ಸಿನಿಮಾ ಅಂತೇನಲ್ಲ. ಯಾವುದೇ ವೃತ್ತಿಯಿರಲಿ, ಅಲ್ಲಿ ನಾವೊಬ್ಬರೇ ಕೆಲಸ ಮಾಡಲು ಆಗುವುದಿಲ್ಲ. ಸ್ವಂತ ಬಿಸಿನೆಸ್ ಎಂದುಕೊಂಡರೂ ಅಲ್ಲೂ ಕೂಡ ಎಲ್ಲ ಕೆಲಸವನ್ನು, ಜವಾಬ್ದಾರಿಗಳನ್ನು ನಾವೋಬ್ಬರೇ ನಿಭಾಯಿಸಲು ಸಾಧ್ಯವಾಗುವುದಿಲ್ಲ.
ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ ಅವರು ಪ್ಲಾಪ್ ಸಿನಿಮಾ ಬಗ್ಗೆ ತಮ್ಮ ವಿಭಿನ್ನ ಅನಿಸಿಕೆಯೊಂದನ್ನು ಹೇಳಿದ್ದಾರೆ. ಸಂದರ್ಶನವೊಂದರಲ್ಲಿ ಮಾತನಾಡುತ್ತಿದ್ದ ನಟಿ ಪ್ರಿಯಾಂಕಾ ಚೋಪ್ರಾ, 'ನಾನು ಯಾವತ್ತೂ ಎಲ್ಲ ತಪ್ಪುಗಳನ್ನು ನನ್ನ ಮೇಲೆ ಹಾಕಿಕೊಳ್ಳುವುದಿಲ್ಲ. ನನ್ನ ಸಿನಿಮಾ ವೃತ್ತಿಯಲ್ಲಿ ಯಾವುದೇ ಒಂದು ಕೆಲಸ ನಾನೊಬ್ಬನೇ ಮಾಡಿರಲು ಸಾಧ್ಯವಿಲ್ಲ. ಸುಮಾರು 150ಕ್ಕೂ ಹೆಚ್ಚು ಜನರು ಸೇರಿ ಮಾಡಿದ ಕೆಲಸ ಆಗಿರುತ್ತದೆ. ಯಾವುದೇ ಸಿನಿಮಾ ಪ್ಲಾಪ್ ಆದರೆ, ಅದು ನನ್ನೊಬ್ಬಳದೇ ತಪ್ಪು ಎಂದು ಹೇಳಲು ಸಾಧ್ಯವೇ ಇಲ್ಲ.
ಸಂದರ್ಶನದಲ್ಲಿ ಮಾತನಾಡುತ್ತಿದ್ದ ನಟಿ ಪ್ರಿಯಾಂಕಾ 'ನಾನು ನಟಿಸಿದ ಅದೆಷ್ಟೋ ಸಿನಿಮಾಗಳು ಪ್ಲಾಪ್ ಆಗಿವೆ, ಎಲ್ಲವೂ ಸಕ್ಸಸ್ ಎಂದು ಹೇಳಲು ಅಸಾಧ್ಯ. ನಾನು ಸಿನಿಮಾ ಇಂಡಸ್ಟ್ರಿಗೆ ಬಂದ ಮೊದಮೊದಲು ನನಗೆ ಸಿನಿಮಾ ಫ್ಲಾಪ್ ಆದಾಗ ಭಾರೀ ಫೀಲ್ ಆಗುತ್ತಿತ್ತು. ಒಂದು ವಾರಗಳ ಕಾಲ ನನ್ನ ಫ್ರೆಂಡ್ಸ್, ರಿಲೇಟಿವ್ಸ್ ಗಳ ಬಳಿ ಅದನ್ನು ಹೇಳಿಕೊಂಡು ಅಳುತ್ತಿದ್ದೆ. ಅದೊಂದು ದಿನ ನನಗೆ ಜ್ಞಾನೋದಯ ಆಯ್ತು. ಸಿನಿಮಾ ನನ್ನೊಬ್ಬಳದಲ್ಲ, 150ಕ್ಕೂ ಹೆಚ್ಚು ಜನರು ಕೆಲಸ ಮಾಡಿರುತ್ತಾರೆ. ಪ್ಲಾಪ್ ಆದರೆ ನಾನೊಬ್ಬಳೇ ಕುಳಿತು ಅಳಬೇಕಿಲ್ಲ.
