ಮೈಸೂರು ಮೂಲದ ಆದಿಲ್ ಖಾನ್ರನ್ನು ಮದುವೆಯಾದ ನಟಿ ರಾಖಿ ಸಾವಂತ್ ಕೇಸರಿ ಬಣ್ಣದ ಬುರ್ಖಾ ಧರಿಸಿ ವಿಡಿಯೋದಲ್ಲಿ ಹೇಳಿದ್ದೇನು?
ನಟಿ ರಾಖಿ ಸಾವಂತ್ (Rakhi Sawant) ಇತ್ತೀಚಿಗೆ ಭಾರಿ ಸುದ್ದಿಯಲ್ಲಿರುವ ನಟಿ. ಮೈಸೂರು ಮೂಲದ ಆದಿಲ್ ಖಾನ್ ದುರ್ರಾನಿ ಅವರನ್ನು ರಾಖಿ ಗುಟ್ಟಾಗಿ ಮದುವೆಯಾಗಿ, ಅದೀಗ ಬಹಿರಂಗಗೊಂಡು, ಮದುವೆಯನ್ನು ಆದಿಲ್ ನಿರಾಕರಿಸಿ ಭಾರಿ ಹಂಗಾಮವೇ ಸೃಷ್ಟಿಯಾಗಿತ್ತು. ಏಳು ತಿಂಗಳ ಹಿಂದೆಯೇ ತಮ್ಮ ಮದುವೆಯಾಗಿದ್ದು, ಇತ್ತೀಚೆಗೆ ಮೈಸೂರಿನಲ್ಲಿ ರಿಜಿಸ್ಟರ್ ಮಾಡಿರುವುದಾಗಿ ರಾಖಿ ಹೇಳುತ್ತಿದ್ದರೆ, ನನಗೂ ರಾಖಿಗೂ ಸಂಬಂಧವೇ ಇಲ್ಲ ಎಂದುಬಿಟ್ಟಿದ್ದರು ಆದಿಲ್. ಈ ಬಗ್ಗೆ ರಾಖಿ ಸಾವಂತ್ ಎಲ್ಲರ ಎದುರು ಕಣ್ಣೀರಿಟ್ಟಿದ್ದರು.
ತಮ್ಮ ಪತಿ ಆದಿಲ್ (Adil Khan Durrani) ತಮಗೆ ಭಾರಿ ಮೋಸ ಮಾಡಿರುವುದಾಗಿ ರಾಖಿ ಹೇಳಿಕೊಂಡಿದ್ದರು. ಮದುವೆಯ ಬಗ್ಗೆ ಬಾಯಿ ಬಿಡದಂತೆ ಆದಿಲ್ ತಮ್ಮನ್ನು ಬೆದರಿಸಿದ್ದರು ಎಂದು ರಾಖಿ ಸಾವಂತ್ (Rakhi Sawanth) ಹೇಳಿದ್ದರು. 'ಆತನನ್ನು ನಾನು ವರ್ಷಗಳ ಹಿಂದೆಯೇ ಭೇಟಿಯಾಗಿದ್ದೆ. ನಂತರ ಮದುವೆಯ ವಿಚಾರ ನಡೆಯಿತು. ಕಳೆದ ವರ್ಷ ಜುಲೈನಲ್ಲಿ ಮದುವೆಯಾದ್ವಿ (Marriage). ಆದರೆ ಮದ್ವೆ ಬಗ್ಗೆ ಹೇಳದಂತೆ ಪತಿ ಬೆದರಿಕೆ ಹಾಕಿದ್ದ' ಎಂದು ರಾಖಿ ಹೇಳಿದ್ದಾರೆ. 'ಮದುವೆ ಬಗ್ಗೆ ತಿಳಿದರೆ ಅವನ ತಂಗಿಗೆ ಹುಡುಗ ಸಿಗುವುದಿಲ್ಲ ಎನ್ನುವ ಕಾರಣ ನೀಡಿ ವಿಷಯ ಬಹಿರಂಗಪಡಿಸಬೇಡಿ ಎಂದಿದ್ದ. ನನ್ನ ಹೆಸರು ಹೇಳುವುದು ಅವನಿಗೆ ನಾಚಿಕೆ ಅಂತೆ. ಅದಕ್ಕೇ ಹೇಳಬೇಡ' ಎಂದು ಹೇಳಿರುವುದಾಗಿ ರಾಖಿ ಹೇಳಿಕೊಂಡಿದ್ದರು.
ರಾಖಿ ಸಾವಂತ್ ಮೈಸೂರಿನ ಸೊಸೆಯೇ! ಅಂತೂ ಮದ್ವೆ ಗಲಾಟೆಗೆ ಬಿತ್ತು ಬ್ರೇಕ್...
