ಮೈಸೂರು ಕೋರ್ಟ್‌ನಲ್ಲಿ ರಾಖಿ ಸಾವಂತ್: ನ್ಯಾಯ ಕೊಡಿಸಿ ಎಂದು ಅಳುತ್ತಾ ಕುಸಿದು ಬಿದ್ದ ಆದಿಲ್ ಪತ್ನಿ

Published : Feb 22, 2023, 03:07 PM ISTUpdated : Feb 22, 2023, 08:05 PM IST
ಮೈಸೂರು ಕೋರ್ಟ್‌ನಲ್ಲಿ ರಾಖಿ ಸಾವಂತ್: ನ್ಯಾಯ ಕೊಡಿಸಿ ಎಂದು ಅಳುತ್ತಾ ಕುಸಿದು ಬಿದ್ದ ಆದಿಲ್ ಪತ್ನಿ

ಸಾರಾಂಶ

ನಟಿ ರಾಖಿ ಸಾವಂತ್ ಮೈಸೂರು ಕೋರ್ಟ್ ಗೆ ಹಾಜರಾಗಿದ್ದಾರೆ. ನ್ಯಾಯ ಕೊಡಿಸಿ ಎಂದು ಅಳುತ್ತಾ ಕುಸಿದು ಬಿದ್ದಿದ್ದಾರೆ. 

ಮೈಸೂರಿನ ಸೊಸೆ, ಆದಿಲ್ ಖಾನ್ ಪತ್ನಿ, ಬಾಲಿವುಡ್ ನಟಿ ರಾಖಿ ಸಾವಂತ್ ಮೈೂಸೂರು ಕೋರ್ಟ್‌ಗೆ ಹಾಜರಾಗಿದ್ದಾರೆ. ಕಳೆದ ಕೆಲವು ದಿನಗಳಿಂದ ನಟಿ ರಾಖಿ ಸಾವಂತ್ ಮತ್ತು ಆದಿಲ್ ದಾಂಪತ್ಯ ಕಲಹ ಜೋರಾಗಿ ಸದ್ದು ಮಾಡುತ್ತಿದೆ. ಬಾಲಿವುಡ್ ನಟಿ, ಬಿಗ್ ಬಾಸ್ ಖ್ಯಾತಿಯ ರಾಖಿ ಸಾವಂತ್ ಮೈಸೂರು ಮೂಲದ ಆದಿಲ್ ಖಾನ್ ನನ್ನು ಮದುವೆಯಾಗಿದ್ದಾರೆ. ಮದುವೆಯಾಗಿ ಅನೇಕ ತಿಂಗಳ ಬಳಿಕ ಬಹಿರಂಗ ಪಡಿಸಿದ್ದರು. ಫೋಟೋಗಳನ್ನು ರಿವೀಲ್ ಮಾಡಿ ಆದಿಲ್ ಜೊತೆ ಮದುವೆಯಾಗಿರುವುದಾಗಿ ಹೇಳಿದ್ದರು. ಆದರೆ ಕೆಲವೇ ದಿನಕ್ಕೆ ಕಿತ್ತಾಡಿಕೊಂಡು ಇಬ್ಬರೂ ದೂರ ಆಗಿದ್ದಾರೆ. ಆದಿಲ್ ತನ್ನನ್ನು ಬಿಟ್ಟು ಹೋಗಿದ್ದಾನೆ, ಮೋಸ ಮಾಡಿದ್ದಾನೆ, ಹಣ್ಣ ಕದ್ದು ಹೋಗಿದ್ದಾನೆ, ಬೇರೆ ಯುವತಿ ಜೊತೆ ಅನೈತಿಕ ಸಂಬಂಧ ಹೊಂದಿದ್ದಾನೆ ಎಂದು ಪತಿ ವಿರುದ್ಧ ರಾಖಿ ಸಾವಂತ್  ಸಾಲು ಸಾಲು ಆರೋಪ ಮಾಡಿದ್ದರು. 

ಆದಿಲ್ ವಿರುದ್ಧ ದೂರು ಕೂಡ ದಾಖಲಿಸಿದ್ದರು. ರಾಖಿ ಸಾವಂತ್ ದೂರಿನ ಮೇರೆಗೆ ಮುಂಬೈ ಪೊಲೀಸರು ಆದಿಲ್ ನನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ. ಸದ್ಯ ಆದಿಲ್ ನ್ಯಾಯಾಂಗ ಬಂಧನದಲ್ಲಿದ್ದಾರೆ. ಈ ನಡುವೆ ರಾಖಿ ಸವಾಂತ್ ಆತನನ್ನು ಬಿಡಬೇಡಿ, ತನಗೆ ನ್ಯಾಯ ಕೊಡಿಸಿ ಎಂದು ಗೋಗರಿಯುತ್ತಿದ್ದಾರೆ.  ಇದೀಗ ಮೈಸೂರು ಕೋರ್ಟ್ ಗೆ ಹಾಜರಾಗಿರುವ ನಟಿ ರಾಖಿ ಸಾವಂತ್ ತನಗೆ ನ್ಯಾಯ ಕೊಡಿಸಿ ಎಂದು ಅಂಗಾಲಾಚಿದ್ದಾರೆ. ಮಾಧ್ಯಮದ ಜೊತೆ ಮಾತನಾಡಿದ ನಟಿ ರಕಿ ಸಾವಂತ್, ನನ್ನ ಪತಿಯನ್ನ ಮುಂಬೈ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಕೋರ್ಟ್ ಅವರಿಗೆ ಏಳು ದಿನ ಪೊಲೀಸ್ ಕಸ್ಟಡಿ ಕೊಟ್ಟಿದ್ದಾರೆ ಎಂದು ಹೇಳಿದ್ದಾರೆ. 



ಹಣ ಪೀಕಲು ರಾಖಿ ಮೊದಲ ಗಂಡಂಗೂ ಹೀಗೆ ಮಾಡಿದ್ಲು ಎಂದ ಆದಿಲ್ ಲಾಯರ್​!

'ನಾನು ನ್ಯಾಯಾಧೀಶರ ಮುಂದೆ ಹಾಜರಾಗಲು ಬಂದಿದ್ದೇನೆ‌. ನನಗೆ ನ್ಯಾಯ ಬೇಕು, ಆತನಿಗೆ ಜಾಮೀನು ಯಾವುದೇ ಕಾರಣಕ್ಕೂ ಸಿಗಬಾರದು. ಆತ ನನ್ನನ್ನು ಕಾನೂನು ಬದ್ಧವಾಗಿ ಮದುವೆಯಾಗಿದ್ದಾನೆ. ಅದರ ಎಲ್ಲಾ ದಾಖಲೆ ನನ್ನ ಬಳಿ ಇದೆ. ನಾನು ಇಂದು ಬೆಳಿಗ್ಗೆ ಆದಿಲ್ ಖಾನ್ ತಂದೆ ಜೊತೆ ಮಾತನಾಡಿದೆ‌. ನಾನು ಹಿಂದೂ ಎಂಬ ಕಾರಣಕ್ಕೆ ಅವರು ಸ್ವೀಕಾರ ಮಾಡುತ್ತಿಲ್ಲ. ಹಾಗಾದ್ರೆ ನಾನು ಏನು ಮಾಡಲಿ. ನನ್ನ ಬಳಿ 1.65 ಕೋಟಿ ಹಣ ಪಡೆದಿದ್ದಾನೆ‌. ಆದರೆ ನನಗೆ ಒಂದು ಪೈಸೆ ಕೊಟ್ಟಿಲ್ಲ‌. ಮೈಸೂರು ಜನ ಸರಿ ಇಲ್ಲ ನನ್ನ ಬಳಿ ಹೇಳಿದ. ಇದರಿಂದ ಮುಂಬೈಗೆ ಬರುತ್ತೇನೆ ಎಂದು ಹೇಳಿದ್ದ. ಆ ನಂತರ ಮುಂಬೈನಲ್ಲಿ ಸಾಕಷ್ಟು ಬಾರಿ ನನ್ನ ಮೇಲೆ ಹಲ್ಲೆ ಮಾಡಿದ್ದ. ಮೈಸೂರು ಕೋರ್ಟ್ ಮೇಲೆ ವಿಶ್ವಾಸ ಇದೆ ನನಗೆ ನ್ಯಾಯ ಕೊಡಿಸಿ' ಎಂದು ಕೇಳಿಕೊಂಡಿದ್ದಾರೆ. 

ರಾಖಿ ಸಾವಂತ್ ಪತಿ ಆದಿಲ್ ಖಾನ್ ವಿರುದ್ಧ ಅತ್ಯಾಚಾರ ಆರೋಪ; ಮೈಸೂರಿನಲ್ಲಿ FIR ದಾಖಲು

ಮೈಸೂರು ನ್ಯಾಯಾಲಯದ ಗೇಟ್ ಬಳಿ ಮಾಧ್ಯಮಗಳೊಂದಿಗೆ ಪ್ರತಿಕ್ರಿಯಿಸುವ ವೇಳೆ ರಾಖಿ ಸಾವಂತ್ ತಾಯಿಯನ್ನು ನೆನೆದು ಕಣ್ಣೀರಿಟ್ಟರು. ಮಾತನಾಡುತ್ತಲೇ ಅಳುತ್ತಾ ರಾಖಿ ಸಾವಂತ್ ಕುಸಿದು ಬಿದ್ದರು.  ಆಗ ಜೊತೆಯಲ್ಲಿದ್ದ ಆಪ್ತರು ರಾಖಿ ಸಾವಂತ್ ಗೆ ಸಾಂತ್ವನ ಮಾಡಿದರು.  ಬಳಿಕ ಸಾವರಿಸಿಕೊಂಡು ಕಣ್ಣೀರಿಡುತ್ತಲೇ ರಾಖಿ ಸಾವಂತ್ ನ್ಯಾಯಾಲಯದೊಳಕ್ಕೆ ತೆರಳಿದರು. 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

3 idiots 2 : ಬಾಕ್ಸ್ ಆಫೀಸ್ ನಲ್ಲಿ ಸುನಾಮಿ, ಬರ್ತಿದೆ 3 ಈಡಿಯಟ್ಸ್ ಸೀಕ್ವೆಲ್
ಚಿರಂಜೀವಿ ನಂತರ ಜೂ.ಎನ್‌ಟಿಆರ್ ಟಾರ್ಗೆಟ್? ಸಂಚಲನ ಮೂಡಿಸಿದ ನಿರ್ಧಾರ, ಇನ್ಮುಂದೆ ಹೀಗೆ ಮಾಡಿದ್ರೆ ಕಷ್ಟ!