ಬಾಲಿವುಡ್ ಸ್ಟಾರ್ ನಟರ ಬಗ್ಗೆ ನಟಿ ವಿದ್ಯಾ ಬಾಲನ್ ಕೆಲವು ವಿಷಯಗಳನ್ನು ಬಹಿರಂಗಗೊಳಿಸಿದ್ದಾರೆ. ಏನದು?
ನಟಿ ವಿದ್ಯಾ ಬಾಲನ್ ಇತ್ತೀಚೆಗೆ ಮದುವೆಯ ವಿಷಯದಲ್ಲಿ ಸಕತ್ ಸದ್ದು ಮಾಡಿದ್ದರು. ಮದುವೆ ಎನ್ನುವುದು ಕೇವಲ ಮತ್ತು ಕೇವಲ ಇಬ್ಬರ ನಡುವೆ ಮಾತ್ರ. ಭಾರತದಲ್ಲಿ ಎಲ್ಲರೂ ಹೇಳುವುದು ಏನೆಂದರೆ, ನೀವು ಮದುವೆಯಾದರೆ ನೀವು ಓರ್ವ ವ್ಯಕ್ತಿಯನ್ನು ಅಲ್ಲ, ನೀವು ಕುಟುಂಬದ ಜೊತೆ ಮದುವೆಯಾದಂತೆ ಎನ್ನುತ್ತಾರೆ. ಆದರೆ ಇದು ಹುಚ್ಚುತನದ ಪರಮಾವಧಿ. ನಾನು ಇದನ್ನು ಒಪ್ಪುವುದಿಲ್ಲ. ಮದುವೆ ಎನ್ನುವುದು ಕೇವಲ ಗಂಡು ಮತ್ತು ಹೆಣ್ಣಿಗೆ ಸಂಬಂಧಿಸಿದ್ದು ಎಂದಿದ್ದರು. ಇದಕ್ಕೆ ಪರ-ವಿರೋಧಗಳ ಚರ್ಚೆ ಶುರುವಾಗಿತ್ತು.
ಇದೀಗ ನಟಿ ಬಾಲಿವುಡ್ನ ಕರಾಳ ಸತ್ಯದ ಬಗ್ಗೆ ಮಾತನಾಡಿದ್ದಾರೆ. ಅಷ್ಟಕ್ಕೂ ಅವರು ಮಹಿಳಾ ಪ್ರಧಾನ ಚಿತ್ರಗಳ ಕುರಿತು ಹೇಳಿಕೆ ನೀಡಿದ್ದಾರೆ. ಬಾಲಿವುಡ್ ಸೇರಿದಂತೆ ಎಲ್ಲಾ ಭಾಷೆಗಳಲ್ಲಿ ಮಹಿಳಾ ಪ್ರಧಾನ ಚಿತ್ರಗಳು ಬರುವುದೇ ಇಲ್ಲ ಎನ್ನುವ ಕೊರಗು ನಟಿಯರದ್ದು. ಈ ಬಗ್ಗೆ ಇದಾಗಲೇ ಹಲವಾರು ಮಂದಿ ಮಾತನಾಡಿದ್ದಾರೆ. ಅದರ ಬಗ್ಗೆ ವಿದ್ಯಾ ಬಾಲನ್ ಕೂಡ ಈಗ ಹೇಳಿಕೆ ನೀಡಿದ್ದಾರೆ. ಮಹಿಳೆಯರು ಇಂದು ಸಿನಿಮಾಗಳಲ್ಲಿ ಹೆಚ್ಚು ಹೈಲೈಟ್ ಆಗುತ್ತಿರುವುದು ಹೀರೋಗಳಿಗೆ ಖುಷಿ ಇಲ್ಲ ಎಂದಿದ್ದಾರೆ. ಅಂದಹಾಗೆ ವಿದ್ಯಾ ಅವರು ಮಹಿಳಾ ಪ್ರಧಾನ ಸಿನಿಮಾಗಳಲ್ಲೇ ಹೆಚ್ಚು ನಟಿಸಿದ್ದಾರೆ. ಈ ಕುರಿತು ಈಗ ಮಾತನಾಡಿದ್ದದಾರೆ. ನನ್ನ ಸಿನಿಮಾಗಳಲ್ಲಿ ಅಥವಾ ಮಹಿಳಾ ಪ್ರಧಾನ ಸಿನಿಮಾಗಳಲ್ಲಿ ನಟಿಸಲು ಹೀರೋಗಳಿಗೆ ಯಾವುದೇ ಹಿಂಜರಿಕೆ ಇಲ್ಲ ಎಂದು ನಾನು ಈಗಲೂ ಭಾವಿಸುವುದಿಲ್ಲ. ನಾವು ಅವರಿಗಿಂತ ಉತ್ತಮ ಸಿನಿಮಾಗಳನ್ನು ಮಾಡುತ್ತಿದ್ದೇನೆ. ಇದು ಅವರಿಗೇ ಆದ ನಷ್ಟ. ಅವರು ಒಂದು ಫಾರ್ಮುಲಾ ಹಿಡಿದುಕೊಂಡು ಸಿನಿಮಾ ಮಾಡುತ್ತಿದ್ದಾರೆ. ಆದರೆ, ಮಹಿಳಾ ಪ್ರಧಾನ ಸಿನಿಮಾಗಳು ಹೆಚ್ಚು ರೋಮಾಂಚನಕಾರಿಯಾಗಿ ಇರುತ್ತವೆ. ಜನರು ಶ್ಲಾಘಿಸಿಲ್ಲ ಎಂದು ನಾನು ಹೇಳುತ್ತಿಲ್ಲ, ಆದರೆ ಮಹಿಳೆಯರು ಹೆಚ್ಚು ಹೈಲೈಟ್ ಆಗುತ್ತಿರುವುದು ಹೀರೋಗಳಿಗೆ ಖುಷಿ ಇಲ್ಲ’ ಎಂದಿದ್ದಾರೆ ಅವರು.
ಶೆರ್ಲಿನ್ ಚೋಪ್ರಾ ವಿಶೇಷ ರೀತಿಯಲ್ಲಿ ಈದ್ ಆಚರಣೆ! ಡ್ರೆಸ್ ಮೇಲೆ ಬಿತ್ತು ಅಭಿಮಾನಿಗಳ ಕಣ್ಣು...!
ಕೆಲ ಹೀರೋಗಳಿಗೆ ನನ್ನ ಜೊತೆ ನಟಿಸೋದು ಅಷ್ಟು ಆರಾಮದಾಯಕ ಅಲ್ಲ ಎನಿಸುತ್ತದೆ. ನಾನು ಯಶಸ್ವಿ ಸಿನಿಮಾಗಳನ್ನು ನೀಡಿದರೂ ನನ್ನ ಜೊತೆ ತೆರೆಹಂಚಿಕೊಳ್ಳೋಕೆ ಬಂದಾಗ ಕೆಲ ಸ್ಟಾರ್ ಹೀರೋಗಳು ಹಿಂಜರಿಕೆ ತೋರಿದ್ದು ಅವರ ಗಮನಕ್ಕೆ ಬಂದಿದೆ ಎಂದೂ ಹೇಳಿದ್ದಾರೆ. ವಿದ್ಯಾ ಬಾಲನ್ ಅವರು ಸದ್ಯ ‘ದೊ ಔರ್ ದೋ ಪ್ಯಾರ್’ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ಚಿತ್ರಕ್ಕೆ ಪ್ರತೀಕ್ ಗಾಂಧಿ ಹೀರೋ. ಇಲಿಯಾನಾ ಡಿಕ್ರೂಜ್ ಕೂಡ ಈ ಸಿನಿಮಾದಲ್ಲಿ ನಟಿಸಿದ್ದಾರೆ. ಇದು ರೊಮ್ಯಾಂಟಿಕ್ ಕಾಮಿಡಿ ಸಿನಿಮಾ.
