ಪ್ರಭಾಸ್ 'ಸಲಾರ್‌'ನಲ್ಲಿ ಪೃಥ್ವಿರಾಜ್; ಇಂಟ್ರಸ್ಟಿಂಗ್ ಮಾಹಿತಿ ಬಿಚ್ಚಿಟ್ಟ ಮಲಯಾಳಂ ಸ್ಟಾರ್

Published : Jun 26, 2022, 11:51 AM IST
ಪ್ರಭಾಸ್ 'ಸಲಾರ್‌'ನಲ್ಲಿ ಪೃಥ್ವಿರಾಜ್; ಇಂಟ್ರಸ್ಟಿಂಗ್ ಮಾಹಿತಿ ಬಿಚ್ಚಿಟ್ಟ ಮಲಯಾಳಂ ಸ್ಟಾರ್

ಸಾರಾಂಶ

ಸಲಾರ್ ಸಿನಿಮಾದಲ್ಲಿ ಮಲಯಾಳಂ ಸ್ಟಾರ್ ನಟ ಪೃಥ್ವಿರಾಜ್ ಸುಕುಮಾರನ್ (Prithviraj Sukumaran) ನಟಿಸುತ್ತಿದ್ದಾರೆ ಎನ್ನುವ ಸುದ್ದಿ ಕೇಳಿಬಂದಿತ್ತು. ಇದೀಗ ವಿಚಾರವನ್ನು ಅಧಿಕೃತ ಗೊಳಿಸಿದ್ದಾರೆ ಸ್ವತಃ ಪೃಥ್ವಿರಾಜ್. ಸಲಾರ್ ಸಿನಿಮಾದಲ್ಲಿ ಪ್ರಭಾಸ್ ಸಿನಿಮಾದಲ್ಲಿ ನಟಿಸುತ್ತಿರುವುದಾಗಿ ಪೃಥ್ವಿರಾಜ್ ಬಹಿರಂಗ ಪಡಿಸಿದ್ದಾರೆ.

ಕೆಜಿಎಫ್-2 (KGF 2) ಸೂಪರ್ ಸಕ್ಸಸ್ ಬಳಿಕ ಇದೀಗ ಅಭಿಮಾನಿಗಳು ಸಲಾರ್ (Salaar) ಸಿನಿಮಾಗಾಗಿ ಎದುರು ನೋಡುತ್ತಿದ್ದಾರೆ. ಈಗಾಗಲೇ ಸಲಾರ್ ಸಿನಿಮಾದ ಚಿತ್ರೀಕರಣ ಆರಂಭವಾಗಿದ್ದು ಭರ್ಜರಿಯಾಗಿ ನಡೆಯುತ್ತಿದೆ. ಕೆಜಿಎಫ್  ನಿರ್ದೇಶಕ ಪ್ರಶಾಂತ್ ನೀಲ್ (Prashanth Neel) ಸಾರಥ್ಯದಲ್ಲಿ ಮೂಡಿಬರುತ್ತಿರುವ ಸಲಾರ್ ಈಗಾಗಲೇ ದೊಡ್ಡ ಮಟ್ಟದ ನಿರೀಕ್ಷೆ ಹುಟ್ಟಿಹಾಕಿದೆ. ದಕ್ಷಿಣ ಭಾರತ ಮಾತ್ರವಲ್ಲದೇ ಭಾರತದ ಅಭಿಮಾನಿಗಳು ಸಲಾರ್ ಗಾಗಿ ಕಾತರದಿಂದ ಕಾಯುತ್ತಿದ್ದಾರೆ. ಅಂದಹಾಗೆ ಸಲಾರ್ ಬಗ್ಗೆ ಆಗಾಗ ಸುದ್ದಿಗಳು ವೈರಲ್ ಆಗುತ್ತ್ಲೇ ಇರುತ್ತದೆ. ಇದೀಗ ಸಿನಿಮಾದ ಬಗ್ಗೆ ಮತ್ತೊಂದು ಇಂಟ್ರಸ್ಟಿಂಗ್ ಸುದ್ದಿ ವೈರಲ್ ಆಗಿದೆ.  

ಸಲಾರ್ ಸಿನಿಮಾದಲ್ಲಿ ಮಲಯಾಳಂ ಸ್ಟಾರ್ ನಟ ಪೃಥ್ವಿರಾಜ್ ಸುಕುಮಾರನ್ (Prithviraj Sukumaran) ನಟಿಸುತ್ತಿದ್ದಾರೆ ಎನ್ನುವ ಸುದ್ದಿ ಕೇಳಿಬಂದಿತ್ತು. ಇದೀಗ ವಿಚಾರವನ್ನು ಅಧಿಕೃತ ಗೊಳಿಸಿದ್ದಾರೆ ಸ್ವತಃ ಪೃಥ್ವಿರಾಜ್. ಸಲಾರ್ ಸಿನಿಮಾದಲ್ಲಿ ಪ್ರಭಾಸ್ ಸಿನಿಮಾದಲ್ಲಿ ನಟಿಸುತ್ತಿರುವುದಾಗಿ ಪೃಥ್ವಿರಾಜ್ ಬಹಿರಂಗ ಪಡಿಸಿದ್ದಾರೆ. ಸಲಾರ್ ಸಿನಿಮಾದ ಪ್ರಮುಖ ಪಾತ್ರದಲ್ಲಿ ನಟಿಸುತ್ತಿರುವುದಾಗಿ ಹೇಳಿದ್ದಾರೆ. 

