ನಾಲ್ಕು ವರ್ಷ ಹಿಂದೆ ನಡೆದ ಕೊಲೆ! ನ್ಯಾಯ ಕೋರಿ ಬಾಲಿವುಡ್ ನಟಿ ಆಯೇಷಾ ಜುಲ್ಕಾ ಕೋರ್ಟ್ಗೆ
ಬಾಲಿವುಡ್ ನಟಿ ಆಯೇಷಾ ಜುಲ್ಕಾ ಮನೆಯಲ್ಲಿ ನಾಲ್ಕು ವರ್ಷಗಳ ಹಿಂದೆ ನಡೆದ ಕೊಲೆ ಪ್ರಕರಣ ಇದೀಗ ಕೋರ್ಟ್ ಮೆಟ್ಟಿಲೇರಿದೆ. ಏನಿದು ಘಟನೆ?
1998ರಲ್ಲಿ ತೆರೆಕಂಡ ಕನಸಲೂ ನೀನೆ, ಮನಸಲೂ ನೀನೆ ಚಿತ್ರದ ನಟಿ ಆಯೇಷಾ ಜುಲ್ಕಾ (51) ನೆನಪಿರಬಹುದು. ಬಾಲಿವುಡ್ ನಟಿಯಾದ ಈಕೆ, ಸದ್ಯ ಚಿತ್ರರಂಗದಿಂದ ದೂರವಿದ್ದಾರೆ. ಕುರ್ಬಾನ್ (1991), ಜೋ ಜೀತಾ ವೋಹಿ ಸಿಕಂದರ್ (1992), ಖಿಲಾಡಿ (1992), ಮೆಹರ್ಬಾನ್ (1993), ದಲಾಲ್ (1993), ಬಲ್ಮಾ (1993), ವಕ್ತ್ ಹಮಾರಾ ಹೈ (1993), ಜುಲ್ಕಾ ಯಶಸ್ವಿ ಚಿತ್ರಗಳಲ್ಲಿನ ಚಿತ್ರಣಕ್ಕಾಗಿ ಹೆಚ್ಚು ಹೆಸರುವಾಸಿಯಾಗಿದ್ದಾರೆ . 1993), ರಂಗ್ (1993), ಸಂಗ್ರಾಮ್ (1993), ಜೈ ಕಿಶನ್ (1994), ಮಾಸೂಮ್ (1996) ಮತ್ತು ಹೋಟೆ ಹೋಟೆ ಪ್ಯಾರ್ ಹೋ ಗಯಾ (1999). ಖಿಲಾಡಿ ಮತ್ತು ಜೋ ಜೀತಾ ವೋಹಿ ಸಿಕಂದರ್ ನಂಥ ಹಿಟ್ ಚಿತ್ರಗಳನ್ನು ನೀಡಿರುವ ನಟಿ, ಕೆಲ ವರ್ಷಗಳ ಗ್ಯಾಪ್ ಬಳಿಕ 2023ರಲ್ಲಿ ಬಿಡುಗಡೆಗೊಂಡ ಕಂಡೀಷನ್ಸ್ ಅಪ್ಲೈನಲ್ಲಿ ನಟಿಸಿದ್ದರು.
ಇದೀಗ ನಟಿ ಕೋರ್ಟ್ಗೆ ಅರ್ಜಿ ಸಲ್ಲಿಸುವ ಮೂಲಕ ಸದ್ದು ಮಾಡುತ್ತಿದ್ದಾರೆ. ಅಷ್ಟಕ್ಕೂ ಅವರು ಕೋರ್ಟ್ಗೆ ಹೋಗಿರುವುದು ನಾಲ್ಕು ವರ್ಷಗಳ ಹಿಂದೆ ನಡೆದಿದೆ ಎನ್ನಲಾದ ಕೊಲೆ ಪ್ರಕರಣದಲ್ಲಿ. ಹಾಗೆಂದು ಕೊಲೆಯಾಗಿದ್ದು ಯಾರೋ ಮನುಷ್ಯರಲ್ಲ. ಬದಲಿಗೆ ಆಯೇಷಾ ಮನೆಯ ನಾಯಿ. ತಮ್ಮ ಸಾಕು ನಾಯಿ ರಾಕಿ ನಿಗೂಢ ಸಾವನ್ನಿಪ್ಪಿದ್ದು, ಪೊಲೀಸರು ಇದರ ತನಿಖೆ ನಡೆಸುವಲ್ಲಿ ವಿಫಲರಾಗಿದ್ದಾರೆ ಎಂದು ನಟಿ ಬಾಂಬೆ ಹೈಕೋರ್ಟ್ ಮೊರೆ ಹೋಗಿದ್ದಾರೆ. 2020ರಲ್ಲಿ ಆಯೇಷಾರ ಬಂಗಲೆಯಲ್ಲಿ 6 ವರ್ಷದ ಮುದ್ದಿನ ನಾಯಿ ರಾಕಿ ಅನುಮಾನಾಸ್ಪದವಾಗಿ ಸಾವನ್ನಪ್ಪಿತ್ತು. ಇದು ಕೊಲೆ ಎಂದು ಹೇಳಿದ್ದ ನಟಿಗೆ ಕೇರ್ ಟೇಕರ್ ರಾಮ್ ಅವರ ಮೇಲೆ ಗುಮಾನಿ ಇತ್ತು. ಅವರ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದರು. ಆದರೆ ಇದುವರೆಗೂ ಅಂದರೆ ನಾಲ್ಕು ವರ್ಷ ಕಳೆದರೂ ಪೊಲೀಸರು ತನಿಖೆ ನಡೆಸಲಿಲ್ಲ. ಈ ಹಿನ್ನೆಲೆಯಲ್ಲಿ ಕೋರ್ಟ್ ಮೊರೆ ಹೋಗಿದ್ದಾರೆ.
