ತ್ರಿಷಾ ಜೊತೆ ರೇಪ್​, ಬೆಡ್​ರೂಂ ದೃಶ್ಯಗಳ ಮಾತನಾಡಿ ಹೈಕೋರ್ಟ್​ನಿಂದ ಛೀಮಾರಿ ಹಾಕಿಸಿಕೊಂಡ ನಟ ಖಾನ್​!

By Suvarna News  |  First Published Dec 13, 2023, 1:09 PM IST

ನಟಿ ತ್ರಿಷಾ ಜೊತೆ ರೇಪ್​, ಬೆಡ್​ರೂಂ ದೃಶ್ಯಗಳ ಕುರಿತು ಮಾತನಾಡಿದ್ದೂ ಅಲ್ಲದೇ ನಟಿಯ ವಿರುದ್ಧವೇ ಹೈಕೋರ್ಟ್ ಮೆಟ್ಟಿಲೇರಿದ್ದ ಮನ್ಸೂರ್ ಅಲಿ ಖಾನ್​ಗೆ ಕೋರ್ಟ್​ ಛೀಮಾರಿ ಹಾಕಿದೆ.
 


ನಟಿ ತ್ರಿಶಾ ಕುರಿತು ಅಸಭ್ಯ ಮಾತನಾಡಿ ಪೇಚಿಗೆ ಸಿಲುಕಿದ್ದ ಖಳ ನಟ ಮನ್ಸೂರ್ ಅಲಿ ಖಾನ್​ಗೆ ಮದ್ರಾಸ್​ ಹೈಕೋರ್ಟ್​ ಛೀಮಾರಿ ಹಾಕಿದೆ.  ತಮಿಳು ಚಿತ್ರ 'ಲಿಯೋ'ಕ್ಕೆ ಸಂಬಂಧಿಸಿದಂತೆ ಈ ಚಿತ್ರದ ಖಳ ನಟರಾಗಿರುವ ಖಾನ್​  ಅಸಹ್ಯ ಹೇಳಿಕೆ ಕೊಟ್ಟಿದ್ದರು.  'ನಾನು ತ್ರಿಷಾ ಜೊತೆ ನಟಿಸುತ್ತಿದ್ದೇನೆ ಎಂದು ಕೇಳಿದಾಗ, ಚಿತ್ರದಲ್ಲಿ ರೇಪ್ ಸೀನ್ ಇರುತ್ತದೆ ಎಂದು ನಾನು ಭಾವಿಸಿದೆ. ನನ್ನ ಹಿಂದಿನ ಚಿತ್ರಗಳಲ್ಲಿ ಇತರ ನಟಿಯರೊಂದಿಗೆ ಮಾಡಿದಂತೆ ನಾನು ತ್ರಿಷಾಳನ್ನು ಬೆಡ್ ರೂಂಗೆ ಕರೆದುಕೊಂಡು ಹೋಗಿ ರೇಪ್ ಮಾಡುವ ಸೀನ್ ಇರುತ್ತದೆ ಎಂದು ನಾನು ಭಾವಿಸಿದೆ. ನಾನು ಅನೇಕ ಚಿತ್ರಗಳಲ್ಲಿ ಅತ್ಯಾಚಾರದ ದೃಶ್ಯಗಳನ್ನು ಮಾಡಿದ್ದೇನೆ. ಇದು ನನಗೆ ಹೊಸದಲ್ಲ. ಆದರೆ ಲಿಯೋ ಸಿನಿಮಾನವರು ತ್ರಿಷಾರ ಮುಖವನ್ನು ಸಹ ನನಗೆ ತೋರಿಸಲಿಲ್ಲ' ಎಂದು ಹೇಳಿದ್ದರು. ಇದರ ಬಗ್ಗೆ ನಟಿ ತ್ರಿಷಾ ಸೇರಿದಂತೆ ಹಲವರಿಂದ ವ್ಯಾಪಕ ಖಂಡನೆ ವ್ಯಕ್ತವಾಗಿತ್ತು.  ಇವರ ವಿರುದ್ಧ   ಮಹಿಳಾ ಆಯೋಗದಿಂದ ದೂರು ದಾಖಲಾಗಿತ್ತು. ನಂತರ ಕ್ಷಮೆಯಾಚಿಸಿದ್ದ ನಟ ತ್ರಿಷಾ ಹಾಗೂ ಇತರರ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲು ಮಾಡಿದ್ದರು.

ಈ ಪ್ರಕರಣವನ್ನು ಕೈಗೆತ್ತಿಕೊಂಡ ಕೋರ್ಟ್​, ಮನ್ಸೂರ್ ಅಲಿ ಖಾನ್​ಗೆ ಛೀಮಾರಿ ಹಾಕಿದೆ. ಮಾನನಷ್ಟ ದೂರು ದಾಖಲಿಸಬೇಕಿರುವುದು ನೀವಲ್ಲ, ನಿಮ್ಮ ವಿರುದ್ಧ ನಟಿ ತ್ರಿಶಾ ದೂರು ದಾಖಲಿಸಬೇಕು ಎಂದು ಕೋರ್ಟ್​ ಹೇಳಿದೆ. ನಿಜವಾಗಿಯೂ ನಿಮ್ಮ ವಿರುದ್ಧ ನಟಿ ಕೋರ್ಟ್​ಗೆ ದೂರು ದಾಖಲು ಮಾಡಬೇಕಿತ್ತು ಎಂದು ಅಭಿಪ್ರಾಯ ಪಟ್ಟಿರುವ ಕೋರ್ಟ್​, ನೀವು ನಟರು. ನಿಮ್ಮನ್ನು ನೋಡಿ ಹಲವರು ಅನುಕರಣೆ ಮಾಡುತ್ತಾರೆ. ನಟರು ಸಾರ್ವಜನಿಕವಾಗಿ ಹೇಗೆ ವರ್ತಿಸಬೇಕು ಎಂದು ತಿಳಿದುಕೊಂಡಿರಬೇಕು. ಹಲವರಿಗೆ ನಿಮ್ಮಂಥವರು  ರೋಲ್‌ ಮಾಡೆಲ್‌ಗಳು.  ಆದ್ದರಿಂದ ಮಾತಿನ ಕುರಿತು ಎಚ್ಚರಿಕೆ ವಹಿಸಬೇಕು. ಅದನ್ನು ಬಿಟ್ಟು ಕೆಟ್ಟದಾಗಿ ಮಾತನಾಡಿ ಈಗ ಅವರ ವಿರುದ್ಧವೇ ಕೇಸ್​​ ದಾಖಲು ಮಾಡಿದ್ದು ಸರಿಯಲ್ಲ ಎಂದ ಕೋರ್ಟ್​, ಅರ್ಜಿಯನ್ನು ವಜಾ ಮಾಡಿದೆ.