ಪೃಥ್ವಿರಾಜ್ ಸದ್ಯ ತನ್ನ ಮುಂಬರುವ ಕಡುವ ಸಿನಿಮಾದ ಪ್ರಮೋಷನ‌್‌ನಲ್ಲಿ ಬ್ಯುಸಿಯಾಗಿದ್ದಾರೆ. ಕನ್ನಡ ಸೇರಿದಂತೆ ಕಡುವ ದಕ್ಷಿಣ ಭಾರತದ ಎಲ್ಲಾ ಭಾಷೆಯಲ್ಲಿ ತೆರೆಗೆ ಬರುತ್ತಿದೆ. ಸದ್ಯ ಸಿನಿಮಾ ಪ್ರಚಾರದಲ್ಲಿ ನಿರತರಾಗಿದ್ದಾರೆ. ಕರ್ನಾಟಕದಲ್ಲಿ ಪ್ರಚಾರ ಕಾರ್ಯ ಮುಗಿಸಿದ ಬಳಿಕ ಪೃಥ್ವಿರಾಜ್ ಹೈದರಾಬಾದ್ ಕಡೆ ಹೊರಟಿದ್ದಾರೆ. ಹೈದರಾಬಾದ್ ಪ್ರಮೋಷನ್ ವೇಳೆ ಪೃಥ್ವಿರಾಜ್ ಸಲಾರ್ ಸಿನಿಮಾದ ಬಗ್ಗೆ ಬಹಿರಂಗ ಪಡಿಸಿದರು. ನಿಜವಾಗಿಯೂ ಪ್ರಭಾಸ್ ಮತ್ತು ಪ್ರಶಾಂತ್ ನೀಲ್ ಜೊತೆ ಕೆಲಸ ಮಾಡಲು ಬಯಸುತ್ತೇನೆ ಎಂದು ಹೇಳಿದರು. 

ಬೆಂಗಳೂರಿನಲ್ಲಿ ನಟ ಪೃಥ್ವಿರಾಜ್; ಶಿವಣ್ಣ-ಯಶ್ ಈ ಸಿನಿಮಾ ಮಾಡಬೇಕು ಎಂದ ಮಲಯಾಳಂ ಸ್ಟಾರ್

ಮಾಧ್ಯಮದ ಜೊತೆ ಮಾತನಾಡಿದ ಪೃಥ್ವಿರಾಜ್ ಸಲಾರ್ ಬಗ್ಗೆ, 'ನಾನು ತೆಲುಗು ಚಿತ್ರದಲ್ಲಿ ನಟಿಸುತ್ತಿದ್ದೇನೆ. ನಾನು ಕಾಯುತ್ತಿದ್ದೇನೆ. ನನಗೆ ಸಲಾರ್ ಬಹಳ ಮುಖ್ಯವಾದ ಪಾತ್ರ ಸಿಕ್ಕಿದೆ. ಅಂದಹಾಗೆ ಎರಡು ವರ್ಷಗಳ ಹಿಂದೆಯೇ ನನಗೆ ಸಿನಿಮಾಗೆ ಆಫರ್ ಬಂದಿತ್ತು. ಆಗಲೇ ನಾನು ನಿರೂಪಣೆ ಕೇಳಿದ್ದೆ.. ನಾನು ಅದನ್ನು ಸಂಪೂರ್ಣವಾಗಿ ಇಷ್ಟಪಟ್ಟೆ. ಅದ್ಭುತವಾದ ಕಥೆ. ನಾನು ತಕ್ಷಣ ಎಸ್ ಎಂದೆ. ನನಗೆ ಪ್ರಶಾಂತ್ ಸ್ನೇಹಿತರು ಮತ್ತು ಹೊಂಬಾಳೆ ಕೂಡ ನನಗೆ ತುಂಬಾ ಹತ್ತಿರವಾಗಿದೆ' ಎಂದರು.  

