ಮೆಗಾಸ್ಟಾರ್ ಕುಟುಂಬದಲ್ಲಿ ಮದುವೆ ಸಂಭ್ರಮ; ಹಸೆಮಣೆ ಏರ್ತಿದ್ದಾರೆ ವರುಣ್ ತೇಜ್, ಹುಡುಗಿ ಯಾರು, ಯಾವಾಗ ಮದುವೆ?

By Shruthi KrishnaFirst Published Jun 2, 2023, 1:23 PM IST
Highlights

ಮೆಗಾಸ್ಟಾರ್ ಕುಟುಂಬದಲ್ಲಿ ಮದುವೆ ಸಂಭ್ರಮ ಶುರುವಾಗಿದೆ. ಚಿರಂಜೀವಿ ಸಹೋದರ ನಾಗೇಂದ್ರ ಬಾಬು ಪುತ್ರ, ನಟ ವರುಣ್ ತೇಜ್ ಹಸೆಮಣೆ ಏರ್ತಿದ್ದಾರೆ. 

ಮೆಗಾಸ್ಟಾರ್ ಚಿರಂಜೀವಿ ಕುಟುಂಬದಲ್ಲಿ ಮತ್ತೊಂದು ಮದುವೆ ಸಂಭ್ರಮ  ಶುರುವಾಗಿದೆ.  ಚಿರಂಜೀವಿ ಸಹೋದರ ನಗೇಂದ್ರ ಬಾಬು ಪುತ್ರ ವರುಣ್ ತೇಜ್ ಹಸೆಮಣೆ ಏರಲು ಸಜ್ಜಾಗಿದ್ದಾರೆ. ಕಳೆದ ಎರಡು ವರ್ಷಗಳ ಹಿಂದೆ ಮಗಳ ಮದುವೆ ಮಾಡಿದ್ದ ನಾಗೇಂದ್ರ ಬಾಬು ಇದೀಗ ಪುತ್ರನ ಮದುವೆಗೆ ಸಜ್ಜಾಗಿದ್ದಾರೆ. ಕಳೆದ ಕೆಲವು ತಿಂಗಳಿಂದ ವರುಣ್ ತೇಜ್ ಮದುವೆ ಸುದ್ದಿ ಕೇಳಿ ಬರುತಿದೆ. ಆದರೆ ಈ ಬಗ್ಗೆ ಎಲ್ಲೂ ಕೂಡ ಬಹಿರಂಗವಾಗಿ ಹೇಳಿಕೊಂಡಿರಲಿಲ್ಲ. ಸದ್ಯ ಕೇಳಿ ಬರುತ್ತಿರುವ ಮಾಹಿತಿ ಪ್ರಕಾರ ಈಗಾಗಲೇ ನಿಶ್ಚಿತಾರ್ಥ ದಿನಾಂಕ ಫಿಕ್ಸ್ ಆಗಿದ್ದ ಇದೇ ತಿಂಗಳು ವರುಣ್ ತೇಜ್ ಎಂಗೇಜ್‌ಮೆಂಟ್ ಮಾಡಿಕೊಳ್ಳಲಿದ್ದಾರೆ ಎನ್ನಲಾಗಿದೆ. ಅಂದಹಾಗೆ ವರುಣ್ ತೇಜ್ ಬಹುಕಾಲದ ಗೆಳತಿ, ಉತ್ತರ ಪ್ರದೇಶದ ಅಯೋಧ್ಯೆ ಮೂಲದ ನಟಿ ಲಾವಣ್ಯ ತ್ರಿಪಾಠಿ ಜೊತೆ ದಾಂಪತ್ಯಕ್ಕೆ ಕಾಲಿಡುತ್ತಿದ್ದಾರೆ. 

ಅಂದಹಾಗೆ ವರುಣ್ ತೇಜ್ ಮತ್ತು ಲಾವಣ್ಯಾ ಜೋಡಿ ಇದೇ ತಿಂಗಳು (ಜೂನ್) 9ಕ್ಕೆ ನಿಶ್ಚಿತಾರ್ಥ ಮಾಡಿಕೊಳ್ಳುತ್ತಿದ್ದಾರೆ ಎನ್ನಲಾಗಿದೆ. ಆದರೆ ಈ ಬಗ್ಗೆ ವರುಣ್ ಅಥವಾ ಕುಟುಂಬದ ಕಡೆಯಿಂದ ಯಾವುದೇ ಅಧಿಕೃತ ಮಾಹಿತಿ ಬಹಿರಂಗವಾಗಿಲ್ಲ. ನಿಶ್ಚಿತಾರ್ಥ ಸಮಾರಂಭ ಮನೆ ಅಥವಾ ಹೈದಾಬಾದ್‌ನ ಯಾವ ಸ್ಥಳದಲ್ಲಿ ನಡೆಯಲಿದೆ ಎನ್ನುವುದನ್ನು ತೀರ ಗುಟ್ಟಾಗಿ ಇಟ್ಟಿದ್ದಾರೆ. ಇನ್ನೂ ನಿಶ್ಚಿತಾರ್ಥ ಸಮಾರಂಭಕ್ಕೆ ಕುಟುಂಬದವರು ಮತ್ತು ತೀರಾ ಆಪ್ತರು ಮಾತ್ರ ಭಾಗಿಯಾಗಲಿದ್ದಾರೆ ಎನ್ನಲಾಗಿದೆ.  