ಈದ್ ಫ್ಯಾಮಿಲಿ ಫೋಟೋದಲ್ಲಿ ಅತ್ತಿಗೆ ಕರೀನಾರನ್ನೇ ಕಟ್ ಮಾಡಿದ ಸೈಫ್ ತಂಗಿ ಸೋನಾ! ಆಗಿದ್ದೇನು?
ನಾಯಿ ಸಾವನ್ನಪ್ಪಿದ ಬಳಿಕ ನಟಿ ನಾಯಿಯ ಮರಣೋತ್ತರ ಪರೀಕ್ಷೆಗೆ ಒಳಪಡಿಸಿದ್ದರು. ವೈದ್ಯರು ನಾಯಿಯನ್ನು ಕತ್ತು ಹಿಸುಕಿ ಉಸಿರುಗಟ್ಟಿಸಿದ್ದರಿಂದ ಸಾವನ್ನಪ್ಪಿದೆ ಎಂದು ವರದಿ ನೀಡಿದ್ದರು. ಆದರೆ ನಾಯಿ ಅಕಸ್ಮಾತ್ತಾಗಿ ನೀರಿನಲ್ಲಿ ಮುಳುಗಿ ಸತ್ತಿದೆ ಎಂದು ರಾಮ್ ಹೇಳಿದ್ದರು. ಮರಣೋತ್ತರ ಪರೀಕ್ಷೆಯಲ್ಲಿ ನೀರಿನಲ್ಲಿ ನಾಯಿ ಮುಳುಗಿಲ್ಲ ಎಂದು ಕೇಳಿದ ಬಳಿಕ, ರಾಮ್ ಮೇಲೆ ಗುಮಾನಿ ಆಗಿ ದೂರು ದಾಖಲು ಮಾಡಿದ್ದರು. ಘಟನೆಗೆ ಸಂಬಂಧಿಸಿದಂತೆ ರಾಮ್ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿತ್ತು. ಕುಡಿದ ಅಮಲಿನಲ್ಲಿ ನಾಯಿಯನ್ನು ಕತ್ತು ಹಿಸುಕಿ ಕೊಂದಿರುವುದಾಗಿ ಆತ ಪೊಲೀಸರ ಬಳಿ ಒಪ್ಪಿಕೊಂಡಿದ್ದ. ಬಳಿಕ ಆತನನ್ನು ಜೈಲಿಗೂ ಕಳುಹಿಸಲಾಗಿತ್ತು. ಜಾಮೀನಿನ ಮೇಲೆ ಎರಡೇ ದಿನಗಳಲ್ಲಿ ಬಿಡುಗಡೆಗೊಂಡಿದ್ದ.
ಅಂದಿನಿಂದ ಪ್ರಕರಣ ಅಲ್ಲಿಯೇ ಇದೆ. ತನಿಖೆಯ ಸಮಯದಲ್ಲಿ, ರಕ್ತದ ಕಲೆಯಿದ್ದ ಬೆಡ್ ಶೀಟ್ ಅನ್ನು ಪುಣೆಯ ಫೋರೆನ್ಸಿಕ್ ಲ್ಯಾಬ್‌ಗೆ ಕಳುಹಿಸಲಾಗಿದೆ. ಅದರ ವರದಿ ಇನ್ನೂ ಬಂದಿಲ್ಲ. ವರದಿ ಸಂಗ್ರಹಿಸಲು ಸಿಬ್ಬಂದಿ ಇಲ್ಲ ಎಂದು ನಟಿ ದೂರಿದ್ದಾರೆ. ಇದರ ವಿಚಾರಣೆಯನ್ನು ಕೈಗೆತ್ತಿಕೊಂಡಿದ್ದ ಕೋರ್ಟ್, ವಿಚಾರಣೆಯನ್ನು ಮುಂದೂಡಿದೆ.
ಬಾಲಿವುಡ್ ಸ್ಟಾರ್ ನಟರ ಇನ್ನೊಂದು ಮುಖ ಅನಾವರಣಗೊಳಿಸಿದ ನಟಿ ವಿದ್ಯಾ ಬಾಲನ್