
ಕಳೆದ ವರ್ಷದವರೆಗೂ ತೃಪ್ತಿ ಡಿಮ್ರಿ ಎನ್ನುವ ಬಾಲಿವುಡ್ ನಟಿ ಇದ್ದಾರೆ ಎನ್ನುವುದೇ ಎಷ್ಟೋ ಮಂದಿಗೆ ತಿಳಿದಿರಲಿಲ್ಲ. ಆದರೆ ಇದೀಗ ಗೂಗಲ್ನಲ್ಲಿ ತೃಪ್ತಿಯ ಬಗ್ಗೆ ಸಿನಿ ಪ್ರಿಯರಿಗೆ ಇಂಟರೆಸ್ಟ್ ಜಾಸ್ತಿಯಾಗುತ್ತಿದೆ. ಯಾರೀಕೆ? ಯಾವೆಲ್ಲಾ ಚಿತ್ರಗಳಲ್ಲಿ ನಟಿಸಿದ್ದಾರೆ? ಎಲ್ಲಿಯವರು ಎಂದೆಲ್ಲಾ ಸರ್ಚ್ ಶುರುವಿಟ್ಟುಕೊಂಡಿದ್ದಾರೆ. ಪಾಳುಬಿದ್ದಿದ್ದ ಈಕೆಯ ಸೋಷಿಯಲ್ ಮೀಡಿಯಾ ಖಾತೆ ಸಕ್ರಿಯಗೊಂಡಿದ್ದು, ಈಕೆಯ ಸೋಷಿಯಲ್ ಮೀಡಿಯಾ ಕೂಡ ಸರ್ಚ್ ಮಾಡಲಾಗುತ್ತಿದೆ. ದಿಢೀರನೆ ಎಲ್ಲರ ಕಣ್ಣು ಕುಕ್ಕಿದ್ದಾರೆ ಈ ಬೆಡಗಿ. ಅಷ್ಟಕ್ಕೂ ಈ ಬೆಳವಣಿಗೆಗೆ ಕಾರಣ ಏನು ಎಂದು ಬೇರೆ ಹೇಳಬೇಕಾಗಿಲ್ಲ. ಅದೇ ಅನಿಮಲ್ ಚಿತ್ರ. ಸಿನಿಮಾಗಳಲ್ಲಿ ಯಾವುದೇ ಮುಜುಗರ ಪಟ್ಟುಕೊಳ್ಳದೇ ಧಾರಾಳವಾಗಿ ದೇಹ ಪ್ರದರ್ಶನ ಮಾಡುವ, ಸ್ತನಗಳ ಗಾತ್ರಗಳನ್ನು ದೊಡ್ಡದಾಗಿಸಿಕೊಳ್ಳಲು ಶಸ್ತ್ರಚಿಕಿತ್ಸೆ ಮಾಡಿಕೊಂಡು ಹೋದಲ್ಲಿ, ಬಂದಲ್ಲಿ ಅದರ ಪ್ರದರ್ಶನ ಮಾಡುವ ಬಹುತೇಕ ನಟಿಯರನ್ನು ಸೈಡ್ಗೆ ಹಾಕಿದ್ದಾರೆ ತೃಪ್ತಿ ಡಿಮ್ರಿ. ಇದೆಲ್ಲಾ ಸಾಧ್ಯವಾಗಿಸಿದ್ದು ಸಂಪೂರ್ಣ ಬೆತ್ತಲೆ ದೃಶ್ಯ. ಅನಿಮಲ್ ಚಿತ್ರದಲ್ಲಿ ನಟ ರಣಬೀರ್ ಕಪೂರ್ ಜೊತೆ ಈಕೆಯ ನಗ್ನ ದೃಶ್ಯಗಳನ್ನು ನೋಡುತ್ತಿದ್ದಂತೆಯೇ ದಿಢೀರನೆ ಫ್ಯಾನ್ಸ್ ಸಂಖ್ಯೆಯನ್ನೂ ಏರಿಸಿಕೊಂಡಿದ್ದಾರೆ ತಾರೆ.