ಅಂದಹಾಗೆ ವರುಣ್ ತೇಜ್ ಮತ್ತು ಲಾವಣ್ಯ ತ್ರಿಪಾಠಿ ಇಬ್ಬರೂ ಸದ್ಯ ವಿದೇಶದಲ್ಲಿದ್ದಾರೆ. ಇಬ್ಬರೂ ಭಾರತಕ್ಕೆ ವಾಪಾಸ್ ಆದ ಬಳಿಕ ಅಧಿಕೃತ ಘೋಷಣೆ ಮಾಡುವ ಸಾಧ್ಯತೆ ಇದೆ. ಇಬ್ಬರ ನಿಶ್ಚಿತಾರ್ಥಕ್ಕೆ ಇಬ್ಬರ ಡ್ರೆಸ್ ಸಿದ್ದವಾಗುತ್ತಿದೆ ಎಂದು ಮೂಲಗಳು ಮಾಹಿತಿ ನೀಡಿವೆ. 

ಬೆಂಗಳೂರಿನಲ್ಲಿ Varun Tej ಬರ್ತಡೇ, ಗಾಸಿಪ್‌ಗೆ ಲಾವಣ್ಯಾ ತ್ರಿಪಾಠಿ ಪರೋಕ್ಷ ಉತ್ತರ!

ವರುಣ್ ತೇಜ್ ಜೊತೆ ಡೇಟಿಂಗ್ ಬಗ್ಗೆ ಅಧಿಕೃತ ಗೊಳಿಸದಿದ್ದರೂ ಇಬ್ಬರ ಮದುವೆ ವಿಚಾರ ಭಾರಿ ವೈರಲ್ ಆಗಿತ್ತು. ಆದರೂ ಇಬ್ಬರೂ ಇಲ್ಲಿಯೂ ತಮ್ಮ ಡೇಟಿಂಗ್ ವಿಚಾರ ಬಹಿರಂಗ ಪಡಿಸಿಲ್ಲ. ಅಂದಹಾಗೆ ಲಾವಣ್ಯ ಹಾಗೂ ವರುಣ್ ತೇಜ್ ಅವರು ‘ಮಿನಿಸ್ಟರ್​’, ‘ರಾಯಾಭಾರಿ’ ಸಿನಿಮಾಗಳಲ್ಲಿ ಒಟ್ಟಾಗಿ ನಟಿಸಿದ್ದಾರೆ. ಸೆಟ್​ನಲ್ಲಿ ಇವರ ಮಧ್ಯೆ ಪ್ರೀತಿ ಮೂಡಿದೆ ಎನ್ನಲಾಗುತ್ತಿದೆ. ಲಾವಣ್ಯ ಹುಟ್ಟುಹಬ್ಬದ ದಿನ ವರುಣ್ ತೇಜ್ ಪ್ರಪೋಸ್ ಮಾಡಿದ್ದರು ಎನ್ನುವ ಸುದ್ದಿಯೂ ಇದೆ. ವಜ್ರದ ಉಂಗುರವನ್ನು ಲಾವಣ್ಯ ಅವರಿಗೆ ಗಿಫ್ಟ್ ನೀಡಿದ್ದರು ಎನ್ನಲಾಗಿದೆ. 

ಉತ್ತರ ಪ್ರದೇಶದ ಮೂಲದ ನಟಿ ಲಾವಣ್ಯ ತೆಲುಗು ಸಿನಿಮಾ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟರು. ತೆಲುಗು, ತಮಿಳು ಮತ್ತು ಹಿಂದಿ ಸಿನಿಮಾಗಳಲ್ಲಿ ಲಾವಣ್ಯ ನಟಿಸಿದ್ದಾರೆ. ಕೊನೆಯದಾಗಿ ಹ್ಯಾಪಿ ಬರ್ತಡೆ ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದರು. ಸದ್ಯ ತಮಿಳು ಸಿನಿಮಾದಲ್ಲಿ ನಟಿಸುತ್ತಿದ್ದಾರೆ.  

click me!