ಕೆನ್ನೆಗೆ ಹೊಡೆದವನನ್ನೇ ಮದ್ವೆಯಾದ ಇಶಾ ಡಿಯೋಲ್​: ಇಂಟರೆಸ್ಟಿಂಗ್​ ಲವ್​ ಸ್ಟೋರಿ

By Suvarna News  |  First Published Jun 2, 2023, 2:48 PM IST

ನಟಿ ಇಶಾ ಡಿಯೋಲ್ ತಮ್ಮ ಭಾವಿ ಪತಿ ಭರತ್ ತಖ್ತಾನಿಗೆ ಕಪಾಳಮೋಕ್ಷ ಮಾಡಿದ್ದರು. ಇದರಿಂದ ಸಂಬಂಧದಲ್ಲಿ ಬಿರುಕು ಮೂಡಿತ್ತು, ನಂತರ ಭರತ್, ಧರ್ಮೇಂದ್ರ-ಹೇಮಾ ಮಾಲಿನಿ  ಅಳಿಯ ಹೇಗೆ ಆದರು?
 


ಬಾಲಿವುಡ್ ನ ಹಿರಿಯ ನಟ ಧರ್ಮೇಂದ್ರ ಮತ್ತು ನಟಿ ಹೇಮಾ ಮಾಲಿನಿ (Hema Malini) ಅವರ ಪುತ್ರಿ ಇಶಾ ಡಿಯೋಲ್ ಬಾಲಿವುಡ್​ನಲ್ಲಿ ಬೇರೂರಿದ್ದಾರೆ. ಆದರೆ ಸ್ಟಾರ್​ ಕಿಡ್​ ಆದರೂ ತಂದೆ ಧರ್ಮೇಂದ್ರ, ತಾಯಿ ಹೇಮಾಮಾಲಿನಿಯವರಂತೆ ಫೇಮಸ್​ ಆಗಲು ಸಾಧ್ಯವಾಗಲಿಲ್ಲ.  ಫುಟ್‌ಬಾಲ್‌ನಲ್ಲಿ ಆಸಕ್ತಿಯಿದ್ದರೂ ಮತ್ತು ಶಾಲಾ ದಿನಗಳಲ್ಲಿ ಫುಟ್‌ಬಾಲ್ ತಂಡದ ನಾಯಕಿಯಾಗಿ ಮತ್ತು ರಾಜ್ಯ ಮಟ್ಟದಲ್ಲಿ ಹ್ಯಾಂಡ್‌ಬಾಲ್‌ನಲ್ಲಿ ಕಾಲೇಜನ್ನು ಪ್ರತಿನಿಧಿಸುತ್ತಿದ್ದ ಮಿಡ್‌ಫೀಲ್ಡರ್ ಆಗಿದ್ದ ಇಶಾ, ನಂತರ  ನಟಿಯಾಗುವ ಕನಸಿನ ಬೆನ್ನೇರಿದವರು.  ಇಶಾ ಡಿಯೋಲ್ ಅವರು 2002 ರಲ್ಲಿ 'ಕೋಯಿ ಮೇರೆ ದಿಲ್ ಸೆ ಪೂಛೆ' ಚಿತ್ರದ ಮೂಲಕ ತಮ್ಮ ಚಲನಚಿತ್ರ ವೃತ್ತಿಜೀವನವನ್ನು ಪ್ರಾರಂಭಿಸಿದರು. ಇದಾದ ಬಳಿಕ  ಅನೇಕ ಚಿತ್ರಗಳಲ್ಲಿ ಕೆಲಸ ಮಾಡಿದರೂ ಖ್ಯಾತಿ ಪಡೆಯಲಿಲ್ಲ. ಕೊನೆಗೂ  ಸಿನಿಮಾಗಳಿಂದ ಸ್ವಲ್ಪ ವಿರಾಮ ತೆಗೆದುಕೊಂಡು ಮದುವೆಯಾಗಲು ನಿರ್ಧರಿಸಿದ್ದರು. ಆದರೆ ಅವರ ಮದುವೆಯ ಸ್ಟೋರಿಯೂ ಯಾವುದೇ ಸಿನಿಮಾಕ್ಕೂ ಕಮ್ಮಿಯೇನಿಲ್ಲ.
 
