ನನ್ನಲ್ಲಿ ಸಾಕಷ್ಟು ಸಮಸ್ಯೆಗಳಿವೆ, ನನಗೆ ಏನೋ ಬೇಕು, ಆದರೆ ಏನು ಬೇಕಾಗಿದೆ ಎಂಬುದು ಗೊತ್ತಾಗುತ್ತಿರಲಿಲ್ಲ. ನನ್ನ ಬಳಿ ಯಾವುದಕ್ಕೂ ಉತ್ತರವಿರಲಿಲ್ಲ, ಬರೀ ಪ್ರಶ್ನೆಗಳೇ ತುಂಬಿಕೊಂಡಿದ್ದವು. ನನಗೇನಾಗಿದೆ ಎಂಬುದೇ ತಿಳಿದಿರಲಿಲ್ಲ, ಯಾವುದೇ ಕಾರಣಗಳೂ ಇಲ್ಲದೇ ದುಃಖವಾಗುತ್ತಿತ್ತು, ಆದರೆ ಸಂತೋಷ ಮಾತ್ರ ಹತ್ತಿರವೂ ಸುಳಿಯುತ್ತಿರಲಿಲ್ಲ.
ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಸಿನಿಮಾ ಲೋಕದ ಬಹುದೊಡ್ಡ ಸ್ಟಾರ್ ಆಗಿ ಬೆಳೆದಿದ್ದಾರೆ. ಕನ್ನಡ ಸಿನಿಮಾ ಐಶ್ವರ್ಯ ಸಿನಿಮಾ ಮೂಲಕ ಸಿನಿರಂಗ ಪ್ರವೇಶಿಸಿದ ನಟಿ ದೀಪಿಕಾ, ಬಾಲಿವುಡ್‌ನಲ್ಲಿ ಶಾರುಖ್ ಖಾನ್ ಜತೆ 'ಓಂ' ಸಿನಿಮಾದಲ್ಲಿ ಜತೆಯಾಗುವ ಮೂಲಕ ಬಾಲಿವುಡ್ ಎಂಟ್ರಿ ಪಡೆದವರು. ಆ ಬಳಿಕ ಅವರು ತಮ್ಮ ವೃತ್ತಿ ಜೀವನದಲ್ಲಿ ತಿರುಗಿ ನೋಡಲಿಲ್ಲ. ಸಿನಿಮಾ ಮಾಡುತ್ತಲೇ ನಟ ರಣವೀರ್ ಸಿಂಗ್ ಜತೆ ಲವ್ವಲ್ಲಿ ಬಿದ್ದು ಮದುವೆ ಕೂಡ ಮಾಡಿಕೊಂಡಿದ್ದಾರೆ ನಟಿ ದೀಪಿಕಾ ಪಡುಕೋಣೆ. ಇಂಥ ದೀಪಿಕಾ ಒಮ್ಮೆ ತಾವು ಡಿಪ್ರೆಶನ್‌ಗೆ ಹೋದಾಗ ಯಾವ ರೀತಿ ಅನುಭವ ಆಗಿತ್ತು ಎಂಬುದನ್ನು ತುಂಬಾ ನೋವಿನಿಂದ ಹೇಳಿಕೊಂಡಿದ್ದಾರೆ.
'ಮನಸ್ಸಿನಲ್ಲಿ ನನಗೆ ಎಷ್ಟು ವಿಚಿತ್ರವಾದ ಫೀಲಿಂಗ್ಸ್ ಬರುತ್ತಿತ್ತು ಎಂದರೆ ಅದನ್ನು ಯಾವುದೇ ರೀತಿಯಲ್ಲಿ, ಭಾಷೆಯಲ್ಲಿ ಪದಗಳಲ್ಲಿ ಹೇಳಲು ನನಗೆ ಅಸಾಧ್ಯವಾಗಿತ್ತು. ಬೆಳಿಗ್ಗೆ ಆದ ತಕ್ಷಣ ನನಗೆ ಭಯವಾಗುತ್ತಿತ್ತು. ಇನ್ನು ಮಲಗುವುದೂ ಕಷ್ಟವೇ, ಅದರೆ ಎದ್ದು ಹೊರಗೆ ಮುಖ ತೋರಿಸಲು, ಜನರೊಂದಿಗೆ ಬೆರೆಯಲು ನನಗೆ ಭಯವಾಗುತ್ತಿತ್ತು. ನನ್ನ ಹೊಟ್ಟೆಯಲ್ಲಿ ಅಸಹಾಯಕತೆ ಕಾಡುತ್ತಿತ್ತು, ವಿಚಿತ್ರ ಎನಿಸುವ ಸಂಕಟ ಆಗುತ್ತಿತ್ತು. ನನಗೆ ಏನೋ ಆಗುತ್ತಿದೆ, ಅದು ಬೇರೆಯವರಿಗೆ ತಿಳಿಯಬಾರದು, ತಿಳಿಯದಂತೆ ನಾನು ಇರಬೇಕು ಎನಿಸುತ್ತಿತ್ತು.