ಅಷ್ಟಕ್ಕೂ, ರಣಬೀರ್ ಕಪೂರ್ ಅಭಿನಯದ 'ಅನಿಮಲ್' ಚಿತ್ರ ಬಿಡುಗಡೆಯಾದ ದಿನದಿಂದಲೂ ಸುದ್ದಿಯಲ್ಲಿದೆ. ಡಿಸೆಂಬರ್ 1ರಂದು ಬಿಡುಗಡೆಯಾದ ಈ ಚಿತ್ರ 13 ದಿನಕ್ಕೆ ಕಾಲಿಟ್ಟಿದೆ. ಇದಾಗಲೇ ಚಿತ್ರ 800 ಕೋಟಿ ರೂಪಾಯಿಗಳನ್ನು ವಿಶ್ವಾದ್ಯಂತ ಬಾಚಿಕೊಂಡಿದೆ. ಹಲವು ಸೂಪರ್ಹಿಟ್, ಬ್ಲಾಕ್ಬಸ್ಟರ್ ಚಿತ್ರಗಳ ದಾಖಲೆಗಳನ್ನು ಉಡೀಸ್ ಮಾಡಿ ಮುನ್ನುಗ್ಗುತ್ತಿದೆ. ಮಿತಿ ಮೀರಿದ ಅಶ್ಲೀಲತೆ, ಹಿಂಸಾಚಾರ, ಕೌಟುಂಬಿಕ ದೌರ್ಜನ್ಯ, ರಕ್ತಪಾತ ಇವುಗಳನ್ನು ಎಂಜಾಯ್ ಮಾಡುತ್ತಿರುವ ಪ್ರೇಕ್ಷಕರು ದಿನದಿಂದ ದಿನಕ್ಕೆ ಈ ಚಿತ್ರದತ್ತ ವಾಲುತ್ತಿದ್ದಾರೆ. ಚಿತ್ರದ ಹಲವಾರು ಹಿಂಸಾತ್ಮಕ, ಅಶ್ಲೀಲ ದೃಶ್ಯಗಳಿಗೆ ಸೆನ್ಸಾರ್ ಮಂಡಳಿ ಕತ್ತರಿ ಹಾಕಿ ಅಡಲ್ಟ್ ಸರ್ಟಿಫಿಕೇಟ್ ನೀಡಿದ್ದು ಸುತ್ತಿಯಾಗುತ್ತಿದ್ದಂತೆಯೇ ಜನರು ಈ ಚಿತ್ರ ನೋಡಲು ಮತ್ತಷ್ಟು ಉತ್ಸುಕರಾಗುತ್ತಿದ್ದಾರೆ.
ರಣಬೀರ್ ಜೊತೆ ಬೆತ್ತಲಾದಾಗ ಉದ್ವೇಗಗೊಂಡೆ, ಕೈ ಉಜ್ಜಿಕೊಳ್ತಿದ್ದನ್ನು ಅಪ್ಪ ಗಮನಿಸಿ ಹೀಗೆ ಕೇಳಿದ್ರು...
ಸಂದೀಪ್ ರೆಡ್ಡಿ ವಂಗ ನಿರ್ದೇಶನದ ಈ ಚಿತ್ರದಲ್ಲಿ ರಣಬೀರ್ ಕಪೂರ್ ಮತ್ತು ರಶ್ಮಿಕಾ ಮಂದಣ್ಣ ದಂಪತಿಯಾಗಿ ಕಾಣಿಸಿಕೊಂಡಿದ್ದರೆ, ಅನಿಲ್ ಕಪೂರ್ ಮತ್ತು ಬಾಬಿ ಡಿಯೋಲ್ ಕೂಡ ಕಾಣಿಸಿಕೊಂಡಿದ್ದಾರೆ. ಆದರೆ ಚಿತ್ರ ಬಿಡುಗಡೆಗೂ ಮುನ್ನ ಹಾಡೊಂದರ ಟ್ರೇಲರ್ ರಿಲೀಸ್ ಆದಾಗ ರಶ್ಮಿಕಾ ಮಂದಣ್ಣನವರ ಹಸಿಬಿಸಿ ದೃಶ್ಯದಿಂದ ಭಾರಿ ಸುದ್ದಿಯಾಗಿತ್ತು. ಆದರೆ ಈಕೆಗಿಂತಲೂ ಒಂದು ಹೆಜ್ಜೆ ಮುಂದೆ ಹೋಗಿರುವ ಇನ್ನೋರ್ವ ನಟಿ ತೃಪ್ತಿ ಡಿಮ್ರಿ ಮತ್ತು ರಣಬೀರ್ ಕಪೂರ್ ಅವರ ಸಂಪೂರ್ಣ ಬೆತ್ತಲೆ ದೃಶ್ಯದ ಸುದ್ದಿಯಾಗುತ್ತಿದ್ದಂತೆಯೇ ರಶ್ಮಿಕಾ ಸೈಡ್ಗೆ ಹೋಗಿದ್ದಾರೆ, ಎಲ್ಲೆಲ್ಲೂ ತೃಪ್ತಿಯದ್ದೇ ಮಾತು. ರಾತ್ರೋರಾತ್ರಿ ಈಕೆ ರಶ್ಮಿಕಾ ಮಂದಣ್ಣನವರ ನ್ಯಾಷನಲ್ ಕ್ರಷ್ ಪಟ್ಟವನ್ನೂ ಕಿತ್ತುಕೊಂಡಿದ್ದಾರೆ. ಈಕೆಯ ಇನ್ಸ್ಟಾಗ್ರಾಮ್ ಖಾತೆಯ ಫಾಲೋವರ್ಸ್ ಸಂಖ್ಯೆ ದಿಢೀರನೆ ಐದಾರು ಪಟ್ಟು ಹೆಚ್ಚಾಗಿದೆ.
ಇವುಗಳ ನಡುವೆಯೇ ಇದೀಗ ಮತ್ತೊಂದು ಬಿರುದು ಈ ಬೆತ್ತಲೆ ರಾಣಿಯ ಕಿರೀಟಕ್ಕೆ ಸೇರಿದೆ. ಅದೇನೆಂದರೆ IMDb (Internet Movie Database) ಎಂಬ ಹೆಸರಾಂತ ಇಂಟರ್ನೆಟ್ ಮೂವಿ ಡೇಟಾಬೇಸ್, ಇತ್ತೀಚೆಗೆ ಜನಪ್ರಿಯ ಭಾರತೀಯ ಸೆಲೆಬ್ರಿಟಿಗಳ ಕುರಿತು ಮಾಹಿತಿ ನೀಡಿದೆ. ಈ ಸ್ಥಾನದಲ್ಲಿ ಎಲ್ಲಾ ನಟ-ನಟಿಯರನ್ನು ಮೀರಿ ತೃಪ್ತಿ ಡಿಮ್ರಿ ನಂ.1 ಸ್ಥಾನಕ್ಕೆ ಏರಿದ್ದಾರೆ. ಕುತೂಹಲದ ವಿಷಯ ಏನೆಂದರೆ, ಅನಿಮಲ್ ಚಿತ್ರದ ನಿರ್ದೇಶಕ ಸಂದೀಪ್ ರೆಡ್ಡಿ ವಂಗಾ ಎರಡನೇ ಸ್ಥಾನದಲ್ಲಿದ್ದಾರೆ. ಒಟ್ಟಿನಲ್ಲಿ ನಟಿ ತೃಪ್ತಿಯ ಅದೃಷ್ಟ ಖುಲಾಯಿಸಿದೆ. ಈಕೆ ಬೆತ್ತಲಾಗುತ್ತಿದ್ದಂತೆಯೇ ಬೇರೆ ಚಿತ್ರಗಳಿಂದಲೂ ಒಳ್ಳೆಯ ಆಫರ್ಗಳು ಬರುತ್ತಿವೆ. ಇನ್ನು ಉಳಿದ ನಟಿಯರು ಮುಂದೆ ಏನು ಮಾಡುತ್ತಾರೆ ಎನ್ನುವ ಪ್ರಶ್ನೆ ಸಿನಿ ರಸಿಕರನ್ನು ಕಾಡುತ್ತಿದೆ.
ಬೆತ್ತಲೆ ಸೀನ್ ವೇಳೆ ನಾಲ್ವರು ಇದ್ವಿ, ರಣಬೀರ್ ನರ್ವಸ್ ಆಗಿದ್ರು: ಶೂಟಿಂಗ್ ಸಮಯದ ಘಟನೆ ವಿವರಿಸಿದ ನಟಿ ತೃಪ್ತಿ
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.