ಖ್ಯಾತ ನಟಿ ರಿಮಿ ಸೇನ್‌ಗೆ ಸ್ನೇಹಿತರಿಂದಲೇ ಮೋಸ, 4.14 ಕೋಟಿ ರೂಪಾಯಿ ನಾಮ!

Published : Apr 03, 2022, 11:13 AM IST
ಖ್ಯಾತ ನಟಿ ರಿಮಿ ಸೇನ್‌ಗೆ ಸ್ನೇಹಿತರಿಂದಲೇ ಮೋಸ, 4.14 ಕೋಟಿ ರೂಪಾಯಿ ನಾಮ!

ಸಾರಾಂಶ

 ಉದ್ಯಮಿಗಳಿಂದ ಕೋಟಿ ಪಂಗನಾಮ ಹಾಕಿಸಿಕೊಂಡ ಧೂಮ್ ಚಿತ್ರದ ನಟಿ. ಖಾರೆ ಪೊಲೀಸರಿಂದ ಎಫ್‌ಐಆರ್‌ ದಾಖಲು... 

2000ರಲ್ಲಿ ಬೆಂಗಾಲಿ ಚಿತ್ರದ ಮೂಲಕ ಸಿನಿ ಜರ್ನಿ ಆರಂಭಿಸಿದ ನಟಿ ರಿಮಿ ಸೇನ್ ಬಾಲಿವುಡ್‌ನಲ್ಲಿ ಹಂಗಾಮ, ಧೂಮ್ ಗೋಲ್‌ಮಾಲ್, ಹ್ಯಾಟ್ರಿಕ್ ಸೇರಿದಂತೆ ಸೂಪರ್ ಹಿಟ್ ಸಿನಿಮಾದಲ್ಲಿ ಅಭಿನಯಿಸಿದ್ದಾರೆ. ನಾಯಕಿಯಾಗಿ ಮಿಂಚಿದ ನಂತರ ತಮ್ಮದೇ ನಿರ್ಮಾಣ ಸಂಸ್ಥೆ ಮತ್ತು ಬ್ಯುಸಿನೆಸ್‌ ಶುರು ಮಾಡಿದ್ದಾರೆ. ತೆರೆ ಮೇಲೆ ಜನಪ್ರಿಯತೆಗಾಗಿ ರಿಮಿ ಎಂದು ಹೆಸರಿಟ್ಟುಕೊಂಡಿದ್ದರು ಆದರೆ ಬ್ಯುಸಿನೆಸ್ ಶುರು ಮಾಡುವಾಗ ತಮ್ಮ ರಿಯಲ್ ಹೆಸರು ಸುಭಮಿತ್ರ ಸೇನ್ ಅದನ್ನೇ ಬಳಸಬೇಕು ಎಂದು ಮತ್ತೆ ಬದಲಾಯಿಸಿಕೊಂಡರು.

ಈಗ ರಿಮಿ ಸೇನ್‌ಗೆ ತಮ್ಮ ಆಪ್ತ ಬ್ಯುಸಿನೆಸ್ ಸ್ನೇಹಿತ 4.14 ಕೋಟಿ ರೂಪಾಯಿ ಚಳ್ಳೆ ಹಣ್ಣು ತಿನ್ನಿಸಿದ್ದಾರೆ.  ಚಿತ್ರರಂಗದಿಂದ ದೂರು ಉಳಿದುಕೊಂಡರೂ ಬ್ಯೂಟಿ ಬಗ್ಗೆ ಸಿಕ್ಕಾಪಟ್ಟೆ ಕೇರ್ ಮಾಡುವ ರಿಮಿ ಸೇನ್ ದಿನವೂ ತಪ್ಪದೆ ಜಿಮ್‌ಗೆ ಹೀಗುತ್ತಿದ್ದರು. ಇದನ್ನು ಗಮನಿಸಿದ ವ್ಯಾಸ್ ಎಂಬ ವ್ಯಕ್ತಿ ತಮ್ಮನ್ನು ತಾವು ಉದ್ಯಮಿ ಎಂದು ಪರಿಚಯಿಸಿಕೊಂಡಿದ್ದಾರೆ. ಇವರಿಬ್ಬರು ಹಲವು ತಿಂಗಳುಗಳಿಂದ ಸ್ನೇಹಿತರಾಗಿದ್ದರು ಈ ವಿಶ್ವಾಸದ ಮೇಲೆ ವ್ಯಾಸ್ ಹೊಸ ಬ್ಯುಸಿನೆಸ್‌ ಬಗ್ಗೆ ಹಂಚಿಕೊಳ್ಳುತ್ತಿದ್ದರು. ಈ ಕ್ಷೇತ್ರದಲ್ಲಿ ಹಣ ಮಾಡಬಹುದು ಹಾಗೆ ಹೀಗೆ ಎಂದು ರಿಮಿ ಸೇನ್ ತಲೆ ಕೆಡಿಸಿದ್ದಾರೆ. ವ್ಯಾಸ್ ಪ್ರಾರಂಭಿಸುತ್ತಿರುವ ಹೊಸ ಸಂಸ್ಥೆಯಲ್ಲಿ ಹಣ ತೊಡಗಿಸುವಂತೆ ರಿಮಿ ಸೇನ್‌ಗೆ ಹೇಳಿದ್ದಾರೆ.