ಕೊನೆಗೂ ಮದುವೆಯ ಸಮಸ್ಯೆ ಬಗೆಹರಿದಿತ್ತು. ಆದಿಲ್ ಖಾನ್ ತಾವು ರಾಖಿಯ ಜೊತೆ ಮದುವೆಯಾಗಿರುವುದಾಗಿ, ತಾವು ಸುಖವಾಗಿ ಇರುವುದಾಗಿ ಒಪ್ಪಿಕೊಂಡಿದ್ದರು. ಇಷ್ಟೆಲ್ಲಾ ಆಗುತ್ತಿರುವ ನಡುವೆಯೇ ಇದೀಗ ಮತ್ತೊಂದು ಹೊಸ ಅಂಶವೊಂದು ಬೆಳಕಿಗೆ ಬಂದಿದೆ. ನಟಿ ರಾಖಿ ಮುಸ್ಲಿಂ ಧರ್ಮಕ್ಕೆ ಮತಾಂತರವಾಗಿದ್ದಾರೆ ಎಂಬ ಸುದ್ದಿ ಹರಡಿತ್ತು. ಅದು ನಿಜ ಎನ್ನುವ ವಿಡಿಯೋ (Vedio) ಒಂದನ್ನು ಖುದ್ದು ರಾಖಿ ಸಾವಂತ್ ಹರಿಬಿಟ್ಟಿದ್ದಾರೆ.
ಕೇಸರಿ ಬಣ್ಣದ ಬುರ್ಖಾ (Saffron Hijab) ಧರಿಸಿ ವಿಡಿಯೋ ಮಾಡಿರುವ ರಾಖಿ ಸಾವಂತ್ ಎಲ್ಲರನ್ನೂ ಬೆಚ್ಚಿ ಬೀಳಿಸಿದ್ದಾರೆ. ನಟಿ ತಮ್ಮ ವಿಡಿಯೋದಲ್ಲಿ ಅಲ್ಲಾನನ್ನು (Allah) ಹಾಡಿ ಹೊಗಳಿದ್ದಾರೆ. ಅಲ್ಲಾ ನಿಮ್ಮ ಕಷ್ಟಗಳನ್ನು ನಿವಾರಿಸಲಿ ಎಂದು ಅವರು ಹೇಳಿದ್ದಾರೆ. ಈ ವಿಡಿಯೋದಲ್ಲಿ ರಾಖಿ ಕೇಸರಿ ಬಣ್ಣದ ಹಿಜಾಬ್ ಧರಿಸಿರುವುದನ್ನು ಕಾಣಬಹುದು. ಇವರ ದಾಖಲೆಗಳನ್ನು ನೋಡಿದಾಗ ರಾಖಿಯಿಂದ ಇವರು, ಫಾತಿಮಾ (Fatima) ಆಗಿ ಬದಲಾಗಿರುವುದು ಕಾಣಿಸುತ್ತದೆ. ಆದ್ದರಿಂದ ರಾಖಿ ಧರ್ಮ ಬದಲಿಸಿದರಾ ಎಂಬ ಬಗ್ಗೆ ಚರ್ಚೆ ಶುರುವಾದ ಬೆನ್ನಲ್ಲೇ ಈಗ ರಾಖಿ ಈ ಗುಸುಗುಸು ಸುದ್ದಿಗೆ ತೆರೆ ಎಳೆದಿದ್ದು, ಹಿಜಾಬ್ ಧರಿಸಿ ಅಲ್ಲಾನನ್ನು ಹೊಗಳಿದ್ದಅರೆ. ಹಣೆಯ ಮೇಲೆ ಕುಂಕುಮ ಇಡದೇ ಕೇಸರಿ ಬಣ್ಣದ ಹಿಜಾಬ್ನಲ್ಲಿ ರಾಖಿ ಕಾಣಿಸಿಕೊಂಡಿದ್ದಾರೆ.
'ಮೀ ಟೂ' ನಟಿ ತನುಶ್ರೀ ನುಡಿದ ಬಾಲಿವುಡ್ನ ಭಯಾನಕ ಭವಿಷ್ಯ!
ಇದೀಗ ಮತ್ತೊಂದು ಚರ್ಚೆಯನ್ನು ಹುಟ್ಟುಹಾಕತೊಡಗಿದೆ. ಕೆಲ ಖ್ಯಾತ ಹಿಂದೂ ನಟಿಯರು ಮುಸ್ಲಿಂ ನಟರನ್ನು (Muslim Actor) ಮದುವೆಯಾಗುತ್ತಿರುವುದು ಹೊಸ ವಿಷಯವೇನಲ್ಲ. ಈ ಸಾಲಿಗೆ ಈಗ ರಾಖಿ ಸೇರಿದ್ದಾರೆ. ಆದರೆ ಇವರ ಪತಿ ಆದಿಲ್ ನಟನಲ್ಲ ಎನ್ನುವುದನ್ನು ಹೊರತುಪಡಿಸಿದರೆ, ರಾಖಿ ಕೂಡ ಈಗ ಇಸ್ಲಾಂ (islam) ಅಪ್ಪಿಕೊಂಡಂತೆ ಕಾಣಿಸುತ್ತಿದೆ. ಇವರ ತಾಯಿ ತಾಯಿ ಕ್ಯಾನ್ಸರ್ ಹಾಗೂ ಬ್ರೈನ್ ಟ್ಯೂಮರ್ನಿಂದ (Brain Tumer) ಬಳಲುತ್ತಿರುವ ಹಿನ್ನೆಲೆಯಲ್ಲಿ ಹಣ ಹೊಂದಾಯಿಸಿ ಇನ್ನೊಂದೆಡೆ ನಟಿ ಹೆಣಗಾಡುತ್ತಿದ್ದಾರೆ. ತಮ್ಮ ಕೈಗೆ ಸಿಕ್ಕ ಅವಕಾಶಗಳನ್ನು ಬಿಡದೇ ಎಲ್ಲವನ್ನೂ ಒಪ್ಪಿಕೊಳ್ಳುತ್ತಿದ್ದಾರೆ.