Latest Videos

undefined

ಅರೆನಗ್ನ ನಟಿಯರನ್ನೆಲ್ಲಾ ಹಿಂದಿಕ್ಕಿದ 'ಅನಿಮಲ್' ಬೆತ್ತಲೆ ರಾಣಿ ತೃಪ್ತಿಗೆ ಸಿಕ್ತು ಇನ್ನೊಂದು ಪ್ರತಿಷ್ಠಿತ ಸ್ಥಾನ!

ಇದಕ್ಕೂ ಮೊದಲು ತಾನು ಕ್ಷಮೆ  ಕೋರುವ ಪ್ರಶ್ನೆಯೇ ಇಲ್ಲ ಎಂದು ಖಾನ್​ ಹೇಳಿದ್ದರು. ಅದೆಷ್ಟು ನಟಿಯರ ಜೊತೆ ರೇಪ್​  ಸೀನ್​ ಮಾಡಿದ್ದೇನೆ. ನನ್ನನ್ನು ನೋಡಿದರೆ ಕ್ಷಮೆ ಕೋರುವವನ ರೀತಿ ಕಾಣಿಸ್ತೀನಾ? ನಾನು ತಪ್ಪೇ ಮಾಡಿಲ್ಲ ಎಂದಿದ್ದರು. ಇದರ ಬಳಿಕ ಅವರನ್ನು ಚಿತ್ರರಂಗದಿಂದ ತಾತ್ಕಾಲಿಕ ಬ್ಯಾನ್​ ಕೂಡ ಮಾಡಲಾಯಿತು. ನಟ ಮನ್ಸೂರ್ ಅಲಿಖಾನ್ ವಿರುದ್ಧ ಐಪಿಸಿ 509- ಮಹಿಳೆಯ ಸಭ್ಯತೆಗೆ ಧಕ್ಕೆ ತರುವುದು ಮತ್ತು ಐಪಿಸಿ 354(ಎ)- ಮಹಿಳೆಯ ವಿನಮ್ರತೆಗೆ ಧಕ್ಕೆ ತರುವುದು ಸೇರಿದಂತೆ 2 ಸೆಕ್ಷನ್‌ಗಳ ಅಡಿಯಲ್ಲಿ ಎಲ್ಲಾ ಮಹಿಳಾ ಪೊಲೀಸರು ಪ್ರಕರಣ ದಾಖಲಿಸಿದ್ದ ಬಳಿಕ ಖಾನ್​ ಕೊನೆಗೂ ಕ್ಷಮೆ ಕೋರಿದ್ದರು. 

ಆದರೆ ನಂತರ ಮತ್ತೆ  ಉಲ್ಟಾ ಹೊಡೆದು,  ನಟಿ ತ್ರಿಷಾ ಹಾಗೂ ಅವರಿಗೆ ಬೆಂಬಲ ನೀಡಿದ ಮಹಿಳಾ ಆಯೋಗದ ಅಧ್ಯಕ್ಷೆ ಖುಷ್ಬು ಮತ್ತು ನಟ  ಚಿರಂಜೀವಿ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲು ಮಾಡಿದ್ದರು.  10 ದಿನಗಳ ಕಾಲ ಸಾರ್ವಜನಿಕ ಶಾಂತಿ ಕದಡುವ ಆರೋಪ ಸೇರಿದಂತೆ  ಪೂರ್ವ ಯೋಜಿತ ಗಲಭೆ ಆರೋಪದ ಮೇಲೆ ಪ್ರಕರಣಗಳನ್ನು ದಾಖಲಿಸಿದ್ದರು. ತಮ್ಮ ಬಳಿ ನಾನು ಹೀಗೆ ಹೇಳಿಯೇ ಇಲ್ಲ ಎಂಬುದಕ್ಕೆ ಸಾಕ್ಷ್ಯಾಧಾರಗಳು ಇವೆ ಎಂದಿದ್ದರು. ಇದೀಗ ಕೋರ್ಟ್​ನಿಂದ ಛೀಮಾರಿ ಹಾಕಿಸಿಕೊಂಡಿದ್ದಾರೆ.

ಬಿಗ್​ಬಾಸ್​ ಮನೆಯಲ್ಲಿ ಅಶ್ಲೀಲದ ಪರಮಾವಧಿ! ಸ್ಪರ್ಧಿಗಳ ರೊಮ್ಯಾನ್ಸ್​ ವಿಡಿಯೋ ನೋಡಿ ಉಫ್​ ಅಂದ ಫ್ಯಾನ್ಸ್​
 

click me!