ಇದು ಪ್ರಭಾಸ್ ಸಿನಿಮಾ ನೀವು ಒಪ್ಪಿಕೊಳ್ಳುತ್ತೀರಾ ಎಂದಿದ್ದಕ್ಕೆ, 'ನಾನು ಹೌದು ಎಂದು ಹೇಳಿದೆ. ಆದರೆ ಸಾಂಕ್ರಾಮಿಕ ರೋಗದ ನಡುವೆ ಡೇಟ್ಸ್ ತುಂಬಾ ಬದಲಾಗುತ್ತಲೆ ಇತ್ತು. ಮಲಯಾಳಂ ಸಿನಿಮಾ ಕಮಿಟ್‌ಮೆಂಟ್ ನಿಂದ ನಾನು ಅದನ್ನು ಮಾಡಲು ಸಾಧ್ಯವಾಗಿರಲಿಲ್ಲ ಎಂದು ನಾನು ಭಾವಿಸುತ್ತೇನೆ. ಪ್ರಭಾಸ್ ಡೇಟ್ ಕೂಡ ಬದಲಾಗುತ್ತಿತ್ತು. ಸದ್ಯ ಎಲ್ಲರು ಒಂದು ಸ್ತಿತಿಗೆ ಬಂದಿದ್ದಾರೆ. ನಾವು ನಾವು ಸ್ವಲ್ಪ ಹೊಂದಾಣಿಕೆ ಮಾಡಿಕೊಂಡರೆ ಖಂಡಿತ ಸಾಧ್ಯವಾಗುತ್ತದೆ. ಸದ್ಯದಲ್ಲೇ ನಾನು ಸಲಾರ್‌ನ ಬಾಗವಾಗುತ್ತೇನೆ. ನಾನು ಇಂದು ಪ್ರಶಾಂತ್ ನೀಲ್ ಭೇಟಿ ಮಾಡುತ್ತೇನೆ. ಶೀಘ್ರದಲ್ಲೇ ತೆಲುಗು ಸಿನಿಮಾ ಮಾಡುತ್ತೇನೆ ಎಂದು ಭಾವಿಸುತ್ತೇನೆ' ಎಂದು ಪೃಥ್ವಿರಾಜ್ ಹೇಳಿದರು. 

ಸಲಾರ್‌ನಲ್ಲಿ ಕೆಜಿಎಫ್ ತಾತ! ಹಿರಿಯ ನಟ ಕೃಷ್ಣಾಜಿ ರಾವ್‌ಗೆ ಮತ್ತೊಂದ್ ದೊಡ್ಡ ಚಾನ್ಸ್!

ಸಲಾರ್, ಕೆಜಿಎಫ್-2 ದೊಡ್ಡ ಸಕ್ಸಸ್ ಬಳಿಕ ಹೊಂಬಾಳೆ ಫಿಲ್ಮ್ಸ್ ನಿಂದ ಬರ್ತಿರುವ ಮತ್ತೊಂದ ದೊಡ್ಡ ಸಿನಿಮಾವಾಗಿದೆ. ಪ್ಯಾನ್ ಇಂಡಿಯಾ ಮಟ್ಟದಲ್ಲಿ ತಯಾರಾಗುತ್ತಿರುವ ಸಲಾರ್ ಹೇಗಿರಲಿದೆ ಎಂದು ನೋಡಲು ಸಿನಿ ಅಭಿಮಾನಿಗಳು  ತುದಿಗಾಲಿನಲ್ಲಿ ನಿಂತಿದ್ದಾರೆ. ಅಂದಹಾಗೆ ಸಲಾರ್‌ನಲ್ಲಿ ನಾಯಕಿಯಾಗಿ ಶ್ರುತಿ ಹಾಸನ್ ಕಾಣಿಸಿಕೊಂಡಿದ್ದಾರೆ. ವಿಲನ್ ಆಗಿ ದಕ್ಷಿಣ ಭಾರತದ ಖ್ಯಾತ ವಿಲನ್ ಜಗಪತಿ ಬಾಬು ಕಾಣಿಸಿಕೊಂಡಿದ್ದಾರೆ. ಈಗಾಗಲೇ ಸಾಕಷ್ಟು ನಿರೀಕ್ಷೆ ಮತ್ತು ಕುತೂಹಲ ಹೆಚ್ಚಿಸಿರುವ ಸಾಲರ್ ನೋಡಲು ಇನ್ನಷ್ಟು ದಿನ ಕಾಯಲೇ ಬೇಕು. 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಬೇರೆಯದೇ ಸಂದೇಶ ಕೊಡುತ್ತಿರೋ 'ದಿ ಡೆವಿಲ್’ ಟ್ರೈಲರ್; ದರ್ಶನ್ ಫ್ಯಾನ್ಸ್‌ ಮುಖದಲ್ಲಿ ಮೂಡ್ತಿದೆ ಮಂದಹಾಸ!
ಶಾರುಖ್ ಜೊತೆ ಡಾನ್ಸ್ ನಿರಾಕರಿಸಿದ ವಧು, ಅಸಮಾಧಾನಗೊಂಡ ಫ್ಯಾನ್ಸ್