ವ್ಯಾಸ್ ಮಾತುಗಳನ್ನು ನಂಬಿ ರಿಮಿ ಬರೋಬ್ಬರಿ 4.14 ಕೋಟಿ ರೂಪಾಯಿ ಹಣವನ್ನು ನೀಡಿದ್ದಾರೆ. ಸಂಸ್ಥೆ ತೆರೆಯುವುದರಲ್ಲಿ ಬ್ಯುಸಿ ಎಂದು ರಿಮಿ ಕೈಗೆ ವ್ಯಾಸ್ ಹಲವು ತಿಂಗಳು ಸಿಗಲಿಲ್ಲ. ಆದರೆ ವ್ಯಾಸ್ ಸಂಸ್ಥೆ ಪ್ರಾರಂಭಿಸದೆ ಹಣವನ್ನು ಎತ್ತಿಕೊಂಡು ಪರಾರಿಯಾಗಿದ್ದಾನೆ. ವಂಚನೆಯ ಸೂಚನೆ ಸಿಗುತ್ತಿದ್ದಂತೆ ರಿಮಿ ಖಾರ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.  ಎಫ್‌ಐಆರ್ ದಾಖಲಿಸಿಕೊಂಡಿರುವ ಪೊಲೀಸರು ಹುಡುಕಾಟ ಶುರು ಮಾಡಿದ್ದಾರೆ. ಪ್ರಾಥಮಿಕ ತನಿಖೆ ಪ್ರಕಾರ ವ್ಯಾಸ್‌ ರಿಮಿಗೆ ಹೇಳಿರುವುದು ಎಲ್ಲಾ ಸುಳ್ಳೇ ಆಗಿದೆ ಅಲ್ಲದೆ ರಿಮಿನ ವಂಚಿಸಬೇಕು ಎಂದು ಹಲವು ತಿಂಗಳುಗಳಿಂದ ನಡೆಯುತ್ತಿದ್ದ ಟಾರ್ಗೇಟ್ ಪ್ಲ್ಯಾನ್ ಬೆಳಕಿಗೆ ಬಂದಿದೆ.

'ಬಿಗ್‌ಬಾಸ್ ಮನೆಗೆ ಹೋಗಿದ್ದೇ ಹಣಕ್ಕಾಗಿ': 49 ದಿನದ ಗಳಿಕೆ ಕೋಟಿಗಳಲ್ಲಿ

ರಿಮಿ ಸೇನ್ ಮ್ಯೂಸಿಕಲ್ ವಿಡಿಯೋ ಮೂಲಕ ಕಮ್ ಬ್ಯಾಕ್ ಮಾಡುವುದಕ್ಕೆ ಪ್ಲ್ಯಾನ್ ಮಾಡಿದ್ದಾರೆ. ಪ್ರೇರಣಾ ಅರೋರ ನಿರ್ದೇಶನ ಮಾಡುತ್ತಿರುವ ಈ ಆಲ್ಬಂ ಸಾಂಗ್ ಚಿತ್ರೀಕರಣವನ್ನು ಏಪ್ರಿಲ್ 12ರಿಂದ ಆರಂಭಿಸಲಿದ್ದಾರೆ. 'ನಿಮ್ಮೆಲ್ಲರಿಗೂ ಗೊತ್ತಿರುವ ಹಾಗೆ ನಾನು ಸಿನಿಮಾ ಮತ್ತು ಚಿತ್ರರಂಗದಿಂದ ಸಂಪೂರ್ಣವಾಗಿ ದೂರ ಉಳಿದುಬಿಟ್ಟಿದ್ದೆ. ದೂರ ಉಳಿಯಲು ಪ್ರಮುಖ ಕಾರಣ ಅಂದ್ರೆ ನಾನು ಡಿಫರೆಂಟ್ ಆಗಿರುವ ಸಿನಿಮಾ ಪ್ರಯತ್ನ ಪಟ್ಟರೂ ವಿಫಲವಾಯ್ತು. ನಾನು ಅಂದುಕೊಂಡ ರೀತಿಯಲ್ಲಿ ಯಶಸ್ಸು ಕಾಣಿಸಲಿಲ್ಲ. ಹಣ ಮಾಡುಬೇಕು ಅದಿಕ್ಕೆ ಕೆಲಸ ಮಾಡುತ್ತಿರುವ ಎನ್ನುವ ಮೈಂಡ್‌ ಸೆಟ್‌ನಲ್ಲಿ ನಾನಿಲ್ಲ. ನನಗೆ ಜೀವನದಲ್ಲಿ ಕ್ರಿಯೇಟಿವ್ satisfaction ಮುಖ್ಯ. ದೊಡ್ಡ ನಿರ್ಮಾಣ ಸಂಸ್ಥೆ ದೊಡ್ಡ ಕಲಾವಿದರ ಜೊತೆ ಕೆಲಸ ಮಾಡಿದ ನಾನು, ನನ್ನ ಪಾತ್ರದ ಬಗ್ಗೆ ಹೆಚ್ಚಿಗೆ ಕೇರ್ ಮಾಡಿಲ್ಲ ಅದೇ ನಾನು ಮಾಡಿದ ದೊಡ್ಡ ತಪ್ಪು' ಎಂದು ಇಟೈಮ್ಸ್ ಸಂದರ್ಶನದಲ್ಲಿ ರಿಮಿ ಮಾತನಾಡಿದ್ದಾರೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ನಾನೇನು ಸಾಧುವಲ್ಲ.. ಹೀಗೆ ಮಾತಾಡೋಕೆ ನನಗೂ ಬರುತ್ತೆ: ಪುಷ್ಪ ನಟಿ ಹೇಳಿದ್ದೇನು?
ವೃತ್ತಿಜೀವನದಲ್ಲಿ 2 ಬಾರಿ ದೊಡ್ಡ ತಪ್ಪು ಮಾಡಿದ ರಾಮ್ ಚರಣ್.. ಚಿರಂಜೀವಿಯೂ ಏನೂ ಮಾಡಲಾಗಲಿಲ್ಲವೇ?