ಜಗತ್ತಿನೆಲ್ಲೆಡೆ ಖ್ಯಾತಿ ಪಡೆಯುವ ಮೊದಲು ಸೋಪ್ ಮಾರಾಟ ಮಾಡ್ತಿದ್ರು; ಟಿವಿ ಶೋ ಮಾಡಿ ಸ್ಟಾರ್ ಆಗ್ಬಿಟ್ರು!
ಸಿನಿಮಾ ಅಂತೇನಲ್ಲ. ಯಾವುದೇ ವೃತ್ತಿಯಿರಲಿ, ಅಲ್ಲಿ ನಾವೊಬ್ಬರೇ ಕೆಲಸ ಮಾಡಲು ಆಗುವುದಿಲ್ಲ. ಸ್ವಂತ ಬಿಸಿನೆಸ್ ಎಂದುಕೊಂಡರೂ ಅಲ್ಲೂ ಕೂಡ ಎಲ್ಲ ಕೆಲಸವನ್ನು, ಜವಾಬ್ದಾರಿಗಳನ್ನು ನಾವೋಬ್ಬರೇ ನಿಭಾಯಿಸಲು ಸಾಧ್ಯವಾಗುವುದಿಲ್ಲ. ಎಲ್ಲವೂ ಟೀಮ್ ವರ್ಕ್ ಆಗಿರುತ್ತವೆ. ಮಹಿಳಾ ಪ್ರಧಾನ ಸಿನಿಮವೇ ಆಗಿದ್ದರೂ ಅಲ್ಲೂ ಕೂಡ ಹಿರೋಯಿನ್ ಮಾತ್ರವೇ ಕೆಲಸ ಮಾಡಿರುವುದಿಲ್ಲ. ತುಂಬಾ ಜನರ ಶ್ರಮ, ಪ್ರತಿಭೆ ಅಲ್ಲಿ ಕೆಲಸ ಮಾಡಿರುತ್ತದೆ. ಹೀಗಾಗಿ ನಾನೊಬ್ಬಳೇ ಸೋಲಿಗೆ ಕಾರಣ ಎಂಬುದನ್ನು ನಾನು ತಲೆಗೆ ತಂದುಕೊಳ್ಳುವುದೇ ಇಲ್ಲ.
ಬಿಗ್‌ಬಾಸ್ ಮನೆಯೇ ಮೊದಲ ಪಾಠಶಾಲೆ; ಮೈಕೆಲ್ ಮಾತು ಕೇಳಿ ಸ್ಪರ್ಧಿಗಳಿಗೆ ರೋಮಾಂಚನ!
ಪ್ಲಾಪ್ ಸಿನಿಮಾ ಒಂದು 'ಲವ್ ಬ್ರೇಕಪ್' ಇದ್ದಂತೆ. ಅಗಿದ್ದು ಆಯ್ತು ಎಂದು ಮುಂದಕ್ಕೆ ಸಾಗಬೇಕು. ಆಗಿದ್ದರೆ ಬಗ್ಗೆಯೇ ಕೊರಗುತ್ತಾ ಕುಳಿತರೆ ಯಾವ ಪ್ರಯೋಜನವೂ ಇಲ್ಲ ಎಂಬುದನ್ನು ಆ ಪ್ರಾಜೆಕ್ಟ್‌ನ ಪ್ರತಿಯೊಬ್ಬರೂ ಅರ್ಥ ಮಾಡಿಕೊಳ್ಳಬೇಕು. ಹಾರ್ಟ್ ಬ್ರೇಕಪ್, ಲವ್ ಫೇಲ್ಯೂರ್ ಆದಂತೆ ಅದನ್ನು ಮರೆತು ಮುಂದಕ್ಕೆ ಹೋಗಲು ತೆರೆದ ಮನಸ್ಸಿನಿಂದ ಸಾಗಬೇಕು. ಯಾವುದೇ ಕಲಾವಿದರು ಇದೆಲ್ಲಾ ಸಂಗತಿಗಳನ್ನು ಕಲಿಯದಿದ್ದರೆ ಜೀವನ ಕಷ್ಟ ಎನಿಸಿಬಿಡುತ್ತದೆ. ನಾನಂತೂ ಅದನ್ನು ಸಾಕಷ್ಟು ಮೊದಲೇ ಅರ್ಥ ಮಾಡಿಕೊಂಡು ಹಾಯಾಗಿ ಲೈಫ್ ಲೀಡ್ ಮಾಡುತ್ತಿದ್ದೇನೆ' ಎಂದಿದ್ದಾರೆ ನಟಿ ಪ್ರಿಯಾಂಕಾ ಚೋಪ್ರಾ.