ನನ್ನಲ್ಲಿ ಸಾಕಷ್ಟು ಸಮಸ್ಯೆಗಳಿವೆ, ನನಗೆ ಏನೋ ಬೇಕು, ಆದರೆ ಏನು ಬೇಕಾಗಿದೆ ಎಂಬುದು ಗೊತ್ತಾಗುತ್ತಿರಲಿಲ್ಲ. ನನ್ನ ಬಳಿ ಯಾವುದಕ್ಕೂ ಉತ್ತರವಿರಲಿಲ್ಲ, ಬರೀ ಪ್ರಶ್ನೆಗಳೇ ತುಂಬಿಕೊಂಡಿದ್ದವು. ನನಗೇನಾಗಿದೆ ಎಂಬುದೇ ತಿಳಿದಿರಲಿಲ್ಲ, ಯಾವುದೇ ಕಾರಣಗಳೂ ಇಲ್ಲದೇ ದುಃಖವಾಗುತ್ತಿತ್ತು, ಆದರೆ ಸಂತೋಷ ಮಾತ್ರ ಹತ್ತಿರವೂ ಸುಳಿಯುತ್ತಿರಲಿಲ್ಲ. ಯಾರಾದರೂ ಕಂಡರೆ ಭಯವಾಗುತ್ತಿತ್ತು, ಯಾರೋ ಸಮಾಧಾನ ಮಾಡಿದರೆ ಅದು ದುಃಖದ ಹೆಚ್ಚಳಕ್ಕೇ ಕಾರಣವಾಗುತ್ತಿತ್ತು. ಮನೆಯಿಂದ ಹೊರಗೆ ಹೋಗಲು ಭಯ, ಆತಂಕ. ಮನೆಯಲ್ಲಿದ್ದರೂ ಕತ್ತಲೆಯಲ್ಲೇ ಇರಬೇಕು ಎಂಬ ಭಾವನೆ. ಲೈಟ್ ಎಂದರೆ ಅಲರ್ಜಿ, ಊಟ-ತಿಂಡಿ ಬೇಡ ಎನ್ನುವ ಭಾವನೆ.
ನನಗೆ ಪ್ರೀತಿ ಬೇಕಿತ್ತು ಅನುಕಂಪವಲ್ಲ, ಬಿಗ್ ಬಾಸ್ ಮನೆ ಅದನ್ನು ಕೊಟ್ಟಿದೆ; ನೀತು ವನಜಾಕ್ಷಿ
ಯಾಕೆ ಹೀಗಾಗುತ್ತಿದೆ ಎಂಬ ಸಮಸ್ಯೆಯ ಅರಿವೂ ಇರಲಿಲ್ಲ, ಏನು ಮಾಡಬೇಕು ಎಂಬ ಪರಿಹಾರದ ಮಾರ್ಗ ಕೂಡ ಹೊಳೆದಿರಲಿಲ್ಲ. ಒಂದು ದಿನ, ನನಗೆ ಯಾವುದೋ ಒಂದು ವಿಡಿಯೋ ಮೂಲಕ ಅದು 'ಡಿಪ್ರೆಶನ್' ಎಂಬ ಖಾಯಿಲೆ ಎಂದು ಅರಿವಾಯಿತು. ಬಳಿಕ, ಅದಕ್ಕೆ ಪರಿಹಾರದ ಮಾರ್ಗವೂ ಸಿಕ್ಕಿತು. ಇಂದು ನಾನು ಡಿಪ್ರೆಶನ್ ಖಾಯಿಲೆಯಿಂದ ಸಂಪೂರ್ಣ ಹೊರಗೆ ಬಂದಿದ್ದೇನೆ. ಅಂದು ಅನುಭವಿಸಿದ ನೋವು, ಮಾನಸಿಕ ತೊಳಲಾಟವನ್ನು ಇಂದು ನೆನಪಿಸಿಕೊಂಡರೂ ಅಳು ಬರುತ್ತದೆ.
ಮಂತ್ರ ಮಾಂಗಲ್ಯದ ಮೂಲಕ ದಾಂಪತ್ಯಕ್ಕೆ ಕಾಲಿಡುತ್ತಿದ್ದಾರೆ ಮುಂಗಾರು ಮಳೆ ಚೆಲುವೆ ಪೂಜಾ ಗಾಂಧಿ, ಯಾರು ಆ ವರ?
ಆದರೆ ನನಗೀಗ ಆ ಬಗ್ಗೆ ಸಂಪೂರ್ಣ ಅರಿವು ಮೂಡಿದೆ. ಅದೊಂದು ಖಾಯಿಲೆ, ಅದಕ್ಕೆ ಪರಿಹಾರವಿದೆ ಎಂದು ತಿಳಿದ ಮೇಲೆ ನಾನು ಆ ಬಗ್ಗೆ ಸಂದರ್ಶನಗಳಲ್ಲಿ ಮಾತನಾಡಿ ಜನಜಾಗೃತಿ ಮೂಡಿಸಲು ಪ್ರಯತ್ನಿಸಿದ್ದೇನೆ. ನಿಮಗೆ ನೀವು ಖಾಯಿಲೆಗೆ ಒಳಗಾಗಿದ್ದೀರಿ ಎಂದು ಗೊತ್ತಾದರೆ ಸಾಕು, ಅದರಿಂದ ಹೊರಗೆ ಬರುವ ದಾರಿ ಹುಡುಕುತ್ತೀರಿ. ಆದರೆ, 'ಅದೊಂದು ಖಾಯಿಲೆ ಎಂಬುದೇ ಗೊತ್ತಿಲ್ಲದಿದ್ದರೆ, ಹಾಗೇ ಇರುತ್ತೀರಿ. ಎಲ್ಲಿಯವರೆಗೆ ಎಂದರೆ ಯಾವುದೇ ವೈದ್ಯರು ನಿಮಗೆ ಅದನ್ನು ಹೇಳುವವರೆಗೆ' ಎಂದಿದ್ದಾರೆ ನಟಿ ದೀಪಿಕಾ ಪಡುಕೋಣೆ.