ಉದ್ಯಮಿ ಭರತ್ ತಖ್ತಾನಿ ಅವರನ್ನು ಮದುವೆಯಾಗಲು ನಿರ್ಧರಿಸಿದ್ದು ಇಶಾ ಡಿಯೋಲ್ (Eesha Deol) ಅವರೇ. ಇಬ್ಬರ ಪ್ರೇಮಕಥೆಯೂ ಕುತೂಹಲಕರವಾಗಿದ್ದು, ಸಿನಿಮಾ ರೀತಿಯಲ್ಲಿದೆ.  ಅವರು ಮೊದಲು ಪ್ರೀತಿಸುತ್ತಿದ್ದರು, ನಂತರ ಪರಸ್ಪರ ಭಿನ್ನಾಭಿಪ್ರಾಯಗಳಿಂದ ಅವರ ಸಂಬಂಧ ಮುರಿದುಹೋಯಿತು, ಆದರೆ ನಂತರ ಮತ್ತೆ ಭೇಟಿಯಾದರು, ಪುನಃ ಪ್ರೇಮ ಚಿಗುರಿತ್ತು. ಅಂದಹಾಗೆ ಭರತ್​ ತಮ್ಮ  13 ನೇ ವಯಸ್ಸಿನಲ್ಲಿ ಇಶಾಗೆ ತಮ್ಮ  ಹೃದಯವನ್ನು ನೀಡಿದ್ದರು. ಇಶಾ ಮತ್ತು ಭರತ್ ಅವರ ಮೊದಲ ಭೇಟಿ ನಡೆದಿದ್ದು ಇಬ್ಬರೂ 13 ವರ್ಷದವರಾಗಿದ್ದಾಗ. ಭರತ್ ಮೊದಲ ನೋಟದಲ್ಲೇ ಮನಸೋತಿದ್ದರು. ಇಂಟರ್‌ಸ್ಕೂಲ್ ಸ್ಪರ್ಧೆಗಳಲ್ಲಿ ಇಬ್ಬರೂ ಆಗಾಗ ಭೇಟಿಯಾಗುತ್ತಿದ್ದರು. ಇಶಾ 'ಜಮ್ನಾಬಾಯಿ ನರ್ಸೀ ಸ್ಕೂಲ್'ನಲ್ಲಿ ಮತ್ತು ಭರತ್ ಬಾಂದ್ರಾದ 'ಲರ್ನರ್ಸ್ ಅಕಾಡೆಮಿ ಸ್ಕೂಲ್'ನಲ್ಲಿ ಓದಿದ್ದಾರೆ.

ಮಲೈಕಾ ಅರೋರಾ- ಅರ್ಜುನ್ ಕಪೂರ್ ಅಪ್ಪ-ಅಮ್ಮ ಆಗ್ತಿದ್ದಾರಾ? ನಟ ಹೇಳಿದ್ದೇನು?

ಸಂದರ್ಶನವೊಂದರಲ್ಲಿ ಭರತ್ (Bharat Takhtani) ಅವರನ್ನು ಕೇಳಿದಾಗ, ನೀವು ಇಶಾ ಅವರನ್ನು ಪ್ರೀತಿಸುವಷ್ಟು ವಿಶೇಷತೆ ಏನು? ಆಗ ಭರತ್ ಹೇಳಿದ್ದು, 'ಇಶಾ ಯಾವಾಗಲೂ ಫ್ರೆಶ್ ಆಗಿ ಕಾಣುತ್ತಿದ್ದಳು ಮತ್ತು ಅವಳು ಸಾಕಷ್ಟು ಮುದ್ದಾಗಿದ್ದಳು. ವಿಶೇಷವೆಂದರೆ ನಾವಿಬ್ಬರೂ ಒಬ್ಬರನ್ನೊಬ್ಬರು ಇಷ್ಟ ಪಡುತ್ತಿದ್ದೆವು.ಎಲ್ಲವೂ ಸರಿ ಹೋಗುತ್ತಿದೆ ಎಂದು ಹೇಳಿದ್ದರು.ಆದರೆ ಒಂದು ದಿನ ನಾನು ಪ್ರೀತಿಯಿಂದ ಇಶಾಳ ಕೈ ಹಿಡಿಯಲು ಪ್ರಯತ್ನಿಸಿದೆ. ಇದು ನಾನು ಮಾಡಿದ ಮೊದಲ ಎಡವಟ್ಟಾಗಿತ್ತು.  ಈ ಕೃತ್ಯವು ಇಶಾಳನ್ನು ಕೆರಳಿಸಿತು ಮತ್ತು ಅವಳು ನನ್ನ ಮೇಲೆ  ಕೋಪಗೊಂಡಳು.  ನನ್ನ ಕೆನ್ನೆಗೆ ಬಲವಾಗಿ ಹೊಡೆದು  ‘ನನ್ನ ಕೈ ಹಿಡಿಯಲು ಎಷ್ಟು ಧೈರ್ಯ’ ಎಂದು ಕೇಳಿದಳು. ನಂತರ ನನ್ನ ಜೊತೆ ಮಾತನಾಡುವುದನ್ನು ನಿಲ್ಲಿಸಿದಳು ಎಂದು ಭರತ್​ ಹೇಳಿದ್ದರು. ನಂತರ ಇನ್ನೊಂದು ಸಂದರ್ಶನದಲ್ಲಿ ಪ್ರತಿಕ್ರಿಯೆ ನೀಡಿದ್ದ ಇಶಾ,  ಆ ಸಮಯದಲ್ಲಿ ನಾವು ಅಪ್ರಬುದ್ಧರಾಗಿದ್ದೆವು. ಈ ಘಟನೆಯ ನಂತರ ಹಲವು ವರ್ಷಗಳ ಕಾಲ ಇಬ್ಬರ ನಡುವೆ ಯಾವುದೇ ಮಾತುಕತೆ ನಡೆದಿರಲಿಲ್ಲ, ಆದರೂ ಭರತ್​ಗೆ ನನ್ನ ಮೇಲಿನ ಪ್ರೀತಿ ಕಡಿಮೆಯಾಗಿರಲಿಲ್ಲ. 10 ವರ್ಷ ಇಬ್ಬರೂ  ಮಾತನಾಡಿರಲಿಲ್ಲ ಎಂದಿದ್ದಾರೆ. 