ಅಂದಹಾಗೆ ನಟಿ 2012ರಲ್ಲಿ ಸಿದ್ಧಾರ್ಥ್ ರಾಯ್ ಕಪೂರ್ ಡೇಟಿಂಗ್ ಮಾಡುತ್ತಿರುವುದಾಗಿ ಘೋಷಿಸಿ ಅದೇ ವರ್ಷ ಮದುವೆಯಾಗಿದ್ದರು. ಈ ಹಿಂದೆ ಇವರು ಮದುವೆ ಮತ್ತು ಲಿವ್ ಇನ್ ರಿಲೇಷನ್ ಕುರಿತು ಮಾತನಾಡಿದ್ದರು. ಮೊದಲಿಗೆ ಲಿವ್ ಇನ್ ರಿಲೇಶನ್‍ಶಿಪ್ ಅಥವಾ ಮದುವೆಯಲ್ಲಿ ಯಾವುದೇ ವ್ಯತ್ಯಾಸಗಳಿಲ್ಲ ಎಂದು ಭಾವಿಸಿದ್ದೆ. ಆದರೆ ಸಿದ್ಧಾರ್ಥ್‍ರಿಂದಾಗಿ ವೈವಾಹಿಕ ಬದುಕು ಅದ್ಭುತವಾಗಿದೆ ಎಂದಿದ್ದರು. ಪತಿಯ ಬಗ್ಗೆ ಮಾತನಾಡುತ್ತಾ, ಸಿದ್ಧಾರ್ಥ್ ಅವರನ್ನು ನನ್ನ ಬಾಳಸಂಗತಿಯನ್ನಾಗಿ ಪಡೆಯಲು ಪುಣ್ಯ ಮಾಡಿದ್ದೆ. ಅವರು ನನ್ನ ಜೀವನದ ಕೆಟ್ಟ ದಿನಗಳಲ್ಲಿ ಬಂದು ಸಂತೋಷವನ್ನು ತಂದುಕೊಟ್ಟಿದ್ದಾರೆ. ಅವರು ನನ್ನನ್ನು ನಾನಿದ್ದಂತೆಯೇ ಸ್ವೀಕರಿಸಿದ್ದಾರೆ ಎಂದಿದ್ದರು. ನನ್ನ ದಾಂಪತ್ಯ ಜೀವನ ಸುಂದರವಾಗಿದೆ. ಮತ್ತೊಬ್ಬರ ಮಾತುಗಳನ್ನು ಆಲಿಸುವ ತಾಳ್ಮೆ ಸಿದ್ಧಾರ್ಥ್ ರಾಯ್ ಕಪೂರ್ ಅವರಷ್ಟು ಬೇರೆಯವರಲ್ಲಿ ನಾನು ನೋಡಿಲ್ಲ ಎಂದಿದ್ದರು. ಅವರೆಷ್ಟು ತಾಳ್ಮೆಯಿಂದ ಕೇಳುತ್ತಾರೆಂದರೆ ನಾನು ಅವರಿಗೆ ಯಾವುದಾದರೂ ಗೊಂದಲದ ವಿಷಯಗಳನ್ನು ವಿವರಿಸುತ್ತಾ ನನಗೇ ಅದರ ಸ್ಪಷ್ಟ ಚಿತ್ರಣ ಸಿಗುತ್ತೆ. ಅವರಿಂದ ಸಲಹೆಗಳೇ ಬೇಕಾಗುವುದಿಲ್ಲ ಎಂದು ವಿವರಿಸಿದರು.
ಈದ್ ಫ್ಯಾಮಿಲಿ ಫೋಟೋದಲ್ಲಿ ಅತ್ತಿಗೆ ಕರೀನಾರನ್ನೇ ಕಟ್ ಮಾಡಿದ ಸೈಫ್ ತಂಗಿ ಸೋನಾ! ಆಗಿದ್ದೇನು?