗೆ ಅಂಗ್ಲ ಮಾಧ್ಯಮಗಳಲ್ಲಿ ಭಾರಿ ಮೆಚ್ಚುಗೆ ವ್ಯಕ್ತವಾಗ್ತಿದೆ. ಸಾರಾ ಅಲಿಖಾನ್ ಅವರು ಹಳೆ ಸೀರೆಯನ್ನು ಬಳಸಿ ಹೊಸದೊಂದು ಡ್ರೆಸ್ ಹಾಕುವ ಮೂಲಕ ಸುಸ್ಥಿರವಾದ ಫ್ಯಾಷನ್‌ಗೆ ಒತ್ತು ಭಾರತದ ಪರಂಪರೆಯನ್ನು ಎತ್ತಿ ತೋರಿಸುವಲ್ಲಿ ಇದು ಅವರ ಬದ್ಧತೆಯನ್ನು ತೋರಿಸುತ್ತದೆ ಎಂದು ಕೆಲ ಮಾಧ್ಯಮಗಳು ಹಾಡಿ ಹೊಗಳಿವೆ. ಇದರ ಜೊತೆಗೆ ನೆಟ್ಟಿಗರು ಕೂಡ ಸಾರಾ ನಡೆಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
Middle Classಗೂ ಸೂಟ್ ಆಗೋ ಸಾರಾ ಅಲಿ ಖಾನ್ ಸ್ಟೈಲ್‌ನ 10 ಕಾಟನ್ ಸೂಟ್ಸ್
ಹಾಗೆಯೇ ಡಿಸೈನರ್ ಕೂಡ ಈ ಬಗ್ಗೆ ಇನ್ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಹಾಕಿದ್ದು, 50ರಿಂದ 60 ವರ್ಷ ಹಳೆಯ ಝರಿ ಸೀರೆಗಳನ್ನು ಸೇರಿಸಿ ಒಂದು ಹ್ಯಾಂಡ್ ಕ್ರಾಫ್ಟೆಡ್ ಲೆಹೆಂಗಾವನ್ನು ಮಾಡಲಾಯ್ತು. ಇದು ಮಯೂರ್ ಅವರಿಗೆ ವಸ್ತ್ರ ಪರಂಪರೆಯ ಮೇಲೆ ಇರುವ ಅಳವಾದ ಆಸಕ್ತಿಗೆ ಒಂದು ಸವಾಲಾಗಿತ್ತು ಎಂದು ಬರೆಯಲಾಗಿದೆ.
ಈ ಹಲವು ಬಣ್ಣಗಳಿಂದ ಮಿಶ್ರಿತವಾಗಿರುವ ಈ ಲೆಹಂಗಾದಲ್ಲಿ ಸಾರಾ ಖಾನ್ಗೆ ಸಾಂಪ್ರದಾಯಿಕ ಲುಕ್ ನೀಡುತ್ತಿದ್ದು ತುಂಬಾ ಸೊಗಸಾಗಿ ಕಾಣಿಸುತ್ತಿದ್ದಾರೆ. ಈ ಲೆಹೆಂಗಾಕ್ಕೆ ಸಾರಾ ಅಲಿ ಖಾನ್ ನೆರಳೆ ಹಾಗೂ ಗೋಲ್ಡನ್ ಮಿಶ್ರಿತವಾದ ಬ್ಲೌಸ್ ಧರಿಸಿದ್ದು, ಟಿಶ್ಯು ಸಿಲ್ಕ್ ದುಪ್ಪಟ್ಟ ಹಾಕಿದ್ದರು.
ಸ್ಟಾರ್ ನಟಿ ಆದ್ಮೇಲೆ ನಾನು ಸ್ಟಾರ್ ನಟನ ಪತ್ನಿ ಆಗಿದ್ದು; ಡಿವೋರ್ಸ್‌ಗೂ ಮುನ್ನ ಅಮೃತಾ ಸಿಂಗ್ ಫುಲ್ ಖಡಕ್!
ನಿನ್ನೆ ಅಂಬಾನಿ ಮನೆಯಲ್ಲಿ ನಡೆದ ಗಣೇಶ ಹಬ್ಬದ ಸಮಾರಂಭದಲ್ಲಿ ಸಾರಾ ಅಲಿ ಖಾನ್ ಅವರು ಸೋದರ ಇಬ್ರಾಹಿಂ ಖಾನ್ ಜೊತೆ ಆಗಮಿಸಿದ್ದರು. ಇವರು ಮಾತ್ರವಲ್ಲದೇ ಅನನ್ಯಾ ಪಾಂಡೆ, ಸೋನಂ ಕಪೂರ್, ಕೈರಾ ಅಡ್ವಾಣಿ, ಸಿದ್ಧಾರ್ಥ್ ಮಲ್ಹೋತ್ರಾ, ಸಲ್ಮಾನ್ ಖಾನ್, ಕರೀನಾ ಕಪೂರ್ ಸೈಫ್ ಅಲಿ ಖಾನ್ ಸೇರಿದಂತೆ ಅನೇಕರು ಭಾಗಿಯಾಗಿದ್ದರು.