Tap to resize

Latest Videos

 10 ವರ್ಷಗಳ ಕಾಲ ಪರಸ್ಪರ ದೂರವಿದ್ದ ಭರತ್ ಮತ್ತು ಇಶಾ ಮತ್ತೆ ಇದ್ದಕ್ಕಿದ್ದಂತೆ ಭೇಟಿಯಾದರು. ಅವರಿಬ್ಬರೂ ಕೆನಡಾದ ನಯಾಗರಾ ಜಲಪಾತದಲ್ಲಿ  ಭೇಟಿಯಾದದ್ದು ವಿಧಿಯ ಆಟ. ಇಬ್ಬರ ಮನದಲ್ಲೂ ಪ್ರೀತಿ ಇತ್ತು. ಆ ವೇಳೆ ಭರತ್ ಇಶಾಳ ಕೈ ಹಿಡಿಯಬಹುದೆಂದು ಕೇಳಿದ್ದ. ಇದರ ನಂತರ ಇಶಾ ತಕ್ಷಣವೇ ಹೌದು ಎಂದು ನಾಚಿದ್ದರಂತೆ. ನಂತರ ಇಶಾ  ಭರತ್‌ ಅವರನ್ನು ಕುಟುಂಬದವರಿಗೆ ಪರಿಚಯಿಸಿ ಅಮ್ಮ ಹೇಮಾ ಮಾಲಿನಿಗೆ  ವಿಷಯವನ್ನೆಲ್ಲಾ ಹೇಳಿದ್ದರು.   ಅಮ್ಮ ಒಪ್ಪಿಕೊಂಡ ಬಳಿಕ ಅಪ್ಪ ಧರ್ಮೇಂದ್ರ ಸರದಿ. ಭರತ್​ ಜೊತೆ ಸುಮಾರು ಒಂದು ಗಂಟೆ ಮಾತುಕತೆ ನಡೆಸಿದ ಬಳಿಕ ಅಪ್ಪ ಧರ್ಮೇಂದ್ರ (Dharmendra) ಅವರಿಗೂ  ಭರತ್ ಇಷ್ಟವಾಗಿ ಇಬ್ಬರ ಮದುವೆ 2012ರಲ್ಲಿ ನಡೆದಿದ್ದು, ಬರುವ 29ರಂದು  11 ವರ್ಷ ಪೂರ್ಣಗೊಳ್ಳುತ್ತದೆ.  ಈ ದಂಪತಿಗೆ ರಾಧ್ಯಾ  (4) ಮತ್ತು ಮಿರಯಾ (3) ಎಂಬ ಮಕ್ಕಳಿದ್ದಾರೆ.  

Tip Tip Barsa Pani: ಸೀರೆ ಬಿಚ್ಬಾರ್ದು, ಕಿಸ್ ಕೊಡ್ಬಾರ್ದು.... ಮಳೆ ಸೀನ್​ಗೆ ರವೀನಾ ಟಂಡನ್​ ಕಂಡೀಷನ್​!
 

click me!